ಕುಂಬಳಕಾಯಿ ಫೇಸ್ ಮಾಸ್ಕ್- ಸೌಂದರ್ಯದ ಕೀಲಿಕೈ
ಮುಖಕ್ಕೆ ಮಾಸ್ಕ್ನ ವಿಷಯ ಬಂದಾಗ ಉತ್ತಮವಾದ ಫಲಿತಾಂಶ ಬರಲು ಎಲ್ಲರೂ ಅತ್ಯಂತ ಉತ್ತಮವಾದುದನ್ನು ಬಳಸಲು ಇಚ್ಚಿಸುತ್ತಾರೆ. ಕೆಲವು ಜಾಹೀರಾತುಗಳು ತಮ್ಮ ವಿಧ ವಿಧವಾದ ಹೇಳಿಕೆಗಳಿಂದ ಜನರನ್ನು ಮೂರ್ಖರನ್ನಾಗಿಸುತ್ತವೆ.
ಜಾಹೀರಾತುಗಳಲ್ಲಿ ಬರುವ ಎಲ್ಲಾ ಮಾಸ್ಕ್ಗಳನ್ನು ಉಪಯೋಗಿಸಿ ನಿಜವಾದ ಫಲಿತಾಂಶ ಬರದೆ ನಿರಾಶರಾಗುವವರ ಸಂಖ್ಯೆಗೂ ಬರವಿಲ್ಲ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮನೆಯಲ್ಲಿ ನೈಸರ್ಗಿಕವಾಗಿ ಫೇಸ್ ಮಾಸ್ಕ್ ಮಾಡಿದರೆ ಇದರಿಂದ ಉತ್ತಮವಾದ ತ್ವಚೆ ಪಡೆಯುವುದರ ಬಗ್ಗೆ ಸಂಶಯವೇ ಬೇಡ.
ಅರಿಶಿನ, ಜೇನು ಅಥವಾ ಲಿಂಬೆ ಹೀಗೆ ಮಾರುಕಟ್ಟೆಯಲ್ಲಿ ಹೀಗೆ ಹಲವು ವಿಧವಾದ ಫೇಸ್ ಪ್ಯಾಕ್ಗಳು ಲಭ್ಯವಿದೆ. ಇಂತಹ ಫೇಸ್ ಪ್ಯಾಕ್ಗಳು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಕುಂಬಳಕಾಯಿಯ ಫೇಸ್ ಪ್ಯಾಕ್ ಎನ್ನುವುದರ ಬಗ್ಗೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ತಿಳಿಸುತ್ತಿದೆ. ಇದರ ಬಳಕೆಯಿಂದ ಹೊಳೆ ಹೊಳೆಯುವ ತ್ವಚೆ ಪಡೆಯುವಲ್ಲಿ ಸಂಶಯವೇ ಇಲ್ಲ
ಕುಂಬಳಕಾಯಿ ಫೇಸ್ ಪ್ಯಾಕ್, ತಾರುಣ್ಯಕ್ಕೆ ಹೊಸ ಲುಕ್
ಈ ವಿಧಾನವನ್ನು ದಿನ ಬಳಕೆಯ ಫೇಸ್ ಪ್ಯಾಕ್ ನಲ್ಲಿ ಬಳಸುವುದು ಉತ್ತಮ. ಉತ್ತಮವಾದ ಕುಂಬಳಕಾಯಿ ಫೇಸ್ ಪ್ಯಾಕ್ ನ ಲಾಭಗಳ ಬಗ್ಗೆ ತಿಳಿದುಕೊಂಡು ಇಂದಿನಿಂದಲೇ ಅದನ್ನು ಪ್ರಯತ್ನಿಸಬಹುದು.
ಎಲ್ಲಾ ತರಹದ ತ್ವಚೆಗಾಗಿ ಕುಂಬಳಕಾಯಿಯ ಫೇಸ್ ಪ್ಯಾಕ್
ಅರ್ಧ ಲೋಟ ಕುಂಬಳಕಾಯಿಯ ಪೇಸ್ಟ್ಗೆ ಅರ್ಧ ಟೀ ಚಮಚ ಜೇನು ಮತ್ತು ಹಾಲನ್ನು ಸೇರಿಸಬೇಕು. ಇದಕ್ಕೆ ಒಂದು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಈ ಮಾಸ್ಕನ್ನು ಮುಖದ ಮೇಲೆ ಹಚ್ಚಿ 15 ನಿಮಿಷಗಳ ಕಾಲ ಹಾಗೇ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಬೇಕು.
ಒಣ ತ್ವಚೆಗಾಗಿ ಕುಂಬಳಕಾಯಿಯ ಮಾಸ್ಕ್
ಕುಂಬಳಕಾಯಿಯ ರಸ (ಪ್ಯೂರಿ) ಮತ್ತು ಮಲೈ (ಒಂದು ಬಗೆಯ ದಪ್ಪವಾದ ಹಾಲಿನ ಪದಾರ್ಥ) ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಇದಕ್ಕೆ ಎರಡು ಟೀ ಚಮಚ ಸಕ್ಕರೆಯನ್ನು ಕೂಡ ಸೇರಿಸಿಕೊಳ್ಳಬೇಕು. ಚೆನ್ನಾಗಿ ಮಿಶ್ರಣ ಮಾಡಿದ ನಂತರ ಇದನ್ನು ಮುಖಕ್ಕೆ ಹಚ್ಚಬೇಕು. ಇದರಿಂದ ತ್ವಚೆಗೆ ಒಂದು ತರಹದ ಹಿತವಾದ ಪರಿಣಾಮ ಉಂಟಾಗುತ್ತದೆ ಮಾತ್ರವಲ್ಲದೆ ತ್ವಚೆಯಲ್ಲಿನ ತೇವಾಂಶವನ್ನು ಕಾಪಾಡುತ್ತದೆ.
ಜಿಡ್ಡಿನ ತ್ವಚೆಗಾಗಿ ಕುಂಬಳಕಾಯಿಯ ಫೇಸ್ ಪ್ಯಾಕ್
ಕುಂಬಳಕಾಯಿಯ ರಸ (ಪ್ಯುರಿ) ಒಂದು ಟೇಬಲ್ ಚಮಚ ಇದಕ್ಕೆ ಒಂದು ಟೀ ಚಮಚ ಸೇಬಿನ ಹಣ್ಣಿನ ಪರಿಮಳವಿರುವ ವಿನೇಗರ್ ಅಥವಾ ನಿಂಬೆ ಹಣ್ಣಿನ ರಸ. ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ನಂತರ ಇದನ್ನು ಮುಖದ ಮೇಲೆ ಹಚ್ಚಬೇಕು. ನಿಂಬೆ ರಸವು ಟೋನರ್ ನಂತೆ ಕಾರ್ಯ ನಿರ್ವಹಿಸುತ್ತದೆ ಇದು ಚರ್ಮದ ಪರಿಚಲನ ಕ್ರಿಯೆಗಳನ್ನು ಉತ್ತೇಜಿಸುತ್ತದೆ ಮತ್ತು ಚರ್ಮದ ಪಿಎಚ್ ಮಟ್ಟವನ್ನು ಹೆಚ್ಚಿಸುತ್ತದೆ.
ಮೊಡವೆಯ ನಿಯಂತ್ರಣಕ್ಕೆ ಕುಂಬಳಕಾಯಿಯ ಫೇಸ್ ಪ್ಯಾಕ್
ಒಂದು ಟೀ ಚಮಚ ಕುಂಬಳಕಾಯಿಯ ಪ್ಯೂರಿಗೆ ಒಂದು ಟೀ ಚಮಚ ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಇದನ್ನು ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಬೇಕು. ನಂತರ 20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಇದರ ಪ್ರಯೋಗದಿಂದ ಗಣನೀಯ ಬದಲಾವಣೆಯನ್ನು ಗಮನಿಸಬಹುದಾಗಿದೆ.
ಬಾದಾಮಿ ಎಣ್ಣೆ-ಗುಲಾಬಿ ನೀರಿನ ಜೊತೆ ಸೌಂದರ್ಯ ಲಹರಿ!
ಹಿಂದಿನ ಕಾಲದಲ್ಲಿ ಮಹಿಳೆಯರು ಮೇಕಪ್ ಇಲ್ಲದೆಯೂ ತುಂಬಾ ಸುಂದರವಾಗಿ ಕಾಣಿಸಿಕೊಳ್ಳಲು ಅವರು ನೈಸರ್ಗಿಕವಾಗಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಾ ಇದ್ದದ್ದೇ ಕಾರಣವಾಗಿದೆ. ಇದರಿಂದ ಅವರಿಗೆ ಸೌಂದರ್ಯವನ್ನು ಹೆಚ್ಚಿಸಲು ಯಾವುದೇ ಮೇಕಪ್ ಅಥವಾ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ಬೇಕಾಗಿರಲಿಲ್ಲ. ಅದರಲ್ಲೂ ಅವರು ತಮ್ಮ ತ್ವಚೆ ಮತ್ತು ಕೂದಲನ್ನು ತುಂಬಾ ಆರೈಕೆ ಮಾಡುತ್ತಿದ್ದರು. ಯಾವುದೇ ರಾಸಾಯನಿಕಗಳು ಇಲ್ಲದೆ ಪ್ರಕೃತಿದತ್ತವಾಗಿ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ಅವರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ನೈಸರ್ಗಿಕ ಸೌಂದರ್ಯ ಟಿಪ್ಸ್-ಕಡಿಮೆ ವೆಚ್ಚ, ಅಧಿಕ ಲಾಭ
ಇಂದಿನ ಮಹಿಳೆಯರು ಮೇಕಪ್ ತೆಗೆದ ಬಳಿಕ ಅವರನ್ನು ನೋಡಲು ಆಗಲ್ಲ. ಆದರೆ ಹಿಂದಿನ ಕಾಲದಲ್ಲಿ ಮೇಕಪ್ ಇಲ್ಲದೆಯೂ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು. ಕೂದಲು ಮತ್ತು ತ್ವಚೆಯ ಆರೈಕೆಗಾಗಿ ಪ್ರಕೃತ್ತಿದತ್ತವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿಕೊಳ್ಳುತ್ತಿದ್ದರು. ಇಂದಿನ ದಿನಗಳಲ್ಲಿ ರಾಸಾಯನಿಕಯುಕ್ತ ಸೌಂದರ್ಯವರ್ಧಕಗಳನ್ನು ಬಳಸಿಕೊಂಡು ಹಲವಾರು ರೀತಿಯ ಅಡ್ಡಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಆದರೆ ಹಿಂದಿನವರಿಗೆ ಯಾವುದೇ ಅಡ್ಡಪರಿಣಾಮಗಳ ಭೀತಿ ಇರಲಿಲ್ಲ. ಬಾದಾಮಿ ಎಣ್ಣೆ ಮತ್ತು ರೋಸ್ ವಾಟರ್ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಬಹುದು ಎಂದು ನಿಮಗೆ ತಿಳಿದಿದೆಯಾ? ಇಲ್ಲವೆಂದಾದರೆ ನಾವಿಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಬಳಸಿ ನಿಮ್ಮ ಸೌಂದರ್ಯವನ್ನು ವೃದ್ಧಿಸಿ.
ತುಟಿಯ ಸೌಂದರ್ಯಕ್ಕೆ, ಸಿಹಿ-ಸಿಹಿ ಲಿಪ್ ಬಾಮ್!
ತುಟಿಗಳಿಗೆ ಬಣ್ಣ ಹಚ್ಚಿ ಗಮನ ಸೆಳೆಯುವ ಪರಿ ಈಗ ಹಳೆಯದಾಯಿತು. ಈಗ ಏನಿದ್ದರೂ ರುಚಿಯೂ ಇರುವ ಆರೈಕೆಯನ್ನೂ ನೀಡುವ ತುಟಿಗಳ ಬಾಮ್ಗಳಿಗೇ ಹೆಚ್ಚಿನ ಬೇಡಿಕೆ. ವಿವಿಧ ಬಣ್ಣದೊಡನೆ ಹೊಳಪು, ಮಿನುಗು, ಒನಪುಗಳನ್ನು ಹೊಂದಿರುವ ಈ ಬಾಮ್ಗಳು ಅತಿ ಅಗ್ಗವೂ ಅಲ್ಲ, ಅತಿ ದುಬಾರಿಯೂ ಅಲ್ಲದ ಕಾರಣ ಎಲ್ಲರ ಮೆಚ್ಚಿನ ಪ್ರಸಾಧನವಾಗಿದೆ.
ಹಿಂದೆ ದಪ್ಪದ ಲಿಪ್ ಸ್ಟಿಕ್ ರೂಪದಲ್ಲಿ ಮಾತ್ರ ದೊರಕುತ್ತಿದ ಈ ಪ್ರಸಾಧನ ಈಗ ಕಡ್ಡಿಯಲ್ಲಿ ಅಥವಾ ಚಿಕ್ಕ ಡಬ್ಬಿಯಲ್ಲಿಯೇ ಸಿಗುತ್ತಿವೆ. ಅಷ್ಟೇ ಅಲ್ಲ, ಹಿಂದೆ ರುಚಿಯಲ್ಲಿ ಮೀನಿನ ಹುರುಪೆಯನ್ನು ತಿಂದ ಹಾಗಾಗುತ್ತಿದ್ದ (ವಾಸ್ತವವಾಗಿ ಲಿಪ್ ಸ್ಟಿಕ್ನ ಪ್ರಮುಖ ಸಾಮಾಗ್ರಿಯೇ ಮೀನಿನ ಹುರುಪೆಯ ಪುಡಿ) ಬದಲಿಗೆ ಈಗ ಸ್ವಾದಿಷ್ಟವಾದ ಸ್ಟ್ರಾಬೆರಿ, ಕಿತ್ತಳೆ ಮೊದಲಾದ ಸ್ವಾದಗಳಲ್ಲಿ ದೊರಕುತ್ತಿದೆ. ಪಟ್ಟಿ ಮಾಡಲು ಹೊರಟರೆ ಇಡಿಯ ದಿನವೂ ಸಾಲದು ಅಷ್ಟು ತರಹದ ಪ್ರಸಾಧನಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ.
ಆದರೆ ಮಾರುಕಟ್ಟೆಯಲ್ಲಿ ಸಿಗುವ ಕೃತಕ ಬಾಮ್ಗಿಂತಲೂ ನಾವೇ ನಮ್ಮ ಕೈಯಾರೆ, ನಮ್ಮ ಇಷ್ಟದ ಸ್ವಾದದಲ್ಲಿ ತಯಾರಿಸಿ ಬಳಸಿದರೆ ಎಷ್ಟು ಚೆನ್ನ. ಅದರಲ್ಲೂ ಹದಿಹರೆಯದವರಿಗೆ ಇದೊಂದು ಮುದನೀಡುವ ಚಟುವಟಿಕೆಯೇ ಆಗುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ಕೆಲವು ಸುಲಭ ವಿಧಾನಗಳನ್ನು ವಿವರಿಸಲಾಗಿದ್ದು ಇವು ಮಾರುಕಟ್ಟೆಯಲ್ಲಿ ಸಿಗುವ ಪ್ರಸಾಧನದ ಬೆಲೆಯಷ್ಟೇ ಖರ್ಚಾದರೂ ಇದನ್ನು ಸ್ವತಃ ತಯಾರಿಸಿದ ಸಂತೋಷಕ್ಕೆ ಬೆಲೆಕಟ್ಟಲಾಗದು.
ಅಗತ್ಯವಿರುವ ಸಾಮಾಗ್ರಿಗಳು:
*ಜೇನುಮೇಣ: ಅಗತ್ಯಕ್ಕೆ ತಕ್ಕಂತೆ
*ಕೆಲವು ಹನಿ ಬಾದಾಮಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ
*ಪುದೀನಾ ಎಣ್ಣೆ (ಐಚ್ಛಿಕ)
*ಹಳೆಯ ಲಿಪ್ ಸ್ಟಿಕ್ ನಿಂದ ಚಿಕ್ಕದಾಗಿ ಕೆರೆದು ತೆಗೆದ ಪುಡಿ.
*ಒಂದು ಚಿಕ್ಕ ಬೋಗುಣಿ
ವಿಧಾನ:
* ಮೊದಲು ಜೇನುಮೇಣ ಮತ್ತು ಬಾದಾಮಿ ಅಥವಾ ಕೊಬ್ಬರಿ ಎಣ್ಣೆಯನ್ನು ಚಿಕ್ಕ ಬೋಗುಣಿಯಲ್ಲಿ ಹಾಕಿ ಮೈಕ್ರೋವೇವ್ನೊಳಗೆ ಕೆಲವು ಸೆಕೆಂಡುಗಳ ಕಾಲ ಇಡಿ. ಎಷ್ಟು ಎಂದರೆ ಇವೆರಡೂ ಈಗತಾನೇ ಕರಗಿದಂತಿರಬೇಕು. ಹೆಚ್ಚು ಬಿಸಿಯಾಗಲು ಬಿಡಬಾರದು. ಬಳಿಕ ಹೊರತೆಗೆದು ಚೆನ್ನಾಗಿ ಮಿಶ್ರಣ ಮಾಡಿ. ಬಾದಾಮಿ ಎಣ್ಣೆ ತುಟಿಗಳಿಗೆ ಆದ್ರತೆ ನೀಡುವ ಜೊತೆಗೇ ಜೇನುಮೇಣದ ಪಸೆ ಹೆಚ್ಚು ನಿಲ್ಲದಂತೆ ನೋಡಿಕೊಳ್ಳುತ್ತದೆ. * ಬಳಿಕ ಇದಕ್ಕೆ ಎರಡು ಹನಿ ಪುದೀನಾ ಎಣ್ಣೆ ಸೇರಿಸಿ. ಹೆಚ್ಚು ಸೇರಿಸಬಾರದು, ಏಕೆಂದರೆ ಹೆಚ್ಚು ಪ್ರಮಾಣ ತುಟಿಗಳಲ್ಲಿ ಉರಿ ತರಿಸಬಹುದು. ಇದು ಅವಶ್ಯವಲ್ಲ, ಆದರೆ ಇದು ತುಸುವೇ ಕಚಗುಳಿ ಇಡುವಂತೆ ತುಟಿಗಳ ಚರ್ಮಕ್ಕೆ ಸಂವೇದನೆ ನೀಡುವ ಮೂಲಕ ರಕ್ತಸಂಚಾರವನ್ನು ಹೆಚ್ಚಿಸುತ್ತದೆ.
* ಬಳಿಕ ಹಳೆಯ ಲಿಪ್ಸ್ಟಿಕ್ನಿಂದ ಚಿಕ್ಕದಾಗಿ ಕೆರೆದು ತೆಗೆದ ಪುಡಿಯನ್ನು ಸೇರಿಸಿ. ಇದರ ಪ್ರಮಾಣ ನಿಮಗೆ ಬಿಟ್ಟ ಆಯ್ಕೆ. ತಿಳಿಯಾಗಿರಬೇಕೆಂದರೆ ಕಡಿಮೆ ಗಾಢವಾಗಿರಬೇಕೆಂದರೆ ಹೆಚ್ಚು ಸೇರಿಸಿ ಚೆನ್ನಾಗಿ ಬೆರೆಸಿ.
* ಎಲ್ಲವೂ ಚೆನ್ನಾಗಿ ಮಿಶ್ರಣಗೊಂಡ ಬಳಿಕ ಒಂದು ಚಿಕ್ಕ ಡಬ್ಬಿಯಲ್ಲಿ ಹಾಕಿ ಮುಚ್ಚಿಟ್ಟು ತಣಿಯಲು ಬಿಡಿ. ಕನಿಷ್ಠ ಎರಡು ಗಂಟೆಯಾದರೂ ತಣಿಯಬೇಕು. ಬಳಿಕ ನಿಮ್ಮ ತುಟಿಗಳ ಅಂದವನ್ನು ನೋಡಿ ಮನೆಯವರು ಮತ್ತು ನಿಮ್ಮ ಸ್ನೇಹಿತರು ಸಂತೋಷಪಡುವುದನ್ನು ಕಂಡು ಸಂಭ್ರಮಿಸಿ.
ವಯಸ್ಸಿನ ಮೇಲೆ ನಿರ್ಬಂಧ ಹೇರುವ ಅದ್ಭುತ ಹಣ್ಣು ದಾಳಿಂಬೆ
ಹಣ್ಣುಗಳು ನಮ್ಮ ದೈನಂದಿನ ಜೀವನದಲ್ಲಿ ಶಕ್ತಿಯನ್ನು ಪೂರೈಕೆ ಮಾಡುವ ಮೂಲವಾಗಿದೆ ಎಂಬುದಾಗಿ ನಮಗೆಲ್ಲಾ ತಿಳಿದಿರುವ ವಿಚಾರವಾಗಿದೆ. ದೈನಂದಿನ ಉಪಹಾರ, ಮಧ್ಯಾಹ್ನದೂಟ ಮತ್ತು ರಾತ್ರಿಯೂಟದ ನಡುವೆ ಕೂಡ ಹಣ್ಣುಗಳನ್ನು ಸೇವಿಸಿ ಎಂಬುದಾಗಿಯೇ ವೈದ್ಯರು ಸಲಹೆ ನೀಡುತ್ತಾರೆ. ಹೆಚ್ಚುವರಿ ಪ್ರೊಟೀನ್ ಮತ್ತು ವಿಟಮಿನ್ಗಳನ್ನು ಪ್ರತಿಯೊಂದು ಹಣ್ಣೂ ಹೊಂದಿದ್ದು ನಮಗೆ ಹೆಚ್ಚುವರಿ ಶಕ್ತಿಯನ್ನು ರೋಗನಿರೋಧಕ ಸಾಮರ್ಥ್ಯವನ್ನು ಒದಗಿಸುತ್ತದೆ.
ಇಂದಿನ ಲೇಖನದಲ್ಲಿ ಸ್ನಾಯು ಸಾಮರ್ಥ್ಯ ಮತ್ತು ವಯಸ್ಸಾಗುವಿಕೆಯನ್ನು ತಡೆಗಟ್ಟಲು ನೆರವಾಗಿರುವ ದಾಳಿಂಬೆಯ ವಿಶೇಷತೆಯನ್ನು ತಿಳಿದುಕೊಳ್ಳೋಣ. ದಾಳಿಂಬೆ ಜ್ಯೂಸ್ ಸೇವನೆಯು ಯುರೋಲಿತಿನ್ ಎ ಯನ್ನು ಉತ್ಪಾದಿಸಲು ನೆರವಾಗಲಿದೆ, ಇದು ಒಂದು ಅಣುವಾಗಿ ಕಾರ್ಯನಿರ್ವಹಿಸಲಿದೆ.
ಇದು ಸ್ನಾಯು ಕೋಶಕ್ಕೆ ಶಕ್ತಿಯನ್ನು ನೀಡಿ ವಯಸ್ಸಾಗುವಿಕೆಯಿಂದ ತಡೆಗಟ್ಟುತ್ತದೆ. ನಮಗೆ ವಯಸ್ಸಾದಂತೆ ನಮ್ಮ ಕೋಶಗಳು ಮೈಟೊಕಾಂಡಿಯವನ್ನು ಮರುಬಳಕೆ ಮಾಡಲು ಹೋರಾಡುತ್ತದೆ, ಅಂತೆಯೇ ಅವುಗಳಿಗೆ ಪ್ರಮುಖ ಕಾರ್ಯನಿರ್ವಹಣೆಯನ್ನು ಸಾಧಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಕೋಶದಲ್ಲಿ ಒಟ್ಟುಗೂಡುತ್ತದೆ.
ಈ ವಿಘಟನೆಯು ಹಲವಾರು ಕೋಶಗಳ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ, ಸ್ನಾಯುಗಳು ಇದರಲ್ಲಿ ಸೇರಿಕೊಂಡಿವೆ, ವರ್ಷಗಳಾಗುತ್ತಿದಂತೆ ಇದು ದುರ್ಬಲಗೊಂಡು ಹಲವಾರು ವಯಸ್ಸು ಸಂಬಂಧಿ ರೋಗಗಳನ್ನು ದಯಪಾಲಿಸುತ್ತದೆ. ಯುರೋಲಿತಿನ್ ಎ ಕೋಶಗಳ ಸಾಮರ್ಥ್ಯವನ್ನು ಮರುಸ್ಥಾಪಿಸುತ್ತದೆ ಇದನ್ನು ಮೈಟೊಕಾಂಡ್ರಿಯಲ್ ಕ್ಲೀನ್ ಅಪ್ ಪ್ರೊಸೆಸ್ ಎಂಬುದಾಗಿ ಕೂಡ ಕರೆಯಲಾಗುತ್ತದೆ ಇಲ್ಲದಿದ್ದರೆ ಇದನ್ನು ಮೈತಿಪಜಿ ಎಂಬುದಾಗಿ ಕರೆಯಲಾಗುತ್ತದೆ, ಎಂಬುದಾಗಿ ಸ್ವಿಡ್ಜರ್ಲ್ಯಾಂಡ್ನ ಪೇಟ್ರಿಕ್ ಅಬಿಸಿಚರ್ ತಿಳಿಸುತ್ತಾರೆ.
ಸಂಪೂರ್ಣ ಸ್ವಾಭಾವಿಕ ದ್ರವ್ಯವಾಗಿರುವ ಇದು, ಪ್ರಬಲವಾಗಿದೆ ಮತ್ತು ಸಾಮರ್ಥ್ಯವನ್ನು ಅಳೆಯಬಹುದಾಗಿದೆ ಎಂಬುದಾಗಿ ಪೇಟ್ರಿಕ್ ತಿಳಿಸುತ್ತಾರೆ. ಅಧ್ಯಯನಕ್ಕಾಗಿ, ತಂಡವು ತಮ್ಮ ಕಲ್ಪನೆಯನ್ನು ನೆಮಾಟೋಡ್, ಸಿ ಅಲೆಗನ್ಸ್ ಆಧಾರದ ಮೇಲೆ ಮೇಲೆ ಅಳೆದಿದ್ದು, 8-10 ದಿನಗಳ ನಂತರ ಇದನ್ನು ಹಿರಿಯ ಎಂಬುದಾಗಿ ಪರಿಗಣಿಸಲಾಗಿದೆ.
ಯುರೋಲಿತಿನ್ ಎ ಗೆ ಹುಳುಗಳನ್ನು ಒಡ್ಡಿದಾಗ ನಿಯಂತ್ರಿತ ಗುಂಪಿಗಿಂತ ಇದು 45% ದಷ್ಟು ಏರಿಕೆಯಾಗಿದೆ. ದಂಶಕಗಳ ಅಧ್ಯಯನದಲ್ಲಿ, ಹಿರಿಯ ಇಲಿಗಳೆಂದರೆ 2 ವರ್ಷಗಳದ್ದನ್ನು, ಯುರೋಲಿತಿನ್ ಎ ಗೆ ಒಡ್ಡಿದಾಗ ನಿಯಂತ್ರಿತ ಹಿರಿ ಇಲಿಗಳಿಗಿಂತ 42% ಉತ್ತಮ ಸಹಿಷ್ಣುತೆಯು ಕಂಡುಬಂದಿದೆ.
ಅದಾಗ್ಯೂ, ದಾಳಿಂಬೆಯು ಅದ್ಭುತ ಅಣುವನ್ನು ಮಾತ್ರ ಒಳಗೊಂಡಿರದೇ ಪೂರ್ವಗಾಮಿಯಾಗಿದೆ ಎಂಬುದಾಗಿ ಕೂಡ ಸಂಶೋಧಕರು ತಿಳಿಸಿದ್ದಾರೆ. ಪ್ರಾಣಿಗಳ ತಳಿ ಮತ್ತು ಗಟ್ ಮೈಕ್ರೊಬಯಾಮ್ನಲ್ಲಿರುವ ಫ್ಲೋರಾವನ್ನು ಆಧರಿಸಿ ಯುರೋಲಿತಿನ್ ಎ ಉತ್ಪನ್ನ ಬೇರೆ ಬೇರಯದಾಗಿರುತ್ತದೆ. ಸರಿಯಾದ ಸೂಕ್ಷ್ಮಜೀವಿಗಳು ಇಲ್ಲದೇ ಇದ್ದಾಗ ಯುರೋಲಿತಿನ್ ಎ ಉತ್ಪತ್ತಿಯಾಗುವುದಿಲ್ಲ ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ. ಯುರೋಲಿತಿನ್ ಎ ಯು ನಮ್ಮ ಕರುಳಗಳಲ್ಲಿ ಉತ್ಪತ್ತಿಯಾಗುತ್ತದೆ, ನಾವು ಏನು ತಿನ್ನುತ್ತೇವೆಯೋ ಅದನ್ನು ಮುರಿಯಲು ಬ್ಯಾಕ್ಟೀರಿಯಾಗೆ ಸಾಧ್ಯವಾಗುತ್ತದೆ.
ಜೀರ್ಣಕ್ರಿಯೆಯಾಗುವಾಗ, ಉತ್ಪಾದನೆಯಾಗುವ ವಸ್ತುವುದು ನಮಗೆ ಪ್ರಯೋಜನಕಾರಿಯಾಗಿರುತ್ತದೆ, ನೈಸರ್ಗಿಕ ಆಯ್ಕೆಯಲ್ಲಿ ಬ್ಯಾಕ್ಟೀರಿಯಾ ಮತ್ತು ಅವುಗಳ ಪರಪೋಷಿಯನ್ನು ಒಳಗೊಂಡಿರುತ್ತದೆ. ಎಂಬುದಾಗಿ ಸ್ವಿಜರ್ಲ್ಯಾಂಡ್ನ ಒಂದು ಜೀವ ವಿಜ್ಞಾನ ಕಂಪೆನಿಯ ಸಿಇಒ ರಿಂಚ್ ಅಮೆಜಿಂಟೀಸ್ ತಿಳಿಸುತ್ತಾರೆ.
ಇವರು ಹೇಳುವಂತೆ ಯುರೋಲಿತಿನ್ ಬರಿಯ ದಾಳಿಂಬೆಯಲ್ಲಿ ಮಾತ್ರವಲ್ಲದೆ ಸಣ್ಣ ಸಣ್ಣ ನಟ್ಸ್ ಮತ್ತು ಬೆರ್ರಿಗಳಲ್ಲೂ ಇರುತ್ತದೆ. ಈ ಅಧ್ಯಯನವು ನೇಚರ್ ಮೆಡಿಸಿನ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದು ಮಾನವರ ಮೇಲೆ ಶೋಧನೆಯನ್ನು ನಡೆಸಲಾಗುತ್ತಿದೆ.

No comments:
Post a Comment