Thursday, 27 October 2016

ಎಲೆಲೆ ಬೆಟ್ಟದ ನೆಲ್ಲಿಕಾಯಿಯೇ, ನಿನಗೆ ಸರಿ ಸಾಟಿ ಯಾರಿಲ್ಲಿ?

ನೆಲ್ಲಿಕಾಯಿಯ ಎಣ್ಣೆಯನ್ನು ತಲೆಗೆ ನೇರವಾಗಿ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದು ಕಡಿಮೆಯಾಗುವುದು ಈಗಾಗಲೇ ಸಾಬೀತುಗೊಳಿಸಲಾಗಿರುವ ಸಂಗತಿಯಾಗಿದೆ. ಆದರೆ ಈ ಅದ್ಭುತ ಎಣ್ಣೆಯ ನಿಜವಾದ ಪರಿಣಾಮ ಪಡೆಯಬೇಕೆಂದರೆ ಇದರ ಗುಣಗಳು ನಮ್ಮ ರಕ್ತದಲ್ಲಿ ಬರಬೇಕು. ಆಗಲೇ ಕೂದಲ ಬುಡಕ್ಕೆ ಧಾವಿಸುವ ರಕ್ತದ ಮೂಲಕ ಈ ಪೋಷಕಾಂಶಗಳು ಕೂದಲ ಬುಡವನ್ನು ದೃಢಗೊಳಿಸಿ ಕೂದಲು ಉದುರುವುದನ್ನು ತಡೆಯುತ್ತದೆ.   ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ 14 ಲಾಭ


ಇದನ್ನು ಸಾಧಿಸಲು ದಿನಕ್ಕೊಂದು ನೆಲ್ಲಿಕಾಯಿಯನ್ನು ಹಸಿಯಾಗಿ ತಿಂದರೆ ಸಾಕು. ಇದರೊಂದಿಗೆ ನೆಲ್ಲಿಕಾಯಿಯನ್ನು ಬಳಸಿ ತಯಾರಿಸಲಾಗುವ ಕೂದಲ ಲೇಪಗಳು ಕೂದಲನ್ನು ದೃಢಗೊಳಿಸುವುದು ಮಾತ್ರವಲ್ಲ, ಕಾಂತಿಯುಕ್ತ ಮತ್ತು ನೀಳವೂ ಆಗಿಸುತ್ತದೆ. ಬನ್ನಿ, ಈ ಪರಿಯ ಪರಿಣಾಮವನ್ನು ಪಡೆಯಲು ಕೂದಲ ಲೇಪಗಳನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ:

ನೆಲ್ಲಿಕಾಯಿಯ ಎಣ್ಣೆ 
ಸುಮಾರು ಐದಾರು ಮಧ್ಯಮ ಗಾತ್ರದ ನೆಲ್ಲಿಕಾಯಿಯನ್ನು ಚಿಕ್ಕದಾಗಿ ತುಂಡರಿಸಿ. ಸುಮಾರು ಐದಾರು ದಾಸವಾಳದ ಎಲೆಗಳನ್ನೂ ಚಿಕ್ಕದಾಗಿ ಹೆಚ್ಚಿ. ಒಂದು ಕಪ್ ಕೊಬ್ಬರಿ ಎಣ್ಣೆಯನ್ನು ಚಿಕ್ಕ ಪಾತ್ರೆಯಲ್ಲಿ ಚಿಕ್ಕ ಉರಿಯಲ್ಲಿ ಕುದಿಸಿ. ಕುದಿಯಲು ಪ್ರಾರಂಭವಾದ ತಕ್ಷಣ ಇವೆರಡನ್ನೂ ಎಣ್ಣೆಯಲ್ಲಿ ಹಾಕಿ ಸುಮಾರು ಇಪ್ಪತ್ತು ನಿಮಿಷ ಕುದಿಯಲು ಬಿಡಿ.



ಬಳಿಕ ಉರಿಯನ್ನು ಆರಿಸಿ ತಣಿಯಲು ಬಿಡಿ. ಈ ಎಣ್ಣೆಯನ್ನು ಸೋಸಿ ಒಂದು ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿ. ಈ ಎಣ್ಣೆಯನ್ನು ನಿತ್ಯವೂ ನಿಮ್ಮ ತಲೆಗೆ ಹಚ್ಚಿಕೊಳ್ಳುವ ಎಣ್ಣೆಯಾಗಿ ಬಳಸಿ.   ಸೊಂಪಾದ ಕೂದಲಿಗಾಗಿ ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್!

ಕೂದಲನ್ನು ದೃಢಗೊಳಿಸಲು 
ಒಂದು ದೊಡ್ಡಚಮಚ ಮೆಂತೆಕಾಳುಗಳನ್ನು ನೀರಿನಲ್ಲಿ ಇಡಿಯ ರಾತ್ರಿ ನೆನೆಸಿಡಿ. ಬೆಳಿಗ್ಗೆ ಈ ಕಾಳುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. ಇದಕ್ಕೆ ಒಂದು ದೊಡ್ಡ ಚಮಚ ನೆಲ್ಲಿಕಾಯಿಯ ಪುಡಿ ಮತ್ತು ಕೊಂಚ ಮೊಸರನ್ನು ಬೆರೆಸಿ ತಲೆಗೆ ಹಚ್ಚಿಕೊಳ್ಳುವಷ್ಟು ದಪ್ಪನೆಯ ಲೇಪನವಾಗಿಸಿ.


ಈ ಲೇಪನವನ್ನು ಕೂದಲ ಬುಡದಿಂದ ತುದಿಯವರೆಗೆ ದಪ್ಪನಾಗಿ ಹಚ್ಚಿ ಒಂದು ಗಂಟೆ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.         ಕೊಲೆಸ್ಟ್ರಾಲ್‌ನ್ನು ಹದ್ದು ಬಸ್ತಿನಲ್ಲಿಡುವ ಪುಟ್ಟ 'ನೆಲ್ಲಿಕಾಯಿ'  

ಕೂದಲು ನೆರೆಯುವುದನ್ನು ತಡೆಯಲು 
ಒಂದು ಕಪ್ ಆಲಿವ್ ಎಣ್ಣೆ, ಒಂದು ದೊಡ್ಡ ಚಮಚ ನೆಲ್ಲಿಕಾಯಿ ಪುಡಿ ಮತ್ತು ಒಂದು ಮುಷ್ಠಿಯಷ್ಟು ಕರಿಬೇವಿನ ಎಲೆಗಳನ್ನು ಬೆರೆಸಿ. ಈ ಎಣ್ಣೆಯನ್ನು ಸುಮಾರು ಹದಿನೈದು ನಿಮಿಷಗಳ ಕಾಲ ಕುದಿಸಿ. ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಈ ಎಣ್ಣೆ ಉಗುರುಬೆಚ್ಚಗಿರುವಷ್ಟು ತಣ್ಣಗಾದ ಬಳಿಕ ಈ ಎಣ್ಣೆಯಿಂದ ಕೊಂಚ ಮಸಾಜ್ ಮೂಲಕ ಇಡಿಯ ತಲೆಗೆ ಹಚ್ಚಿಕೊಳ್ಳಿ.


ಈ ಎಣ್ಣೆ ಇಡಿಯ ರಾತ್ರಿ ಹಾಗೇ ಇರಲಿ. ಬೆಳಿಗ್ಗೆ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಮತ್ತು ಕಂಡೀಶನರ್ ಬಳಸಿ ಸ್ನಾನ ಮಾಡಿ ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸುವ ಮೂಲಕ ನೆರೆತಿರುವ ಕೂದಲುಗಳೆಲ್ಲಾ ಕಪ್ಪಗಾಗಲು ತೊಡಗುತ್ತವೆ. ಕೂದಲಿನ ಸಮಸ್ಯೆಗಳಿಗೆ ನೆಲ್ಲಿಕಾಯಿ ಎಣ್ಣೆ ಪರಿಹಾರವೇ?

ಕೂದಲ ಕಂಡೀಶನಿಂಗ್‌ಗಾಗಿ 
ಒಂದು ಮೊಟ್ಟೆಯ ಬಿಳಿಭಾಗ, ಒಂದು ದೊಡ್ಡ ಚಮಚ ನೆಲ್ಲಿಕಾಯಿಯ ಪುಡಿ ಮತ್ತು ಒಂದು ಚಿಕ್ಕಚಮಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಬಳಸುವ ಮೊದಲು ಕೂದಲನ್ನು ನೆನೆಸಿ ಈ ಲೇಪನವನ್ನು ದಪ್ಪನಾಗಿ ಹಚ್ಚಿಕೊಳ್ಳಿ. ಈ ಲೇಪನ ಪೂರ್ಣವಾಗಿ ಒಣಗುವವರೆಗೂ ಹಾಗೇ ಬಿಡಿ. ಒಣಗಿದ ಬಳಿಕ ಮಡಚಿದರೆ ಮುರಿಯುವಂತಾದಾಗ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

'ಲವಂಗ'ದ ಜಬರ್ದಸ್ತ್ ಪವರ್‌ಗೆ ಮೆಚ್ಚಲೇಬೇಕು...

ಇತ್ತೀಚಿನ ಯಾವುದೇ ಟೂಥ್ ಪೇಸ್ಟ್‌ನ ಜಾಹೀರಾತನ್ನು ನೋಡಿದರೂ ಅದರಲ್ಲಿ ನಿಮಗೆ ಕಂಡುಬರುವಂತಹ ಅಂಶವೆಂದರೆ ಲವಂಗದ ಎಣ್ಣೆಯನ್ನು ಬಳಸಿದ್ದೇವೆಂದು ಹೇಳಿರುವುದು. ಲವಂಗವು ವಿಶ್ವದಾದ್ಯಂತ ಸಾಂಬಾರ ಪದಾರ್ಥಗಳಲ್ಲಿ ತನ್ನದೇ ಆದಂತಹ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆಹಾ...ಲವಂಗ ಚಹಾ, ಕಣ ಕಣದಲ್ಲೂ ಆರೋಗ್ಯದ ಶಕ್ತಿ!  ಆಹಾ...ಲವಂಗ ಚಹಾ, ಕಣ ಕಣದಲ್ಲೂ ಆರೋಗ್ಯದ ಶಕ್ತಿ!

ಉರಿಯೂತ ಶಮನಕಾರಿ, ನಂಜುನಿರೋಧಕ ಗುಣಗಳನ್ನು ಹೊಂದಿರುವಂತಹ ಲವಂಗವನ್ನು ಹೆಚ್ಚಾಗಿ ಆಯುರ್ವೇದದಲ್ಲಿ ಬಳಕೆ ಮಾಡಲಾಗುತ್ತದೆ. ಹಲ್ಲುನೋವು, ಕಫ, ಅಸ್ತಮಾ ಮತ್ತು ಅಜೀರ್ಣ, ಒತ್ತಡದಂತಹ ಸಮಸ್ಯೆಗಳಿಗೆ ಲವಂಗವು ತುಂಬಾ ಪರಿಣಾಮಕಾರಿ ಔಷಧಿಯಾಗಿದೆ. ಇದರ ಸುವಾಸನೆ ಕೂಡ ತುಂಬಾ ಚೆನ್ನಾಗಿರುತ್ತದೆ.   ನಿಮ್ಮ ಅಡುಗೆ ಮನೆಯ ದಾದಿ ಲವಂಗ

ಇದನ್ನು ಅಡುಗೆ ಹಾಗೂ ಮನೆಮದ್ದಿನಲ್ಲಿ ಮಾತ್ರ ಬಳಕೆ ಮಾಡುವುದಲ್ಲದೆ ಕೆಲವೊಂದು ವೈನ್‌ಗಳಿಗೆ ಸುವಾಸನೆಯನ್ನು ನೀಡಲು ಬಳಕೆ ಮಾಡಲಾಗುತ್ತದೆ. ಲವಂಗದಿಂದ ಯಾವ ರೀತಿಯಲ್ಲಿ ತ್ವಚೆಯನ್ನು ಆರೈಕೆ ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳುವ. ಲವಂಗದಲ್ಲಿದೆ ನಾನಾ ಔಷಧೀಯ ಗುಣಗಳು!       

ಮೊಡವೆ ನಿವಾರಣೆ 
ಮೊಡವೆಗಳನ್ನು ನಿವಾರಣೆ ಮಾಡುವಲ್ಲಿ ಲವಂಗವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಲವಂಗವು ತುಂಬಾ ಘಾಟನ್ನು ಹೊಂದಿರುವ ಕಾರಣದಿಂದಾಗಿ ಆಲಿವ್ ತೈಲ ಅಥವಾ ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿಕೊಂಡು ಇದನ್ನು ಬಳಸಿದರೆ ಒಳ್ಳೆಯದು.

ಕಲೆಗಳ ನಿವಾರಣೆ 
ಮುಖದಲ್ಲಿ ಗಾಯದಿಂದ ಅಥವಾ ತರುಚಿದ ಗಾಯದಿಂದ ಉಂಟಾಗಿರುವ ಯಾವುದೇ ರೀತಿಯ ಕಲೆಗಳನ್ನು ಲವಂಗದ ಎಣ್ಣೆ ಹಚ್ಚುವುದರಿಂದ ನಿವಾರಣೆ ಮಾಡಬಹುದು. ಈ ನೈಸರ್ಗಿಕ ತೈಲದಿಂದ ಮೃಧು ಹಾಗೂ ಕಾಂತಿಯುತ ಚರ್ಮವು ನಿಮ್ಮದಾಗುತ್ತದೆ.

ನೆರಿಗೆ ರಹಿತ ಚರ್ಮಕ್ಕಾಗಿ 
ಚರ್ಮಕ್ಕೆ ವಯಸ್ಸಾಗುವ ಲಕ್ಷಣಗಳನ್ನು ಲವಂಗವು ನಿವಾರಣೆ ಮಾಡುತ್ತದೆ. ಲವಂಗದ ಎಣ್ಣೆಯನ್ನು ಇತರ ಯಾವುದೇ ಸಾರಭೂತ ತೈಲದೊಂದಿಗೆ ಮಿಶ್ರಣ ಮಾಡಿಕೊಂಡು ಬಳಸುವುದರಿಂದ ಯೌವನಯುವ ತ್ವಚೆಯು ನಿಮ್ಮದಾಗುತ್ತದೆ.

ತಾಜಾ ಹಾಗೂ ಆರೋಗ್ಯಕರ 
ತಾಜಾ ಹಾಗೂ ಆರೋಗ್ಯಕರ ಚರ್ಮಕ್ಕಾಗಿ ಲವಂಗದ ಎಣ್ಣೆಯನ್ನು ಬಳಸಬೇಕು. ಈ ನೈಸರ್ಗಿಕ ಎಣ್ಣೆಯು ಪುನರುಜ್ಜೀವನವನ್ನು ನೀಡುವುದು ಮಾತ್ರವಲ್ಲದೆ ಇದರಲ್ಲಿ ಇರುವಂತಹ ಉತ್ತೇಜನಕಾರಿ ಗುಣಗಳು ಚರ್ಮವು ತಾಜಾ ಹಾಗೂ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ.

ರಕ್ತದ ಶುದ್ಧೀಕರಣ 
ಲವಂಗದ ಎಣ್ಣೆಯು ರಕ್ತವನ್ನು ಒಳ್ಳೆಯ ರೀತಿಯಿಂದ ಶುದ್ಧೀಕರಿಸುತ್ತದೆ ಮತ್ತು ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣಗಳು ಸುಂದರ ಹಾಗೂ ಶುಭ್ರ ಚರ್ಮವನ್ನು ನೀಡುವುದು. ನಿಯಮಿತವಾಗಿ ಲವಂಗದ ಎಣ್ಣೆಯನ್ನು ಬಳಸುವುದರಿಂದ ಆರೋಗ್ಯಕರ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು.


ಮಸಾಜ್ 
ಲವಂಗದ ಎಣ್ಣೆಯು ನೋವು ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಲೋಷನ್ ಹಾಗೂ ಕಾಸ್ಮೆಟಿಕ್ ಕ್ರೀಮ್‌ಗಳಲ್ಲಿ ಲವಂಗದ ಎಣ್ಣೆಯು ಇರುತ್ತದೆ. ಇಂತಹ ಕ್ರೀಮ್ ಅಥವಾ ಲೋಷನ್ ಹಚ್ಚಿಕೊಂಡರೆ ದೇಹದ ನೋವು ನಿವಾರಣೆಯಾಗುವುದು.


ಕಲೆರಹಿತ ತ್ವಚೆಯ ನಿರ್ವಹಣೆಗೆ 
ಕೆಲವರು ತ್ವಚೆಯು ತುಂಬಾ ಒಳ್ಳೆಯದಿರುತ್ತದೆ. ಆದರೆ ಕೆಲವೊಂದು ಕಾರಣಗಳಿಂದಾಗಿ ಚರ್ಮವು ನಿಸ್ರೇಜವಾಗಿ ಕಾಣಿಸುತ್ತದೆ. ಹಲವಾರು ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿರುವ ಲವಂಗದ ಎಣ್ಣೆಯನ್ನು ಹಚ್ಚಿಕೊಂಡರೆ ಕಲೆರಹಿತವಾದ ಚರ್ಮವು ನಿಮ್ಮದಾಗುವುದು.

ಕೀಟಗಳು ಕಚ್ಚಿದರೆ 
ಕೀಟಗಳು ಕಚ್ಚಿದರೆ ಆಗ ನೋವು ಕಾಣಿಸಿಕೊಂಡು ಕಿರಿಕಿರಿಯಾಗುತ್ತದೆ ಮತ್ತು ಕೆಲವು ಸಲ ಆ ಭಾಗದ ಚರ್ಮವು ದಪ್ಪಗೆ ಆಗುತ್ತದೆ. ಲವಂಗದ ಎಣ್ಣೆಯನ್ನು ಈ ಭಾಗಕ್ಕೆ ಹಚ್ಚಿಕೊಂಡರೆ ಎಲ್ಲವೂ ಪರಿಹಾರವಾಗುವುದು. ಲವಂಗದ ಎಣ್ಣೆಯನ್ನು ಇತರ ಎಣ್ಣೆ ಅಥವಾ ಬೇರೆ ಯಾವುದೇ ಕ್ರೀಮ್ ನೊಂದಿಗೆ ಮಿಶ್ರಣ ಮಾಡಿಕೊಂಡು ಹಚ್ಚಿಕೊಳ್ಳಿ.


ಮಾಯಿಶ್ಚರೈಸರ್ 
ನೀವು ಯಾವುದೇ ಮಾಯಿಶ್ಚರೈಸರ್ ಕ್ರೀಮ್ ಅಥವಾ ಲೋಷನ್ ಬಳಸುತ್ತಾ ಇದ್ದರೆ ಅದಕ್ಕೆ ಒಂದೆರಡು ಹನಿ ಲವಂಗದ ಎಣ್ಣೆ ಹಾಕಿ ಬಳಸಿದರೆ ಪರಿಣಾಮ ಕಂಡುಬರುವುದು. ಇದು ಆಕರ್ಷಣೀಯ ಚರ್ಮವನ್ನು ನೀಡುವುದರೊಂದಿಗೆ ಉರಿಯೂತವನ್ನು ತಗ್ಗಿಸುವುದು.

ಸರಿಯಾಗಿ ಕೈ ತೊಳೆದುಕೊಳ್ಳಲು- ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಊಟಕ್ಕೂ ಮೊದಲು ಮತ್ತು ಊಟದ ನಂತರ ಕೈ ತೊಳೆದುಕೊಳ್ಳಲೇಬೇಕು ಎಂದು ನಮ್ಮ ಹಿರಿಯರು ಕಲಿಸಿದ್ದನ್ನು ಈಗಲೂ ನಿಮ್ಮ ಅಭ್ಯಾಸದಲ್ಲಿದೆಯೇ? ಈ ಪ್ರಶ್ನೆ ಏಕೆ ಕೇಳಬೇಕಾಯಿತು ಎಂದರೆ ಇತ್ತೀಚಿನ ದಿನಗಳಲ್ಲಿ ಸಿದ್ಧ ಆಹಾರಗಳು ಪ್ರತಿಷ್ಠೆಯ ವಿಷಯವಾಗಿ ದುಬಾರಿ ಬೆಲೆಯಲ್ಲಿ ಸಿಗುತ್ತಿದ್ದಂತೆಯೇ ಕೈ ತೊಳೆಯುವ ವಿಷಯವೂ ಪ್ರತಿಷ್ಠೆಗೆ ಕುಂದು ಎಂದೇ ಪರಿಗಣಿಸಲಾಗುತ್ತಿದೆ.
ಹೆಚ್ಚಿನ ಆಹಾರಗಳ ಜೊತೆಗೆ ಸ್ವಚ್ಛಗೊಳಿಸುವ ಟಿಶ್ಯೂ ಕಾಗದ ಜೊತೆಯಲ್ಲಿಯೇ ಬರುವುದರಿಂದ ಹೆಚ್ಚಿನವರು ಇದರಲ್ಲಿ ಕೈ ಒರೆಸಿಕೊಂಡು ಊಟ ಪ್ರಾರಂಭಿಸುತ್ತಾರೆ. ಆದರೆ ನೀರಿನಿಂದ ಮತ್ತು ಸೋಪು ಹಚ್ಚಿ ತೊಳೆದುಕೊಂಡ ಹೊರತು ಕೈಗಳ ಮೇಲಿರುವ ಸೂಕ್ಷ್ಮಜೀವಿಗಳು ಕಾಗದದಿಂದ ಒರೆಸಿಕೊಂಡ ಮಾತ್ರಕ್ಕೆ ಹೋಗುವುದು ಸಾಧ್ಯವೇ ಇಲ್ಲ.

ಆದ್ದರಿಂದ ಪ್ರತಿಷ್ಠೆ ಎಷ್ಟೇ ಇರಲಿ, ಸ್ವಚ್ಛತೆಯ ವಿಷಯ ಬಂದಾಗ ನೀರು ಮತ್ತು ಸೋಪಿನಿಂದ ಕೈ ತೊಳೆದುಕೊಳ್ಳದೇ ಆಹಾರವನ್ನು ಮುಟ್ಟುವುದೂ ಸಲ್ಲದು. ಸಿದ್ಧ ಆಹಾರ ಮಳಿಗೆಗಳಲ್ಲಿ ಕೈ ತೊಳೆದುಕೊಳ್ಳಲು ಕೊಂಚ ದೂರದಲ್ಲಿ ವ್ಯವಸ್ಥೆ ಮಾಡಿರುತ್ತಾರೆ. ಇದೂ ದೊಡ್ಡಸ್ತಿಕೆಯ ಪ್ರದರ್ಶನವೇ! ಹಸ್ತಗಳ ನಲ್ಮೆಯ ಆರೈಕೆಗೆ ಈ ಮನೆಮದ್ದೇ ಸಾಕು  

ಆದರೆ ನಿಮಗೆ ಆರೋಗ್ಯದ ಬಗ್ಗೆ ಕಾಳಜಿ ಇರುವುದೇ ಆದಲ್ಲಿ ಎಷ್ಟೇ ದೂರವಿದ್ದರೂ ಸರಿ, ಹೋಗಿ ಕೈ ತೊಳೆದುಕೊಂಡು ಬರುವುದೇ ಆರೋಗ್ಯವಂತ ಮತ್ತು ಜಾಣತನದ ಲಕ್ಷಣ. ಇದರಿಂದ ಹಲವಾರು ರೋಗಗಳನ್ನು ಬರದಂತೆ ತಡೆಯಬಹುದು. ವಿಶೇಷವಾಗಿ ಕಾಲರಾ, ಟೈಫಾಯ್ಡ್, ಗ್ಯಾಸ್ಟ್ರೋಎಂಟ್ರೈಟಿಸ್, ಶೀತ, ಕೆಮ್ಮು, ಚರ್ಮದ ಸೋಂಕು ಮೊದಲಾದ ರೋಗಗಳು ಚರ್ಮದ ಸೂಕ್ಷ್ಮಜೀವಿಗಳಿಂದಲೇ ಹರಡುತ್ತವೆ.

ಇಷ್ಟು ಹೇಳಿಯೂ ಕೈ ತೊಳೆಯಲು ಬಾರದವರನ್ನು ಬಿಟ್ಟು ಉಳಿದ ಜಾಣರಿಗೆ ಕೇಳುವ ಪ್ರಶ್ನೆ ಎಂದರೆ ಕೇವಲ ಸೋಪಿನಿಂದ ಕೊಂಚ ನೊರೆ ಬರುವಂತೆ ಎರಡೂ ಹಸ್ತಗಳನ್ನು ತಿಕ್ಕಿ ನೀರಿನಿಂದ ತೊಳೆದುಕೊಂಡರೆ ಸಾಕೇ? ಈ ಬಗ್ಗೆ ಥಟ್ಟನೇ ಉತ್ತರ ನೀಡಲು ಜಾಣರಿಗೆ ಸಾಧ್ಯವಾಗದಿದ್ದರೂ ತಜ್ಞರಿಗೆ ಸಾಧ್ಯ.  

ವಿಶ್ವ ಆರೋಗ್ಯ ಸಂಸ್ಥೆ (WHO)ಯ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಎರಡೂ ಕೈಗಳನ್ನು ಸುಮಾರು ನಲವತ್ತರಿಂದ ಅರವತ್ತು ಸೆಕೆಂಡುಗಳ ಕಾಲ ಸೋಪಿನಿಂದ ತೊಳೆದುಕೊಂಡಾಗ ಮಾತ್ರ ಪೂರ್ಣಪ್ರಮಾಣದ ಸ್ವಚ್ಛತೆ ಲಭಿಸುತ್ತದೆ. ಅದೂ ಸರಿಯಾದ ಕ್ರಮದಲ್ಲಿ ತೊಳೆದುಕೊಂಡಾಗ ಮಾತ್ರ. ಸರಿಯಾದ ಕ್ರಮ ಎಂದರೆ? ತಲೆ ತುರಿಸಿಕೊಳ್ಳುವಂತಾಯಿತೇ? ಈ ತಜ್ಞರು ಸರಿಯಾದ ಕ್ರಮವನ್ನು ಹೇಗೆ ಅನುಸರಿಸಬೇಕು ಎಂದು ಹೇಳಿದ್ದಾರೆ ಎಂಬುದನ್ನು ಮುಂದೆ ಓದಿ....


ಹಂತ 1 
ಮೊದಲಿಗೆ ಎರಡೂ ಕೈಗಳನ್ನು ಸುಮಾರು ಅರ್ಧ ಮೊಣಕೈಗಳವರೆಗೂ ನೆನೆಯುವಂತೆ ತೋಯಿಸಿಕೊಳ್ಳಬೇಕು. ಕೊಂಚ ಸೋಪು ಅಥವಾ ಸೋಪಿನ ದ್ರಾವಣವನ್ನು ಒಂದು ಹಸ್ತದ ನಡುವೆ ಸುರಿದು ಎರಡೂ ಹಸ್ತಗಳಿಂದ ಚೆನ್ನಾಗಿ ಉಜ್ಜಿ ನೊರೆನೊರೆಯಾಗುವಂತೆ ಮಾಡಬೇಕು.


ಹಂತ 2 
ಈಗ ಬಲಹಸ್ತದ ಮುಂಭಾಗದಿಂದ ಎಡಹಸ್ತದ ಹಿಂಭಾಗಕ್ಕೂ, ಎಡಹಸ್ತದ ಮುಂಭಾಗದಿಂದ ಬಲಹಸ್ತದ ಹಿಂಭಾಗಕ್ಕೂ ನೊರೆ ಹಚ್ಚಬೇಕು. ಬೆರಳುಗಳನ್ನು ಕೆಳಗಿನ ಹಸ್ತದ ಬೆರಳುಗಳ ನಡುವೆ ಓಡಾಡಿಸಿ ಸಂದುಗಳಲ್ಲಿಯೂ ನೊರೆ ತುಂಬಿಕೊಳ್ಳುವಂತೆ ಮಾಡಬೇಕು. ಸಾಮಾನ್ಯವಾಗಿ ಬೆರಳುಗಳ ಸಂದುಗಳನ್ನು ನಾವು ಸರಿಯಾಗಿ ತೊಳೆದುಕೊಳ್ಳುವುದೇ ಇಲ್ಲ. ಈ ಕ್ರಮದ ಮೂಲಕ ಸಂದುಗಳು ಪೂರ್ಣವಾಗಿ ಸ್ವಚ್ಛಗೊಳ್ಳುತ್ತವೆ.

ಹಂತ 3 
ಈಗ ಎರಡೂ ಹಸ್ತಗಳನ್ನು ಒಂದಕ್ಕೊಂದು ತಾಕಿಸಿ ಬೆರಳುಗಳನ್ನು ಒಂದರ ಒಳಗೊಂದು ಬರುವಂತೆ ಕೊಂಚ ಒತ್ತಡದಿಂದ ಉಜ್ಜಿಕೊಳ್ಳಿ.


ಹಂತ 4 
ಈ ಹಂತದಲ್ಲಿ ಎರಡೂ ಹಸ್ತದ ಬೆರಳುಗಳನ್ನು ಕೊಕ್ಕೆಯಂತೆ ಅರ್ಧ ಮಡಚಿ ಎರಡೂ ಕೊಕ್ಕೆಗಳನ್ನು ಒಂದಕ್ಕೊಂದು ಸಿಕ್ಕಿಸಿ. ಅಂದರೆ ಕಿರುಬೆರಳಿಗೆ ತೋರು ಬೆರಳು, ತೋರು ಬೆರಳಿಗೆ ಕಿರುಬೆರಳು ಬರುವಂತೆ. ಈಗ ಎರಡು ಹಸ್ತಗಳನ್ನು ಅಡ್ಡಲಾಗಿ ಉಜ್ಜಿ.ಈ ವಿಧಾನದಿಂದ ಬೆರಳುಗಳು ಮಡಚುವಲ್ಲಿನ ಗೆರೆಗಳ ಸೂಕ್ಷ್ಮ ಬಿರುಕಿನಲ್ಲಿದ್ದ ಕೊಳೆ ನೇರವಾಗಿ ಉಜ್ಜಿಕೊಳ್ಳದಿದ್ದಾಗ ಹೋಗದಿದ್ದುದು ಈಗ ಹೋಗುತ್ತದೆ.


ಹಂತ 5 
ಬಳಿಕ ಎಡ ಹೆಬ್ಬರಳನ್ನು ಬಲಗೈಯ ಉಳಿದ ನಾಲ್ಕೂ ಬೆರಳುಗಳು ಸುತ್ತುವರೆಯುವಂತೆ ಹಿಡಿದು ಎಡಮುಖ ಮತ್ತು ಬಲಮುಖವಾಗಿ ತಿರುಗಿಸಿ. ಇದೇ ವಿಧಾನವನ್ನು ಬಲಗೈ ಹೆಬ್ಬರಳಿಗೂ ಪುನರವರ್ತಿಸಿ.


ಹಂತ 6 
ಬಳಿಕ ಬಲಗೈಯ ಐದೂ ಬೆರಳುಗಳ ತುದಿ ಒಂದೆಡೆ ಬರುವಂತೆ ಮುಚ್ಚಿ ಈ ತುದಿಗಳಿಂದ ಎಡಹಸ್ತದ ನಡುಭಾಗದಲ್ಲಿ ಕೊಂಚವೇ ಒತ್ತಡದಿಂದ ವೃತ್ತಾಕಾರದಲ್ಲಿ ತಿರುಗಿಸಿ. ಇದೇ ರೀತಿ ಎಡಗೈಗೂ ಪುನರಾವರ್ತಿಸಿ. ಇದರಿಂದ ಹಸ್ತದ ಸೂಕ್ಷಗೆರೆಗಳಲ್ಲಿರುವ ಕೊಳೆ ಇಲ್ಲವಾಗುತ್ತದೆ.


ಹಂತ 7 
ನಂತರ ಎಡಗೈಯ ಮಣಿಕಟ್ಟನ್ನು ಬಲಗೈಯ ಹೆಬ್ಬರಳು ಮತ್ತು ಉಳಿದ ಬೆರಳುಗಳಿಂದ ಹಿಡಿದುಕೊಂಡು ವೃತ್ತಾಕಾರದಲ್ಲಿ ಬಲಕ್ಕೂ, ಎಡಕ್ಕೂ ಉಜ್ಜಿಕೊಳ್ಳಿ. ಇದೇ ವಿಧಾನವನ್ನು ಬಲಗೈಗೂ ಅನುಸರಿಸಿ.


ಹಂತ 7 
ಬಳಿಕ ತಣ್ಣೀರಿನಿಂದ ಸೋಪಿನಿಂದ ಆವರಿಸಿರುವ ಅಷ್ಟೂ ಭಾಗವನ್ನು ಸ್ವಚ್ಛಗೊಳಿಸಿ ಬಳಿಕ ಸ್ವಚ್ಛವಾಗ ಟವೆಲ್ ಅಥವಾ ಟಿಶ್ಯೂ ಪೇಪರ್ ನಿಂದ ಪೂರ್ಣವಾಗಿ ಒಣಗುವಂತೆ ಒರೆಸಿಕೊಳ್ಳಿ.

ಸ್ವಚ್ಛತೆಗಾಗಿ ಕೆಲವು ಟಿಪ್ಸ್
* ಕೈ ತೊಳೆದುಕೊಂಡ ಬಳಿಕ ನಲ್ಲಿಯ ತಿರುಗಣೆಯನ್ನು ಬರೆಯ ಕೈಗಳಿಂದ ಮುಟ್ಟಬೇಡಿ. ಬದಲಿಗೆ ಟಿಶ್ಯೂ ಪೇಪರ್ ಒಂದರ ಸಹಾಯದಿಂದ ಮುಟ್ಟಿ ಬಂದ್ ಮಾಡಿ.
* ಕೈ ತೊಳೆದುಕೊಂಡ ಬಳಿಕ ನಿಮ್ಮ ಕರ್ಚೀಫ್ ಅಥವಾ ಟಿಶ್ಯೂ ಕಾಗದದಿಮ್ದ ಒರೆಸಿ ಒಣಗಿಸಿಕೊಳ್ಳುವುದು ಅವಶ್ಯ, ಹಾಗೇ ಒಣಗಲು ಬಿಡಬಾರದು.



ದೀಪಾವಳಿ ವಿಶೇಷ-ಹರ್ಬಲ್ ಫೇಸ್ ಮಾಸ್ಕ್, ಒಮ್ಮೆ ಪ್ರಯತ್ನಿಸಿ

ಇದು ಹೇಳಿ ಕೇಳಿ ಹಬ್ಬದ ಸೀಸನ್. ಹಬ್ಬದ ಸಮಯದಲ್ಲಿ ಸಂಭ್ರಮದಿಂದ ಇರುವುದು ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಹೊಸ ಬಟ್ಟೆ ಧರಿಸಿ ದೀಪಗಳ ಹಬ್ಬವನ್ನು ಆನಂದದಿಂದ ಸ್ವೀಕರಿಸುವಾಗ ಸೌಂದರ್ಯದಲ್ಲೂ ನಾವು ಎತ್ತಿದ ಕೈಯಾಗಬೇಕು ಅಲ್ಲವೇ? ನಿತ್ಯವೂ ನಾವು ಹೇಗೆ ಕಾಣುತ್ತೇ ಅದು ಹಬ್ಬದ ಸಮಯದಲ್ಲಿ ಮುಖ್ಯವಾಗಿರದೇ ಅಂದು ಇನ್ನಷ್ಟು ಚೆಲುವಾಗಿ ಮಿಂಚಬೇಕು ಎಂಬುದಾಗಿ ನಾವು ಬಯಸುತ್ತೇವೆ.

ಪಾರ್ಲರ್‎ಗೆ ಹೋಗಿ ಅನಾವಶ್ಯಕ ದುಡ್ಡು ದಂಡ ಮಾಡದೇ ಮನೆಯಲ್ಲೇ ಫೇಸ್ ಪ್ಯಾಕ್‎ಗಳನ್ನು ಸಿದ್ಧಪಡಿಸಿ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಬಹುದಾಗಿದೆ. ಅದೇನು ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ. ತ್ವಚೆಯ ನಲ್ಮೆಯ ಆರೈಕೆಗೆ-ನೈಸರ್ಗಿಕ ಫೇಸ್‌ಪ್ಯಾಕ್


ಕ್ಲೆನ್ಸಿಂಗ್ ಮಾಸ್ಕ್ 
ಹಸಿ ತಂಪು ಹಾಲಿನಲ್ಲಿ ಹತ್ತಿಯನ್ನು ಮುಳುಗಿಸಿ. ಕೊಳೆ ಮುಖದಿಂದ ನಿವಾರಣೆಯಾಗುವವರೆಗೂ ಹತ್ತಿಯಿಂದ ಮುಖವನ್ನು ಸ್ವಚ್ಛಮಾಡುತ್ತಿರಿ. 5 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಈ ಸರಳ ವಿಧಾನವು ನಿಮ್ಮ ಮುಖವನ್ನು ಸ್ವಚ್ಛಗೊಳಿಸಲಿದೆ ಅಂತೆಯೇ ಹೈಡ್ರೇಟ್ ಮಾಡಿ ನಿಮ್ಮ ತ್ವಚೆಯನ್ನು ಹಗುರಗೊಳಿಸುತ್ತದೆ.

ಹೈಡ್ರೇಟಿಂಗ್ 
ಮಾಸ್ಕ್ ಒಂದು ಚಮಚದಷ್ಟು ಮಿಲ್ಕ್ ಕ್ರೀಮ್ ಅನ್ನು ತೆಗೆದುಕೊಳ್ಳಿ ಮತ್ತು ಇದಕ್ಕೆ ಒಂದು ಸ್ಪೂನ್‎ನಷ್ಟು ಬೇಸನ್ ಅನ್ನು ಸೇರಿಸಿ ಅಂತೆಯೇ ಜೇನು ಮಿಶ್ರ ಮಾಡಿಕೊಳ್ಳಿ. ಮೃದುವಾದ ಪೇಸ್ಟ್ ತಯಾರಾಗುವವರೆಗೂ ಇದನ್ನು ಮಿಶ್ರ ಮಾಡಿ. ಮುಖವನ್ನು ತೊಳೆದುಕೊಂಡು ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ಒಣಗಲು ಬಿಡಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ವಾರಕ್ಕೆ ಎರಡು ಬಾರಿ ಈ ಆಯುರ್ವೇದಿಕ್ ಮಾಸ್ಕ್ ಅನ್ನು ಹಚ್ಚಿಕೊಳ್ಳಿ.

ಡೆಡ್ ಸ್ಕಿನ್ ರಿಮೂವಿಂಗ್ ಸ್ಕ್ರಬ್ 
ಒಂದು ಚಮಚದಷ್ಟು ಅಕ್ಕಿ ಹುಡಿಯನ್ನು ತೆಗೆದುಕೊಳ್ಳಿ ಇದಕ್ಕೆ ಬಾದಾಮಿ ಎಣ್ಣೆ, ಚಮಚದಷ್ಟು ಜೇನು ಮತ್ತು ಹಸಿ ಹಾಲನ್ನು ಮಿಶ್ರ ಮಾಡಿ ಮೃದುವಾದ ಪೇಸ್ಟ್ ಸಿದ್ಧಪಡಿಸಿ. ಮುಖವನ್ನು ತೊಳೆದುಕೊಂಡು ಮಾಸ್ಕ್ ಅನ್ನು ಹಚ್ಚಿಕೊಳ್ಳಿ. ನಿಮ್ಮ ಮುಖದಲ್ಲಿ ಒಣಗುವವರೆಗೂ ಇದನ್ನು ಹಾಗೆಯೇ ಬಿಡಿ. ನಂತರ ನೀರನ್ನು ಚುಮುಕಿಸಿ. ಮಾಸ್ಕ್ ಒಣಗುತ್ತಿದ್ದಂತೆ ಅದನ್ನು ವೃತ್ತಾಕಾರವಾಗಿ ಸ್ಕ್ರಬ್ ಮಾಡಿಕೊಳ್ಳಿ. ಐದು ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಸ್ವಚ್ಛವಾಗಿ ಮುಖ ತೊಳೆದುಕೊಳ್ಳಿ



ಫೇಸ್ ಮಸಾಜ್ 
ಹಸ್ತದಲ್ಲಿ ಬೇಬಿ ಆಯಿಲ್ ಅನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ತ್ವಚೆಗೆ ವೃತ್ತಾಕಾರವಾಗಿ ಇದನ್ನು ಮಸಾಜ್ ಮಾಡಿ. ರಾತ್ರಿ ಪೂರ್ತಿ ಹಾಗೆಯೇ ಬಿಡಿ ನಿಮ್ಮ ಮುಖ ಮರುದಿನ ಬೆಳಗ್ಗೆ ಹೊಳೆಯುತ್ತಿರುತ್ತದೆ. ಮಸಾಜ್ ಮಾಡುವುದು ತ್ವಚೆಯ ಕವಚಗಳನ್ನು ಆರಾಮಗೊಳಿಸುತ್ತದೆ ಅಂತೆಯೇ ಬೇಬಿ ಆಯಿಲ್ ಎಲ್ಲಾ ಚರ್ಮ ಪ್ರಕಾರಗಳಿಗೂ ಅತ್ಯುತ್ತಮವಾದುದು

ಆಂಟಿ ವ್ರಂಕಲ್ ಮಾಸ್ಕ್ 
ಪಾತ್ರೆಯನ್ನು ತೆಗೆದುಕೊಂಡು, ಮೊಟ್ಟೆಯ ಹಳದಿ ಭಾಗವನ್ನು ಬೇರ್ಪಡಿಸಿ ಬಿಳಿಭಾಗವನ್ನು ಬಳಸಿಕೊಳ್ಳಿ. ಇದಕ್ಕೆ ಜೇನು ಮತ್ತು ಗ್ಲಿಸರಿನ್ ಅನ್ನು ಬೆರೆಸಿ. ಇದನ್ನು ಚೆನ್ನಾಗಿ ಕ್ರೀಮ್ ಮಾದರಿಯಲ್ಲಿ ಕಲಸಿಕೊಳ್ಳಿ. ನಿಮ್ಮ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹತ್ತಿಯಿಂದ ಇದನ್ನು ಹಚ್ಚಿಕೊಳ್ಳಿ. ಈ ಹರ್ಬಲ್ ಫೇಸ್ ಮಾಸ್ಕ್ ಸಂಪೂರ್ಣ ಒಣಗುವವರೆಗೂ ಹಾಗೆಯೇ ಬಿಟ್ಟು ನಿಧಾನವಾಗಿ ಮುಖದಿಂದ ಬೇರ್ಪಡಿಸಿ.


ಕಣ್ಣಿನ ಮಾಸ್ಕ್ಸರಿಯಾಗಿ ಫೇಸ್ ಮಾಸ್ಕ್ ಹಚ್ಚಿಕೊಳ್ಳುವುದು ಹೇಗೆ? 
ಮುಖ ಹೊಳೆಯುತ್ತಿದ್ದರೂ ಕಣ್ಣು ಮಂಕಾಗಿದೆಯೇ? ನಿಮ್ಮ ಕಣ್ಣಿನ ಕೆಳಭಾಗದಲ್ಲಿ ಕಪ್ಪು ವರ್ತುಲ ರಚನೆಯಾಗಿದೆಯೇ ಹಾಗಿದ್ದರೆ ಅದಕ್ಕೂ ನಮ್ಮ ಬಳಿ ಪರಿಹಾರವಿದೆ. ಫ್ರಿಡ್ಜ್‌‎ನಲ್ಲಿ ಎರಡು ಬಳಸಿದ ಗ್ರೀನ್ ಟಿ ಬ್ಯಾಗ್ ಅನ್ನು ಇಡಿ. 15 ನಿಮಿಷಗಳ ತರುವಾಯ ನಿಮ್ಮ ಕಣ್ಣುಗಳಿಗೆ ನೇರವಾಗಿ ಇದನ್ನು ಅಪ್ಲೈ ಮಾಡಿ. ಕೂಲ್‎ನೆಸ್ ಹೋಗುವವರೆಗೂ ಹಾಗೆಯೇ ಬಿಡಿ. ಕಣ್ಣಿನ ಊತವನ್ನು ನಿವಾರಿಸಿ ನಿಮ್ಮ ಕಣ್ಣುಗಳಿಗೆ ಹೊಳಪನ್ನು ನೀಡುತ್ತದೆ. ಸರಿಯಾಗಿ ಫೇಸ್ ಮಾಸ್ಕ್ ಹಚ್ಚಿಕೊಳ್ಳುವುದು ಹೇಗೆ?


ಐಲ್ಯಾಶಸ್ ನರೀಶರ್ 
5 ಚಮಚದಷ್ಟು ಹರಳೆಣ್ಣೆಗೆ 5 ಚಮಚದಷ್ಟು ಬಾದಾಮಿ ಎಣ್ಣೆಯನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಂಡು ನಿಮ್ಮ ಕಣ್ರೆಪ್ಪೆ, ಹುಬ್ಬಿಗೆ ರಾತ್ರಿ ಇಟ್ಟುಕೊಳ್ಳಿ. ವಾರದಲ್ಲಿ ನಿಮ್ಮ ಕಣ್ರೆಪ್ಪೆಗಳು ದಪ್ಪ ಮತ್ತು ಗಾಢವಾಗಿರುವುದನ್ನು ನೀವು ಗಮನಿಸುತ್ತೀರಿ. ಆಕರ್ಷಕ ಕಣ್ಣಿಗಾಗಿ ನೀಲಿ ಬಣ್ಣದ ಐಶ್ಯಾಡೊ

ಬ್ಲ್ಯಾಕ್ ಹೆಡ್ ರಿಮೂವರ್ 
ಒಂದು ಚಮಚ ನೀರಿಗೆ ಜಿಲೆಟಿನ್ ಹುಡಿಯನ್ನು ಹಾಕಿ ಇದನ್ನು ಚೆನ್ನಾಗಿ ಮಿಶ್ರ ಮಾಡಿ ಇದಕ್ಕೆ ಜೇನು ಸೇರಿಸಿ. ನಿಮ್ಮ ಮೂಗಿಗೆ ತೆಳುವಾಗಿ ಈ ಕೋಟ್ ಅನ್ನು ಹಚ್ಚಿಕೊಳ್ಳಿ. ತುರ್ತಾಗಿ ನಿಮ್ಮ ಮುಗಿಗೆ ಟಿಶ್ಯೂ ಸ್ಟ್ರಿಪ್ ಅನ್ನು ಒತ್ತಿರಿ. 2 ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ಇದನ್ನು ಎಳೆದು ತೆಗೆಯಿರಿ. ವಾರಕ್ಕೆ ಎರಡು ಬಾರಿ ಇದನ್ನು ಪ್ರಯೋಗಿಸಿ. ವೈಟ್‌ ಹೆಡ್ ಸಮಸ್ಯೆಗೆ ಅಕ್ಕಿ ಹಿಟ್ಟು-ಗುಲಾಬಿ ನೀರಿನ ಫೇಸ್ ಪ್ಯಾಕ್



Wednesday, 26 October 2016

ಕೂದಲಿನ ಕಾಳಜಿ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಬೇಕು!

ಮಹಿಳೆಯರ ಕೂದಲಿನಷ್ಟು ಅಲ್ಲದಿದ್ದರೂ ಪುರುಷರ ಕೂದಲಿಗೂ ಆರೈಕೆಯ ಅಗತ್ಯವಿದೆ. ಕೆಲವರಿಗೆ ಕೂದಲನ್ನು ಒಪ್ಪ ಓರಣವಾಗಿಸಿಕೊಳ್ಳಲು ನಿತ್ಯವೂ ಕಷ್ಟಪಡಬೇಕಾಗುತ್ತದೆ. ಇದಕ್ಕೆ ಕಾರಣ ಕೂದಲನ್ನು ಹೇಗೆ ಸಂರಕ್ಷಿಸಿಕೊಳ್ಳಬೇಕು ಎಂಬ ವಿಷಯದ ಬಗ್ಗೆ ಇವರಿಗೆ ತಿಳಿವಳಿಕೆ ಇಲ್ಲದಿರುವುದೇ ಕಾರಣ. ಪುರುಷರ ಬೊಕ್ಕತಲೆಯಲ್ಲಿ ಕೂದಲು ಚಿಗುರಿಸುವ ಮನೆ ಔಷಧಿ

ಬನ್ನಿ, ದಿನದ ಮುಂದಿನ ಅವಧಿಯಲ್ಲಿಯೂ ನಿಮ್ಮ ಕೂದಲ ಸೌಂದರ್ಯ ಉಳಿದುಕೊಳ್ಳಬೇಕೆಂದರೆ ಕೇಶತಜ್ಞರು ನೀಡಿರುವ ಕೆಳಗಿನ ಮಾಹಿತಿಗಳನ್ನು ಅನುಸರಿಸಿ.


ಬಿಸಿನೀರಿನಿಂದ ತಲೆಸ್ನಾನ ಮಾಡಬೇಡಿ 
ಬಿಸಿನೀರು ತಲೆಯ ಚರ್ಮದ ನೈಸರ್ಗಿಕ ತೈಲಗಳನ್ನು ಬಸಿದು ಬಿಡುತ್ತದೆ. ಪರಿಣಾಮವಾಗಿ ಕೂದಲ ಬುಡದಲ್ಲಿ ಆರ್ದ್ರತೆಯ ಕೊರತೆಯಾಗುತ್ತದೆ. ಇದರಿಂದ ತಲೆಹೊಟ್ಟು, ತುರಿಕೆ ಚರ್ಮ ಒಣಗುವುದು, ಕೂದಲು ಸಡಿಲವಾಗಿ ಉದುರುವುದು, ಕೂದಲ ಕಾಂತಿ ಕಳೆದುಕೊಳ್ಳುವುದು ಮೊದಲಾದ ತೊಂದರೆಗಳು ಎದುರಾಗುತ್ತದೆ.



ಬದಲಿಗೆ ತಲೆಗೂದಲನ್ನು ತೊಳೆದುಕೊಳ್ಳಲು ಉಗುರುಬೆಚ್ಚನೆಯ ನೀರನ್ನು ಮಾತ್ರ ಬಳಸಿ. ಸಾಧ್ಯವಾದರೆ ತಣ್ಣೀರನ್ನೇ ಬಳಸುವುದು ಇನ್ನೂ ಉತ್ತಮ. ಇದರಿಂದ ನಿಮ್ಮ ಕೂದಲಿನ ಆರೋಗ್ಯ ಉತ್ತಮವಾಗಿರುತ್ತದೆ.

ಟವೆಲ್ಲಿನಿಂದ ಒರೆಸಿಕೊಳ್ಳುವಾಗ ಆತುರ ಬೇಡ
ಕೆಲವರಿಗೆ ಸ್ನಾನದ ಬಳಿಕ ಟವೆಲ್ಲಿನಿಂದ ಜೋರಾಗಿ, ಹೆಚ್ಚಿನ ಒತ್ತಡದಿಂದ ಒರೆಸಿಕೊಳ್ಳುವ ಅಭ್ಯಾಸವಿರುತ್ತದೆ. ಇದು ಅತ್ಯಂತ ಅಪಾರಕರ ವಿಧಾನವಾಗಿದೆ. ಏಕೆಂದರೆ ಸ್ನಾನದ ಬಳಿಕ ಕೂದಲು ಮೃದುವಾಗಿದ್ದು ಸುಲಭವಾಗಿ ತುಂಡಾಗುತ್ತದೆ. ಬದಲಿಗೆ ಬೆರಳುಗಳಿಂದ ನಯವಾಗಿ ಒತ್ತಿ ಹೆಚ್ಚಿನ ನೀರನ್ನು ಬಸಿದು ತೆಗೆಯಿರಿ.

ಕೂದಲು ಯಾವ ದಿಕ್ಕಿನತ್ತ ಬೆಳೆಯುತ್ತಿದೆಯೋ ಆ ದಿಕ್ಕಿನಲ್ಲಿಯೇ ಬೆರಳುಗಳನ್ನು ಮುಂದುವರೆಸಿ. ಒಂದು ವೇಳೆ ಇದಕ್ಕೆ ಹೆಚ್ಚಿನ ಸಮಯ ಹಿಡಿಯುತ್ತಿದ್ದರೆ ಅಗಲ ಹಲ್ಲಿನ ಬಾಚಣಿಗೆಯನ್ನು ಬಳಸಿಯೂ ನೀರನ್ನು ಬಸಿಯಬಹುದು. ಬಳಿಕ ಟವೆಲ್ಲನ್ನು ಒತ್ತಿ ನೀರನ್ನು ಹೀರಿಕೊಳ್ಳುವಂತೆ ಮಾಡಿ. ಪುರುಷರ ಉದ್ದ ಕೂದಲಿನ ಆರೈಕೆ- ಇಲ್ಲಿದೆ ಸರಳ ಟಿಪ್ಸ್

ಕೂದಲನ್ನು ನಿಯಮಿತವಾಗಿ ಕತ್ತರಿಸಿಕೊಳ್ಳುತ್ತಿರಿ
ಕೂದಲ ಆರೈಕೆಗೆ ನಿಯಮಿತವಾದ ಕೌರವೂ ಅಗತ್ಯ. ನಿಮಗೆ ಉದ್ದ ಕೂದಲು ಇರಿಸಿಕೊಳ್ಳಲು ಇಷ್ಟವಿದ್ದರೂ ಅತಿ ಹೆಚ್ಚಿನ ಕೂದಲಿದ್ದರೆ ಇದರ ಆರೈಕೆಯೂ ಕಷ್ಟಕರವಾಗುತ್ತದೆ. ಬದಲಿಗೆ ಪ್ರತಿ ನಾಲ್ಕರಿಂದ ಐದು ವಾರಗಳ ಅಂತರದಲ್ಲಿ ನಿಮಗೆ ಆರೈಕೆ ಮಾಡಿಕೊಳ್ಳಲು ಸುಲಭವಾಗುವಷ್ಟು ಮಾತ್ರ ಉದ್ದಕ್ಕೆ ಕೂದಲನ್ನು ಕತ್ತರಿಸಿಕೊಳ್ಳಿ. ಪುರುಷರ ಕೂದಲುದುರುವ ಸಮಸ್ಯೆಗೆ ಫಲಪ್ರದ ಮನೆಮದ್ದು



ಸ್ನಾನದ ತಕ್ಷಣ ಕೂದಲು ಬಾಚಬೇಡಿ 
ಸ್ನಾನದ ತಕ್ಷಣ ಕೂದಲು ಒಣಗುವ ಮುನ್ನವೇ ಎಂದಿಗೂ ಬಾಚಬೇಡಿ. ಒಂದು ವೇಳೆ ಸಮಯವಿಲ್ಲದಿದ್ದರೆ ಅಗಲ ಹಲ್ಲುಗಳ ಬಾಚಣಿಗೆಯನ್ನು ಮಾತ್ರ ಬಳಸಿ. ಅಲ್ಲದೇ ಬಾಚಿಕೊಳ್ಳುವ ವೇಳೆ ಅಧಿಕ ಒತ್ತಡ ಹೇರಬೇಡಿ.



ನಿಯಮಿತವಾಗಿ ತಲೆಸ್ನಾನ ಮಾಡಿ 
ನಿತ್ಯವೂ ಸ್ನಾನ ಮಾಡಿದರೂ ನಿತ್ಯ ತಲೆಸ್ನಾನ ಮಾಡಬೇಡಿ. ಬದಲಿಗೆ ದಿನ ಬಿಟ್ಟು ದಿನ ತಲೆಸ್ನಾನ ಮಾಡಿ. ನಿಮ್ಮ ಕೂದಲ ಬಗೆಯನ್ನು ಅನುಸರಿಸಿ ಅದಕ್ಕೆ ಸೂಕ್ತವಾದ ಶಾಂಪೂವನ್ನು ಮಾತ್ರವೇ ಬಳಸಿ. ಒಂದು ವೇಳೆ ನಿಮ್ಮ ಕೂದಲು ಒಣಗೂದಲಾಗಿದ್ದರೆ ಶಾಂಪೂ ಬದಲಿಗೆ ತೇವಕಾರಕ ವಿರುವ ಕಂಡೀಶನರ್ ಅನ್ನೇ ಬಳಸಿ. ಸ್ವಲ್ಪ ಕೇಳಿ, ಕೂದಲು ಉದುರುತ್ತಿದೆ ಎಂದು ಚಿಂತಿಸಬೇಡಿ