Thursday, 3 November 2016

ಏನೇ ಹೇಳಿ, ಕೂದಲಿನ ಆರೋಗ್ಯ ನಿಮ್ಮ ಕೈಯಲ್ಲೇ ಇದೆ!

ಕೂದಲನ್ನು ತೊಳೆಯುವುದು ನಿಮ್ಮ ಕೂದಲಿನ ಸಂಪೂರ್ಣ ಆರೋಗ್ಯದ ಗುಟ್ಟಾಗಿದೆ. ಹಾಗಿದ್ದರೆ ಕೂದಲನ್ನು ಸರಿಯಾದ ರೀತಿಯಲ್ಲಿ ತೊಳೆಯುವುದು ಅತಿ ಮುಖ್ಯವಾಗಿದೆ. ಕೂದಲು ತೊಳೆಯುವುದು ಎಂದರೆ ಶಾಂಪೂ ಮಾಡಿ ಕಂಡೀಷನಿಂಗ್ ಮಾಡುವುದು ಮಾತ್ರವಲ್ಲ ಅದರ ಬದಲಿಗೆ ಕೂದಲನ್ನು ತೊಳೆಯುವುದು ಸರಿಯಾದ ವಿಧಾನದಲ್ಲಾಗಿದ್ದರೆ ನಿಮ್ಮ ಕೂದಲು ಸೊಂಪಾಗಿ ಬೆಳೆಯವುದು ಖಂಡಿತ.

ಹಾಗಿದ್ದರೆ ನಿಮ್ಮ ಕೂದಲನ್ನು ಸರಿಯಾದ ವಿಧಾನದಲ್ಲಿ ತೊಳೆಯುವುದು ಹೇಗೆ ಎಂಬುದನ್ನು ಕುರಿತಾದ ಟಿಪ್ಸ್‎ಗಳನ್ನು ನಾವು ಇಲ್ಲಿ ನೀಡುತ್ತಿದ್ದು ಇದು ನಿಜಕ್ಕೂ ನಿಮ್ಮ ಕೂದಲನ್ನು ವಿಭಿನ್ನವಾಗಿ ಬದಲಾಯಿಸಲಿದೆ. ಹಾಗಿದ್ದರೆ ಆ ವಿಧಾನಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ...




ಚೆನ್ನಾಗಿ ಬಾಚಿಕೊಳ್ಳಿ 
ನಿಮ್ಮ ಕೂದಲನ್ನು ತೊಳೆಯುವ ಮುನ್ನ ಕೂದಲನ್ನು ಬಾಚಿಕೊಳ್ಳಿ. ಕೂದಲು ತೊಳೆದ ನಂತರ ಬಾಚಬೇಡಿ. ತಲೆ ತೊಳೆಯುವ ಮುನ್ನ ಕೂದಲನ್ನು ಬಾಚಿಕೊಳ್ಳುವುದರಿಂದ ಸಿಕ್ಕು ಇಲ್ಲವಾಗುತ್ತದೆ. 
ನೀರಿನ ತಾಪಮಾನ ಪರಿಶೀಲಿಸಿ


ನಿಮ್ಮ ಕೂದಲನ್ನು ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇದರಿಂದ ಕೂದಲಿನ ರಂಧ್ರಗಳು ತೆರೆದುಕೊಳ್ಳುತ್ತವೆ ಮತ್ತು ತಲೆಬುರುಡೆಯಿಂದ ಎಲ್ಲಾ ಕೊಳೆ ನಿವಾರಣೆಯಾಗುತ್ತದೆ. ಕೂದಲನ್ನು ತೊಳೆಯುವ ಸರಿಯಾದ ವಿಧಾನದಲ್ಲಿ ಇದೂ ಕೂಡ ಅಡಗಿದೆ.

ತಂಪು ನೀರಿನಲ್ಲಿ ತಲೆ ತೊಳೆಯುವುದು
ನೀವು ಕೂದಲನ್ನು ಕೊನೆಯ ಬಾರಿಗೆ ತೊಳೆಯುವುದು ತಣ್ಣೀರಿನಲ್ಲಿ ಎಂಬುದನ್ನು ಖಾತ್ರಿಪಡಿಸಿ. ಇದು ಕೂದಲಿನ ರಂಧ್ರಗಳನ್ನು ಮುಚ್ಚಿ ಕೂದಲು ಉದುರುವುದನ್ನು ತಡೆಗಟ್ಟುತ್ತದೆ. ಕೂದಲಿನ ಮಾಯಿಶ್ಷರೈಸರ್ ಅನ್ನು ಹಿಡಿದಿಟ್ಟುಕೊಂಡು ಕೂದಲನ್ನು ಮಿರುಗುವಂತೆ ಮಾಡುತ್ತದೆ. 
ಶಾಂಪೂ

ಆದಷ್ಟು ಕೂದಲನ್ನು ರಾಸಾಯನಿಕ ಮುಕ್ತ ಶಾಂಪೂವಿನಿಂದ ತೊಳೆದುಕೊಳ್ಳಿ. ಮೃದುವಾಗಿ ಶಾಂಪೂ ಬಳಸಿ ಕೂದಲಿನ ಬುಡವನ್ನು ಮಸಾಜ್ ಮಾಡಿ ಮತ್ತು ತುದಿಗಳನ್ನು ಮಸಾಜ್ ಮಾಡಿಕೊಳ್ಳಿ. ಕೂದಲಿನ ಬುಡು ಎಣ್ಣೆಯಿಂದ ಇದ್ದು ತುದಿ ಒಣವಾಗಿರುತ್ತದೆ. 
ಕಂಡೀಷನ್


ಕೂದಲಿಗೆ ಕಂಡೀಷನ್ ಮಾಡುವುದನ್ನು ನೀವು ಮರೆಯಲೇಬಾರದು. ಈ ಹಂತ ಕೂದಲನ್ನು ಮಾಯಿಶ್ಚರೈಸ್ ಮಾಡುತ್ತದೆ. ಬುಡಕ್ಕೆ ಕಂಡೀಷನಿಂಗ್ ಮಾಡುವುದನ್ನು ಬಿಡಿ, ಇದು ಕೂದಲನ್ನು ಇನ್ನಷ್ಟು ಎಣ್ಣೆಯುಕ್ತಗೊಳಿಸಬಹುದು ಇದರಿಂದ ಕೂದಲಿನ ತುದಿಗೆ ಕಂಡೀಷನ್ ಮಾಡಿ. 
ಬೆರಳುಗಳ ಪೋಷಣೆ
ಕೂದಲನ್ನು ತೊಳೆದುಕೊಂಡ ನಂತರ ಬಾಚಣಿಗೆಯಿಂದ ಕೂದಲನ್ನು ಬಾಚಿಕೊಳ್ಳದಿರಿ. ಒದ್ದೆ ಕೂದಲಿಗೆ ಬಾಚಣಿಗೆಯನ್ನು ಬಳಸುವುದು ಕೂದಲನ್ನು ತುಂಡಾಗಿಸಬಹುದು. ಬದಲಿಗೆ ಬೆರಳುಗಳನ್ನು ಬಳಸಿಕೊಂಡು ಕೂದಲಿನ ಸಿಕ್ಕುಗಳನ್ನು ನಿವಾರಿಸಿಕೊಳ್ಳಿ ಮತ್ತು ಇದನ್ನು ತಪ್ಪದೇ ನಿರ್ವಹಿಸಿ.

ಬಿಳಿ ಕೂದಲಿನ ಸಮಸ್ಯೆಗೆ ಮನೆ ಔಷಧಿ-'ಆಲೂಗಡ್ಡೆ ಸಿಪ್ಪೆ'


ಬಿಳಿ ಕೂದಲಿನ ಸಮಸ್ಯೆಯನ್ನು ತಡೆಯಲು ಮಾಡದ ಪ್ರಯತ್ನವಿಲ್ಲ, ಅನುಸರಿಸದ ವಿಧಾನವಿಲ್ಲ. ಆದರೂ ಯಾವುದೇ ಪ್ರಯತ್ನ ಶೇಖಡಾ ನೂರರಷ್ಟು ಫಲ ನೀಡುತ್ತಿಲ್ಲ, ಎಂಬ ಚಿಂತೆಯೇ? ಹಾಗಾದರೆ ಈ ಟಿಪ್ಸ್ ಅನುಸರಿಸಿ...

ಕೂದಲು ನೆರೆಯುವುದಕ್ಕೆ ಇಂತಿಷ್ಟೇ ಎಂಬ ವಯಸ್ಸಿನ ನಿರ್ಬಂಧವಿಲ್ಲ. ಕೆಲವರಿಗೆ ಇಪ್ಪತ್ತರಲ್ಲಿಯೇ ನೆರೆಯಲು ಪ್ರಾರಂಭಿಸಿದರೆ ಕೆಲವರಿಗೆ ಐವತ್ತರ ಬಳಿಕ ಪ್ರಾರಂಭವಾಗಬಹುದು. ಆದರೆ ಯಾವಾಗ ಪ್ರಾರಂಭವಾದರೂ ಇದು ಆತಂಕವನ್ನು ಮಾತ್ರ ತಪ್ಪದೇ ತರುತ್ತದೆ. ಏಕೆಂದರೆ ಕೂದಲು ನೆರೆಯುವುದು ವೃದ್ಧಾಪ್ಯದ ಲಕ್ಷಣ ಎಂದೇ ಎಲ್ಲರೂ ಅಂದುಕೊಂಡಿದ್ದಾರೆ.  

ಇದನ್ನು ತಡೆಯಲು ಮಾಡದ ಪ್ರಯತ್ನವಿಲ್ಲ, ಅನುಸರಿಸದ ವಿಧಾನವಿಲ್ಲ. ಆದರೂ ಯಾವುದೇ ಪ್ರಯತ್ನ ಶೇಖಡಾ ನೂರರಷ್ಟು ಫಲ ನೀಡುತ್ತಿಲ್ಲ. ಕೂದಲ ನೆರೆಯುವಿಕೆಗೆ ಸ್ಪಷ್ಟವಾದ ಕಾರಣ ಇದುವರೆಗೆ ಗೊತ್ತಾಗಿಲ್ಲ. ಸ್ಥೂಲವಾಗಿ ಹೇಳಬೇಕೆಂದರೆ ತಾಮ್ರದ ಕೊರತೆಯಿಂದ ಕೂದಲಿಗೆ ಬಣ್ಣ ನೀಡುವ ಮೆಲನಿನ್ ಎಂಬ ವರ್ಣದ್ರವ್ಯ ಉತ್ಪತ್ತಿಯಾಗದೇ ಬಣ್ಣ ನೆರೆಯತೊಡಗುತ್ತದೆ. ಬಿಳಿಕೂದಲಿನ ಸಮಸ್ಯೆಯ ಕಿರಿಕಿರಿ, ಮನೆಮದ್ದೇ ಸರಿ! 

ಕೆಲವು ಊಹಾಪೋಹಗಳ ಪ್ರಕಾರ ಕೇಸರಿ ಬಣ್ಣದ ಬೇಳೆ ತಿನ್ನುವ ಕಾರಣದಿಂದಲೂ ಕೂದಲು ಅಕಾಲಿಕವಾಗಿ ನೆರೆಯುತ್ತದೆ. ಕಾರಣವೇನೇ ಇರಲಿ, ಇದಕ್ಕೆ ಪರಿಹಾರವಾಗಿ ಸುಲಭವಾದ ವಿಧಾನವೊಂದಿದೆ. ಅದೇ ಆಲೂಗಡ್ಡೆಯ ಸಿಪ್ಪೆಯ ಬಳಕೆ. ಆಲೂಗಡ್ಡೆಯ ಸಿಪ್ಪೆಯ ಪವರ್‍‌ಗೆ ಶಭಾಷ್ ಎನ್ನಲೇಬೇಕು!

ಬನ್ನಿ, ಕೆಳಗೆ ನೀಡಿರುವ ಮಾಹಿತಿಯ ಮೂಲಕ ಆಲೂಗಡ್ಡೆಯ ಸಿಪ್ಪೆಯನ್ನು ಕೂದಲ ನೆರೆಯುವಿಕೆ ತಡೆಯಲು ಹೇಗೆ ಉಪಯೋಗಿಸಬಹುದೆಂಬುದನ್ನು ನೋಡೋಣ:   ಶ್! ಬಿಳಿ ಕೂದಲಿನ ಸಮಸ್ಯೆಗೆ ಇಲ್ಲಿದೆ ಸೀಕ್ರೆಟ್ ಮನೆಮದ್ದು!   



ಹಂತ 1: 
ಚೆನ್ನಾಗಿ ತೊಳೆದ ಸುಮಾರು ಆರು ಆಲೂಗಡ್ಡೆಗಳ ಸಿಪ್ಪೆಯನ್ನು ತೆಳುವಾಗಿ ಸುಲಿದು ಸಂಗ್ರಹಿಸಿ.

ಹಂತ 2: 
ಒಂದು ಪಾತ್ರೆಯಲ್ಲಿ ಒಂದು ಲೀಟರ್ ನೀರನ್ನು ಕುದಿಸಿ. ಕುದಿಯಲು ಪ್ರಾರಂಭವಾದೊಡನೆ ಉರಿಯನ್ನು ತಗ್ಗಿಸಿ ಇದರಲ್ಲಿ ಸಿಪ್ಪೆಯನ್ನು ಸುರಿಯಿರಿ. ಚಿಕ್ಕ ಉರಿಯಲ್ಲಿ ಮುಂದಿನ ಅರ್ಧ ಗಂಟೆ ಕುದಿಸಿ. ಬಳಿಕ ಉರಿ ಆರಿಸಿ ಹದಿನೈದು ನಿಮಿಷ ತಣಿಯಲು ಬಿಡಿ.

ಹಂತ 3: 
ಬಳಿಕ ಈ ನೀರನ್ನು ಸ್ವಚ್ಛವಾದ ಬಟ್ಟೆ ಅಥವಾ ಸೋಸುಕ ಬಳಸಿ ಸೋಸಿ ನೀರನ್ನು ಸಂಗ್ರಹಿಸಿ. ಸಿಪ್ಪೆಗಳನ್ನು ಎಸೆಯಿರಿ. ಈ ನೀರನ್ನು ಮುಚ್ಚಳ ಮುಚ್ಚಿ ಇಡಿಯ ರಾತ್ರಿ ಹಾಗೇ ಇರಿಸಿ. ಈ ನೀರು ತುಂಬಾ ಗಾಢವಾಗಿದ್ದರೆ ಕೊಂಚ ನೀರು ಸೇರಿಸಬಹುದು. ಇದಕ್ಕೆ ನಿಮ್ಮ ಇಷ್ಟದ ಅವಶ್ಯಕ ತೈಲವನ್ನೂ ಸೇರಿಸಿ ಸುವಾಸನೆ ಮತ್ತು ಇದರ ಶಕ್ತಿಯನ್ನೂ ಕೊಂಚ ಹೆಚ್ಚಿಸಬಹುದು.


ಹಂತ 4: 
ಬೆಳಗ್ಗಿನ ಸ್ನಾನಕ್ಕೂ ಮುನ್ನ ಕೂದಲನ್ನು ಸೌಮ್ಯ ಶಾಂಪೂ ಬಳಸಿ ಸ್ವಚ್ಛವಾಗಿ ತೊಳೆದುಕೊಳ್ಳಿ. ಬಳಿಕ ಕಂಡೀಶನರ್ ಬಳಸಿ ತೊಳೆದುಕೊಳ್ಳಿ. ಕೂದಲನ್ನು ಬೆರಳುಗಳಿಂದ ಬಿಡಿ ಬಿಡಿಯಾಗಿಸಿ. ಬಾಚಣಿಗೆ ಬಳಸಿದರೆ ಸುಲಭವಾಗಿ ತುಂಡಾಗುವ ಸಾಧ್ಯತೆ ಇರುವ ಕಾರಣ ಬಾಚಣಿಗೆ ಬಳಸದಿರಿ.

ಹಂತ 5: 
ನಿಮ್ಮ ಕೂದಲನ್ನು ಅನುಕೂಲಕ್ಕೆ ತಕ್ಕಂತೆ ಹಲವಾರು ಭಾಗಗಳಾಗಿಸಿ. ಒಂದು ಹತ್ತಿಯುಂಡೆಯನ್ನು ಈ ನೀರಿನಲ್ಲಿ ಮುಳುಗಿಸಿ ಹಿಚುಕಿ ಹೆಚ್ಚುವರಿ ನೀರನ್ನು ಹಿಂಡಿ. ಈ ಉಂಡೆಯಿಂದ ನಿಮ್ಮ ಕೂದಲುಗಳ ಬುಡಕ್ಕೆ ಒತ್ತಿ ದ್ರವ ಒಸರುವಂತೆ ಮಾಡಿ. ಹೀಗೇ ಕೊಂಚಕೊಂಚವಾಗಿ ಇಡಿಯ ತಲೆಯ ಚರ್ಮ ಈ ನೀರಿನಿಂದ ಆವರಿಸುವಂತೆ ಮಾಡಿ.



ಹಂತ 5: 
ವಿಶೇಷವಾಗಿ ಕೂದಲು ಬಿಳಿಯಾಗಿರುವಲ್ಲಿ ಹೆಚ್ಚು ದ್ರವದಿಂದ ತೋಯಿಸಿ. ಇದೇ ರೀತಿ ಕೂದಲ ಬುಡದಿಂದ ತುದಿಯವರೆಗೂ ಈ ನೀರನ್ನು ಹಚ್ಚಿ. ಈ ಕ್ರಿಯೆ ಕೊಂಚ ಸಮಯ ತೆಗೆದುಕೊಳ್ಳುವುದರಿಂದ ರಜಾದಿನದಂದೇ ಆಚರಿಸಿ.



ಹಂತ 6: 
ಬಳಿಕ ಬೆರಳುಗಳ ತುದಿಯಿಂದ ನಯವಾಗಿ ಐದು ನಿಮಿಷಗಳವರೆಗೆ ಮಸಾಜ್ ಮಾಡಿ. ನಂತರ ಕೂದಲನ್ನು ಸಡಿಲವಾಗಿ ಗಂಟುಕಟ್ಟಿ ಮೂವತ್ತು ನಿಮಿಷ ಹಾಗೇ ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಬಿಸಿನೀರು ಬೇಡ, ಏಕೆಂದರೆ ಇದು ಇಷ್ಟು ಕಷ್ಟಪಟ್ಟು ಒದಗಿಸಿದ್ದ ಪೋಷಕಾಂಶಗಳನ್ನೆಲ್ಲಾ ನಿವಾರಿಸಿ ಬಿಡುತ್ತದೆ.


ಹಂತ 7 
ಬಳಿಕ ದಪ್ಪ ಟವೆಲ್ ಅಥವಾ ಹಳೆಯ ಆದರೆ ಸ್ವಚ್ಛವಾದ ಹತ್ತಿಯ ಟೀಶರ್ಟ್ ಬಳಸಿ ಕೂದಲನ್ನು ಒತ್ತಿ ನೀರನ್ನು ಹೀರಿಕೊಳ್ಳುವಂತೆ ಮಾಡಿ. ಸರ್ವಥಾ ಉಜ್ಜಿ ಒರೆಸಲು ಹೋಗಬೇಡಿ. ಕೂದಲು ತಾನಾಗಿ ಗಾಳಿಯಲ್ಲಿ ಒಣಗಲಿ. ಹೇರ್ ಡ್ರೈಯರ್ ಬಳಕೆ ಸಲ್ಲದು.


ಹಂತ 7 
ವಾರಕ್ಕೊಮ್ಮೆ ಈ ವಿಧಾನ ಅನುಸರಿಸಿದರೆ ಕ್ರಮೇಣ ನೆರೆಗೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಈ ವಿಧಾನಕ್ಕೂ ಹೊರತಾದ ವಿಧಾನ ನಿಮ್ಮಲ್ಲಿದ್ದರೆ ಖಂಡಿತಾ ನಮ್ಮೊಂದಿಗೆ ಹಂಚಿಕೊಳ್ಳಿ.

Wednesday, 2 November 2016

ತಲೆ ತುರಿಕೆಯನ್ನು ಸಮರ್ಥವಾಗಿ ನಿವಾರಿಸಬಲ್ಲ ತೈಲಗಳು


ಎಲ್ಲರ ಗಮನ ನಿಮ್ಮತ್ತ ಇರುವಾಗಲೇ ನಿಮ್ಮ ತಲೆಯಲ್ಲಿ ತುರಿಕೆ ಪ್ರಾರಂಭವಾದರೆ ಆ ಸಂಕಟ ಹೇಳತೀರದು ಅಲ್ಲವೇ?, ಅದರಲ್ಲೂ ನವೆ ತಡೆಯಲಾಗದೇ ತುರಿಸಿಕೊಂಡಾಗ ಅತೀವ ಮುಜುಗರ ಅನುಭವಿಸಬೇಕಾಗುತ್ತದೆ. ತಲೆಯ ತುರಿಕೆಗೆ ಕೆಲವಾರು ಕಾರಣಗಳಿವೆ.

ಆದರೆ ಇನ್ನು ಮುಂದೆ ಚಿಂತೆಗೆ ಕಾರಣವಿಲ್ಲ. ಏಕೆಂದರೆ ಈ ತೊಂದರೆಯನ್ನು ನಿವಾರಿಸಲು ಕೆಲವು ನೈಸರ್ಗಿಕ ಎಣ್ಣೆಗಳು ಸಮರ್ಥವಾಗಿವೆ. ಬನ್ನಿ, ಈ ಎಣ್ಣೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ:  ಅಪ್ಪಿತಪ್ಪಿಯೂ ತಲೆ ಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ


ಲ್ಯಾವೆಂಡರ್ ಎಣ್ಣೆ ಇದೊಂದು ಅವಶ್ಯಕ ತೈಲವಾಗಿದ್ದು ಈ ಎಣ್ಣೆಯ ಸುಗಂಧದ ಕಾರಣದಿಂದಾಗಿ ಅರೋಮಾಥೆರಪಿ ಅಥವಾ ಸುವಾಸನೆಯ ಆರೈಕೆಯಲ್ಲಿ ಪ್ರಮುಖವಾಗಿ ಬಳಕೆಯಾಗುತ್ತದೆ. ಈ ಎಣ್ಣೆಯ ಗುಣಗಳು ತಲೆಯ ತುರಿಕೆಯನ್ನೂ ಕಡಿಮೆಗೊಳಿಸಲು ಸಮರ್ಥವಾಗಿವೆ. ಈ ಎಣ್ಣೆಯನ್ನು ತಲೆಗೆ ಕೊಂಚವೇ ಮಸಾಜ್ ಮೂಲಕ ಹಚ್ಚಿಕೊಂಡ ಬಳಿಕ ತಲೆಯ ಚರ್ಮದಲ್ಲಿ ರಕ್ತಸಂಚಾರ ಹೆಚ್ಚುತ್ತದೆ.


ಇದು ತಲೆಗೂದಲನ್ನು ಬೆಳೆಯಲು ಉತ್ತೇಜಿಸುತ್ತದೆ. ಆದರೆ ಈ ಎಣ್ಣೆ ಕೊಂಚ ಕಟುವಾಗಿರುವುದರಿಂದ ಸಮಪ್ರಮಾಣದಲ್ಲಿ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ಕೊಂಚವೇ ಬಿಸಿಮಾಡಿ ತಲೆಗೆ ಹಚ್ಚಿಕೊಳ್ಳಬೇಕು.    ತಲೆಹೊಟ್ಟನ್ನು ನಿವಾರಿಸಲು 20 ಮನೆ ಮದ್ದುಗಳು

ಕೊಬ್ಬರಿ ಎಣ್ಣೆ 
ತಲೆಗೂದಲಿಗೆ ಕೊಬ್ಬರಿ ಎಣ್ಣೆ ಉತ್ತಮವಾಗಿದ್ದು ಇದರ ಬಳಕೆಯಿಂದ ತಲೆಯ ತುರಿಕೆಯೂ ಕಡಿಮೆಯಾಗುತ್ತದೆ. ಇದರ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾನಿವಾರಕ ಗುಣ ತಲೆಯ ತುರಿಕೆ ತಡೆಯಲೂ ನೆರವಾಗುತ್ತದೆ.


ಇದಕ್ಕಾಗಿ ಕೊಂಚ ಕೊಬ್ಬರಿ ಎಣ್ಣೆಯನ್ನು ಉಗುರುಬೆಚ್ಚಗಾಗುವಷ್ಟು ಬಿಸಿಮಾಡಿ ಕೊಂಚವೇ ಮಸಾಜ್ ಮೂಲಕ ತಲೆಗೆ ಹಚ್ಚಿಕೊಳ್ಳಿ. ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಇಡಿಯ ರಾತ್ರಿ ಹಾಗೇ ಬಿಡಿ. ಮರುದಿನ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. 
ಪುದೀನಾ ಎಣ್ಣೆ 
ಪುದಿನಾ ಎಣ್ಣೆಯಲ್ಲಿ ಸೂಕ್ಷ್ಮಜೀವಿ ನಿವಾರಕ ಗುಣವಿದೆ. ಅಲ್ಲದೇ ಇದರ ಇತರ ಪೋಷಕಾಂಶಗಳ ಕಾರಣದಿಂದ ಇದೊಂದು ಅತ್ಯಂತ ಹೆಚ್ಚಿನ ಬಳಕೆಯ ಅವಶ್ಯಕ ತೈಲವೆಂದು ಪರಿಗಣಿಸಲಾಗುತ್ತದೆ. ಇದರ ಸುವಾಸನೆಯ ಕಾರಣ ಹಲವು ರೀತಿಯ ಸುಗಂಧದ್ರವ್ಯಗಳಲ್ಲಿಯೂ ಬಳಕೆಯಾಗುತ್ತದೆ. ಪುದೀನಾ ಎಣ್ಣೆಯಲ್ಲಿದೆ ಮ್ಯಾಜಿಕ್ ಗುಣಗಳು  



ಅಲ್ಲದೇ ಅರೋಮಾಥೆರಪಿ ಅಥವಾ ಸುವಾಸನೆಯ ಆರೈಕೆಯಲ್ಲಿಯೂ ಬಳಕೆಯಾಗುತ್ತದೆ. ಇದರ ಔಷಧೀಯ ಗುಣಗಳಿಂದಾಗಿ ಆಯುರ್ವೇದದಲ್ಲಿ ಹಲವಾರು ಕಾಯಿಲೆಗಳಿಗೆ ಔಷಧಿಯ ರೂಪದಲ್ಲಿಯೂ ಬಳಸಲಾಗುತ್ತದೆ. 





ತಲೆಯ ತುರಿಕೆಗೂ ಪುದೀನಾ ಎಣ್ಣೆ ಉತ್ತಮವಾಗಿದೆ. ಇದಕ್ಕಾಗಿ ನಿತ್ಯವೂ ಕೊಂಚವೇ ಪುದೀನಾ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡಿದರೆ ಸಾಕು. 

ಕಿತ್ತಳೆಯ ಎಣ್ಣೆ (Orange Oil)



ಕಿತ್ತಳೆ ಹಣ್ಣಿನ ರಸ ದೇಹಕ್ಕೆ ಎಷ್ಟು ಉತ್ತಮವೋ ಇದರ ಎಣ್ಣೆಯೂ ಕೂದಲಿಗೆ ಅಷ್ಟೇ ಉತ್ತಮ. ಇದಕ್ಕಾಗಿ ಕೊಂಚ ಕಿತ್ತಳೆ ಎಣ್ಣೆಯನ್ನು ಉಗುರುಬೆಚ್ಚಗಾಗಿಸಿ ನೇರವಾಗಿ ತಲೆಗೆ ಹಚ್ಚಿಕೊಳ್ಳಿ. ಬಳಿಕ ದಪ್ಪ ಟವೆಲ್ಲೊಂದನ್ನು ತಲೆಗೆ ಆವರಿಸಿ ಕೊಂಚ ಹೊತ್ತು ಹಾಗೇ ಬಿಡಿ. ಬಳಿಕ ಟವೆಲ್ ನಿವಾರಿಸಿ ಸುಮಾರು ಎರಡು ಘಂಟೆಗಳ ಕಾಲ ಹಾಗೇ ಇರಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ನೀವೂ ನಂಬಲೇಬೇಕು, ತುಪ್ಪ ತ್ವಚೆಗೆ ಬಹಳ ಒಳ್ಳೆಯದು!

ತುಪ್ಪ ತ್ವಚೆಗೆಷ್ಟು ಸುರಕ್ಷಿತ? ಈ ಪ್ರಶ್ನೆ ನಮ್ಮೆಲ್ಲರಿಗೂ ಒಂದಲ್ಲಾ ಒಂದು ಬಾರಿಯಾದರೂ ಬಂದೇ ಇರುತ್ತದೆ. ಏಕೆಂದರೆ ನಿಸರ್ಗದ ಈ ಅದ್ಭುತ ಕೊಡುಗೆಯಿಂದ ಹಲವಾರು ಬಗೆಯ ಪ್ರಯೋಜನಗಳಿದ್ದು ಇದನ್ನು ಹಚ್ಚಿಕೊಳ್ಳುವಾಗ ಕೈಗಳಿಗೆ ಅಕಸ್ಮಾತಾಗಿ ತಾಕಿದ ಬಳಿಕ ಕೈಗಳು ಮೃದುವಾಗಿರುವುದನ್ನು ಗಮನಿಸಿದ್ದರೂ ಇದು ಮುಖದ ಚರ್ಮಕ್ಕೆ ಹೇಗೋ ಎಂಬ ಅಳುಕು ಎಲ್ಲರಲ್ಲಿಯೂ ಉಂಟಾಗಿರುತ್ತದೆ.


ಆದರೆ ಇದಕ್ಕೆ ಸೂಕ್ತವಾದ ಉತ್ತರ ಯಾರೂ ಸ್ಪಷ್ಟವಾಗಿ ಇದುವರೆಗೆ ಹೇಳಿರದಿದ್ದ ಕಾರಣ ಈ ಅದ್ಭುತ ಗುಣವುಳ್ಳ ನೈಸರ್ಗಿಕ ಔಷಧಿಯನ್ನು ಬಳಸದೇ ಇದರ ಪ್ರಯೋಜನಗಳಿಂದ ವಂಚಿತರಾಗಿದ್ದೇವೆ. ತುಪ್ಪದಲ್ಲಿ ಸಂತುಲಿತ ಕೊಬ್ಬಿನ ಜೊತೆಗೇ ವಿಟಮಿನ್ಎ , ಡಿ ಮತ್ತು ಇ ಇವೆ. ಇವುಗಳ ಇರುವಿಕೆಯಿಂದ ತುಪ್ಪ ಒಂದು ಅತ್ಯುತ್ತಮ ಆಂಟಿ ಆಕ್ಸಿಡೆಂಟು ಸಹಾ ಆಗಿದೆ.


ಆದರೆ ತುಪ್ಪವನ್ನು ಚರ್ಮಕ್ಕೆ ಬಳಸುವುದು ಹೇಗೆ? ನೇರವಾಗಿ ಇದನ್ನು ಹಚ್ಚಿಕೊಂಡರೆ ಮುಖವೆಲ್ಲಾ ಎಣ್ಣೆಪಸೆಯಾಗುತ್ತದೆ. ಇದರ ಸರಿಯಾದ ಬಳಕೆಯಾಗಬೇಕೆಂದರೆ ಔಷಧಿಯ ಗುಣವುಳ್ಳ ಇತರ ಸಾಮಾಗ್ರಿಗಳೊಂದಿಗೆ ಬೆರೆಸಿ ಬಳಸಬೇಕಾಗುತ್ತದೆ. ಬನ್ನಿ, ಇಂದು ತುಪ್ಪವನ್ನು ಸೌಂದರ್ಯವರ್ಧಕವಾಗಿ ಹೇಗೆ ಮತ್ತು ಯಾವ ಯಾವ ರೂಪದಲ್ಲಿ ಬಳಸಬಹುದೆಂಬುದನ್ನು ನೋಡೋಣ:



ದೇಹದ ತೇವಕಾರಕ ಎಣ್ಣೆಯಾಗಿ 
ಒಂದು ವೇಳೆ ನಿಮ್ಮ ಚರ್ಮ ವಿಪರೀತ ಒಣದಾಗಿದ್ದರೆ ಈ ವಿಧಾನವನ್ನು ಅನುಸರಿಸಿ: ಎರಡು ದೊಡ್ಡ ಚಮಚ ಅಪ್ಪಟ ತುಪ್ಪವನ್ನು ಕರಗುವಷ್ಟು ಬಿಸಿಮಾಡಿ. ಬಳಿಕ ಉಗುರುಬೆಚ್ಚನೆಯ ತಾಪಮಾನಕ್ಕೆ ಬರುವಷ್ಟು ತಣಿಸಿ. ಬಳಿಕ ಈ ತುಪ್ಪವನ್ನು ತೆಳುವಾಗಿ ಒಣಚರ್ಮದ ಮೇಲೆಲ್ಲಾ ನಯವಾಗಿ ಮಸಾಜ್ ಮಾಡುತ್ತಾ ಸವರಿಕೊಳ್ಳಿ. ಸುಮಾರು ಒಂದು ಘಂಟೆ ಬಿಟ್ಟು ಸ್ನಾನ ಮಾಡಿ.  ದೇಹದ ತೂಕ ಇಳಿಸಲು ದಿನಕ್ಕೆರಡು ಚಮಚ ತುಪ್ಪ ಸಾಕು!

ಮುಖದ ಕಾಂತಿಗೆ 
ಒಂದು ದೊಡ್ಡ ಚಮಚ ಕಡ್ಲೆಹಿಟ್ಟು, ಒಂದು ದೊಡ್ಡ ಚಮಚ ಅಪ್ಪಟ ತುಪ್ಪ ಹಾಗೂ ಅಗತ್ಯವಿರುವಷ್ಟು ನೀರು ಬೆರೆಸಿ ಚೆನ್ನಾಗಿ ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿಕೊಳ್ಳಿ. ಇದನ್ನು ಪೂರ್ಣವಾಗಿ ಒಣಗಲು ಬಿಡಿ. ಒಣಗಿದ ಬಳಿಕ ಈ ಲೇಪನ ಬಿರಿಬಿಡಲು ಪ್ರಾರಂಭಿಸುತ್ತದೆ. ಈಗ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸಬೇಡಿ.

ಬಿರಿದ ತುಟಿಗಳ ಆರೈಕೆಗಾಗಿ 
ಒಂದು ಚಿಕ್ಕ ಚಮಚ ತುಪ್ಪ ಮತ್ತು ಸಮಪ್ರಮಾಣದ ಜೇನು ಬೆರೆಸಿ ತುಟಿಗಳಿಗೆ ತೆಳುವಾಗಿ ಹಚ್ಚಿಕೊಳ್ಳಿ. ರಾತ್ರಿ ಮಲಗುವ ಮುನ್ನ ಹಚ್ಚಿ ಇಡಿಯ ರಾತ್ರಿ ಹಾಗೇ ಬಿಡಿ. ಮರುದಿನ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. ಈಗ ತುಟಿಗಳು ಮೃದು, ಬಿರುಕಿಲ್ಲದೇ ಮತ್ತು ತುಂಬಿಕೊಂಡಿರುತ್ತವೆ.



ಕಣ್ಣುಗಳ ಕೆಳಗಿನ ಕಪ್ಪು ವರ್ತುಲ ನಿವಾರಿಸಲು  : 
ತುಪ್ಪದಲ್ಲಿರುವ ವಿಟಮಿನ ಎ ಕಣ್ಣುಗಳ ಕೆಳಗಿನ ವರ್ತುಲಗಳನ್ನು ನಿವಾರಿಸುವ ಮಾಯಾದಂಡದಂತೆ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ಐದು ಹನಿ ಬಾದಾಮಿ ಎಣ್ಣೆ ಮತ್ತು ಒಂದು ಚಿಕ್ಕಚಮಚ ತುಪ್ಪ ಬೆರೆಸಿ ಕಣ್ಣುಗಳ ಕೆಳಗಿನ ವರ್ತುಲದ ಮೇಲೆ ತೆಳುವಾಗಿ ಹಚ್ಚಿ. ಇದನ್ನು ಪ್ರತಿದಿನ ಹಚ್ಚಿಕೊಳ್ಳುತ್ತಾ ಇದ್ದರೆ ಒಂದು ತಿಂಗಳಲ್ಲಿ ಈ ವರ್ತುಲಗಳು ಮಾಯವಾಗತೊಡಗುತ್ತವೆ. ಪೂರ್ಣವಾಗಿ ಈ ವರ್ತುಲಗಳು ಇಲ್ಲವಾಗುವವರೆಗೆ ಈ ವಿಧಾನವನ್ನು ಮುಂದುವರೆಸಿ.

ತ್ವಚೆಯ ಕಾಂತಿ ಹೆಚ್ಚಲು :
ಒಂದು ದೊಡ್ಡಚಮಚ ಮಸೂರ್ ದಾಲ್ (ಕಿತ್ತಳೆ ಬಣ್ಣದ ತೊಗರಿ ಬೇಳೆ) ಯನ್ನು ಮಿಕ್ಸಿಯಲ್ಲಿ ನುಣ್ಣಗಾಗಿ ಪುಡಿಮಾಡಿ. ಇದಕ್ಕೆ ಐದು ಹನಿ ಪ್ರಿಮ್ರೋಸ್ ಎಣ್ಣೆ (primrose oil), ಒಂದು ವಿಟಮಿನ್ ಇ ಮಾತ್ರೆಯ ಒಳಗಣ ಸಾಮಾಗ್ರಿಗಳು ಮತ್ತು ಒಂದು ದೊಡ್ಡಚಮಚ ತುಪ್ಪ ಸೇರಿಸಿ ಚೆನ್ನಾಗಿ ಬೆರೆಸಿ. ಇದಕ್ಕೆ ಅಗತ್ಯವೆನಿಸುವಷ್ಟು ಹಸಿ ಹಾಲು ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ ಮೂವತ್ತು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.    ಪಕ್ಕಾ ದೇಸಿ ತುಪ್ಪ, ಆರೋಗ್ಯದ ಲವಲವಿಕೆಯ ಕೀಲಿಕೈ

ಬಾಡಿ ಲೋಷನ್ ರೂಪದಲ್ಲಿ 
ದೇಹದ ತ್ವಚೆಯನ್ನು ಇಡಿಯ ದಿನ ಕೋಮಲ ಮತ್ತು ಮೃದುವಾಗಿಸಲು ತುಪ್ಪವೂ ಸಮರ್ಥವಾಗಿದೆ. ಇದಕ್ಕಾಗಿ ಸಮಪ್ರಮಾಣದಲ್ಲಿ ತುಪ್ಪ ಮತ್ತು ಕೊಬ್ಬರಿ ಎಣ್ಣೆಯನ್ನು ಬೆರೆಸಿ ಕೊಂಚ ಲ್ಯಾವೆಂಡರ್ ಎಣ್ಣೆಯ ಹನಿಗಳನ್ನು ಸೇರಿಸಿ ನಯವಾದ ಲೇಪನ ತಯಾರಿಸಿ. ಸ್ನಾನದ ಬಳಿಕ ಈ ಲೇಪನವನ್ನು ತೆಳುವಾಗಿ ಕೊಂಚ ಮಸಾಜ್ ಮೂಲಕ ಸೂಕ್ಷ್ಮಭಾಗಗಳನ್ನು ಬಿಟ್ಟು ಉಳಿದೆಲ್ಲಾ ಭಾಗಗಳಿಗೆ ಹಚ್ಚಿಕೊಳ್ಳಿ.