Friday, 16 September 2016

ಒಂದು ಕಪ್ ಮೊಸರಿನಲ್ಲಿದೆ ಲೆಕ್ಕಕ್ಕೆ ಸಿಗದಷ್ಟು ಪ್ರಯೋಜನಗಳು!

ಒಂದು ಕಪ್ ಮೊಸರಿನಲ್ಲಿದೆ ಲೆಕ್ಕಕ್ಕೆ ಸಿಗದಷ್ಟು ಪ್ರಯೋಜನಗಳು!ಮೊಸರನ್ನು ಆಹಾರದ ಮೂಲಕ ಸೇವಿಸುವುದರಿಂದ ಯಾವ ರೀತಿಯ ಲಾಭಗಳಿವೆ ಎಂದು ಪಟ್ಟಿ ಮಾಡಿದರೆ ದೊಡ್ಡ ಪಟ್ಟಿಯೇ ತಯಾರಾಗಬಹುದು. ಬರೆಯ ಆಹಾರವಾಗಿ ಮಾತ್ರವಲ್ಲ, ಸೌಂದರ್ಯವರ್ಧಕವಾಗಿಯೂ ಮೊಸರು ಹಲವು ರೀತಿಯಲ್ಲಿ ಬಳಸಲ್ಪಡುತ್ತದೆ.  ಪ್ರತಿ ದಿನ ಮೊಸರು ಸೇವಿಸಿದರೆ ಖಂಡಿತ ಮೋಸವಿಲ್ಲ

ಮೊಸರನ್ನು ನೇರವಾಗಿ ಮುಖ, ತಲೆ, ಕುತ್ತಿಗೆ, ಕೈಗಳಿಗೆ ನೇರವಾಗಿ ಹಚ್ಚಿಕೊಳ್ಳುವ ಮೂಲಕ ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಹಲವು ದುಬಾರಿ ಸೌಂದರ್ಯ ಮಳಿಗೆಗಳಲ್ಲಿ ಕೇವಲ ಮೊಸರನ್ನೇ ಯಾವುದೋ ಸೌಂದರ್ಯವರ್ಧಕದ ಹೆಸರಿನಲ್ಲಿ ಹಚ್ಚಿ ಹಣ ಸುಲಿಯುವುದೂ ಇದೆ. ಬನ್ನಿ, ಮೊಸರನ್ನು ಬಳಸಿ ಸೌಂದರ್ಯವನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂಬುದನ್ನು ನೋಡೋಣ... 


ಮೊಡವೆಯಾಗದಂತೆ ತಡೆಯುತ್ತದೆ
ಒಂದು ವೇಳೆ ನಿಮ್ಮ ಚರ್ಮದಲ್ಲಿ ಎಣ್ಣೆ ಪಸೆ ಹೆಚ್ಚಾಗಿದ್ದರೆ ಇದು ಮೊಡವೆಗಳಿಗೆ ಕಾರಣವಾಗುತ್ತದೆ. ಇದರಿಂದ ರಕ್ಷಣೆ ಪಡೆಯಲು ಒಂದು ಚಿಕ್ಕ ಕಪ್‌ನಷ್ಟು ಮೊಸರಿಗೆ ಒಂದು ಚಿಕ್ಕ ಚಮಚ ಅರಿಶಿನ ಪುಡಿ, ಕೊಂಚ ಸಕ್ಕರೆ ಮತ್ತು ಕೊಂಚ ಚಂದನದ ಪುಡಿ ಸೇರಿಸಿ ಲೇಪನ ತಯಾರಿಸಿ. ಈ ಲೇಪನವನ್ನು ಮುಖಕ್ಕೆ ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಮುಖದ ಕಾಂತಿ ಹೆಚ್ಚಿಸುತ್ತದೆ
ಒಂದು ಕಪ್ ಮೊಸರಿಗೆ ಕೊಂಚ ಕಿತ್ತಳೆ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಮಾಡಿದ ಪುಡಿ, ಕೊಂಚ ಮಸೂರ್ ಬೇಳೆಯನ್ನು ಕುಟ್ಟಿ ಮಾಡಿದ ಪುಡಿ ಹಾಗೂ ಕೊಂಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಲೇಪನ ತಯಾರಿಸಿ. ಈ ಮಿಶ್ರಣವನ್ನು ದಪ್ಪನಾಗಿ ಮುಖದ ಮೇಲೆ ಹಚ್ಚಿ ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಗಾಯದ ಕಲೆಗಳನ್ನು ಮಾಗಿಸುತ್ತದೆ
ಒಂದು ವೇಳೆ ನಿಮ್ಮ ಮುಖದಲ್ಲಿ ಹಳೆಯ ಮೊಡವೆಯ ಅಥವಾ ಗಾಯದ ಕಲೆ ಉಳಿದಿದ್ದರೆ ಇದರ ಮೇಲೆ ಕೊಂಚ ನೀರು ಬೆರೆಸಿದ ಮೊಸರನ್ನು ಹಚ್ಚಿ. ಕೀಟದ ಕಡಿತವಿರುವ ಸ್ಥಳಕ್ಕೂ ಇದೇ ಕ್ರಮ ಅನುಸರಿಸಬಹುದು.

ಗಾಯದ ಕಲೆಗಳನ್ನು ಮಾಗಿಸುತ್ತದೆ
ಇದರಿಂದ ಉರಿ ತಕ್ಷಣ ಕಡಿಮೆಯಾಗುತ್ತದೆ. ಮೊಸರಿನಲ್ಲಿರುವ ಸತು ಗಾಢವಾಗಿದ್ದ ಕಲೆಯನ್ನು ತಿಳಿಗೊಳಿಸಿ ಚರ್ಮ ಸಹಜವರ್ಣ ಪಡೆಯಲು ನೆರವಾಗುತ್ತದೆ.  ಮನೆಯಲ್ಲೇ ಸಿದ್ಧಪಡಿಸಿದ ಮೊಸರಿನ 12 ಅದ್ಭುತ ಕಮಾಲುಗಳು

ಸಹಜವರ್ಣ ಮರಳಿಸುತ್ತದೆ

ಸಮಪ್ರಮಾಣದಲ್ಲಿ ಮೊಸರು ಮತ್ತು ಕಡಲೆಹಿಟ್ಟನ್ನು ಬೆರೆಸಿ ಇದಕ್ಕೆ ಕೊಂಚ ಲಿಂಬೆರಸ ಸೇರಿಸಿ ಲೇಪನ ತಯಾರಿಸಿ. ಈ ಲೇಪನವನ್ನು ಬಿಸಿಲಿನಿಂದ ಕಪ್ಪಗಾಗಿದ್ದ ಚರ್ಮದ ಮೇಲೆ ತೆಳುವಾಗಿ ಹಚ್ಚಿ ಹದಿನೈದು ನಿಮಿಷ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಕೂದಲಿನ ಆರೈಕೆಗೆ, ಮೊಸರು-ಬೇವಿನ ಮ್ಯಾಜಿಕ್ ಚಿಕಿತ್ಸೆ


Wednesday, 14 September 2016

ಒಣಚರ್ಮವೇ? ಅಲೋವೆರಾ ಫೇಸ್ ಪ್ಯಾಕ್ ಪ್ರಯತ್ನಿಸಿ ನೋಡಿ...

ಚರ್ಮದ ಆರೋಗ್ಯಕ್ಕೆ ಆರ್ದ್ರತೆ ಬಹಳ ಮುಖ್ಯ. ಕೆಲವರ ಚರ್ಮ ಆರ್ದತೆಯನ್ನು ಹಿಡಿದಿಟ್ಟುಕೊಳ್ಳುವ ಕ್ಷಮತೆಯನ್ನು ಕೊಂಚ ಕಡಿಮೆ ಹೊಂದಿರುವ ಕಾರಣ ಇವರ ಚರ್ಮ ಸದಾ ಒಣದಾಗಿಯೇ ಇರುತ್ತದೆ.
ವಾತಾವರಣದಲ್ಲಿ ಕೊಂಚ ಒಣಹವೆ ಕಂಡುಬಂದರೂ ಇವರ ಚರ್ಮ ಒಣಗಿ ಬಿರುಕು ಬಿಡಲಾರಂಭಿಸುತ್ತದೆ. ಅದರಲ್ಲೂ ವಿಪರೀತ ಶುಷ್ಕ ಹವೆ ಇದ್ದಾಗ ಚರ್ಮ ಒಣಗಿ ಬಿಗಿಯಾಗಿ ನಗುವುದೂ ಕಷ್ಟಕರವಾಗುತ್ತದೆ.
  ಅಲ್ಲದೇ ಬೇಗನೇ ನೆರಿಗೆ ಬೀಳುವುದು, ಹೊರಪದರ ಪರೆಯಂತೆ ಏಳುವುದು, ಚರ್ಮ ಕೆಂಪಗಾಗುವುದು, ತುಟಿಗಳು ಸೀಳಿ ರಕ್ತ ಬರುವುದು ಇತ್ಯಾದಿಗಳು ಕಂಡುಬರುತ್ತವೆ.

ಪರೋಕ್ಷವಾಗಿ ವೃದ್ಧಾಪ್ಯದ ಲಕ್ಷಣಗಳನ್ನು ಚಿಕ್ಕವಯಸ್ಸಿನಲ್ಲಿಯೇ ಮೂಡಿಸುತ್ತವೆ. ಈ ತೊಂದರೆಯನ್ನು ಸಮರ್ಥವಾಗಿ ನಿಭಾಯಿಸಲು ನಿಸರ್ಗ ನೀಡಿರುವ ಅತ್ಯುತ್ತಮ ಪರಿಹಾರವೆಂದರೆ ಲೋಳೆಸರ. ಬನ್ನಿ, ಈ ನಿಟ್ಟಿನಲ್ಲಿ ಲೋಳೆಸರವನ್ನು ಹೇಗೆ ಬಳಸಬಹುದು ಎಂಬುದನ್ನು ಮೂರು ಮುಖಲೇಪಗಳ ಮುಖಾಂತರ ವಿವರಿಸಲಾಗಿದೆ: 'ಅಲೋವೆರಾ'ದ ಫೇಸ್ ಪ್ಯಾಕ್-ಸೌಂದರ್ಯದ ಕೀಲಿಕೈ! 

ಲೋಳೆಸರ (ಅಲೋವೆರಾ) ಮತ್ತು ಮೊಸರು: ಕೆಂಪಗಾಗಿರುವ ಚರ್ಮಕ್ಕಾಗಿ



ಎರಡು ದೊಡ್ಡಚಮಚದಷ್ಟು ಸಮಪ್ರಮಾಣದಲ್ಲಿ ಲೋಳೆಸರ ಮತ್ತು ಮೊಸರನ್ನು ಬೆರೆಸಿ ಈ ಲೇಪನವನ್ನು ಮುಖ, ಕುತ್ತಿಗೆ ಕೈಗಳಿಗೆ ಹಚ್ಚಿ. ಇದರಿಂದ ಒಣಗಿದ ಭಾಗ ಕೆಂಪಗಾಗಿದ್ದರೆ ತಕ್ಷಣ ಉರಿ ಕಡಿಮೆಯಾಗುತ್ತದೆ ಹಾಗೂ ಪದರವೇಳುವುದು ಕಡಿಮೆಯಾಗುತ್ತದೆ. ಈ ವಿಧಾನವನ್ನು ಪ್ರತಿದಿನ ಒಂದು ಹೊತ್ತಿನಲ್ಲಿ ನಿಯಮಿತವಾಗಿ ಹಚ್ಚುತ್ತಾ ಬನ್ನಿ. ಬೆಳಗ್ಗಿನ ಸಮಯ ಉತ್ತಮ. ಈ ಮುಖಲೇಪದ ಇನ್ನೊಂದು ಉಪಯೋಗವೆಂದರೆ ಚರ್ಮವನ್ನು ತಣಿಸುವುದು. ಇದರಿಂದ ಚಿಕ್ಕ ಚಿಕ್ಕ ಬೊಕ್ಕೆ, ಬೆವರುಸಾಲೆ ಮೊದಲಾದವು ಏಳುವ ಸಂಭವ ಕಡಿಮೆಯಾಗುತ್ತದೆ.



ಲೋಳೆಸರ ಮತ್ತು ಅರಿಶಿನ: ಮುಖದ ಕಾಂತಿ ಹೆಚ್ಚಿಸಲು

ಒಂದು ವೇಳೆ ಒಣಚರ್ಮದ ಕಾರಣದಿಂದ ಮುಖದ ಕಾಂತಿ ಮತ್ತು ಹೊಳಪು ಇಲ್ಲವಾಗಿದ್ದರೆ ಈ ಮುಖಲೇಪ ಸಮರ್ಥವಾದ ಉತ್ತರವಾಗಿದೆ. ಅರಿಶಿನ ಮುಖದ ಕಾಂತಿ ಹೆಚ್ಚಿಸುತ್ತದಾದರೂ ಒಣಚರ್ಮವನ್ನು ಇನ್ನಷ್ಟು ಒಣಗಿಸುವ ಕಾರಣ ಬರೆಯ ಅರಿಶಿನ ಸಾಕಾಗುವುದಿಲ್ಲ. ಆದರೆ ಇದರೊಂದಿಗೆ ಕೊಂಚ ಲೋಳೆಸರದ ರಸ ಬೆರೆಸಿ ಹಚ್ಚಿದರೆ ಒಣಚರ್ಮಕ್ಕೆ ಆರ್ದ್ರತೆ ಮತ್ತು ಅರಿಶಿನದ ಪೋಷಣೆ ದೊರೆತು ಒಣಚರ್ಮದವರೂ ಇತರರಂತೆ ಕಾಂತಿಯುಕ್ತ ಮುಖವನ್ನು ಹೊಂದಬಹುದು. ಇದಕ್ಕಾಗಿ ಒಂದು ದೊಡ್ಡ ಚಮಚ ಲೋಳೆಸರದ ರಸಕ್ಕೆ ಚಿಟಿಕೆಯಷ್ಟು ಅರಿಶಿನ ಬೆರೆಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಕೊಂಚ ಹೊತ್ತಿನ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ತ್ವಚೆಯ ಸರ್ವ ರೋಗಕ್ಕೂ ಲೋಳೆ ಸರದ ಫೇಸ್ ಪ್ಯಾಕ್ 

ಲೋಳೆಸರ ಮತ್ತು ಪಪ್ಪಾಯಿ: ಮುಖದ ಅನಗತ್ಯ ಕೂದಲು ನಿವಾರಿಸಲು
ಪಪ್ಪಾಯಿಯಲ್ಲಿರುವ ಕೆಲವು ಕಿಣ್ವಗಳು ಮುಖದ ಮೇಲಿರುವ ಅನಗತ್ಯ ಕೂದಲುಗಳನ್ನು ನಿವಾರಿಸುವ ಶಕ್ತಿ ಹೊಂದಿದೆ. ನಿಯಮಿತವಾಗಿ ಈ ಮುಖಲೇಪವನ್ನು ಬಳಸುತ್ತಾ ಬಂದರೆ ಬೇಡದ ಕೂದಲ ನಿವಾರಣೆಗಾಗಿ ದುಬಾರಿ ಬ್ಯೂಟಿ ಪಾರ್ಲರುಗಳಲ್ಲಿ ಪ್ರತ್ಯೇಕ ಆರೈಕೆ ಪಡೆದುಕೊಳ್ಳುವ ಅಗತ್ಯವೇ ಇಲ್ಲ.


ಇದಕ್ಕಾಗಿ ಕೊಂಚ ಲೋಳೆಸರದ ರಸ ಮತ್ತು ಪಪ್ಪಾಯಿ ಹಣ್ಣಿನ ಚಿಕ್ಕ ತುಂಡನ್ನು ಜಜ್ಜಿ ಬೆರೆಸಿ ನಯವಾದ ಲೇಪವಾಗಿಸಿ. ಈ ಲೇಪವನ್ನು ಮುಖದ ಮೇಲೆ ಹಚ್ಚಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಮುಖದ ಕಾಂತಿ ಹೆಚ್ಚುವ ಜೊತೆಗೇ ಬೇಡದ ಕೂದಲೂ ಬುಡಸಮೇತ ಹೋಗಿರುತ್ತದೆ.

Monday, 12 September 2016

ಇನ್ನು ಸೌಂದರ್ಯ ಹೆಚ್ಚಿಸಲು ಬ್ಯೂಟಿ ಪಾರ್ಲರ್‌ಗೆ ಹೋಗಬೇಡಿ! Read more at:

ತನ್ನ ತ್ವಚೆಯು ಇತರರಿಗಿಂತ ಚೆನ್ನಾಗಿರಬೇಕು ಮತ್ತು ಪ್ರತಿಯೊಬ್ಬರು ತನ್ನ ತ್ವಚೆಯ ಬಗ್ಗೆಯೇ ಚರ್ಚೆ ಮಾಡುತ್ತಿರಬೇಕು ಎನ್ನುವುದು ಪ್ರತಿಯೊಬ್ಬ ಹುಡುಗಿಯ ಆಸೆಯಾಗಿರುತ್ತದೆ. ಸೌಂದರ್ಯದಲ್ಲಿ ಚರ್ಮದ ಆರೋಗ್ಯ ಮತ್ತು ಆರೈಕೆ ಕೂಡ ಮುಖ್ಯವಾಗಿರುತ್ತದೆ. ಇಂತಹ ಚರ್ಮವನ್ನು ಪಡೆಯಲು ಕೆಲವೊಮ್ಮೆ ಸಲೂನಿಗೆ ಹೋಗಿ ದುಬಾರಿ ವೆಚ್ಚ ಮಾಡುತ್ತೇವೆ. ಆದರೆ ಇದು ಅಲ್ಪಾವಧಿಗೆ ಮಾತ್ರ. ಯಾಕೆಂದರೆ ಕೆಲವೇ ದಿನಗಳಲ್ಲಿ ಚರ್ಮವು ಮತ್ತೆ ಅದೇ ಸ್ಥಿತಿಗೆ ಬರುತ್ತದೆ.

ಹಾಗಿದ್ದರೆ ಖರ್ಚು ವೆಚ್ಚ ಕಡಿಮೆಗೊಳಸಿ ಮಿತದರದಲ್ಲಿ ಸೌಂದರ್ಯವನ್ನು ವರ್ಧಿಸುವ ಏನಾದರೂ ಪರಿಹಾರಗಳಿವೆಯೇ ಎಂಬುದಾಗಿ ನೀವು ಯೋಚಿಸುತ್ತಿದ್ದೀರಿ ಎಂದಾದಲ್ಲಿ ಇಂದಿನ ಬೋಲ್ಡ್ ಸ್ಲೈ ಲೇಖನ ನಿಮಗೆ ಈ ವಿಧದಲ್ಲಿ ಸಹಾಯ ಮಾಡಲಿದೆ.  ಜಾಹೀರಾತಿಗೆ ಮರುಳಾಗಿ ಸೌಂದರ್ಯ ಕಳೆದುಕೊಳ್ಳಬೇಡಿ!

ಹೆಚ್ಚೇನೂ ಖರ್ಚು ಮಾಡದೇ ಕೆಲವೊಂದು ಸರಳ ಫೇಸ್ ಮಾಸ್ಕ್‌ಗಳನ್ನು ನಾವು ತಿಳಿಸಿಕೊಡುತ್ತಿದ್ದು ಇದನ್ನು ಬಳಸಿದ ನಂತರ ನಿಮ್ಮ ತ್ವಚೆ ಹೊಳೆಯುವುದನ್ನು ನಿಮಗೆ ನೋಡಬಹುದಾಗಿದೆ.

ಬಾದಾಮಿ ಮತ್ತು ಹಾಲು ಫೇಸ್ ಮಾಸ್ಕ್

*ರಾತ್ರಿ ಪೂರ್ತಿ 2-3 ಬಾದಾಮಿಯನ್ನು ನೆನೆಸಿಡಿ *ಬೆಳಗ್ಗೆ, ಬಾದಾಮಿಯನ್ನು 2 ಚಮಚ ಹಸಿಹಾಲಿನೊಂದಿಗೆ ಮ್ಯಾಶ್ (ಹಿಸುಕಿಕೊಳ್ಳಿ) ಮಾಡಿಕೊಂಡು ಪೇಸ್ಟ್ ರೀತಿ ಮಾಡಿಕೊಳ್ಳಿ *ಚೆನ್ನಾಗಿ ಮಿಶ್ರ ಮಾಡಿಕೊಂಡು ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ ನಂತರ 15 ನಿಮಿಷಗಳ ಕಾಲ ಹಾಗೆಯೇ ಬಿಡಿ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.     ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!  
ಬಾಳೆಹಣ್ಣು ಮತ್ತು ಜೇನು ಫೇಸ್ ಮಾಸ್ಕ್

*ಬಾಳೆಹಣ್ಣನ್ನು ಮ್ಯಾಶ್ ಮಾಡಿಕೊಂಡು ಇದಕ್ಕೆ 1 ಚಮಚ ಜೇನನ್ನು ಸೇರಿಸಿಕೊಳ್ಳಿ 
*ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ 
*20 ನಿಮಿಷಗಳ ಕಾಲ ಹಾಗೆಯೇ ಬಿಡಿ 
*ನಂತರ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ ಬಾಳೆಹಣ್ಣಿನ ಕರಾಮತ್ತಿನಲ್ಲಿದೆ ಶುಷ್ಕ ತ್ವಚೆ ಸಮಸ್ಯೆಗೆ ಪರಿಹಾರ!  


ಅರಿಶಿನ, ಹಾಲು ಮತ್ತು ಜೇನು ಫೇಸ್ ಮಾಸ್ಕ್
*1 ಚಮಚದಷ್ಟು ಹಸಿ ಹಾಲನ್ನು ಜೇನು ಮತ್ತು ಚಿಟಿಕೆಯಷ್ಟು ಅರಶಿನದೊಂದಿಗೆ ಮಿಶ್ರ ಮಾಡಿ *ನಿಮ್ಮ ಮುಖ ಮತ್ತು ಕುತ್ತಿಗೆಗೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ
*ಸುಮಾರು 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ ಮುಖ ಒಣಗಿದ ನಂತರ ಮೃದುವಾದ ಮಾಯಿಶ್ಚರೈಸ್ ಅನ್ನು ಹಚ್ಚಿಕೊಳ್ಳಿ  ಚಿನ್ನದ ದೇವತೆ ಅರಿಶಿನದ ಚಿನ್ನದಂತಹ ಗುಣಗಳು


ಆಲೂಗಡ್ಡೆ, ಲಿಂಬೆ ರಸ ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಮಾಸ್ಕ್
*ಆಲೂಗಡ್ಡೆ ರಸ, ಲಿಂಬೆ ರಸ ಮತ್ತು ಮುಲ್ತಾನಿ ಮಿಟ್ಟಿಯನ್ನು ತೆಗೆದುಕೊಳ್ಳಿ *ಚೆನ್ನಾಗಿ ಮಿಶ್ರ ಮಾಡಿಕೊಂಡು ನಿಮ್ಮ ಮುಖ ಮತ್ತು ಕುತ್ತಿಗೆಗೆ ಮಿಶ್ರಣವನ್ನು ಹಚ್ಚಿಕೊಳ್ಳಿ
*15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಆಲೂಗಡ್ಡೆ ಜ್ಯೂಸ್ ಬಳಸಿ ಮುಖದ ಸುಕ್ಕು ನಿವಾರಿಸಿ...


Friday, 2 September 2016

ಸೊಂಪಾದ ಕೂದಲಿಗೆ ಮನೆಯಲ್ಲಿಯೇ ಇದೆ ಮ್ಯಾಜಿಕ್ ಚಿಕಿತ್ಸೆ!

ಕೂದಲ ಪೋಷಣೆ ಉತ್ತಮವಾಗಿರಬೇಕಾದರೆ ತಲೆಯ ಚರ್ಮವನ್ನು ಒಣಗಲು ಬಿಡಬಾರದು. ತಲೆಗೂದಲ ಬುಡಕ್ಕೆ ಉತ್ತಮ ಪೋಷಣೆ ದೊರೆತಾಗಲೇ ಸೊಂಪಾದ, ಉದ್ದ ಮತ್ತು ಕಾಂತಿಯುಕ್ತ ಕೂದಲು ಲಭ್ಯವಾಗಲು ಸಾಧ್ಯ.
ಆರೋಗ್ಯಕ ಬುಡವಿದ್ದರೆ ಕೂದಲು ತೆಳುವಾಗುವುದು, ತುದಿ ಸೀಳುವುದು, ಉದುರುವುದು ಮೊದಲಾದ ತೊಂದರೆಗಳು ಎದುರಾಗುವುದಿಲ್ಲ. ತಲೆಯ ಚರ್ಮದ ಆರೈಕೆಗಾಗಿ ಶತಮಾನಗಳಿಂದ ಹರಳೆಣ್ಣೆಯನ್ನು ಬಳಸಲಾಗುತ್ತಾ ಬರಲಾಗಿದೆ.


ಕೂದಲಿಗೆ ಮಾತ್ರವಲ್ಲದೇ ಹಲವು ರೀತಿಯಲ್ಲಿ ಸೌಂದರ್ಯವರ್ಧಕವೂ ಆಗಿದೆ. ಇದರ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣದ ಕಾರಣ ಕೂದಲಿಗೆ ಎದುರಾಗುವ ವಿವಿಧ ಕ್ರಿಮಿಗಳ ಸೋಂಕಿನಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಹಲವು ಸೌಂದರ್ಯ ಪ್ರಸಾದನಗಳಲ್ಲಿ ಹರಳೆಣ್ಣೆಯನ್ನು ಬಳಸಲಾಗುತ್ತದೆ. ವಿವಿಧ ಪ್ರೋಟೀನುಗಳು, ಖನಿಜಗಳು ಮತ್ತು ವಿಶೇಷವಾಗಿ ವಿಟಮಿನ್ ಇ ಇರುವ ಹರಳೆಣ್ಣೆ ಕೂದಲ ಪೋಷಣೆಯ ಮಟ್ಟಿಗೆ ಒಂದು ಮ್ಯಾಜಿಕ್ ಮಾಡುವ ದ್ರವವೇ ಆಗಿದೆ. ಬನ್ನಿ, ಇದರ ಕೂದಲ ಮೇಲಿನ ಪರಿಣಾಮ ಹಾಗೂ ಇದರ ಬಳಕೆಯ ವಿಧಾನವನ್ನು ನೋಡೋಣ:

ಕೂದಲ ಬೆಳವಣಿಗೆ ಹೆಚ್ಚಿಸುತ್ತದೆ ಮತ್ತು ಉದುರುವುದನ್ನು ತಡೆಗಟ್ಟುತ್ತದೆ

ಒಂದು ಚಿಕ್ಕ ಬೋಗುಣಿಯಲ್ಲಿ ಸಮಪ್ರಮಾನದ ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆ ಬೆರೆಸಿ. ಕೊಂಚವೇ ಬಿಸಿ ಮಾಡಿದರೆ ಉತ್ತಮ. ಇದನ್ನು ಬೆರಳುಗಳಿಗೆ ಹಚ್ಚಿಕೊಂಡು ಕೂದಲ ಬುಡಕ್ಕೆ ಚೆನ್ನಾಗಿ ಹಚ್ಚುವಂತೆ ನಯವಾದ ಮಸಾಜ್ ಮೂಲಕ ಇಡಿಯ ತಲೆಗೆ ಹಚ್ಚಿಕೊಳ್ಳಿ




ಮುಗಿದ ಬಳಿಕ ತಲೆಗೆ ಶವರ್ ಕ್ಯಾಪ್ ಒಂದನ್ನು ಧರಿಸಿ ಇಡಿಯ ರಾತ್ರಿ ಹಾಗೇ ಬಿಡಿ. ಇಡಿರಾತ್ರಿ ಸಾಧ್ಯವಾಗದಿದ್ದರೆ ನಾಲ್ಕಾರು ಗಂಟೆಗಳ ಕಾಲವಾದರೂ ಹಾಗೇ ಇರಿಸಿ. ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ತಲೆಯ ಚರ್ಮದ ಸೋಂಕು ಮತ್ತ ತಲೆಹೊಟ್ಟಿನಿಂದ ರಕ್ಷಿಸುತ್ತದೆ

ತಲೆಯ ಚರ್ಮ ಒಣಗಿ ಸೋಂಕಿಗೆ ಒಳಗಾದರೆ ಚರ್ಮದ ಹೊರಪದರ ಒಣಗಿ ಪದರದಂತೆ ಏಳುತ್ತದೆ. ಇದೇ ತಲೆಹೊಟ್ಟು. ತಲೆಹೊಟ್ಟಿನ ತೊಂದರೆ ಇದ್ದರೆ ಒಂದು ದೊಡ್ಡ ಚಮಚದಷ್ಟು ಸಮಪ್ರಮಾಣದಲ್ಲಿ ಹರಳೆಣ್ಣೆ ಮತ್ತು ಆಲಿವ್ ಎಣ್ಣೆಯನ್ನು ಬೆರೆಸಿ.

ಇದಕ್ಕೆ ಅರ್ಧ ಲಿಂಬೆಯ ರಸವನ್ನು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತಲೆಗೆ ಹಚ್ಚಿ ಸುಮಾರು ಅರ್ಧಗಂಟೆಯ ಬಳಿಕ ಉಗುರುಬೆಚ್ಚನೆಯ ನೀರಿನಿಂದ ಮತ್ತು ಸೌಮ್ಯ ಶಾಂಪೂ ಬಳಸಿ ಸ್ನಾನ ಮಾಡಿ.


ಕೂದಲ ತುದಿ ಸೀಳಿದ್ದರೆ

ಹರಳೆಣ್ಣೆಯ ಸಾಂದ್ರತೆ ಹೆಚ್ಚಾಗಿದ್ದು ಇದನ್ನು ನೇರವಾಗಿ ಹೆಚ್ಚಲು ಕೊಂಚ ಕಷ್ಟವಾಗಬಹುದು. ಬದಲಿಗೆ ಕೊಂಚ ಆಲಿವ್ ಎಣ್ಣೆ ಅಥವಾ ಹೋಹೋಬಾ ಎಣ್ಣೆ ಬೆರೆಸಿ ಹಚ್ಚಿದರೆ ಉತ್ತಮ. 
ಈ ಮಿಶ್ರಣ ಹಚ್ಚಿದ ಕೂದಲು ಗುಂಗುರು ಮತ್ತು ಸಿಕ್ಕುಸಿಕ್ಕಾಗಿದ್ದರೆ ಬಿಡಿಸಲು ಸುಲಭವಾಗಿ ಸಾಧ್ಯವಾಗುತ್ತದೆ. ಈ ಮಿಶ್ರಣವನ್ನು ತಲೆಗೂದಲ ಬುಡದಿಂದ ತುದಿಯವರೆಗೂ ಹಚ್ಚಿ ಸುಮಾರು ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ.

ಕೂದಲಿಗೆ ನೈಸರ್ಗಿಕ ಕಂಡೀಶನರ್ ಮತ್ತು ತೇವಕಾರಕದ ರೂಪದಲ್ಲಿ ನೆರವಾಗುತ್ತದೆ
ಪ್ರತಿ ಬಾರಿ ಶಾಂಪೂ ಉಪಯೋಗಿಸಿ ತಲೆ ತೊಳೆದುಕೊಳ್ಳುವ ಹದಿನೈದು ನಿಮಿಷ ಮುನ್ನ ಕೊಂಚ ಹರಳೆಣ್ಣೆಯನ್ನು ಹಚ್ಚಿಕೊಳ್ಳಿ. ಸಾಧ್ಯವಾದರೆ ಹರಳೆಣ್ಣೆಯ ಕೆಲವು ಹನಿಗಳನ್ನು ಕಂಡೀಶನರ್ ದ್ರವದೊಂದಿಗೆ ಮಿಶ್ರಣ ಮಾಡಿಯೂ ಉಪಯೋಗಿಸಿ.

ಇನ್ನೊಂದು ವಿಧಾನವೆಂದರೆ ಹರಳೆಣ್ಣೆಯೊಂದಿಗೆ ಕೊಂಚ ಲೋಳೆಸರದ ರಸ, ಜೇನು ಮತ್ತು ಲಿಂಬೆರಸವನ್ನು ಸೇರಿಸಿ ಮಿಶ್ರಣ ಮಾಡುವುದು. ಈ ಮಿಶ್ರಣವನ್ನು ತಲೆಗೂದಲ ಬುಡಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ರಾತ್ರಿ ಬೆಳಗಾಗುವುದರೊಳಗೆ, ಮೊಡವೆಗಳು ಮಂಗಮಾಯ!

ಮೊಡವೆಗಳ ನಿವಾರಣೆಗೆ ಮಾರುಕಟ್ಟೆಯಲ್ಲಿ ಇರುವಷ್ಟು ಪ್ರಸಾಧನಗಳು ಬೇರೆ ತೊಂದರೆಗಳಿಗೆ ಇರಲಾರದು!, ಅಷ್ಟೊಂದು ಬಗೆಯ ಪ್ರಸಾಧನಗಳು ಲಭ್ಯವಿದೆ. ಸಾಮಾನ್ಯವಾಗಿ ಇವು ಹೆಚ್ಚಿನ ಸಮಯ ತೆಗೆದುಕೊಂಡು ಮೊಡವೆ ನಿವಾರಿಸಿದರೂ ಬಳಿಕ ಕಲೆಯನ್ನು ಉಳಿಸಿ ಸೌಂದರ್ಯವನ್ನು ಕುಂದಿಸುತ್ತವೆ.

ಲ್ಲದೇ ಮೊಡವೆ ಮಾಗಿದ ಬಳಿಕ ಚಿಕ್ಕ ಗುಳಿಯಂತೆ ಚರ್ಮದಲ್ಲಿ ಕಲೆ ಶಾಶ್ವತವಾಗಿ ಉಳಿಯುವ ಸಾಧ್ಯತೆ ಇರುತ್ತದೆ. ಚಿಕ್ಕ ಪುಟ್ಟ ಮೊಡವೆಗಳನ್ನು ಒಂದೇ ರಾತ್ರಿಯಲ್ಲಿ ಮತ್ತು ಉಳಿದವುಗಳನ್ನು ಎರಡು ಮೂರು ದಿನಗಳಲ್ಲಿ ಇಲ್ಲವಾಗಿಸಲು ಕೆಳಗಿನ ವಿಧಾನ ಸೂಕ್ತವಾಗಿದೆ




ಗಂಧದ ಲೇಪನ

ಇಂದು ಗಂಧದ ಪುಡಿ ಸಿದ್ದರೂಪದಲ್ಲಿ ಸಿಗುತ್ತಿದ್ದು ಮೊಡವೆಗಳನ್ನು ನಿವಾರಿಸುವ ಜೊತೆಗೇ ಉರಿಯನ್ನು ಶಮನ ಮಾಡುವ ಶಕ್ತಿಯನ್ನೂ ಹೊಂದಿದೆ. ಅಲ್ಲದೇ ಚರ್ಮದ ಅಡಿಯಲ್ಲಿ ಸಂಗ್ರಹವಾಗಿದ್ದ ತೈಲಗಳನ್ನು ನಿವಾರಿಸಿ ಇನ್ನಷ್ಟು ಮೊಡವೆಯಾಗುವುದರಿಂದ ರಕ್ಷಿಸುತ್ತದೆ. ಇದಕ್ಕಾಗಿ ಗಂಧದ ಪುಡಿಯನ್ನು ಕೊಂಚ ನೀರಿನೊಂದಿಗೆ ಬೆರೆಸಿ ಮೊಡವೆಗಳಿರುವಲ್ಲಿ ಹಚ್ಚಿ ಸುಮಾರು ಎರಡರಿಂದ ಮೂರು ಗಂಟೆ ಬಿಡಿ.





ಗಂಧದ ಲೇಪನ
\ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಂಡು ಟವೆಲ್ ಒತ್ತಿ ಒಣಗಿಸಿ ಬಳಿಕ ಈ ಚರ್ಮ ಒಣಗಿಯೇ ಇರುವಂತೆ ನೋಡಿಕೊಳ್ಳಿ. ಮುಂದಿನ ಮೂರು ದಿನಗಳವರೆಗೆ ಮೊಡವೆ ಇರುವಲ್ಲಿ ಸೋಪು ಹಚ್ಚಬೇಡಿ




ಗುಲಾಬಿ ನೀರು
ಗುಲಾಬಿ ನೀರಿನಿಂದ ಮುಖವನ್ನು ತೊಳೆದುಕೊಂಡಾಗ ಚರ್ಮದ ಸೂಕ್ಷ್ಮರಂಧ್ರಗಳು ತೆರೆದು ಒಳಗಿನ ಕಲ್ಮಶಗಳು ಹೊರಬರಲು ಸಾಧ್ಯವಾಗುತ್ತದೆ. ಹಾಗೂ ಮೊಡವೆಗಳು ಶೀಘ್ರವಾಗಿ ಇಲ್ಲವಾಗುತ್ತವೆ. ಉತ್ತಮ ಪರಿಣಾಮಕ್ಕಾಗಿ ಕೊಂಚ ಗುಲಾಬಿ ನೀರನ್ನು ಗಂಧದ ಪುಡಿಯೊಂದಿಗೆ ಬೆರೆಸಿ ಮೊಡವೆಗಳ ಮೇಲೆ ಹಚ್ಚಿದರೆ ಇನ್ನೂ ಹೆಚ್ಚಿನ ಪರಿಣಾಮವನ್ನು ಪಡೆಯಬಹುದು.  


ಟೂಥ್ ಪೇಸ್ಟ್

ಕೀವು ತುಂಬಿದ ಮೊಡವೆಗಳಿಗೆ ನಿಮ್ಮ ಹಲ್ಲುಜ್ಜುವ ಪೇಸ್ಟ್ ಸಹಾ ಉತ್ತಮ ಪರಿಹಾರ ಒದಗಿಸಬಲ್ಲುದು. ರಾತ್ರಿ ಮಲಗುವ ಮುನ್ನ ತಣ್ಣೀರಿನಿಂದ ಮುಖ ತೊಳೆದುಕೊಂಡು ತೆಳುವಾಗಿ ಬಿಳಿಯ ಪೇಸ್ಟ್ ಹಚ್ಚಿ ಒಣಗಲು ಬಿಡಿ. ರಾತ್ರಿ ಇಡೀ ಹಾಗೇ ಬಿಟ್ಟು ಮರುದಿನ ಕೇವಲ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.



ಲಿಂಬೆ ರಸ

ಮೊಡವೆಗಳನ್ನು ಬುಡಸಹಿತ ನಿವಾರಿಸಿ ಕಲೆಯಿಲ್ಲದ ಚರ್ಮ ಬೆಳೆಸಲು ಲಿಂಬೆ ರಸ ಅತ್ಯುತ್ತಮವಾಗಿದೆ. ಈಗತಾನೇ ತೊಳೆದ ಮುಖದ ಮೇಲೆ ತೆಳುವಾಗಿ ಲಿಂಬೆರಸ ಹಚ್ಚಿ. (ಕಣ್ಣಿಗೆ ಕೊಂಚವೂ ಹಾರದಂತೆ ಅತಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು, ಉತ್ತಮ ಎಂದರೆ ಕಣ್ಣು ಮುಚ್ಚಿಕೊಂಡು ಇನ್ನೊಬ್ಬರಿಂದ ಹಚ್ಚಿಸಿಕೊಳ್ಳಬೇಕು) ಬಳಿಕ ಸುಮಾರು ಹತ್ತರಿಂದ ಹದಿನೈದು ನಿಮಿಷ ಈ ರಸ ಒಣಗಲು ಬಿಡಬೇಕು.


ಲಿಂಬೆ ರಸ

ಒಂದು ವೇಳೆ ಮೊಡವೆಯ ತುದಿ ತೆರೆದಿದ್ದರೆ ಲಿಂಬೆ ರಸ ಹಚ್ಚಿದ ತಕ್ಷಣ ವಿಪರೀತ ಉರಿಯಾಗುತ್ತದೆ. ಈ ಪರಿಸ್ಥಿತಿಯಲ್ಲಿ ಲಿಂಬೆರಸವನ್ನು ಕೊಂಚ ನೀರಿನೊಂದಿಗೆ ಬೆರೆಸಿ ಬಳಸಿ. ಇನ್ನೂ ಉತ್ತಮ ಎಂದರೆ ಲಿಂಬೆರಸ ಮತ್ತು ಗಂಧದ ಪುಡಿ ಬೆರೆಸಿ ಮೊಡವೆಗಳಿಗೆ ಹಚ್ಚಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

ಬ್ಯೂಟಿ ಟಿಪ್ಸ್: ಅಡುಗೆ ಮನೆಯೊಳಗೆ ಒಂದು ರೌಂಡಪ್!

ಭಾರತದ ಯಾವುದೇ ಮನೆಯಲ್ಲಿರುವಷ್ಟು ಸಾಂಬಾರ ಪದಾರ್ಥಗಳು ಇನ್ನಾವ ದೇಶದಲ್ಲಿಯೂ ಪ್ರಾಯಶಃ ಇರಲಾರದು. ಭಾರತೀಯ ಅಡುಗೆಗಳಿಗೆ ಜೀವ ತುಂಬುವ ಈ ರುಚಿಕರ ಸಾಮಾಗ್ರಿಗಳು ವಿಶ್ವದಾದ್ಯಂತ ಪ್ರಸಿದ್ಧವಾಗಿದೆ.

ಇದೇ ಸಾಂಬಾರವನ್ನು ಹುಡುಕೊಂಡೇ ಅಲ್ಲವೇ ವಿದೇಶೀಯರು ಬಂದು ವ್ಯಾಪಾರ ಪ್ರಾರಂಭಿಸಿ ನಂತರ ಭಾರತವನ್ನೇ ಗುಲಾಮರಾಗಿಸಿದ್ದು! ಈ ಸಾಂಬಾರ ಪದಾರ್ಥಗಳು ಕೇವಲ ಅಡುಗೆಯ ರುಚಿ ಹೆಚ್ಚಿಸಲು ಮಾತ್ರವಲ್ಲ, ಆರೋಗ್ಯ ವೃದ್ಧಿಸಲೂ, ಸೌಂದರ್ಯ ವೃದ್ಧಿಸಲೂ ಮತ್ತು ಹಲವು ತ್ವಚೆಯ ತೊಂದರೆಗಳನ್ನು ನಿವಾರಿಸಲೂ ನೆರವಾಗುತ್ತವೆ.



ಕೂದಲ ಪೋಷಣೆಗೂ ಹಲವು ಸಾಂಬಾರ ಪದಾರ್ಥಗಳು ಇತರ ಯಾವುದೇ ಪ್ರಸಾದನ ನೀಡುವುದಕ್ಕಿಂತ ಉತ್ತಮ ಪೋಷಣೆ ನೀಡುತ್ತದೆ. ಎಲ್ಲಾ ಸರಿ, ಆದರೆ ಯಾವ ಸಾಮಾಗ್ರಿ ಯಾವ ತೊಂದರೆಗೆ ಸೂಕ್ತ? ಯಾವ ಸಾಮಾಗ್ರಿ ಕೂದಲ ಅಥವಾ ತ್ವಚೆಯ ಪೋಷಣೆಗೆ ಸೂಕ್ತ? ಈ ಪ್ರಶ್ನೆಗೆ ನಮ್ಮಲ್ಲಿ ಸಿದ್ಧ ಉತ್ತರವಿಲ್ಲ. ಬನ್ನಿ ಈ ಬಗ್ಗೆ ಹಲವು ಅಮೂಲ್ಯ ಮಾಹಿತಿಗಳನ್ನು ನೀಡಲಾಗಿದ್ದು ಇವು ನಿಮ್ಮ ಜ್ಞಾನವನ್ನೂ, ಇದರ ಬಳಕೆಯ ಮೂಲಕ ನಿಮ್ಮ ತ್ವಚೆ, ಕೂದಲು ಮತ್ತು ಒಟ್ಟಾರೆ ಆರೋಗ್ಯವನ್ನೂ ವೃದ್ಧಿಸಲಿದೆ:




ಅರಿಶಿನ
ಆರೋಗ್ಯಕರ ಸಾಂಬಾರವಸ್ತುಗಳ ಪಟ್ಟಿಯಲ್ಲಿ ಎಲ್ಲಕ್ಕಿಂತ ಪ್ರಥಮ ಸ್ಥಾನ ಪಡೆಯುವ ಸಾಮಾಗ್ರಿ ಎಂದರೆ ಅರಿಶಿನಪುಡಿ. ಇದರ ಆರೋಗ್ಯಕರ ಗುಣಗಳು ಹಲವಾರಿದ್ದು ಸಿದ್ಧ ರೂಪದಲ್ಲಿ ಹಲವು ತೊಂದರೆಗಳಿಗೆ ಉಪಶಮನ ನೀಡುತ್ತದೆ

ವಿಶೇಷವಾಗಿ ಇದರ ಉರಿಯೂತ ನಿವಾರಕ ಗುಣ ವಿವಿಧ ಸೋಂಕುಗಳಿಂದ ರಕ್ಷಿಸುವ ಜೊತೆಗೇ ಚರ್ಮದ ಕಾಂತಿ ಹೆಚ್ಚಿಸಲೂ ನೆರವಾಗುತ್ತದೆ. ಅಲ್ಲದೇ ಬಿಸಿಲು ಮತ್ತು ಗಾಯ ಮೊದಲಾದ ಕಾರಣಗಳಿಂದ ಚರ್ಮ ಕಪ್ಪಗಾಗಿದ್ದರೆ ಅಥವಾ ಕಲೆ ಉಳಿದಿದ್ದರೆ ಇದನ್ನು ನಿವಾರಿಸಲೂ ಅರಿಶಿನದ ಲೇಪನ ಅತ್ಯುತ್ತಮ ಆರೈಕೆ ನೀಡುತ್ತದೆ





ಲವಂಗ
ಲವಂಗದಲ್ಲಿರುವ ಆಂಟಿ ಆಕ್ಸಿಡೆಂಟುಗಳು ವಿಶೇಷವಾಗಿ ಹಲ್ಲುನೋವಿಗೆ ಅತ್ಯುತ್ತಮ ಉಪಶಮನ ನೀಡುತ್ತದೆ. ಅಲ್ಲದೇ ಮುಖದ ಕಾಂತಿ ಹೆಚ್ಚಿಸುವ ಲೇಪನದಲ್ಲಿ ಕೊಂಚ ಲವಂಗವನ್ನು ಸೇರಿಸುವುದರಿಂದ ಮುಖದ ಕಾಂತಿ ಹೆಚ್ಚುವ ಜೊತೆಗೇ ಮೊಡವೆಗಳು, ಕೀವುಗುಳ್ಳೆಗಳು ಮತ್ತು ಚರ್ಮದ ಕಪ್ಪುತಲೆ ಮೊದಲಾದವು ಸುಲಭವಾಗಿ ಇಲ್ಲವಾಗುತ್ತವೆ

ಬೆಳ್ಳುಳ್ಳಿ ಪುಡಿ

ಹಸಿಬೆಳ್ಳುಳ್ಳಿ ಹೇಗೆ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆಯೋ ಅಂತೆಯೇ ಬೆಳ್ಳುಳ್ಳಿಯ ಒಣಪುಡಿಯೂ ಚರ್ಮದ ಆರೈಕೆಗೆ ಉತ್ತಮವಾಗಿದೆ. ಇದರಲ್ಲಿರುವ ಆಲಿಸಿನ್ ಎಂಬ ಪೋಷಕಾಂಶ ವಿಶೇಷವಾಗಿ ಮೊಡವೆಗಳ ಒಳಭಾಗದಲ್ಲಿ ಸೋಂಕು ಉಂಟುಮಾಡಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಹೊಂದಿದೆ.



\ಮೊಡವೆಗಳಿಗೆ ಉತ್ತಮ ಪರಿಣಾಮ ಪಡೆಯಲು ಕೊಂಚ ಅರಿಶಿನ ಪುಡಿ, ಜೇನು ಮತ್ತು ಬೆಳ್ಳುಳ್ಳಿ ಪುಡಿಯನ್ನು ಬೆರೆಸಿ ಲೇಪನ ಮಾಡಿ ರಾತ್ರಿಯಿಡೀ ಇರುವಂತೆ ಹಚ್ಚಿ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಮೊಡವೆಗಳಿಗೆ ವಿದಾಯ ಹೇಳಬಹುದು.

ದಾಲ್ಚಿನ್ನಿ ಅಥವಾ ಚೆಕ್ಕೆಪುಡಿಯಲ್ಲಿ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳಿದ್ದು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿವೆ. ಮೊಡವೆ ಮತ್ತು ಇತರ ತೊಂದರೆಗಳ ನಿವಾರಣೆಗೆ ಕೊಂಚ ಜೇನು ಮತ್ತು ದಾಲ್ಚಿನ್ನಿಪುಡಿಯನ್ನು ಬೆರೆಸಿ ಮೊಡವೆಗಳ ಮೇಲೆ ಹಚ್ಚಿಕೊಂಡು ಇಡಿ ರಾತ್ರಿ ಬಿಟ್ಟು ಮರುದಿನ ತಣ್ಣೀರಿನಿಂದ ತೊಳೆದುಕೊಂಡರೆ ಶೀಘ್ರವೇ ಮೊಡವೆಗಳು ಕಲೆಯಿಲ್ಲದೇ ಮಾಯವಾಗುತ್ತವೆ. ಸೂಕ್ಷ್ಮ ಚರ್ಮದವರಿಗೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ.