Saturday, 10 December 2016

ನೋಡಿ ಇದೇ ಕಾರಣಕ್ಕೆ ಒಣ ಕೂದಲಿನ ಸಮಸ್ಯೆ ಕಂಡುಬರುವುದು!

ನೋಡಿ ಇದೇ ಕಾರಣಕ್ಕೆ ಒಣ ಕೂದಲಿನ ಸಮಸ್ಯೆ ಕಂಡುಬರುವುದು!ಒಣ ಕೂದಲಿಗೆ ಪ್ರಮುಖವಾಗಿ ನಾವು ಅನುಸರಿಸಿಕೊಂಡು ಹೋಗುವಂತಹ ಜೀವನಶೈಲಿ, ಕೂದಲಿನ ಆರೈಕೆಗೆ ಬಳಸುವಂತಹ ಉತ್ಪನ್ನಗಳು ಪ್ರಮುಖ ಕಾರಣವಾಗಿರುತ್ತದೆ. ಒಣ ಕೂದಲಿಗೆ ಕೆಲವೊಂದು ಕಾರಣಗಳು ಇವೆ. ಇದು ಯಾವುದೆಂದು ಈ ಲೇಖನದ ಮೂಲಕ ತಿಳಿದುಕೊಳ್ಳುವ.....


ನಟಿಯರ ಉದ್ದಗಿನ ಹಾಗೂ ರೇಷ್ಮೆಯಂತಹ ಕೂದಲನ್ನು ನೋಡಿದರೆ ನಮಗೂ ಇದೇ ರೀತಿಯ ಕೂದಲು ಇದ್ದರೆ ಎಷ್ಟು ಚಂದ ಎಂದು ಅನಿಸುವುದಿದೆ. ಆದರೆ ಹಲವಾರು ಜನರಿಗೆ ಕೂದಲಿನ ಸಮಸ್ಯೆ ಕಾಡುತ್ತಾ ಇರುತ್ತದೆ. ಅದರಲ್ಲೂ ಒಣ ಕೂದಲಿನ ಸಮಸ್ಯೆ ಹೆಚ್ಚಿನವರನ್ನು ಕಾಡುವುದು. ಒಣ ಕೂದಲಿನ ಕಿರಿಕಿರಿಗೆ ನೈಸರ್ಗಿಕ ಹೇರ್ ಮಾಸ್ಕ್   

ಒಣಕೂದಲಿನಿಂದಾಗಿ ಒಣ ತಲೆಬುರುಡೆ, ತಲೆಹೊಟ್ಟು ಮತ್ತು ಸೋಂಕು ಕಾಣಿಸಿಕೊಳ್ಳಬಹುದು. ಒಣ ಕೂದಲಿಗೆ ಪ್ರಮುಖವಾಗಿ ನಾವು ಅನುಸರಿಸಿಕೊಂಡು ಹೋಗುವಂತಹ ಜೀವನಶೈಲಿ, ಕೂದಲಿನ ಆರೈಕೆಗೆ ಬಳಸುವಂತಹ ಉತ್ಪನ್ನಗಳು ಪ್ರಮುಖ ಕಾರಣವಾಗಿರುತ್ತದೆ. ಒಣ ಕೂದಲಿಗೆ ಕೆಲವೊಂದು ಕಾರಣಗಳು ಇವೆ. ಇದು ಯಾವುದೆಂದು ಈ ಲೇಖನದ ಮೂಲಕ ತಿಳಿದುಕೊಳ್ಳುವ. ಕೂದಲು ನಾರಿನಂತೆ ಒರಟಾಗಿದೆಯೇ?  



ಅತಿಯಾಗಿ ತೊಳೆಯುವುದು

ಅತಿಯಾಗಿ ಕೂದಲು ತೊಳೆಯುವುದೇ ಒಣ ಕೂದಲಿಗೆ ಮೊದಲ ಕಾರಣವಾಗಿದೆ. ಅತಿಯಾಗಿ ತೊಳೆದರೆ ಮತ್ತು ಶಾಂಪೂ ಬಳಸಿದರೆ ಕೂದಲು ಒಣಗುವಂತಹ ಸಾಧ್ಯತೆ ತುಂಬಾ ಹೆಚ್ಚು. ಕೂದಲನ್ನು ಯಾವಾಗಲೂ ತೊಳೆದರೆ ಅದು ತಲೆಬುರುಡೆಯಲ್ಲಿನ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕಿ ಕೂದಲು ಒಣಗುವಂತೆ ಮಾಡುವುದು. ದಿನ ಬಿಟ್ಟು ದಿನ ಕೂದಲನ್ನು ತೊಳೆದರೆ ತುಂಬಾ ಒಳ್ಳೆಯದು. ಕೂದಲು ತೊಳೆಯಲು ಬಿಸಿನೀರಿಗಿಂತ ತಣ್ಣೀರೇ ಉತ್ತಮ ಏಕೆ?   


ಒಣಗಿಸುವುದು 
ಬ್ಲೋ ಡ್ರೈಯರ್ ಅನ್ನು ಬಳಸಿಕೊಂಡು ಕೂದಲನ್ನು ಒಣಗಿಸಿದರೆ ಅದು ತುಂಬಾ ಸ್ಟೈಲ್ ಆಗಿರುತ್ತದೆಯಾ? ಇದು ನಿಮ್ಮ ಕೂದಲಿಗೆ ತುಂಬಾ ಹಾನಿಯನ್ನು ಉಂಟು ಮಾಡುವ ಹಾಗೂ ಕ್ರೂರ ಸಾಧನವಾಗಿದೆ. ಬ್ಲೋ ಡ್ರೈಯರ್ ಅನ್ನು ಬಳಸುವುದರಿಂದ ತಲೆಬುರುಡೆಯಲ್ಲಿರುವ ನೈಸರ್ಗಿಕ ಎಣ್ಣೆಯು ಹೋಗಿ ಕೂದಲು ಒಣಗುವುದು. ಕೂದಲಿಗೆ ಹಾನಿಯಾಗುವುದನ್ನು ತಪ್ಪಿಸಲು ಕಡಿಮೆ ಬಿಸಿಯಲ್ಲಿ ಇದನ್ನು ಬಳಸಿ. 


ಒಣ ವಾತಾವರಣ ನೀವು ತುಂಬಾ ಒಣ ವಾತಾವರಣದಲ್ಲಿ ವಾಸಿಸುತ್ತಾ ಇದ್ದರೆ ಕೂದಲು ಒಣಗುವುದು ಮತ್ತು ಕಳೆಗುಂದಿದಂತೆ ಕಾಣುವುದು. ಇಂತಹ ವಾತಾವರಣದಲ್ಲಿ ಹೆಚ್ಚು ಹೊತ್ತು ಬಿಸಿಲಿಗೆ ಮೈಯೊಡ್ಡಬೇಡಿ, ಕಂಡೀಷನರ್ ಬಳಸಿಕೊಂಡು ಕೂದಲಿಗೆ ತೇವಾಂಶ ನೀಡಿ. ಟೋಪಿ ಹಾಕಿಕೊಂಡು ಹೊರಗಡೆ ಹೋದರೆ ಸಮಸ್ಯೆ ನಿವಾರಣೆಯಾಗುವುದು. 

ವಿನ್ಯಾಸ 
ಕೂದಲನ್ನು ಬ್ಲೋ ಡ್ರೈಯರ್ ನಂತಹ ಸಾಧನದಿಂದ ಅತಿಯಾಗಿ ವಿನ್ಯಾಸ ಮಾಡುವುದರಿಂದ ಕೂದಲು ಒಣಗಬಹುದು. ಕೂದಲನ್ನು ನೇರವಾಗಿಸಲು ಅಥವಾ ಗುಂಗುರು ಮಾಡಲು ಯಾವುದೇ ಸಾಧನ ಬಳಸುತ್ತಾ ಇದ್ದರೆ ಮುಂದೆ ಕೂದಲು ಕೆಟ್ಟದಾಗಿ ಕಾಣಿಸಬಹುದು. ಕೂದಲಿಗೆ ರಕ್ಷಣಾತ್ಮಕವಾಗಿರುವ ಕ್ರೀಮ್ ಅನ್ನು ಬಳಸಿಕೊಂಡರೆ ಸಾಧನಗಳಿಂದ ಆಗುವ ತೊಂದರೆ ತಪ್ಪಿಸಬಹುದು. ಕೂದಲನ್ನು ಬಿಸಿ ಮಾಡದೆ ವಿನ್ಯಾಸ ಮಾಡುವಂತಹ ಸಾಧನ ಬಳಸಿ. ಒದ್ದೆ ಕೂದಲಿಗೆ ಹೀಗೆ ಕಾಳಜಿ ಮಾಡಿ  

ಪೋಷಕಾಂಶದ ಕೊರತೆ 
ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾದಾಗ ಕೂದಲು ಹಾಗೂ ತಲೆಬುರುಡೆಯು ಒಣಗುತ್ತದೆ. ಪೋಷಕಾಂಶಗಳ ಕೊರತೆ ಅನುಭವಿಸುವವರು, ಕಡಿಮೆ ಪೋಷಕಾಂಶವುಳ್ಳ ಆಹಾರ ಸೇವಿಸುವವರು ಮತ್ತು ಕೆಲವೊಂದು ಔಷಧಿಗಳಿಂದಾಗಿ ಹೀಗೆ ಆಗಬಹುದು. ದೇಹದಲ್ಲಿನ ಹಾರ್ಮೋನು ಬದಲಾವಣೆಯಿಂದ ಕೂದಲು ಒಣಗಬಹುದು. 


ಆಲ್ಕೋಹಾಲ್ 
ಆಲ್ಕೋಹಾಲ್ ಸೇವಿಸುವುದರಿಂದ ನಿಮ್ಮ ದೇಹದ ಮೇಲೆ ಮಾತ್ರವಲ್ಲದೆ ತಲೆಬುರುಡೆ ಹಾಗೂ ಕೂದಲಿನ ಮೇಲೆ ಪರಿಣಾಮ ಬೀರಬಹುದು. ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವೊಂದು ಉತ್ಪನ್ನಗಳಲ್ಲಿಯೂ ಅತಿಯಾಗಿ ಆಲ್ಕೋಹಾಲ್ ಅನ್ನು ಬಳಸಿರುತ್ತಾರೆ. ಇದರಿಂದ ಕೂದಲು ಹಾಗೂ ತಲೆಬುರುಡೆ ಒಣಗುವುದು. ಮಾರುಕಟ್ಟೆಯಲ್ಲಿ ಸಿಗುವಂತಹ ಕೂದಲಿನ ಆರೈಕೆಯ ಉತ್ಪನ್ನಗಳಲ್ಲಿ ಆಲ್ಕೋಹಾಲ್ ಮಾತ್ರವಲ್ಲದೆ ಇತರ ರಾಸಾಯನಿಕಗಳು ಇರುವುದು. ಇದು ಕೂದಲು ಹಾಗೂ ತಲೆಬುರುಡೆಯನ್ನು ಒಣಗಿಸುವುದು.


ಚುಮು ಚುಮು ಚಳಿಗೆ, ಸೌಂದರ್ಯದ ಆರೈಕೆ ಹೀಗಿರಲಿ.....

ಕಲೆಯಿಲ್ಲದ ಮತ್ತು ಕಾಂತಿಯುಕ್ತ ತ್ವಚೆ ಎಲ್ಲರ ಕನಸು. ಆದರೆ ನಿಸರ್ಗ ಎಲ್ಲರಿಗೂ ಈ ಸೌಂದರ್ಯವನ್ನು ನೀಡಿರುವುದಿಲ್ಲ. ಅದರಲ್ಲೂ ಹೆಚ್ಚಾಗಿ ಹರಿಹರೆಯದಲ್ಲಿ ಮೊಡವೆಗಳ ಕಾಟದಿಂದ ಉಂಟಾದ ಕಲೆಗಳು ಕೊಂಚವಾದರೂ ಕಾಳಜಿಯುಂಟುಮಾಡುತ್ತವೆ.

ಬದಲಾಗುತ್ತಿರುವ ಹವಾಮಾನ ನಿಮ್ಮ ತ್ವಚೆಗೆ ಶಾಪವಾಗಿ ಪರಿಣಮಿಸುತ್ತದೆ. ಇದಂತೂ ಚಳಿಗಾಲದ ಸಮಯವಾಗಿದೆ. ಹೆಚ್ಚಿನ ಧೂಳು ಬೇಗನೇ ವಾತವಾರಣದಲ್ಲಿ ಸೇರಿಕೊಂಡು ನಿಮ್ಮ ತ್ವಚೆಗೆ ಹಾನಿಯುಂಟುಮಾಡುತ್ತದೆ. ಈ ಸಮಯದಲ್ಲಿ ನಿಮ್ಮ ತ್ವಚೆ ಹೆಚ್ಚು ಶುಷ್ಕವಾಗಿರುವುದರಿಂದ ಹವಾಮಾನದ ವೈಪರೀತ್ಯಗಳಿಗೆ ಬೇಗನೇ ಒಳಗಾಗುತ್ತದೆ.  ಚಳಿಗಾಲದ ತಣ್ಣನೆಯ ಹವೆಗೆ, ಮರುಗದಿರಲಿ ಸೌಂದರ್ಯ

ಮುಖದಲ್ಲಿ ಮೊಡವೆ, ಉರಿತ, ಕಲೆಗಳು, ತ್ವಚೆಯಲ್ಲಿ ಗಾಯದ ಗುರುತುಗಳು ಉಂಟಾಗುವುದು ಸಾಮಾನ್ಯವಾಗಿದೆ. ಸೂರ್ಯನ ಯುವಿ ಕಿರಣಗಳೂ ಕೂಡ ತ್ವಚೆಯ ಮೇಲೆ ಕೆಟ್ಟ ಪ್ರಭಾವವನ್ನುಂಟು ಮಾಡುತ್ತದೆ. ಹಾಗಿದ್ದರೆ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬುದು ನಿಮ್ಮ ಯೋಚನೆಯಾಗಿದ್ದರೆ ಇಲ್ಲಿದೆ ತ್ವಚೆಯ ಆರೈಕೆಗೆ ಕೆಲವೊಂದು ಸಲಹೆಗಳು....  



ಆರೋಗ್ಯಕರ ಆಹಾರ ಪದ್ಧತಿ
ಕಾರ್ಬೋನೇಟೆಡ್ ಆಹಾರವನ್ನು ಸೇವಿಸದಿರಿ ಇದರಲ್ಲಿ ಹೆಚ್ಚು ಸಕ್ಕರೆ ಇದ್ದು, ಹೆಚ್ಚು ಪ್ರಮಾಣದ ಸೋಡಿಯಮ್ ಇರುತ್ತದೆ. ನಿಮ್ಮ ತ್ವಚೆಯ ಹೊಳೆಯುವಿಕೆಗೆ ಇದು ಹಾನಿಕರವಾಗಿರುತ್ತದೆ. ಆದಷ್ಟು ಹಣ್ಣುಗಳು, ತರಕಾರಿಗಳು, ಮೀನು, ಡೈರಿ ಉತ್ಪನ್ನಗಳು, ಸಂಪೂರ್ಣ ಧಾನ್ಯಗಳು ಮೊದಲಾದವನ್ನು ಸೇವಿಸಿ. ಒಮೇಗಾ - 3 ಫ್ಯಾಟಿ ಆಸಿಡ್ ಉಳ್ಳ ಆಹಾರ ಸೇವಿಸಿ ವಿಟಮಿನ್ ಮತ್ತು ಮಿನರಲ್‌ಗಳು ಇದರಲ್ಲಿ ಹೆಚ್ಚು ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಿ.



ಆರಾಮದಾಯಕ ನಿದ್ದೆ

ನಿಮ್ಮ ಸೌಂದರ್ಯಕ್ಕೆ ನಿಮ್ಮ ನಿದ್ದೆ ಕೂಡ ಉತ್ತಮವಾಗಿದೆ. ಹೊಳೆಯುವ ಕಾಂತಿಯುಕ್ತ ತ್ವಚೆಗಾಗಿ ನೀವು 6-7 ಗಂಟೆಗಳ ಕಾಲ ನಿದ್ದೆ ಮಾಡಿ. ಇದರಿಂದ ಕಪ್ಪು ವರ್ತುಲಗಳು ಮತ್ತು ನೆರಿಗೆಗಳನ್ನು ನಿವಾರಿಸುತ್ತದೆ. ಹೀಗೆ ಮಾಡಿಲ್ಲ ಎಂದಾದಲ್ಲಿ ನಿಮ್ಮ ಕೆಲಸದ ನಡುವೆ 20 ನಿಮಿಷಗಳ ಪವರ್ ನ್ಯಾಪ್ ಅನ್ನು ಮಧ್ಯಾಹ್ನದಲ್ಲಿ ಮಾಡಿ.



ಹೆಚ್ಚು ಹೆಚ್ಚು ನೀರು ಕುಡಿಯಿರಿ

ಹೊಳೆಯುವ ತ್ವಚೆಯನ್ನು ಹೊಂದಿರುವವರು ಹೆಚ್ಚು ಹೆಚ್ಚು ನೀರು ಸೇವಿಸುವ ಸಲಹೆಯನ್ನು ನೀಡುತ್ತಾರೆ. ನೀರು ನಿಮ್ಮ ದೇಹದಿಂದ ವಿಷವನ್ನು ಹೊರಹಾಕುತ್ತದೆ ಮತ್ತು ದೇಹ ವ್ಯವಸ್ಥೆಯನ್ನು ಸುಲಲಿತವಾಗಿರಿಸುತ್ತದೆ. ನಿಯಮಿತವಾಗಿ 6-7 ಲೋಟ ನೀರು ಕುಡಿಯಬೇಕು. ಇದರ ನಡುವೆ ಗ್ರೀನ್ ಟಿ, ಹಣ್ಣಿನ ಸ್ಮೂತಿ ಮೊದಲಾದವುಗಳನ್ನು ಸೇವಿಸಿ.



ಸನ್ ಸ್ಕ್ರೀನ್ ಲೋಶನ್ ಬಳಸಿ

ನಿಮ್ಮ ತ್ವಚೆಯನ್ನು ಹೊರಗಿನ ಕಲುಷಿತ ವಾತಾವರಣದಿಂದ ಕಾಪಾಡಿಕೊಳ್ಳಲು ಸನ್ ಸ್ಕ್ರೀನ್ ಲೋಶನ್ ಬಳಸಿ. ಹೆಚ್ಚಿನ ಸೆಲೆಬ್ರಿಟಿಗಳು ಹೊರಗಡೆ ಓಡಾಡುವಾಗ ಸನ್ ಸ್ಕ್ರೀನ್ ಲೋಶನ್ ಬಳಸಲು ಸಲಹೆ ನೀಡುತ್ತಾರೆ. ಎಸ್‌ಪಿಎಫ್ 20 ಅಥವಾ ಇನ್ನಷ್ಟು ಅಂಶಗಳೊಂದಿಗಿರುವ ಸನ್ ಸ್ಕ್ರೀನ್ ಅನ್ನು ಬಳಸಿ ಇದು ಯುವಿ ಕಿರಣಗಳಿಂದ ನಿಮ್ಮನ್ನು ಸುರಕ್ಷಿಸುತ್ತದೆ.



ತಣ್ಣೀರಿನಿಂದ ಮುಖ ತೊಳೆಯಿರಿ

ನಿಮ್ಮ ಹೊಳೆಯುವ ತ್ವಚೆಗಾಗಿ ಹೈಜೀನ್ ನಿರ್ವಹಣೆ ಅತ್ಯಗತ್ಯವಾಗಿದೆ. ದಿನದಲ್ಲಿ ಎರಡು ಬಾರಿ ಮುಖವನ್ನು ತೊಳೆದುಕೊಳ್ಳಿ ಮತ್ತು ಮಾಯಿಶ್ಚರೈಸ್ ಮಾಡಿ. ಆದರೆ ಹೆಚ್ಚುವರಿಯಾಗಿ ಮುಖವನ್ನು ತೊಳೆಯುವುದೂ ಕೂಡ ಮುಖಕ್ಕೆ ಹಾನಿಯನ್ನುಂಟು ಮಾಡುತ್ತದೆ. ಏಕೆಂದರೆ ನೈಸರ್ಗಿಕ ಎಣ್ಣೆ ಮುಖದಿಂದ ಹೊರಹೋಗುವ ಸಾಧ್ಯತೆ ಇರುತ್ತದೆ. ಕ್ಲೆನ್ಸಿಂಗ್‌ನ ನಂತರ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಪೋರ್ಸ್‌ಗಳನ್ನು ಮುಚ್ಚಿ ಒಳನುಸುಳುವಿಕೆಯಿಂದ ರಕ್ಷಿಸುತ್ತದೆ.



ತಣ್ಣೀರಿನಿಂದ ಮುಖ ತೊಳೆಯಿರಿ
ನಿಮ್ಮ ಹೊಳೆಯುವ ತ್ವಚೆಗಾಗಿ ಹೈಜೀನ್ ನಿರ್ವಹಣೆ ಅತ್ಯಗತ್ಯವಾಗಿದೆ. ದಿನದಲ್ಲಿ ಎರಡು ಬಾರಿ ಮುಖವನ್ನು ತೊಳೆದುಕೊಳ್ಳಿ ಮತ್ತು ಮಾಯಿಶ್ಚರೈಸ್ ಮಾಡಿ. ಆದರೆ ಹೆಚ್ಚುವರಿಯಾಗಿ ಮುಖವನ್ನು ತೊಳೆಯುವುದೂ ಕೂಡ ಮುಖಕ್ಕೆ ಹಾನಿಯನ್ನುಂಟು ಮಾಡುತ್ತದೆ. ಏಕೆಂದರೆ ನೈಸರ್ಗಿಕ ಎಣ್ಣೆ ಮುಖದಿಂದ ಹೊರಹೋಗುವ ಸಾಧ್ಯತೆ ಇರುತ್ತದೆ. ಕ್ಲೆನ್ಸಿಂಗ್‌ನ ನಂತಎಕ್ಸ್‌ಫೋಲಿಯೇಶನ್ ಅಗತ್ಯ
ನಿಮ್ಮ ತ್ವಚೆಗೆ ಹಾನಿಯನ್ನುಂಟುಮಾಡುವುದು ಒಣ ತ್ವಚೆಯ ಕೋಶವಾಗಿರುತ್ತದೆ ಇದು ಮುಖವನ್ನು ಕಳೆಗುಂದುವಂತೆ ಮಾಡುತ್ತದೆ. ವಾರದಲ್ಲಿ ಮೂರು ಬಾರಿಯಾದರೂ ಮುಖವನ್ನು ಎಕ್ಸ್‌ಫೋಲಿಯೇಟ್ ಮಾಡಿ. ನೀವು ಮನೆಯಲ್ಲಿ ದೊರೆಯುವ ವಸ್ತುಗಳಿಂದ ಎಕ್ಸ್‌ಫೋಲಿಯೇಟ್ ಮಾಡಬೇಕು ಎಂದಾದಲ್ಲಿ, ಲಿಂಬೆರಸ ಮತ್ತು ಸಕ್ಕರೆಯನ್ನು ಬಳಸಿ. ಇದು ಮೃತ ತ್ವಚೆಯನ್ನು ನಿವಾರಿಸುವುದು ಮಾತ್ರವಲ್ಲದೆ ನಿಮ್ಮ ತ್ವಚೆಗೆ ರೇಡಿಯೇಶನ್ ಅನ್ನು ಒದಗಿಸುತ್ತದೆ. ತ್ವಚೆಯ ಕಲೆಯನ್ನು ಹೋಗಲಾಡಿಸುತ್ತದೆ.

 ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಪೋರ್ಸ್‌ಗಳನ್ನು ಮುಚ್ಚಿ ಒಳನುಸುಳುವಿಕೆಯಿಂದ ರಕ್ಷಿಸುತ್ತದೆ.



ಒತ್ತಡವನ್ನು ದೂರಮಾಡಿ

ನೀವು ಹೆಚ್ಚು ಒತ್ತಡಕ್ಕೆ ಒಳಗಾದಂತೆ ಇದು ತ್ವಚೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದೆ. ಒತ್ತಡದ ಹಾರ್ಮೋನ್ ಆದ ಕೋರ್ಟಿಸಲ್, ಹೆಚ್ಚು ಉಲ್ಬಣವಾಗುತ್ತದೆ. ಇದು ಕಾಲಜನ್ ಮತ್ತು ಎಲಾಸ್ಟಿನ್ ಅನ್ನು ಒಡೆಯುತ್ತದೆ ಹಾಗೂ ಇದರಿಂದ ತ್ವಚೆಯಲ್ಲಿ ಕಲೆ, ವರ್ತುಲಗಳು ಮತ್ತು ನೀರಸತನ ಎದ್ದುಕಾಣುತ್ತದೆ. ಆದ್ದರಿಂದ ನಿರಾಳವಾಗಿ, ಯೋಗವನ್ನು ಅಭ್ಯಸಿಸಿ ಮತ್ತು ಒತ್ತಡವನ್ನು ದೂರಮಾಡಿ.

ಮೆಂತೆ ಕಾಳಿನ ಕಾರುಬಾರಿಗೆ ಭೇಷ್ ಎನ್ನಲೇಬೇಕು!


ಅಡುಗೆಮನೆ ಎಂದಾಕ್ಷಣ ಕೆಲವೊಂದು ಸಾಂಬಾರ ವಸ್ತುಗಳಲ್ಲಿ ಕೆಲವು ಸದಾ ಇರಲೇ ಬೇಕು. ಇವು ಖಾಲಿಯಾಗುವ ಮುನ್ನವೇ ಅಂಗಡಿಯಿಂದ ಖರೀದಿಸಿ ತಂದು ಮರುತುಂಬಿಕೊಳ್ಳದಿದ್ದರೆ ಗೃಹಿಣಿಯರಿಗೆ ಸಮಾಧಾನವೇ ಇರುವುದಿಲ್ಲ. ಸಾಸಿವೆ, ಅರಿಶಿನ ಪುಡಿ, ಮೆಣಸಿನ ಪುಡಿ, ಮೆಂತೆ ಇವೆಲ್ಲಾ ಅಡುಗೆಮನೆಯಲ್ಲಿ ಸದಾ ಇರಲೇಬೇಕಾದ ಸಾಮಾಗ್ರಿಗಳಾಗಿವೆ.... ಅಡುಗೆಮನೆಯ ಮೆಂತೆ- ಕೂದಲಿನ ಸರ್ವ ರೋಗಕ್ಕೂ ರಾಮಬಾಣ

ಅದರಲ್ಲೂ ಮೆಂತೆ ಎಂದರೆ ಸಾಂಬಾರ ಪದಾರ್ಥಗಳಲ್ಲಿ ತನ್ನದೇ ಆದ ಪ್ರಾಮುಖ್ಯತೆ ಪಡೆದುಕೊಂಡಿರುವ ಮೆಂತೆ ಮತ್ತು ಮೆಂತೆ ಸೊಪ್ಪನ್ನು ವಿವಿಧ ರೀತಿಯ ಔಷಧಿಗಳಲ್ಲಿ ಬಳಸುತ್ತಾರೆ. ಆಯುರ್ವೇದದಲ್ಲಿಯೂ ಮೆಂತೆಗೆ ವಿಶೇಷ ಸ್ಥಾನವನ್ನು ನೀಡಲಾಗುತ್ತದೆ.ಆಯುರ್ವೇದದಲ್ಲಿಯೂ ಮೆಂತೆಗೆ ವಿಶೇಷ ಸ್ಥಾನವನ್ನು ನೀಡಲಾಗುತ್ತದೆ. ಇಂತಹ ಗುಣಗಳುಳ್ಳ ಮೆಂತೆಯನ್ನು, ಕೂದಲಿನ ಹಾಗೂ ಮುಖದ ಸೌಂದರ್ಯಕ್ಕೆ ಹೇಗೆ ಬಳಸಲಾಗುತ್ತದೆ ಎಂಬುದನ್ನು ನೋಡೋಣ ಬನ್ನಿ ..


ಮೆಂತೆ ಕಾಳಿನಿಂದ ಮಾಡಿದ ಶಾಂಪೂ! 
*ಮೊದಲು ಮೆ೦ತೆಕಾಳುಗಳನ್ನು ಏಳೆ೦ಟು ಗಂಟೆಗಳ ನೆನೆಸಿಡಿರಿ 
*ಕಾಳುಗಳು ನೆನೆದು ಮೆತ್ತಗಾಗುತ್ತಲೇ ಅವುಗಳನ್ನು ಮಿಕ್ಸರ್ ಗ್ರೈ೦ಡರ್ ನಲ್ಲಿ ತಿರುವಿ ಪೇಸ್ಟ್‌ನ ರೂಪಕ್ಕೆ ತ೦ದುಕೊಳ್ಳಿರಿ. 
*ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ನೇರವಾಗಿ ಹಚ್ಚಿಕೊಳ್ಳಿರಿ ಹಾಗೂ ಅದು ನೆತ್ತಿಯ ಮೇಲೆ ಹಾಗೆಯೇ ಒಣಗಲು ಅವಕಾಶ ನೀಡಿರಿ. ಬಳಿಕ ಮ೦ದವಾದ ಶ್ಯಾ೦ಪೂವಿನಿ೦ದ ಅದನ್ನು ತೊಳೆದುಕೊಳ್ಳುವುದರ ಮೂಲಕ ಕೋಮಲವಾದ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಿರಿ.



ಡ್ಯಾಂಡ್ರಫ್ ಸಿಕ್ಕುಸಿಕ್ಕಾದ ಕೂದಲಿಗೆ.... 
ಚೆನ್ನಾಗಿ ಜಜ್ಜಿದ ಮೆ೦ತೆಕಾಳುಗಳನ್ನು ಬೆಚ್ಚಗಿನ ತೈಲದಲ್ಲಿ ಬೆರೆಸಿದಲ್ಲಿ, ಈ ಮಿಶ್ರಣವು ನೆತ್ತಿಯ ತುರಿಕೆಯನ್ನೂ ಹಾಗೂ ತಲೆಹೊಟ್ಟಿನ ಅಥವಾ ಡ್ಯಾಂಡ್ರಫ್ ಕಿರಿಕಿರಿಯನ್ನೂ ಹೋಗಲಾಡಿಸುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕೆಲಸಮಾಡುತ್ತದೆ.


ಕೂದಲು ಉದುರುವುದನ್ನು ತಡೆಗಟ್ಟಲು 
ಮೆಂತೆ ಬೀಜವನ್ನು ಹಾಲಿನ ಜೊತೆ ರುಬ್ಬಿ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ತಡೆಯಬಹುದು.


ಚರ್ಮದ ಸೌಂದರ್ಯಕ್ಕೆ 
ಚರ್ಮದ ಸೌಂದರ್ಯಕ್ಕೆ ಕೊಂಚ ಮೆಂತೆಪುಡಿಯನ್ನು ಮೊಸರಿನೊಂದಿಗೆ ಮಿಶ್ರಣ ಮಾಡಿ ದಪ್ಪನಾದ ಲೇಪನ ತಯಾರಿಸಿ. ಬಿಸಿಲಿಗೆ ಒಡ್ಡಿದ್ದ ಭಾಗ, ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಪುನರಾವರ್ತಿಸಿ.



ತ್ವಚೆಯ ಅಂದಕ್ಕೆ 
ಕೊಂಚ ಮೆಂತೆಕಾಳುಗಳನ್ನು ನೆನೆಸಿ ಅರೆದು ಈ ಮಿಶ್ರಣಕ್ಕೆ ಹಸಿ ಹಾಲು ಹಾಕಿ ದಪ್ಪನೆಯ ಲೇಪನ ತಯಾರಿಸಿ. ಲೇಪನವನ್ನು ಹಚ್ಚಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ