Tuesday, 30 August 2016

ಹಲ್ಲುಗಳ ಹೊಳಪಿಗೆ ಸರಳ ಟ್ರಿಕ್ಸ್- ಅದೇ ಆಯುರ್ವೇದ ಚಿಕಿತ್ಸೆ!

ಕೂದಲು ಕಪ್ಪಗಿರಬೇಕೆಂದೂ, ಹಲ್ಲುಗಳು ಬೆಳ್ಳಗಿರಬೇಕೆಂದೂ ಎಲ್ಲರೂ ಬಯಸುತ್ತಾರೆ. ವಾಸ್ತವವಾಗಿ ಅಪ್ಪಟ ಬಿಳಿ ಹಲ್ಲುಗಳಿರುವುದು ಕೆಲವು ಜನರಿಗೆ ಮಾತ್ರ. ಉಳಿದವರ ಹಲ್ಲು ಸ್ವಾಭಾವಿಕವಾಗಿ ಕೊಂಚ ಹಳದಿ ಅಥವಾ ಹಾಲಿನ ಕೆನೆಯ ಬಣ್ಣಕ್ಕಿರುತ್ತದೆ.

ಉಳಿದಂತೆ ಧೂಮಪಾನ, ಅತಿ ಹೆಚ್ಚಿನ ಕಾಫಿ ಅಥವಾ ಟೀ ಸೇವನೆ, ತಂಬಾಕು ಗುಟ್ಕಾ ಜಗಿಯುವುದು, ಅಡಿಕೆ ಮೆಲ್ಲುವುದು ಮೊದಲಾದ ಅಭ್ಯಾಸಗಳಿಂದ ಹಲ್ಲುಗಳ ಬಣ್ಣ ಅತೀವ ಹಳದಿ ಬಣ್ಣಕ್ಕೆ ಅಥವಾ ಕಪ್ಪು ಬಣ್ಣಕ್ಕೂ ತಿರುಗಬಹುದು. ಇದನ್ನು ಪುನಃ ಬಿಳಿಬಣ್ಣಕ್ಕೆ ತಿರುಗಿಸಲು ಸಾಧ್ಯ ಎಂದು ಹಲವಾರು ಜಾಹೀರಾರುಗಳು ಎದೆತಟ್ಟಿ ಹೇಳಿಕೊಳ್ಳುತ್ತವೆ

ಆದರೆ ಇದಕ್ಕಾಗಿ ಬಳಸುವ ಪ್ರಬಲ ರಾಸಾಯನಿಕಗಳು ಹಲ್ಲನ್ನು ಸವೆಸಿ ಒಸಡುಗಳನ್ನೂ ಸಡಿಲಿಸಿ ಹಲ್ಲು ಮತ್ತು ಒಸಡುಗಳನ್ನು ತೀರಾ ದುರ್ಬಲವಾಗಿಸಿಬಿಡುತ್ತವೆ. ಕ್ರಮೇಣ ಕೊಂಚ ಗಟ್ಟಿಯಾದ ಆಹಾರ ತಿನ್ನುವಾಗ ಹಲ್ಲೇ ಕಳಚಿ ಬರಬಹುದು. 

ಇದರ ಬದಲಿಗೆ ನಿಸರ್ಗ ನೀಡಿರುವ ಸಾಮಾಗ್ರಿಗಳನ್ನು ಉಪಯೋಗಿಸಿ ಕೊಂಚ ನಿಧಾನವಾದರೂ ಸರಿ, ಯಾವುದೇ ಹಾನಿ ಅಥವಾ ಅಡ್ಡಪರಿಣಾಮವಿಲ್ಲದ ಆಯುರ್ವೇದ ಸೂಚಿಸುವ ವಿಧಾನಗಳನ್ನೇಕೆ ಅನುಸರಿಸಬಾರದು? ಬನ್ನಿ, ಹಲ್ಲುಗಳು ತಮ್ಮ ಸಹಜ ಬಣ್ಣವನ್ನು ಪುನಃ ಪಡೆದುಕೊಳ್ಳಲು ಆಯುರ್ವೇದದಲ್ಲಿ ಏನಿದೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:



ಆಲದ ಮರದ ಬೇರು

ಆಲದ ಮರದ ಗೆಲ್ಲುಗಳಿಂದ ಜೋತಾಡುವ ಬೇರುಗಳ ಚಿಕ್ಕ ತುಂಡೊಂದರಿಂದ ಹಲ್ಲನ್ನು ಉಜ್ಜಿಕೊಳ್ಳಲು ಆಯುರ್ವೇದ ಸಲಹೆ ಮಾಡುತ್ತದೆ.




ಆಲದ ಮರದ ಬೇರು

ಇದರಲ್ಲಿರುವ ರಸ ಕೊಂಚ ಖಾರವಾದ ರುಚಿ ಒಸಡುಗಳನ್ನು ಜುಮು ಜುಮು ಎನಿಸಿದರೂ ಒಸಡು ಮತ್ತು ಹಲ್ಲುಗಳ ಆರೋಗ್ಯಕ್ಕೆ ಮತ್ತು ಸ್ವಚ್ಛತೆ ಕಾಪಾಡಲು ಸಮರ್ಥವಾಗಿದೆ. ಕ್ರಮೇಣ ಹಲ್ಲಿನ ಬಣ್ಣ ಸಹಜವರ್ಣಕ್ಕೂ ತಿರುಗುತ್ತದೆ.



ತುಳಸಿ
ತುಳಸಿಯ ಅಪಾರ ಔಷಧೀಯ ಗುಣಗಳಲ್ಲಿ ಹಲ್ಲುಗಳ ಸ್ವಚ್ಛತೆಯೂ ಒಂದು. ತುಳಸಿ ಎಲೆಗಳನ್ನು ಒಣಗಿಸಿ ಮಾಡಿದ ಪುಡಿಯನ್ನು ಹಲ್ಲುಜ್ಜಲು ಪೇಸ್ಟ್ ಬದಲಿಗೆ ಬಳಸಬಹುದು.



ತುಳಸಿ
ಇದರಿಂದ ಬಾಯಿಯ ಒಳಭಾಗದಲ್ಲಿ ಸೋಂಕು ಆಗುವ ಸಾಧ್ಯತೆ ಕಡಿಮೆಯಾಗುವ ಜೊತೆಗೇ ಒಸಡುಗಳಲ್ಲಿ ಒಸರುವ ರಕ್ತವನ್ನು ನಿಲ್ಲಿಸಲೂ ಸಾಧ್ಯವಾಗುತ್ತದೆ. ಕ್ರಮೇಣ ಹಲ್ಲುಗಳು ಹೆಚ್ಚು ಹೊಳಪು ಮತ್ತು ತಮ್ಮ ಸಹಜವರ್ಣವನ್ನು ಪಡೆಯುತ್ತವೆ.


ಬೇವು
ಬೇವು ಸಹಾ ಅಪಾರ ಔಷಧೀಯ ಗುಣಗಳನ್ನು ಹೊಂದಿರುವ ಮೂಲಿಕೆಯಾಗಿದೆ. ಇದರ ಗೆಲ್ಲಿನ ತುದಿಭಾಗದ ಕಡ್ಡಿಗಳನ್ನು ಬ್ರಶ್ ರೂಪದಲ್ಲಿ ಬಳಸುವ ಮೂಲಕ ಹಲ್ಲುಗಳು ಅತಿ ಸ್ವಚ್ಛವಾಗುವ ಜೊತೆಗೇ ಹಲವು ಸೋಂಕುಗಳಿಂದ ರಕ್ಷಣೆಯನ್ನೂ ಪಡೆಯಬಹುದು.


ಬೇವು
ಆದರೆ ಇದರ ಕಹಿಯಾದ ರುಚಿಯಿಂದಾಗಿ ಹೆಚ್ಚಿನವರು ಒಲವು ತೋರದೇ ಇದ್ದರೂ ಭಾರತದ ಹಲವು ಕಡೆಗಳಲ್ಲಿ ಇಂದಿಗೂ ಸಾಂಪ್ರಾದಾಯಿಕವಾಗಿ ಬೇವಿನ ಕಡ್ಡಿಯಿಂದ ಹಲ್ಲುಜ್ಜುವ ಕ್ರಮವಿದೆ.ಇದರಲ್ಲಿರುವ ಬೇವಿನ ಎಣ್ಣೆಯಲ್ಲಿ ಪ್ರತಿಜೀವಕ ಗುಣವಿದ್ದು ಹಲ್ಲುಗಳಿಗೆ ತೂತು ಬೀಳುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.


ಬಬೂಲ್
ನೋಡಲಿಕ್ಕೆ ಹುಣಸೆ ಮರವನ್ನೇ ಹೋಲುವ ಬಬೂಲ್ ವೃಕ್ಷವೂ ಹಲ್ಲುಗಳ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದೇ ಹೆಸರಿನ ಟೂಥ್ ಪೇಸ್ಟ್ ಹಾಗೂ ಪೌಡರುಗಳು ಮಾರುಕಟ್ಟೆಯಲ್ಲಿವೆ. ಹಲ್ಲುಗಳ ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡಲು ಈ ಮರದ ಅಂಶ ಅತ್ಯಂತ ಸಮರ್ಥವಾಗಿದೆ.


ಬಬೂಲ್
ಈ ಮರದ ಚಿಕ್ಕ ಗೆಲ್ಲುಗಳ ತುಂಡುಗಳ ತುದಿಯ ಸಿಪ್ಪೆ ಸುಲಿದು ಒಳಗಿನ ನಾರುಗಳನ್ನು ಬಿಡಿಯಾಗಿಸಿ ಟೂಥ್ ಬ್ರಶ್ ನಂತೆ ಬಳಸುವ ಮೂಲಕ ಹಲ್ಲುಗಳು ಶುಭ್ರವಾಗುವುದು ಮಾತ್ರವಲ್ಲ, ಬಣ್ಣವವನ್ನೂ ಸಹಜವರ್ಣಕ್ಕೆ ಬದಲಿಸುತ್ತದೆ. ಇದರಲ್ಲಿರುವ ಟ್ಯಾನಿನ್ ಎಂಬ ರಾಸಾನಯನಿಕ ಹಲ್ಲುಗಳನ್ನು ದೃಢಗೊಳಿಸಲು ಮತ್ತು ಬಿಳಿದಾಗಿಸಲು ನೆರವಾಗುತ್ತದೆ.

ಸೌಂದರ್ಯ ಪ್ರಿಯ ಮಹಿಳೆಯರಿಗೆ ಸಿಂಪಲ್ ಮೇಕಪ್ ಟಿಪ್ಸ್

ವಿಶೇಷ ಸಂದರ್ಭಗಳಲ್ಲಿ ತಾವು ಚೆನ್ನಾಗಿ ಕಾಣಿಸಿಕೊಳ್ಳಬೇಕೆಂದೇ ಮಹಿಳೆಯರು ಹೆಚ್ಚಿನ ಕಾಳಜಿಯಿಂದ ಮೇಕಪ್ ಧರಿಸಿಕೊಂಡು ಹೋಗುತ್ತಾರೆ. ಆದರೆ ಸಮಯ ಕಳೆದಂತೆ ಬೆವರು, ಗಾಳಿಯಲ್ಲಿನ ಆರ್ದ್ರತೆ, ಬಿಸಿಲು, ಒಣಹವೆ ಇತ್ಯಾದಿಗಳ ಕಾರಣದಿಂದ ಮೇಕಪ್ ಸ್ವಾಭಾವಿಕವಾಗಿ ಕಳೆಗುಂದುತ್ತದೆ.

ಇದನ್ನು ಆಗಾಗ ಕೊಂಚವಾಗಿ ಸರಿಪಡಿಸುತ್ತಲೇ ಇರಬೇಕು. ವಿಶೇಷವಾಗಿ ತಡರಾತ್ರಿಯವರೆಗೆ ನಡೆಯುವ ಕೂಟಗಳು, ಸಮುದ್ರತೀರ ಅಥವಾ ಈಜುಕೊಳದ ಪಕ್ಕದ ಪಾರ್ಟಿ, ಹೆಚ್ಚು ಜನರು ಸೇರಿದ್ದು ಸೆಖೆ ಹೆಚ್ಚಿರುವ ಮದುವೆ ಮೊದಲಾದ ಸ್ಥಳಗಳಲ್ಲಿ ಮೇಕಪ್ ಅಂದಗೆಡುವ ಸಾಧ್ಯತೆ ಹೆಚ್ಚು.


ತೇವಾಂಶ ಹೆಚ್ಚಿರುವ ಸ್ಥಳಗಳಲ್ಲಿ ವಾಟರ್ ಪ್ರೂಫ್ ಅಥವಾ ತೇವಕ್ಕೆ ತೆಳುವಾಗದ ಮೇಕಪ್ ಧರಿಸಿದರೆ ಮುಜುಗರ ಉಂಟಾಗದು. ಆದರೆ ಉಳಿದವರಿಗೆ ಮೇಕಪ್ ಎಂಬುದುದು ಕೆಲವು ಕ್ಷಣಗಳ ಸಂಭ್ರಮವಾಗುತ್ತದೆ. ಹಾಗಾಗಬಾರದು ಎಂದರೆ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. 

ಕೆಲವು ಸುಲಭ ಕ್ರಮಗಳಿಂದ ನೀವು ಅತಿ ಕಾಳಜಿಯಿಂದ ಸಮಯವನ್ನು ವ್ಯಯಿಸಿ ಧರಿಸಿಕೊಂಡಿರುವ ಮೇಕಪ್ ಹೆಚ್ಚು ಹೊತ್ತು ನಿಮ್ಮ ಸೌಂದರ್ಯವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಇದಕ್ಕೆ ಹೆಚ್ಚು ಸಮಯವೇನೂ ಬೇಕಾಗಿಲ್ಲ, ಕೆಲವು ನಿಮಿಷಗಳೇ ಸಾಕು.


* ಮೇಕಪ್‌ನಲ್ಲಿ ಮೊದಲಾಗಿ ಹಾಳಾಗಲು ಪ್ರಾರಂಭವಾಗುವುದು ಎಂದರೆ ತುಟಿಗಳ ಬಣ್ಣ. ಪಾರ್ಟಿಯಲ್ಲಿದ್ದಾಗ ಸಾಮಾನ್ಯವಾಗಿ ಏನಾದರೂ ಕುಡಿಯಲು ಅಥವಾ ತಿನ್ನಲು ಇದ್ದೇ ಇರುತ್ತದೆ. ಈ ಸಂಬರ್ಭದಲ್ಲಿ ಕೊಂಚ ಲಿಪ್ ಸ್ಟಿಕ್ ನಷ್ಟವಾಗಿಯೇ ಇರುತ್ತದೆ. ಇದಕ್ಕಾಗಿ ಇಂದು ಬಳಸಿರುವ ಲಿಪ್ ಸ್ಟಿಕ್ ಅನ್ನು ನಿಮ್ಮ ಹ್ಯಾಂಡ್ ಬ್ಯಾಗ್‌ನಲ್ಲಿ ಹಾಕಿಕೊಂಡಿದ್ದರೆ ತಿಂದ/ಕುಡಿದ ತಕ್ಷಣ ಕೊಂಚ ಲಿಪ್ ಸ್ಟಿಕ್ ಹಚ್ಚಿಕೊಳ್ಳುವುದರಿಂದ ಏನೂ ಆಗದೇ ಇರುವಂತೆ ನೋಡಿಕೊಳ್ಳಬಹುದು.

* ನಿಮ್ಮ ಕಣ್ಣುಗಳಿಗೆ ಹಚ್ಚಿರುವ ಐ ಲೈನರ್ ನ ನಡುಭಾಗ ಹೆಚ್ಚು ಬಾಧೆಗೊಳಗಾಗದೇ ಇದ್ದರೂ ಅಂಚುಗಳು ಮಾತ್ರ ಸುಲಭವಾಗಿ ಘಾಸಿಗೊಳ್ಳುತ್ತವೆ. ಅದರಲ್ಲೂ ನಿಮ್ಮ ಪಾರ್ಟಿ ನಡೆಯುವ ಸ್ಥಳದಲ್ಲಿ ಅಕ್ಕಪಕ್ಕದವರು ಧೂಮಪಾನ ಮಾಡುತ್ತಿದ್ದರೆ ಧೂಮ ಕರಗಿರುವ ಗಾಳಿ ಅಂಚುಗಳನ್ನು ಕರಗಿಸುತ್ತದೆ



ಇದನ್ನು ಸರಿಪಡಿಸಲು ಕೆಲವು ಟಿಶ್ಯೂ ಪೇಪರುಗಳನ್ನು ಸದಾ ನಿಮ್ಮ ಚೀಲದಲ್ಲಿ ಇಟ್ಟಿರಿ. ಇದರಿಂದ ಕರಗಿರುವ ಅಂಚುಗಳನ್ನು ಒರೆಸಿಕೊಳ್ಳಲು ಸಾಧ್ಯವಾಗುತ್ತದೆ. ಕಾಜಲ್ ಅಥವಾ ಕೊಹ್ಲ್ ಬಳಸಿದ್ದರೆ ಇದು ಕರಗಿದಾಗ ಕಣ್ಣುಗಳ ಒಳಗೆ ಹೋಗಿಬಿಡುತ್ತದೆ. ಆದ್ದರಿಂದ ಇದನ್ನು ಸರಿಪಡಿಸಿಕೊಳ್ಳಲು ಕೊಂಚ ಟಚಪ್ ಮಾಡಿದರೆ ಸಾಕಾಗುತ್ತದೆ.

* ಮುಖದ ಮೇಕಪ್ ಒಂದು ವೇಳೆ ಘಾಸಿಗೊಂಡಿದ್ದರೆ ಇಡಿಯ ಮೇಕಪ್ ಅನ್ನು ಪ್ರಾರಂಭದಿಂದ ಮಾಡುವುದನ್ನು ಮಾತ್ರ ಯೋಚಿಸಬೇಡಿ. ಏಕೆಂದರೆ ಇದಕ್ಕಾಗಿ ತಳದಿಂದ ಎಲ್ಲವನ್ನೂ ನಿವಾರಿಸಿ ಮತ್ತೆ ಹೊಸದಾಗಿ ಪ್ರಾರಂಭಿಸಬೇಕಾಗುತ್ತದೆ. ಮನೆಯಲ್ಲಾದರೆ ಪರವಾಗಿಲ್ಲ, ನಿಮಗೆ ಅಗತ್ಯವಿದ್ದ ಎಲ್ಲವೂ ಕೈಗೆಟುಕುವಂತಿರುತ್ತವೆ.  

ಆದರೆ ಪಾರ್ಟಿಗೆ ಹೋದ ಸ್ಥಳದಲ್ಲಿ? ಅಗತ್ಯವಿದ್ದ ಕೆಲವು ಕೈಗೆ ಸಿಗದೇ ಇದ್ದರೆ ನಿಮ್ಮ ಮೇಕಪ್ ಪೂರ್ಣವಾಗದು. ಆದ್ದರಿಂದ ಇದನ್ನು ಕೊಂಚ ನಾಜೂಕಿನಿಂದ ಟಚಪ್ ನೀಡುವ ಮೂಲಕ ಘಾಸಿಗೊಂಡಿದ್ದ ಸ್ಥಳವನ್ನು ಸರಿಪಡಿಸಿ. ಅಂತಿಮ ಟಚ್ ನೀಡುವ ಬ್ರಶ್ ಮತ್ತು ಇತರ ಚಿಕ್ಕ ಉಪಕರಣಗಳನ್ನು ನಿಮ್ಮ ಕೈಚೀಲದಲ್ಲಿದ್ದರೆ ಸಾಕಾಗುತ್ತದೆ. ಒಟ್ಟಾರೆ ಇದಕ್ಕೆ ಮೂರರಿಂದ ಐದು ನಿಮಿಷ ಸಾಕಾಗುತ್ತದೆ.



* ಒಂದು ವೇಳೆ ನಿಮ್ಮ ಚರ್ಮ ಎಣ್ಣೆಚರ್ಮವಾಗಿದ್ದರೆ ಬೆವರಿನೊಂದಿಗೆ ಎಣ್ಣೆಯಪಸೆಯೂ ಒಸರಲು ಪ್ರಾರಂಭವಾಗುತ್ತದೆ. ಇದು ನಿಮ್ಮ ಮೇಕಪ್ ನೊಂದಿಗೆ ಮಿಶ್ರಣಗೊಂಡು ಹೆಚ್ಚು ಎಣ್ಣೆ ಪಸರಿದ ಸ್ಥಳದಲ್ಲಿ, ವಿಶೇಷವಾಗಿ ಟಿ-ಜ಼ೋನ್ ಅಂದರೆ ಮೂಗಿನ ಮೇಲ್ಭಾಗದಿಂದ ಹುಬ್ಬುಗಳ ಮೇಲ್ಭಾಗದ ಸ್ಥಳದಲ್ಲಿ ಹೆಚ್ಚು ಹೊಳಪು ಕಾಣುತ್ತದೆ. ಇದನ್ನು ಸರಿಪಡಿಸಲು ನಿಮ್ಮ ಕೈಚೀಲದಲ್ಲಿ ಕೆಲವು ಟಿಶ್ಯೂ ಪೇಪರ್ ಇಟ್ಟಿರಿ ಇದನ್ನು ಬಳಸಿ ಹೆಚ್ಚಿನ ಎಣ್ಣೆ ಪಸೆಯನ್ನು ಆಗಾಗ ಹೀರಿಕೊಳ್ಳುತ್ತಿರಿ ಮತ್ತು ಈ ಸ್ಥಳದಲ್ಲಿ ಕೊಂಚ ಕಾಂಪಾಕ್ಟ್ ಪೌಡರ್ ಬಳಸಿ ಸರಿಪಡಿಸಿಕೊಳ್ಳಿ.




* ಒಂದು ವೇಳೆ ನಿಮ್ಮ ಚರ್ಮ ತೀರಾ ಒಣಗಿದ್ದರೆ ಬೆವರೇ ಇಲ್ಲದೇ ಮೇಕಪ್ ಸಹಾ ಒಣಗುತ್ತದೆ. ಒಣಗಿದ ಪದರ ನಿಧಾನವಾಗಿ ಬಿರುಕು ಬಿಡಲು ಆರಂಭಿಸುತ್ತದೆ. ವಿಶೇಷವಾಗಿ ತುಟಿಗಳ ಬಣ್ಣ ಮೊದಲು ಮತ್ತು ಹೆಚ್ಚು ಬಿರಿಕುಬಿಡಲು ಪ್ರಾರಂಭಿಸುತ್ತದೆ



ಇದನ್ನುಸರಿಪಡಿಸಲು ಲಿಪ್ ಬಾಮ್ ಒಂದನ್ನು ಸದಾ ಕೈಚೀಲದಲ್ಲಿಟ್ಟು ಆಗಾಗ ತುಟಿಗಳಿಗೆ ಸವರುತ್ತಿರಬೇಕು. ಕಣ್ಣಿನ ಮೇಕಪ್ ಸಹಾ ಪದರವೇಳಲು ಪ್ರಾರಂಭಿಸಬಹುದು. ಇದನ್ನು ಸರಿಪಡಿಸಲು ಕೊಂಚ ಲೋಶನ್ ಅನ್ನು ಹತ್ತಿಯ ಪ್ಯಾಡ್ ನಲ್ಲಿ ಮುಳುಗಿಸಿ ಕಣ್ಣುಗಳಿಗೆ ಒತ್ತಿಕೊಂಡು ಸರಿಪಡಿಸಿ. ಸೌಂದರ್ಯ ಪ್ರಜ್ಞೆ ಇರುವ ಮಹಿಳೆಯರಿಗೆ ಈ ಸರಳ ಸಲಹೆಗಳು ಸದಾ ಉಪಯುಕ್ತವಾಗಿವೆ.

Just Click For More Tips

ಒಡೆದ ಹಿಮ್ಮಡಿ ಸಮಸ್ಯೆಗೆ, ಫಟಾಫಟ್ ಟಿಪ್ಸ್-ಒಮ್ಮೆ ಪ್ರಯತ್ನಿಸಿ

ಒಡೆದ ಪಾದಗಳನ್ನು ನಾವು ಸಾಮಾನ್ಯವಾಗಿ ಬಿರುಕುಗಳೆಂದು ಕರೆಯುತ್ತವೆ. ಇದು ಕೇವಲ ಸಮಸ್ಯೆ ಉಂಟುಮಾಡುವುದು ಮಾತ್ರವಲ್ಲದೆ ತುಂಬಾ ನೋವು ಹಾಗೂ ಕೆಲವೊಂದು ಸಲ ಭಾರೀ ಮುಜುಗರನ್ನುಂಟು ಮಾಡುತ್ತದೆ. ಪಾದಗಳಲ್ಲಿ ಬಿರುಕು ಕಾಣಿಸುವುದು ಪಾದಗಳ ಆರೈಕೆ ಮತ್ತು ನಿರ್ಮಲವಿಲ್ಲದ ಕಾರಣವೆಂದು ಹೆಚ್ಚಿನವರು ಪರಿಗಣಿಸಿದ್ದಾರೆ.



ಆದರೆ ಕೆಲವರಿಗೆ ಪಾದಗಳು ಒಡೆಯುವ ಸಮಸ್ಯೆ ಯಾವಾಗಲೂ ಕಾಡುತ್ತಲೇ ಇರುತ್ತದೆ. ಇದರಿಂದ ಅವರಿಗೆ ತಮಗೆ ಬೇಕಾದಂತಹ ಚಪ್ಪಲಿಯನ್ನು ಧರಿಸಲು ಸಾಧ್ಯವಾಗುವುದಿಲ್ಲ

ಒಡೆದ ಪಾದಗಳನ್ನು ಯಾವಾಗಲೂ ಇತರರಿಂದ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತೇವೆ. ಒಡೆದ ಪಾದಗಳ ಚಿಕಿತ್ಸೆಗೆ ಹಲವಾರು ರೀತಿಯ ಕ್ರೀಮ್‌ಗಳು ಲಭ್ಯವಿದೆ. ಆದರೆ ನೈಸರ್ಗಿಕ ರೀತಿಯಲ್ಲಿ ಒಡೆದ ಪಾದಗಳಿಗೆ ಚಿಕಿತ್ಸೆ ನೀಡಬೇಕಾದರೆ ಏನು ಮಾಡಬೇಕೆಂದು ನೀವು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಯಾಕೆಂದರೆ ಒಡೆದ ಪಾದಗಳು ಕಾಲಿನ ಸೌಂದರ್ಯವನ್ನು ಕೆಡಿಸುವುದು. ಒಡೆದ ಪಾದಗಳಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದೆ ಇದ್ದರೆ ಹಲವಾರು ರೀತಿಯ ಸೋಂಕುಗಳು ಕಾಡಬಹುದು. ಒಡೆದ ಪಾದಗಳಿಗೆ ಚಿಕಿತ್ಸೆ ನೀಡುವಂತಹ ನೈಸರ್ಗಿಕ ಹಾಗೂ ಸರಳ ವಿಧಾನ ಬೇಕೆಂದರೆ ಮುಂದೆ ಓದಿಕೊಳ್ಳಿ


ಮನೆಯಲ್ಲೂ ಚಪ್ಪಲಿ ಬಳಸಿ
ಮನೆಯ ಹೊರಗೆ ಅಥವಾ ಒಳಗಡೆ, ವ್ಯಾಯಾಮ ಮಾಡುವಾಗ ನೀವು ಚಪ್ಪಲಿ ಹಾಕದೆ ಇದ್ದರೆ ಇದರಿಂದ ಒಡೆದ ಪಾದ, ಫಂಗಲ್ ರೋಗಗಳು ಇತ್ಯಾದಿಗಳಿಗೆ ಕಾರಣವಾಗಬಹುದು. ಇದರಿಂದ ಎಲ್ಲಾ ಸಮಯದಲ್ಲಿ ಚಪ್ಪಲಿ ಹಾಕುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದರಲ್ಲೂ ಹೊರಗಡೆ ಹೋಗುವಾಗ ಸಾಕ್ಸ್ ಬಳಸಿ.


ಸರಿಯಾದ ಚಪ್ಪಲಿ 
ನಿಮ್ಮ ಪಾದದ ಗಾತ್ರದ ಚಪ್ಪಲಿಯನ್ನೇ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಹೆಚ್ಚಿನವರು ತಮ್ಮ ಪಾದದ ಗಾತ್ರಕ್ಕಿಂತ ದೊಡ್ಡದಾದ ಅಥವಾ ಸಣ್ಣದಾಗಿರುವ ಚಪ್ಪಲಿ ಧರಿಸುತ್ತಾರೆ. ಸರಿಯಾದ ಚಪ್ಪಲಿ ಹಾಕದೆ ಇದ್ದರೆ ಅದರಿಂದ ಪಾದಗಳಿಗೆ ನೋವುಂಟಾಗಿ ಗ್ರಂಥಿಗಳಿಗೆ ಹಾನಿಯಾಗಬಹುದು


ಕಾಲಿನ ವ್ಯಾಯಮ ಮಾಡಿ

ವ್ಯಾಯಮವು ಕಾಲಿನಲ್ಲಿ ರಕ್ತಸಂಚಲನವನ್ನು ಸರಿಯಾಗಿರುವಂತೆ ಮಾಡುವುದರಿಂದ ಕೆಲವು ರೀತಿಯ ಕಾಲಿನ ವ್ಯಾಯಾಮಗಳು ಇದೆ. ವ್ಯಾಯಾಮವು ರಕ್ತಸಂಚಲನವನ್ನು ಹೆಚ್ಚಿಸಿ ಉರಿಯೂತ ಕಡಿಮೆ ಮಾಡಿ ಪಾದಗಳು ಒಡೆಯುವುದನ್ನು ಕಡಿಮೆ ಮಾಡುತ್ತದೆ. ಪಾದಗಳನ್ನು ಸುತ್ತಲು ತಿರುಗಿಸುತ್ತಾ ಇರುವುದು ತುಂಬಾ ಸಹಕಾರಿಯಾಗಲಿದೆ.

ಪಾದಗಳ ಮಸಾಜ್
ಪಾದಗಳು ಒಡೆಯುವುದಕ್ಕೆ ನೈಸರ್ಗಿಕವಾದ ಚಿಕಿತ್ಸೆ ಬೇಕಿದ್ದರೆ ಎಣ್ಣೆಯಿಂದ ಪಾದಗಳಿಗೆ ಮಸಾಜ್ ಮಾಡಿಕೊಳ್ಳಬೇಕು. ದಿನಾಲೂ ಪಾದಗಳಿಗೆ ಮಸಾಜ್ ಮಾಡುವುದರಿಂದ ಆ ಪ್ರದೇಶಕ್ಕೆ ರಕ್ತಸಂಚಲನವು ಹೆಚ್ಚಾಗುತ್ತದೆ ಮತ್ತು ಚರ್ಮವು ಮೃದುವಾಗಿ ಪಾದಗಳು ಒಡೆಯುವುದು ಕಡಿಮೆಯಾಗುವುದು.






ಬ್ಯೂಟಿ ಟಿಪ್ಸ್: ಮುಖದ ಸೌಂದರ್ಯಕ್ಕೆ ಹಾಲಿನ ಫೇಸ್ ಪ್ಯಾಕ್

ಹಾಲು ಒಂದು ಉತ್ತಮ ಆಹಾರದ ಜೊತೆಗೇ ಉತ್ತಮ ಸೌಂದರ್ಯವರ್ಧಕವೂ ಆಗಿದೆ. ಹಾಲಿನಲ್ಲಿರುವ ಪ್ರೋಟೀನುಗಳು, ಕ್ಯಾಲ್ಸಿಯಂ, ಲ್ಯಾಕ್ಟೋಸ್, ಕೊಬ್ಬು, ವಿಟಮಿನ್A, B12, D ಮತ್ತು ಸತು ದೇಹಕ್ಕೆ ಹಲವು ರೀತಿಯ ಪೋಷಣೆ ನೀಡುತ್ತವೆ.

ವಿಶೇಷವಾಗಿ ಚರ್ಮಕ್ಕೆ ಒಳಗಿನಿಂದ ಪೋಷಣೆ ನೀಡುವ ಜೊತೆಗೇ ಹೊರಗಿನಿಂದಲೂ ನೆರವಾಗುತ್ತದೆ. ಅದರಲ್ಲೂ ಚರ್ಮಕ್ಕೆ ಆರ್ದ್ರತೆ ನೀಡುವ ಮೂಲಕ ಸೆಳೆತವನ್ನು ಹೆಚ್ಚಿಸುತ್ತದೆ ಹಾಗೂ ಚರ್ಮ ಸೋಂಕಿಗೆ ಒಳಗಾಗಿ ಕೆಂಪಗಾಗುವುದರಿಂದ ರಕ್ಷಿಸುತ್ತದೆ. ಇನ್ನು ಹಸಿ ಹಾಲನ್ನು ಚರ್ಮದ ಮೇಲೆ ಹಚ್ಚಿಕೊಳ್ಳುವ ಮೂಲಕ ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದು, ಮುಂದೆ ಓದಿ..


ಹೊಸ ಚರ್ಮ ಬೆಳೆಯಲು
ಚರ್ಮದ ಹೊರಪದರದ ಜೀವಕೋಶಗಳು ಸದಾ ಸತ್ತು ಹೊಸದಾಗಿ ಹುಟ್ಟುತ್ತಲೇ ಇರುತ್ತವೆ. ಹೊಸ ಜೀವಕೋಶಗಳು ಹೆಚ್ಚು ಆರೋಗ್ಯಕರವಾಗಿದ್ದರೆ ಚರ್ಮದ ಕಾಂತಿ ಹೆಚ್ಚುತ್ತದೆ. ಇದಕ್ಕಾಗಿ ಎರಡು ದೊಡ್ಡಚಮಚ ಹಾಲು, ಒಂದು ದೊಡ್ಡಚಮಚ ಅರಿಶಿನ ಪುಡಿ ಮತ್ತು ಒಂದು ದೊಡ್ಡಚಮಚ ಲಿಂಬೆರಸ ಸೇರಿಸಿ ಲೇಪನ ತಯಾರಿಸಿ.

ಈ ಲೇಪನವನ್ನು ಮುಖ, ಕುತ್ತಿಗೆ ಮತ್ತು ಕೈಗಳ ಮೇಲೆ ತೆಳುವಾಗಿ ಹೆಚ್ಚಿ ಹದಿನೈದು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನೊಂದಿಗೆ ತೊಳೆದುಕೊಳ್ಳಿ. ಇದರಿಂದ ಸತ್ತ ಜೀವಕೋಶಗಳು ಸಡಿಲವಾಗಿ ನಿವಾರಣೆ ಸುಲಭವಾಗುತ್ತದೆ ಹಾಗೂ ಹೊಸ ಜೀವಕೋಶಗಳು ಆರೋಗ್ಯಕರವಾಗಿರಲು ನೆರವಾಗುತ್ತದೆ.

ತಕ್ಷಣದ ಕಾಂತಿ ಪಡೆಯಲು
ಕೆಲವು ಕಾರ್ಯಕ್ರಮಕ್ಕೆ ತಕ್ಷಣ ಸಿದ್ದರಾಗಲು ಹಾಲು ನೆರವಾಗುತ್ತದೆ. ಇದಕ್ಕಾಗಿ ಕೆಲವು ಬಾದಾಮಿ ಒಣಫಲಗಳನ್ನು ಹಾಲಿನೊಂದಿಗೆ ತೇದಿ. ಇದಕ್ಕೆ ಕೆಲವು ಹನಿ ಲವಂಗದ ಎಣ್ಣೆ ಬೆರೆಸಿ. ಇದಕ್ಕೆ ಕೊಂಚ ಒಣಗಿದ ಕಿತ್ತಳೆಯ ಸಿಪ್ಪೆಯ ಪುಡಿಯನ್ನು ಬೆರೆಸಿ. ಈ ಮಿಶ್ರಣವನ್ನು ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಹದಿನೈದು ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ



ಕೆಲವು ಕಾರ್ಯಕ್ರಮಕ್ಕೆ ತಕ್ಷಣ ಸಿದ್ದರಾಗಲು ಹಾಲು ನೆರವಾಗುತ್ತದೆ. ಇದಕ್ಕಾಗಿ ಕೆಲವು ಬಾದಾಮಿ ಒಣಫಲಗಳನ್ನು ಹಾಲಿನೊಂದಿಗೆ ತೇದಿ. ಇದಕ್ಕೆ ಕೆಲವು ಹನಿ ಲವಂಗದ ಎಣ್ಣೆ ಬೆರೆಸಿ. ಇದಕ್ಕೆ ಕೊಂಚ ಒಣಗಿದ ಕಿತ್ತಳೆಯ ಸಿಪ್ಪೆಯ ಪುಡಿಯನ್ನು ಬೆರೆಸಿ. ಈ ಮಿಶ್ರಣವನ್ನು ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಹದಿನೈದು ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ

ಮುಖದ ಕಾಂತಿ ಹೆಚ್ಚಿಸಲು

ಕೊಂಚ ಕುದಿಸಿದ ಹಾಲನ್ನು ಹತ್ತಿಯುಂಡೆಯಲ್ಲಿ ಮುಳುಗಿಸಿ ಸಾಧ್ಯವಾದಷ್ಟು ಬಿಸಿ ಇದ್ದಂತೆಯೇ ಮುಖದ ಮೇಲೆ ಹೆಚ್ಚಿನ ಒತ್ತಡವಿಲ್ಲದೇ ಒರೆಸಿಕೊಳ್ಳಿ. ಇದರಿಂದ ಚರ್ಮದ ಸೂಕ್ಷ್ಮರಂಧ್ರಗಳು ತೆಗೆದು ಕಲ್ಮಶಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ನಿತ್ಯವೂ ಈ ವಿಧಾನವನ್ನು ಅನುಸರಿಸುವ ಮೂಲಕ ಬಿಸಿಲಿಗೆ ಕಪ್ಪಗಾಗಿದ್ದ ಚರ್ಮ ಶೀಘ್ರವೇ ಸಹಜವರ್ಣಕ್ಕೆ ತಿರುಗುತ್ತದ


ಮುಖದಲ್ಲಿ ನೆರಿಗೆ ಮೂಡುವುದನ್ನು ತಡವಾಗಿಸಲು 

ಸಮಪ್ರಮಾಣದಲ್ಲಿ ಹಾಲು ಮತ್ತು ಜೇನು ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಮುಖ, ಕುತ್ತಿಗೆ ಕೈಗಳಿಗೆ ಹಚ್ಚಿ ಹದಿನೈದು ನಿಮಿಷ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರನ್ನು ಬಳಸಿ ತೊಳೆದುಕೊಳ್ಳಿ. ಈ ವಿಧಾನವನ್ನು ವಾರದಲ್ಲಿ ಎರಡು ಅಥವಾ ಮೂರು ಬಾರಿ ಅನುಸರಿಸುತ್ತಾ ಬಂದರೆ ಚರ್ಮದಲ್ಲಿ ನೆರಿಗೆ ಮೂಡುವ ಸಾಧ್ಯತೆ ಕಡಿಮೆಯಾಗುತ್ತದೆ ಹಾಗೂ ಕಾಂತಿಯುಕ್ತವಾಗುತ್ತದೆ.

For more Tips...Just click


ಸೀಳುತುದಿಯನ್ನು ತಪ್ಪಿಸಲು ಕೆಲವು ಟಿಪ್ಸ್

ಪುರುಷರ ಕೂದಲಿನ ಆರೈಕೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮ. ಪುರುಷರ ಕೂದಲಿನ ಆರೈಕೆ ಅದು ತುಂಬಾ ಗಂಭೀರವಾಗಿ ಪರಿಗಣಿಸಿದೆ ಮತ್ತು ಹೆಚ್ಚುತ್ತಿರುವ ಬೇಡಿಕೆಯನ್ನು ಅದು ಈಡೇರಿಸುತ್ತದೆ. ಇಂದು ಕೂದಲಿನ ಆರೈಕೆ ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರು ಇಂದಿನ ದಿನಗಳಲ್ಲಿ ತಮ್ಮ ಕೂದಲು ಮತ್ತು ಅದರ ಆರೈಕೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಹಲವಾರು ರೀತಿಯ ಕೂದಲಿನ ಆರೈಕೆಯ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿವೆ. ಮಹಿಳೆಯರಂತೆ ಕೂದಲಿನ ತುದಿ ವಿಭಜನೆಯಾಗುವ ಸಮಸ್ಯೆಯನ್ನು ಪುರುಷರು ಕೂಡ ಎದುರಿಸುತ್ತಿದ್ದಾರೆ. ಕೂದಲಿನ ಹೊರಪೊರೆಯ ರಕ್ಷಣಾತ್ಮಕ ಹೊರಪದರವು ದೂರ ಹೋದಾಗ ಕೂದಲಿನ ಬುಡದ ವಿಭಜನೆಯಾಗುತ್ತದೆ.

ಪುರುಷರಲ್ಲಿ ಕೂದಲಿನ ತುದಿ ವಿಭಜನೆಗೆ ಹಲವಾರು ಕಾರಣಗಳಿರಬಹುದು. ಹೆಚ್ಚಿನ ಪುರುಷರು ಹೊರಗಡೆ ಸುತ್ತಾಡುತ್ತಾರೆ ಮತ್ತು ಬೈಕ್ ಚಾಲನೆ ಮಾಡುವಾಗ ಹೆಚ್ಚಿನ ಸಮಯ ಹೆಲ್ಮೆಟ್ ಧರಿಸುತ್ತಾರೆ. ಇತರ ಕಾರಣಗಳೆಂದರೆ ಇಂದಿನ ದಿನಗಳಲ್ಲಿ ಪುರುಷರು ಹೆಚ್ಚಾಗಿ ತಮ್ಮ ಕೂದಲನ್ನು ಅಂದಗೊಳಿಸಲು ಹಲವಾರು ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ ಮತ್ತು ಕೂದಲನ್ನು ನೇರವಾಗಿಸುತ್ತಾರೆ. ಸಲೂನ್ ನಲ್ಲಿ ಬಳಸುವ ಅಂದಗೊಳಿಸುವ ಉತ್ಪನ್ನಗಳಿಂದ ಹೀಗೆ ಆಗಬಹುದು. ಬದಲಾದ ಜೀವನಶೈಲಿ ಮತ್ತು ಕೂದಲಿನ ಆರೈಕೆ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳದೆ ಇರುವುದರಿಂದ ಪುರುಷರಲ್ಲಿಯೂ ಕೂದಲಿನ ಸಮಸ್ಯೆಗಳು ಅತಿಯಾಗುತ್ತಿದೆ.

ಸೀಳು ತುದಿಯನ್ನು ದೂರ ಮಾಡಲು ಹಲವಾರು ಚಿಕಿತ್ಸಾ ಕ್ರಮಗಳಿವೆ. ಕೇವಲ ಶಾಂಪೂ ಅಥವಾ ಕಂಡೀಷನರ್ ಹಾಕುವುದು ಮಾತ್ರ ಪುರುಷರ ಕೂದಲಿನ ರಕ್ಷಣೆಯಲ್ಲ. ಸೀಳು ತುದಿಯ ಸಮಸ್ಯೆಯನ್ನು ಎದುರಿಸುವಾಗ ನೀವು ನಿಮ್ಮ ಕೂದಲನ್ನು ಟ್ರಿಮ್ ಮಾಡಬೇಕಾಗಬಹುದು. ಸೀಳು ತುದಿ ಸಮಸ್ಯೆಗೆ ಚಿಕಿತ್ಸೆ ಮತ್ತು ಅದನ್ನು ತಪ್ಪಿಸಲು ಹಲವಾರು ರೀತಿಯ ಕೂದಲಿನ ಆರೈಕೆಯ ಆಯ್ಕೆಗಳಿವೆ

ಸೀಳು ತುದಿ ಎದುರಿಸುವ ಪುರುಷರಿಗೆ ಕೂದಲಿನ ಆರೈಕೆಯ ಹಲವಾರು ಟಿಪ್ಸ್ ಗಳು.
ಗುಣಮಟ್ಟದ ಶಾಖ ಸಾಧನಗಳು

ಕೂದಲನ್ನು ಅಂದಗೊಳಿಸಲು ಪುರುಷರು ಹೆಚ್ಚಿನ ಸಾಧನಗಳನ್ನು ಬಳಸುತ್ತಾರೆ. ನಿಮ್ಮ ಕೂದಲಿನ ತುದಿ ವಿಭಜನೆಗೆ ಕಾರಣವಾಗುವ ಕಡಿಮೆ ಗುಣಮಟ್ಟದ ಸಾಧನಗಳ ಬದಲಿಗೆ ಗುಣಮಟ್ಟದ ಸಾಧನಗಳನ್ನು ಬಳಸುವುದು ತುಂಬಾ ಮುಖ್ಯ. ಬ್ಲೋ ಡ್ರೈಯರ್ ಸಾಮಾನ್ಯವಾಗಿ ಪುರುಷರು ಉಪಯೋಗಿಸುವ ಸಾಧನ. ಯಾವುದಾದರೂ ಬ್ರಾಂಡ್ ನ ಸ್ವಲ್ಪ ಒಳ್ಳೆಯ ಗುಣಮಟ್ಟದ ಸಾಧನ ಆಯ್ಕೆ ಮಾಡುವುದು ತುಂಬಾ ಮುಖ್ಯ.



ಶಾಂತರಾಗಿರಿ
ಹೆಚ್ಚಿನ ಪುರುಷರಿಗೆ ತಾಳ್ಮೆಯಿಂದ ಕೂದಲಿನ ಆರೈಕೆ ಮಾಡುವುದು ತುಂಬಾ ಹೊಸ ವಿಷಯ. ಇದರಿಂದ ಅಂದಗೊಳಿಸುವ ಸಾಧನ ಮತ್ತು ಕೂದಲಿನ ಆರೈಕೆಯ ಉತ್ಪನ್ನಗಳನ್ನು ಬಳಸುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಅವಸರದಿಂದ ನಿಮ್ಮ ಕೂದಲನ್ನು ಒಣಗಿಸುವುದು ಅಥವಾ ಅತಿಯಾದ ಶಾಖದಿಂದ ನಿಮ್ಮ ಕೂದಲಿಗೆ ಹಾನಿಯಾಗಿ ಹಲವಾರು ಸಮಸ್ಯೆಗಳು ಆರಂಭವಾಗಬಹುದು.


ಆಹಾರ ಕ್ರಮ

ಪುರುಷರ ಕೂದಲಿನ ಆರೈಕೆ ಕೇವಲ ಉತ್ಪನ್ನಗಳನ್ನು ಮಾತ್ರ ಒಳಗೊಂಡಿಲ್ಲ. ಆರೋಗ್ಯಕರ ಆಹಾರ ಕ್ರಮವನ್ನು ಪಾಲಿಸುವುದು ಕೂಡ ಮುಖ್ಯ. ನಿಮ್ಮ ದೈನಂದಿನ ಆಹಾರವು ಪ್ರಮುಖ ಪೋಷಕಾಂಶ, ಹೆಚ್ಚುವರಿಯಾಗಿ ಫಾಲಿಕ್ ಆಮ್ಲ ಮತ್ತು ಬಯೋಟಿನ್ ನ್ನು ಒಳಗೊಂಡಿರಬೇಕು. ಹಸಿರು ಎಲೆಯ ತರಕಾರಿಗಳು, ಕಿತ್ತಳೆ, ಸೋಯಾಬೀನ್, ಕಂದು ಅಕ್ಕಿ, ಮಸೂರ ಮತ್ತು ವಾಲ್ ನಟ್ಸ್ ನಿಮ್ಮ ಕೂದಲಿನ ಬೆಳವಣಿಗೆ ಮತ್ತು ಬಲಪಡಿಸಲು ಪ್ರಮುಖ ಪೌಷ್ಠಿಕಾಂಶಗಳನ್ನು ಒದಗಿಸುತ್ತದೆ.



ಸೂಕ್ತವಾಗಿ ಕೂದಲು ಒಣಗಿಸುವುದು
ಸ್ನಾನದ ಬಳಿಕ ಕೂದಲನ್ನು ತುಂಬಾ ಎಚ್ಚರಿಕೆ ಮತ್ತು ಸೂಕ್ಷ್ಮವಾಗಿ ಒಣಗಿಸಿ. ಅತಿಯಾದ ಬಿಸಿ ಮತ್ತು ಅಸಮರ್ಪಕ ವಿಧಾನದಿಂದ ಕೂದಲು ಹಾನಿಗೊಳಗಾಗುವುದನ್ನು ತಪ್ಪಿಸಬಹುದು. ಸ್ವಾಭಾವಿಕವಾಗಿ ಕೂದಲನ್ನು ಶೇ. 80-90ರಷ್ಟು ಒಣಗಲು ಬಿಡಬೇಕು. ಇದರ ಬಳಿಕ ಬ್ಲೋ ಡ್ರೈಯರ್ ಉಪಯೋಗಿಸಬೇಕು. ಇದರ ಬಿಸಿಯನ್ನು ನಿಯಂತ್ರಿಸುವ ಸ್ವಿಚ್ ನೊಂದಿಗೆ ಎಚ್ಚರಿಕೆಯಿಂದ ಬಳಸಿ ಮತ್ತು ಸೂಕ್ತ ರೀತಿಯಲ್ಲಿ ಕೂದಲು ಒಣಗಿಸಿ.




ನಿಯಮಿತವಾಗಿ ತುಂಡಾಗುವುದು
ನೀವು ಸಲೂನಿಗೆ ಹೋಗಿ ನಿಮ್ಮ ಕೂದಲನ್ನು ಟ್ರಿಮ್ ಮಾಡುತ್ತೀರಿ ಅಥವಾ ಕಟ್ ಮಾಡಿಸುತ್ತೀರಿ. ಬುಡ ವಿಭಜನೆ ಬಗ್ಗೆ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಅದು ಬರುತ್ತಲೇ ಇರುತ್ತದೆ. ನಿಯಮಿತವಾಗಿ ಟ್ರಿಮ್ ಮಾಡುವುದರಿಂದ ತುದಿ ವಿಭಜನೆ ಹರಡಿ ತುಂಬಾ ಕೆಟ್ಟ ಮಟ್ಟಕ್ಕೆ ತಲುಪಿ ಮತ್ತಷ್ಟು ಕೂದಲನ್ನು ಹಾನಿ ಮಾಡುವುದಕ್ಕೆ ಮೊದಲು ಇದನ್ನು ತಡೆಯಬಹುದು.


ಕಂಡೀಷನರ್
ಸ್ನಾನದ ಬಳಿಕ ಲಿವ್ ಇನ್ ಕಂಡೀಷನರ್ ಬಳಸುವ ಮೂಲಕ ಪದರಕ್ಕೆ ಹೆಚ್ಚಿನ ರಕ್ಷಣೆ ಒದಗಿಸಿ ಸೀಳು ತುದಿಯನ್ನು ತಡೆಯಬಹುದು. ಲಿವ್ ಇನ್ ಕಂಡೀಷನರ್ ಹಾಕಿದ ಬಳಿಕ ತಲೆಗೆ ಟವೆಲ್ ಹಾಕಬೇಕೆಂದಿದ್ದರೆ ಸೀಳು ತುದಿಯನ್ನು ತಡೆಯಲು ಇರುವಂತಹ ಕೆಲವೊಂದು ಕಂಡೀಷನರ್ ಗಳನ್ನು ಬಳಸಿ. ಇದು ತುಂಬಾ ಪರಿಣಾಮಕಾರಿ.

ಕೂದಲಿನ ಎಲ್ಲಾ ಸಮಸ್ಯೆಗೆ ಪರ್ಫೆಕ್ಟ್ ಹೇರ್ ಪ್ಯಾಕ್

ತಲೆಯಲ್ಲಿ ಹೊಟ್ಟು, ತುರಿಕೆ, ಕೂದಲು ಉದುರುವುದು, ತುದಿ ಸೀಳುವುದು, ತಲೆಯ ಚರ್ಮ ಒಣಗಿರುವುದು ಮೊದಲಾದವು ಆರೈಕೆಯ ಕೊರತೆಯ ಮೂಲಕ ಎದುರಾಗುವ ತೊಂದರೆಗಳು. ತಲೆ ಒಣಗಿದರೆ ತಕ್ಷಣ ಆಳವಾದ ಕಂಡೀಶನಿಂಗ್ ಮಾಡುವುದು ಅನಿವಾರ್ಯ.

ಇದರೊಂದಿಗೆ ಆರ್ದತೆ ಮತ್ತು ತೇವ ನೀಡುವುದೂ, ಹೊಟ್ಟನ್ನು ನಿವಾರಿಸುವುದೂ ಅಗತ್ಯ. ಈ ಸೇವೆಗಳನ್ನು ಸೌಂದರ್ಯ ಮಳಿಗೆಗಳಲ್ಲಿ ಪಡೆಯಬಹುದಾದರೂ ಸಾಮಾನ್ಯವಾಗಿ ಇವು ದುಬಾರಿಯಾಗಿರುತ್ತವೆ.



ಇದಕ್ಕೂ ಉತ್ತಮ ಪರಿಣಾಮ ಬೀರುವ ಮತ್ತು ಅತಿ ಅಗ್ಗವಾಗಿ ತಯಾರಿಸಬಹುದಾದ ಲೇಪನಗಳು ಈ ಕೊರತೆಯನ್ನು ನೀಗಿಸಬಲ್ಲವು. ಬನ್ನಿ, ಸುಲಭವಾಗಿ ನೀವೇ ಮನೆಯಲ್ಲಿ ತಯಾರಿಸಿಕೊಳ್ಳಬಹುದಾದ ಕೆಲವು ವಿಧಾನಗಳನ್ನು ಈಗ ನೋಡೋಣ:

ತುದಿ ಸೀಳಿದ ಕೂದಲುಗಳಿಗೆ     

ಒಂದು ವೇಳೆ ಕೂದಲು ಶಿಥಿಲವಾಗಿದ್ದು ತುದಿಗಳು ಸೀಳಿದ್ದರೆ ಇದಕ್ಕೆ ಪ್ರೂಟೀನ್ ಯುಕ್ತ ಮೊಟ್ಟೆಯ ಕೂದಲ ಲೇಪನವೇ ಸಾಕಾಗುತ್ತದೆ.  ಮೊಟ್ಟೆಯಲ್ಲಿರುವ ಪ್ರೋಟೀನ್ ಮತ್ತು ವಿಟಮಿನ್ ಇ ಕೂದಲ ದಂಡವನ್ನು ದೃಢಗೊಳಿಸಿ ಸುಲಭವಾಗಿ ಬಾಗುವಂತೆ ಮಾಡುತ್ತದೆ. ಇದರಿಂದ ಕೂದಲು ತುಂಡಾಗುವ ಸಾಧ್ಯತೆ ಕಡಿಮೆಯಾಗುತ್ತದೆ, ಹಾಗೂ ತಲೆಹೊಟ್ಟಿನ ಸಮಸ್ಯೆಯೂ ನೀಗಿಸುತ್ತದೆ. ಇದರ ಆರೈಕೆಗಾಗಿ ಹೀಗೆ ಮಾಡಿ:


* ಎರಡು ಮೊಟ್ಟೆಗಳನ್ನು ಒಂದು ಕಪ್ ನಲ್ಲಿ ಅರ್ಧ ಕಪ್ ಮಾಯೋನ್ನೀಸ್ ನೊಂದಿಗೆ ಚೆನ್ನಾಗಿ ಬೆರೆಸಿ. * ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಬುಡದಿಂದ ತುದಿಯವರೆಗೆ ಆವರಿಸುವಂತೆ ಹಚ್ಚಿ. 
* ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ನಿಮಿಷ ಒಣಗಲು ಬಿಡಿ.             
 * ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಕಿರಿಕಿರಿ ನೀಡುವ ಒಣ ಮತ್ತು ಘಾಸಿಗೊಂಡ ಕೂದಲಿಗೆ ಒಂದು ವೇಳೆ ನಿಮ್ಮ ಕೂದಲಿಗೆ ತೇವ ಅಥವಾ ಆರ್ದ್ರತೆಯ ಕೊರತೆಯಾದರೆ ಕೂದಲು ಒಣಗಿ ಸುಲಭವಾಗಿ ಘಾಸಿಗೊಳ್ಳುತ್ತದೆ.


ಇದರ ಆರೈಕೆಗಾಗಿ ಹೀಗೆ ಮಾಡಿ: 
* ಅರ್ಧ ಕಪ್ ಬೆಣ್ಣೆ ಹಣ್ಣಿನ ತಿರುಳು ಮತ್ತು ಅರ್ಧ ಕಪ್ ಮಾಯೋನ್ನೀಸ್ ಅನ್ನು ಬ್ಲಂಡರ್ ನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ 
* ಬಳಿಕ ಒಂದು ದೊಡ್ಡ ಚಮಚ ಕೊಬ್ಬರಿ ಎಣ್ಣೆ, ಒಂಚು ಚಿಕ್ಕಚಮಚ ಆಲಿವ್ ಎಣ್ಣೆ, ಒಂದು ದೊಡ್ಡ ಚಮಚ ಜೇನು ಸೇರಿಸಿ ಬ್ಲೆಂಡರಿನಲ್ಲಿಯೇ ಬೆರೆಸಿ. 
* ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಎಲ್ಲೆಡೆ ಆವರಿಸುವಂತೆ ಹಚ್ಚಿ ದೊಡ್ಡ ಹಲ್ಲುಗಳ ಬಾಚಣಿಗೆಯಿಂದ ಬಾಚುವ ಮೂಲಕ ಹರಡಿಸಿ. 
* ಬಳಿಕ ಶವರ್ ಕ್ಯಾಪ್ ಒಂದನ್ನು ಧರಿಸಿ ಕನಿಷ್ಠ ಹದಿನೈದು ನಿಮಿಷ ಹಾಗೇ ಬಿಡಿ 
* ಒಂದು ವೇಳೆ ಸಮಯವಿದ್ದರೆ ಬಳಿಕ ಇನ್ನಷ್ಟು ಕೊಬ್ಬರಿ ಎಣ್ಣೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ಬಳಿಕ ಸೌಮ್ಯ ಕಂಡೀಶನರ್ ಬಳಸಿ ತೊಳೆದುಕೊಳ್ಳಿ.

For more Tips Just click 

Thursday, 25 August 2016

ನೈಜ ಸೌಂದರ್ಯ ಆಯುರ್ವೇದ ಚಿಕಿತ್ಸೆಯಿಂದ ಮಾತ್ರ ಸಾಧ್ಯ!

ಎಷ್ಟೇ ಬಣ್ಣ ಹಚ್ಚಿಕೊಂಡು ಸುಂದರಾಗಿ ಕಾಣಿಸುವ ಪ್ರತಿಯೊಬ್ಬರಿಗೂ ಸಹಜ ಸೌಂದರ್ಯವೇ ನಿಜವಾದ ಸೌಂದರ್ಯ ಎಂಬ ನಿಜ ಗೊತ್ತಿದೆ. ನಿಜವಾದ ಸೌಂದರ್ಯವನ್ನು ನಿಸರ್ಗ ಮಾತ್ರ ನೀಡಬಲ್ಲದು. ಯಾವುದೇ ಕೃತಕ ಪ್ರಸಾಧನ ಆ ಹೊತ್ತಿಗೆ ಪ್ರಖರ ಸೌಂದರ್ಯ ನೀಡಬಲ್ಲದಾದರೂ ಕ್ರಮೇಣ ಇದರ ಪರಿಣಾಮ ವ್ಯತಿರಿಕ್ತವಾಗಬಹುದು. ಆಯುರ್ವೇದ ಸೌಂದರ್ಯವೃದ್ಧಿಗಾಗಿ ಹಲವು ನೈಸರ್ಗಿಕ ವಿಧಾನಗಳನ್ನು ಪರಿಚಯಿಸಿದೆ.

ಇದರ ಪರಿಣಾಮ ಕೊಂಚ ನಿಧಾನ ಎಂಬ ಒಂದೇ ಕೊರತೆಯನ್ನು ಬಿಟ್ಟರೆ ಈ ವಿಧಾನಗಳೆಲ್ಲವೂ ಅತ್ಯಂತ ಸುರಕ್ಷಿತ ಮತ್ತು ಫಲಪ್ರದವಾದವುಗಳಾಗಿವೆ. ಅಷ್ಟೇ ಅಲ್ಲ, ನೂರಾರು ವರ್ಷಗಳಿಂದ ಈ ವಿಧಾನಗಳನ್ನು ಭಾರತದಾದ್ಯಂತ ಬಳಸಲ್ಪಡುತ್ತಾ ಬಂದಿದ್ದು ಇದರ ಪರಿಣಾಮಗಳನ್ನು ಪ್ರತ್ಯಕ್ಷ ಕಂಡ ವಿದೇಶೀಯರು ತಮ್ಮ ದೇಶದಲ್ಲಿಯೂ ಪರಿಚಯಿಸಿದ ಕಾರಣ ಇಂದು ಆಯುರ್ವೇದ ವಿಶ್ವವ್ಯಾಪಿಯಾಗಿದೆ. ಬನ್ನಿ, ಆಯುರ್ವೇದ ಸೌಂದರ್ಯ ರಕ್ಷಣೆ ಮತ್ತು ವೃದ್ಧಿಗಾಗಿ ಯಾವ ಸಲಹೆಗಳನ್ನು ನೀಡುತ್ತಿದೆ ಎಂಬುದನ್ನು ಅವಲೋಕಿಸೋಣ: ಇದರಲ್ಲಿ ಯಾವ ವಿಧಾನ ನಿಮಗೆ ಅತಿ ಸೂಕ್ತ ಎನಿಸುತ್ತದೆಯೋ ಅದನ್ನು ಅನುಸರಿಸಿ ಸೌಂದರ್ಯವನ್ನು ವೃದ್ಧಿಸಿಕೊಳ್ಳಿ.


ಇದರ ಪರಿಣಾಮ ಕೊಂಚ ನಿಧಾನ ಎಂಬ ಒಂದೇ ಕೊರತೆಯನ್ನು ಬಿಟ್ಟರೆ ಈ ವಿಧಾನಗಳೆಲ್ಲವೂ ಅತ್ಯಂತ ಸುರಕ್ಷಿತ ಮತ್ತು ಫಲಪ್ರದವಾದವುಗಳಾಗಿವೆ. ಅಷ್ಟೇ ಅಲ್ಲ, ನೂರಾರು ವರ್ಷಗಳಿಂದ ಈ ವಿಧಾನಗಳನ್ನು ಭಾರತದಾದ್ಯಂತ ಬಳಸಲ್ಪಡುತ್ತಾ ಬಂದಿದ್ದು ಇದರ ಪರಿಣಾಮಗಳನ್ನು ಪ್ರತ್ಯಕ್ಷ ಕಂಡ ವಿದೇಶೀಯರು ತಮ್ಮ ದೇಶದಲ್ಲಿಯೂ ಪರಿಚಯಿಸಿದ ಕಾರಣ ಇಂದು ಆಯುರ್ವೇದ ವಿಶ್ವವ್ಯಾಪಿಯಾಗಿದೆ.

ಬನ್ನಿ, ಆಯುರ್ವೇದ ಸೌಂದರ್ಯ ರಕ್ಷಣೆ ಮತ್ತು ವೃದ್ಧಿಗಾಗಿ ಯಾವ ಸಲಹೆಗಳನ್ನು ನೀಡುತ್ತಿದೆ ಎಂಬುದನ್ನು ಅವಲೋಕಿಸೋಣ: ಇದರಲ್ಲಿ ಯಾವ ವಿಧಾನ ನಿಮಗೆ ಅತಿ ಸೂಕ್ತ ಎನಿಸುತ್ತದೆಯೋ ಅದನ್ನು ಅನುಸರಿಸಿ ಸೌಂದರ್ಯವನ್ನು ವೃದ್ಧಿಸಿಕೊಳ್ಳಿ.

* ನೆರಿಗೆರಹಿತ ಚರ್ಮಕ್ಕಾಗಿ
ಕೊಂಚ ಹರಳೆಣ್ಣೆಯನ್ನು ನಯವಾಗಿ ಚರ್ಮದ ಮೇಲೆ ಕೊಂಚ ಮಸಾಜ್ ಮೂಲಕ ಹಚ್ಚಿಕೊಳ್ಳುತ್ತಾ ಇರಿ. ಹಳ್ಳಿಗಾಡಿನ ಮನೆಮದ್ದು- ಹರಳೆಣ್ಣೆಯ ಔಷಧೀಯ ಗುಣಗಳು

* ಚರ್ಮದ ಸೂಕ್ಷ್ಮರಂಧ್ರಗಳನ್ನು ಸ್ವಚ್ಛಗೊಳಿಸಲು
ಒಂದು ಹತ್ತಿಯುಂಡೆಯಲ್ಲಿ ಕೊಂಚ ಹಸಿ ಹಾಲು (ಪಾಶ್ಚರೀಕರಿಸದ ಹಾಲು) ಮುಳುಗಿಸಿ ಕೊಂಚವೇ ಒತ್ತಡದಿಂದ ಚರ್ಮವನ್ನು ಒರೆಸಿಕೊಳ್ಳಿ. ತ್ವಚೆಯ ಲವಲವಿಕೆಗೆ, ಹಾಲು-ಜೇನಿನ ಫೇಸ್ ಪ್ಯಾಕ್  

* ನೈಸರ್ಗಿಕ ರೂಪದ ತೇವಕಾರಕ
ಒಂದು ವೇಳೆ ನಿಮ್ಮ ಚರ್ಮ ಸಾಮಾನ್ಯವಾಗಿದ್ದರೆ ನಿಮಗೆ ಸೂಕ್ತವಾದ ತೇವಕಾರಕ ಅಥವಾ ಮಾಯಿಶ್ಚರೈಸರ್ ಅನ್ನು ನೀವೇ ತಯಾರಿಸಿಕೊಳ್ಳಬಹುದು. ಎಂಟು ಔನ್ಸ್ (ಸುಮಾರು 240 ಮಿಲೀ) ಮೊಸರಿಗೆ ಒಂದು ದೊಡ್ಡಚಮಚ ತಾಜಾ ಲಿಂಬೆರಸ ಬೆರೆಸಿ ಈಗತಾನೇ ತೊಳೆದುಕೊಂಡ ಮುಖಕ್ಕೆ ದಪ್ಪನಾಗಿ ಹಚ್ಚಿ. ಸುಮಾರು ಹದಿನೈದು ನಿಮಿಷದ ಬಳಿಕ ದಪ್ಪನೆಯ ಟವೆಲ್ಲಿನಿಂದ ಒರೆಸಿ ತೆಗೆಯಿರಿ.




* ಚರ್ಮದ ಕಂಡೀಶನಿಂಗ್‌ಗಾಗಿ

ಎರಡು ದೊಡ್ಡಚಮಚ ಹಾಲಿನ ಕೆನೆಯನ್ನು ಒಂದು ದೊಡ್ಡಚಮಚ ಜೇನಿನೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತೆಳುವಾಗಿ ಹಚ್ಚಿ ಸುಮಾರು ಐದು ನಿಮಿಷ ಹಾಗೇ ಬಿಡಿ. ಬಳಿಕ ಒದ್ದೆಯಾದ ಮುಖವೊರೆಸುವ ಬಟ್ಟೆಯಿಂದ ಒರೆಸಿಕೊಳ್ಳಿ.    ಆಲೂಗಡ್ಡೆ ಜ್ಯೂಸ್ ಬಳಸಿ ಮುಖದ ಸುಕ್ಕು ನಿವಾರಿಸಿ...



*ಚರ್ಮದ ಬಣ್ಣ ತಿಳಿಯಾಗಲು
ಒಂದು ಹಸಿ ಆಲುಗಡ್ಡೆಯ ಒಂದು ಬದಿಯ ಸಿಪ್ಪೆಯನ್ನು ಸುಲಿದು ಹಸಿಯಾದ ಭಾಗದಿಂದ ಕಲೆಯಿರುವ ಚರ್ಮದ ಮೇಲೆ ಆಗಾಗ ಉಜ್ಜಿಕೊಳ್ಳುತ್ತಾ ಇರಿ. ಇದರಿಂದ ಕಲೆಗಳು ನಿಧಾನವಾಗಿ ಮಾಯವಾಗುತ್ತದೆ ಹಾಗೂ ಬಿಸಿಲಿಗೆ ಕಪ್ಪಗಾಗಿದ್ದ ಚರ್ಮ ಸಹಜವರ್ಣದತ್ತ ತಿರುಗುತ್ತದೆ. 


*ಚರ್ಮದ ಕಾಂತಿ ಹೆಚ್ಚಿಸಲು

ಸಮಪ್ರಮಾಣದಲ್ಲಿ ಅರಿಶಿನ (ಕೊಂಬು ತೇದಿ ತೆಗೆದ), ಹಸಿ ಹಾಲು ಮತ್ತು ಚಂದನ (ಕೊರಡು ತೇದಿ ತೆಗೆದ) ಗಳನ್ನು ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಮುಖಕ್ಕೆ ಹಚ್ಚಿ ಕೆಲವು ನಿಮಿಷಗಳ ಕಾಲ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಚರ್ಮದ ಕಾಂತಿ ತಕ್ಷಣವೇ ಹೆಚ್ಚುವುದನ್ನು ಗಮನಿಸಿ.


*ಚರ್ಮ ಕೋಮಲಗೊಳ್ಳಲು
ಈಗತಾನೇ ಹಿಂಡಿ ತೆಗೆದ ಕಿತ್ತಳೆ ಹಣ್ಣಿನ ರಸವನ್ನು ಮುಖದ ಮೇಲೆ ತೆಳುವಾಗಿ ಪ್ರೋಕ್ಷಿಸಿಕೊಂಡು ಕೆಲ ಹೊತ್ತಿನ ಬಳಿಕ ತೊಳೆದುಕೊಳ್ಳಿ.




*ಮುಖದ ಕೂದಲನ್ನು ನಿವಾರಿಸಲು

ಮುಖದ ಕೂದಲನ್ನು ಯಾವುದೇ ಅಪಾಯವಿಲ್ಲದೇ ನಿವಾರಿಸಲು ಎಳ್ಳೆಣ್ಣೆ, ಅರಿಶಿನ ಪುಡಿ ಮತ್ತು ಗೋಧಿ ಹಿಟ್ಟುಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ಕೂದಲ ಮೇಲೆ ಹಚ್ಚಿಕೊಳ್ಳಿ. ಕೊಂಚ ಹೊತ್ತಿನ ಬಳಿಕ ಕೊಂಚವೇ ಒತ್ತಡದಿಂದ ಜಾರಿಸಿದಾಗ ಕೂದಲನ್ನು ಬುಡಸಹಿತ ಕಿತ್ತು ತರುತ್ತದೆ. ಮುಖದಲ್ಲಿನ ಕೂದಲ ನಿವಾರಣೆಗೆ ಹಣ್ಣಿನ ಫೇಸ್ ಪ್ಯಾಕ್ .  

Tuesday, 23 August 2016

ಬಾಬಾ ರಾಮ್ ದೇವ್ ಬ್ಯೂಟಿ ಟಿಪ್ಸ್, ನೀವೂ ಪ್ರಯತ್ನಿಸಿ ನೋಡಿ

ಭಾರತೀಯ ಸಂಸ್ಕೃತಿ ಮತ್ತು ಅನಾದಿ ಕಾಲದಿಂದಲೂ ಖುಷಿಮುನಿಗಳು ಅಳವಡಿಸಿಕೊಂಡು ಬಂದಿರುವಂತಹ ಯೋಗ ಮತ್ತು ಆಯುರ್ವೇದದತ್ತ ಇಂದಿನ ದಿನಗಳಲ್ಲಿ ಜನರು ಆಕರ್ಷಿತರಾಗುತ್ತಿದ್ದಾರೆ. ಅದರಲ್ಲೂ ಯೋಗ ಎನ್ನುವುದು ಈಗ ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದುಕೊಂಡಿದೆ. ಬಾಬಾ ರಾಮ್ ದೇವ್ ಅವರಂತಹ ಯೋಗ ಹಾಗೂ ಆಧ್ಯಾತ್ಮಿಕ ಗುರುಗಳು ಪ್ರತಿಯೊಂದು ಸಮಸ್ಯೆಗೂ ಪರಿಹಾರವನ್ನು ಕಂಡುಕೊಳ್ಳುತಾ ಇದ್ದಾರೆ.     ಆರೋಗ್ಯವನ್ನು ವೃದ್ಧಿಸುವ ಬಾಬಾ ರಾಮ್‌ದೇವ್‌ ಯೋಗಾಸನಗಳು!

ಆರೋಗ್ಯ ಹಾಗೂ ಸೌಂದರ್ಯವರ್ಧಕಗಳ ಬಗ್ಗೆ ಬಾಬಾ ರಾಮ್ ದೇವ್ ಅವರು ಹಲವಾರು ಆವಿಷ್ಕಾರಗಳನ್ನು ಮಾಡಿಕೊಂಡಿದ್ದಾರೆ. ಇದನ್ನು ಈಗ ಜನರು ಅಳವಡಿಸಿಕೊಂಡು ಅದರ ಲಾಭ ಪಡೆಯುತ್ತಾ ಇದ್ದಾರೆ. ಹೊಳೆಯುವ ಮೈಕಾಂತಿಗಾಗಿ ಬಾಬಾ ರಾಮ್ ದೇವ್ ಅವರು ಹೇಳಿರುವಂತಹ ಕೆಲವೊಂದು ವಿಧಾನಗಳನ್ನು ಇಲ್ಲಿ ತಿಳಿದುಕೊಳ್ಳುವ. ಆದರೆ ಇವುಗಳು ಫಲಿತಾಂಶವನ್ನು ನೀಡಲು ಒಂದು ಅಥವಾ ಎರಡು ವಾರ ಬೇಕಾಗಬಹುದು. ಇದಕ್ಕಾಗಿ ತಾಳ್ಮೆ ಮುಖ್ಯ ಆದರೆ ಫಲಿತಾಂಶವು ದೀರ್ಘಕಾಲದವರೆಗೆ ಉಳಿಯುವುದು. ಇದು ಹೇಗೆಂದು ತಿಳಿಯಲು ಮುಂದೆ ಓದಿ.....



ಹೊಸ ಟ್ರಿಕ್ಸ್: ಮುಖದ ಕಾಂತಿಗೆ 'ಮೂಲಂಗಿ' ಫೇಸ್ ಪ್ಯಾಕ್

ಸಾಮಾನ್ಯವಾಗಿ ಅಸಡ್ಡೆಗೊಳಗಾಗುವ ತರಕಾರಿಗಳು ಎಂದರೆ ಮೂಲಂಗಿ ಮತ್ತು ಕುಂಬಳಕಾಯಿ. ಏಕೆಂದರೆ ಹೆಚ್ಚಿನವರಿಗೆ ಇದರ ರುಚಿ ಅಷ್ಟೊಂದು ಹಿಡಿಸುವುದಿಲ್ಲ. ಮೂಲಂಗಿಯ ಕೊಂಚ ಖಾರವಾದ ರುಚಿ ಮತ್ತು ಕಮಟು ವಾಸನೆಯ ಕಾರಣ ಇದೊಂದು ಅದ್ಭುತ ತರಕಾರಿಯಾಗಿರಲು ಅರ್ಹವಾಗದಿದ್ದರೂ ಇದನ್ನು ಆಗಾಗ ತಿನ್ನುತ್ತಲೇ ಇರಬೇಕೆಂದು ನಮ್ಮ ಹಿರಿಯರು ಬಲವಂತವಾಗಿಯಾದರೂ ತಿನ್ನಿಸುತ್ತಿದ್ದರು.  ಮೂಲವ್ಯಾಧಿ ಸಮಸ್ಯೆಯೇ..? ಮೂಲಂಗಿಯೇ ಸಮರ್ಥ ಮದ್ದು


ಮೂಲಂಗಿಯಲ್ಲಿ ವಿಟಮಿನ್ ಎ, ಸಿ, ಮತ್ತು ಕೆ ಉತ್ತಮ ಪ್ರಮಾಣದಲ್ಲಿದ್ದು ಚರ್ಮದ ಆರೈಕೆಗೆ ಉತ್ತಮವಾಗಿವೆ. ಅಲ್ಲದೇ ಇವು ಘಾಸಿಗೊಂಡ ಚರ್ಮದ ಜೀವಕೋಶಗಳನ್ನು ಪುನರ್ನಿಮಿಸಲು ನೆರವಾಗುವ ಮೂಲಕ ಸಹಜಕಾಂತಿಯನ್ನು ಪಡೆಯಲು ನೆರವಾಗುತ್ತದೆ.

ಮೂಲಂಗಿಯಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದ್ದು ಚರ್ಮದ ವರ್ಣವನ್ನು ಗಾಢಗೊಳಿಸುವ ಮೆಲನಿನ್ ಎಂಬ ವರ್ಣದ್ರವ್ಯವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇದು ಚರ್ಮದ ಕಲೆ ಮತ್ತು ಬಿಸಿಲಿನಿಂದಾಗಿ ಕಪ್ಪಗಾಗಿದ್ದ ಚರ್ಮವನ್ನು ಸಹಜವರ್ಣದತ್ತ ಕೊಂಡೊಯ್ಯಲು ನೆರವಾಗುತ್ತದೆ.                 ನಯಾ ಪೈಸೆ ಖರ್ಚಿಲ್ಲದೆ ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಿ!


ಈಗ ಮೂಲಂಗಿಯ ಮುಖಲೇಪ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ:
ಅಗತ್ಯವಿರುವ ಸಾಮಾಗ್ರಿಗಳು
*ಒಂದು ದೊಡ್ಡ ಚಮಚ ತುರಿದ ಮೂಲಂಗಿ
*4 ರಿಂದ 5 ಹನಿ ಆಲಿವ್ ಎಣ್ಣೆ
*½ ಚಿಕ್ಕ ಚಮಚ ಲಿಂಬೆ ರಸ


ತಯಾರಿಸುವ ವಿಧಾನ:

*ಮೂಲಂಗಿಯನ್ನು ತುರಿಯುವ ಮುನ್ನ ಸಿಪ್ಪೆಯನ್ನು ನಿವಾರಿಸಿ ಒಳಗಿನ ತಿರುಳನ್ನು ಪ್ರತ್ಯೇಕಿಸಿ ಚೆನ್ನಾಗಿ ತೊಳೆದ ಬಳಿಕ ತುರಿಯಿರಿ.
*ಇದಕ್ಕೆ ಈಗತಾನೇ ಹಿಂಡಿದ ಲಿಂಬೆರಸ ಮತ್ತು ಆಲಿವ್ ಎಣ್ಣೆಯನ್ನು ಬೆರೆಸಿ ನುಣ್ಣಗೆ ಅರೆಯಿರಿ.
*ಈಗತಾನೇ ತಣ್ಣೀರಿನಲ್ಲಿ ತೊಳೆದ ಮುಖಕ್ಕೆ ತೆಳುವಾಗಿ ಲೇಪಿಸಿ ಸುಮಾರು ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.

ಎಚ್ಚರಿಕೆ
ಈ ಲೇಪನ ಹಚ್ಚಿಕೊಂಡ ಬಳಿಕ ಕೊಂಚ ಉರಿಯಾಗುವುದು ಸಹಜ. ಇದರಿಂದ ಏನೂ ಅಪಾಯವಿಲ್ಲ. ಆದರೆ ಉರಿ ವಿಪರೀತ ಎನಿಸಿದರೆ ಮಾತ್ರ ಹದಿನೈದು ನಿಮಿಷಕ್ಕೂ ಮೊದಲೇ ತೊಳೆದುಕೊಳ್ಳಿ. 
*ಇದರಲ್ಲಿರುವ ಲಿಂಬೆರಸ ಕೊಳೆಯನ್ನು ತೊಳೆದು ಸೂಕ್ಷ್ಮರಂಧ್ರಗಳನ್ನು ತೆರೆದ ಬಳಿಕ ಮೂಲಂಗಿಯ ಪೋಷಕಾಂಶಗಳು ಚರ್ಮದ ಗಾಢವರ್ಣವನ್ನು ತಿಳಿಯಾಗಿಸಲು ಸಾಧ್ಯವಾಗುತ್ತದೆ.


ಮೊಡವೆಗಳ ಚರ್ಮಕ್ಕೆ

ಮೊಡವೆಗಳಿರುವ ಚರ್ಮಕ್ಕೆ ಕೊಂಚ ಸೌಮ್ಯ ಪೋಷಣೆ ಬೇಕಾಗುತ್ತದೆ. ಮೂಲಂಗಿಯಲ್ಲಿರುವ ಪೋಷಕಾಂಶಗಳು ಮೊಡವೆಗಳ ಒಳಗೆ ಇಳಿದು ಬ್ಯಾಕ್ಟೀರಿಯಾ ಮತ್ತು ಗಟ್ಟಿಯಾಗಿದ್ದ ತೈಲಗಳನ್ನು ನಿವಾರಿಸಿ ಮೊಡವೆಗಳನ್ನು ಇಲ್ಲದಂತಾಗಿಸಲು ನೆರವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು

*ಒಂದು ಚಿಕ್ಕ ಚಮಚ ಮೂಲಂಗಿ ಬೀಜಗಳು

*ಕೊಂಚ ನೀರು       

ತಯಾರಿಕಾ ವಿಧಾನ:           
*ಮೊದಲು ಬೀಜಗಳನ್ನು ಒಣದಾಗಿ ಪುಡಿಮಾಡಿ
*ಈ ಪುಡಿಯನ್ನು ಕೊಂಚ ನೀರಿನೊಂದಿಗೆ ಬೆರೆಸಿ ನಯವಾದ ಲೇಪನ ತಯಾರಿಸಿ. ಈಗತಾನೇ ತೊಳೆದ ಮುಖಕ್ಕೆ ಈ ಲೇಪವನ್ನು ತೆಳುವಾಗಿ ಹೆಚ್ಚಿ. ಮೊಡವೆಗಳಿರುವಲ್ಲಿ ಹೆಚ್ಚು ದಪ್ಪನಾಗಿ ಹಚ್ಚಿ ಒಣಗಲು ಬಿಡಿ *ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ
*ಒಂದು ವೇಳೆ ಮುಖ ಹೆಚ್ಚು ಎಣ್ಣೆಪಸೆ ಹೊಂದಿದ್ದರೆ ಮೂಲಂಗಿಯನ್ನು ಹೆಚ್ಚು ನೀರಿನೊಂದಿಗೆ ಗೊಟಾಯಿಸಿ ಈ ನೀರನ್ನು ಮುಖದ ಮೇಲೆ ಸಿಂಪಡಿಸಿಕೊಂಡು ತೊಳೆದುಕೊಳ್ಳುವ ಮೂಲಕ ಎಣ್ಣೆಪಸೆಯನ್ನು ಹೆಚ್ಚು ಕಾಲದವರೆಗೆ ಇರದಂತೆ ತಡೆಗಟ್ಟಬಹುದು.


ಕೂದಲಿನ ಸರ್ವ ಸಮಸ್ಯೆಗೂ-ಮೊಟ್ಟೆಯ ಹೇರ್ ಪ್ಯಾಕ್

ತಲೆಗೂದಲು ಸೊಂಪಾಗಿ ಮತ್ತು ಆರೋಗ್ಯಕರವಾಗಿ ಬೆಳೆಯಲು ರಾಸಾಯನಿಕಗಳಿಗಿಂತ ನೈಸರ್ಗಿಕ ಉತ್ಪನ್ನಗಳೇ ಅತ್ಯುತ್ತಮ ಎಂದು ಇಂದು ಸಾಬೀತಾಗಿದೆ.  ಮೊಟ್ಟೆಯಲ್ಲಿ ಅಡಗಿದೆ ಕೂದಲಿನ ಸಕಲ ಸೌಂದರ್ಯದ ರಹಸ್ಯ!

ತಲೆಗೂದಲಿಗೆ ಕಂಡೀಶನರ್ ಆರೈಕೆ ಒದಗಿಸಲು ಮೊಟ್ಟೆ ಒಂದು ಸಮರ್ಥವಾದ ನೈಸರ್ಗಿಕ ಸಾಮಾಗ್ರಿಯಾಗಿದ್ದು ಇದರಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನು, ವಿಟಮಿನ್ ಗಳು ಮತ್ತು ವಿವಿಧ ಪೋಷಕಾಂಶಗಳಿದ್ದು ಕೂದಲ ಪೋಷಣೆಗೆ ಅಗತ್ಯವಾಗಿವೆ.  ಮೊಟ್ಟೆಯ ಹಳದಿ ಲೋಳೆಯಲ್ಲಿದೆ ಸೌಂದರ್ಯ 

ಇದರಿಂದ ಕೂದಲು ಉತ್ತಮ ಹೊಳಪು ಮತ್ತು ಪೋಷಣೆ ಪಡೆದು ಸೊಂಪಾಗಿ ಮತ್ತು ಆರೋಗ್ಯಕರವಾಗಿ ಬೆಳೆಯುತ್ತದೆ. ಇದರ ಬಳಕೆಯ ವಿಧಾನವನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ....


Thursday, 11 August 2016

ಮುಖದ ಅಂದಕ್ಕೆ ಹುಳಿ ಹುಳಿ ಹುಣಸೆ ಹಣ್ಣಿನ ಫೇಸ್ ಪ್ಯಾಕ್!

ಸೌಂದರ್ಯವೆಂಬುದು ಸ್ತ್ರೀಯಲ್ಲಿ ಮಿಳಿತವಾಗಿರುವ ನೈಸರ್ಗಿಕ ಕೊಡುಗೆಯಾಗಿದೆ. ಈ ಸೌಂದರ್ಯ ನಳನಳಿಸುವಂತಿರಬೇಕು ಎಂದಾದಲ್ಲಿ ನೀವು ರಾಸಾಯನಿಕ ಸೌಂದರ್ಯ ಉತ್ಪನ್ನಗಳನ್ನು ತ್ಯಜಿಸಿ ಮನೆಯಲ್ಲೇ ದೊರೆಯುವ ಉತ್ಪನ್ನಗಳನ್ನೇ ಮುಖಕ್ಕೆ ಬಳಸಿಕೊಳ್ಳಬೇಕು. ಹೀಗೆ ಅಡುಗೆ ಮನೆಯ ಪಾಕ ಉತ್ಪನ್ನಗಳಲ್ಲಿ ಒಂದಾಗಿರುವ ಹುಣಸೇ ಹುಳಿ ಅದ್ಭುತ ಫೇಸ್‎ಪ್ಯಾಕ್‎ನಂತೆ ಕೆಲಸ ಮಾಡಿ ನಿಮ್ಮ ತ್ವಚೆಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

ವಿಟಮಿನ್ ಸಿ ಮತ್ತು ಎ ಸತ್ವ ಇದರಲ್ಲಿ ಅಡಕವಾಗಿದ್ದು ಶಕ್ತಿಯುತ ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದೆ, ಮುಕ್ತ ರಾಡಿಕಲ್‎ಗಳೊಂದಿಗೆ ಹೋರಾಡಿ ತ್ವಚೆಗೆ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ.  ಇಂದಿನ ಲೇಖನದಲ್ಲಿ ಹುಣಸೇ ಹುಳಿ ಮತ್ತು ಸೌಂದರ್ಯಕ್ಕೆ ಇನ್ನಷ್ಟು ಮೆರುಗನ್ನು ನೀಡುವ ಉತ್ಪನ್ನ ಗಳಾಗಿರುವ ಶ್ರೀಗಂಧ, ಮೊಸರು, ರೋಸ್ ವಾಟರ್ ಮತ್ತು ಮುಲ್ತಾನಿ ಮಿಟ್ಟಿಯನ್ನು ಬಳಸಿಕೊಂಡು ಸಿದ್ಧಪಡಿಸಿರುವ ಫೇಸ್ ಪ್ಯಾಕ್ ಅನ್ನು ನಿಮ್ಮೆದುರಿಗೆ ಪ್ರಸ್ತುತಪಡಿಸುತ್ತಿದ್ದೇವೆ.  ಹುಣಸೆ ಹಣ್ಣಿನ ಫೇಸ್ ಪ್ಯಾಕ್-ಕಡಿಮೆ ವೆಚ್ಚ ಅಧಿಕ ಲಾಭ!
ಶ್ರೀಗಂಧವು ಕ್ಲೆನ್ಸಿಂಗ್ ಗುಣವನ್ನು ಪಡೆದುಕೊಂಡಿದ್ದು, ಮೊಡವೆಗಳು ಉಂಟಾಗದಂತೆ ತಡೆಯುತ್ತದೆ. ರೋಸ್ ವಾಟರ್ ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ. ಇನ್ನು ಮೊಸರು ಲ್ಯಾಕ್ಟಿಕ್ ಆಸಿಡ್‎ನ ಸಾರವಾಗಿದ್ದರೆ, ಮುಲ್ತಾನಿ ಮಿಟ್ಟಿ ತ್ವಚೆಯನ್ನು ಸುದೃಢಗೊಳಿಸುತ್ತದೆ.



ಬೇಕಾಗುವ ಸಾಮಾಗ್ರಿಗಳು
*1 ಚಮಚ ತಾಜಾ ಹುಳಿ
*1 ಚಮಚ ಮುಲ್ತಾನಿ ಮಿಟ್ಟಿ
*1 ಚಮಚ ಶ್ರೀಗಂಧದ ಹುಡಿ
*2 ಚಮಚ ಮೊಸರು
*ಸ್ವಲ್ಪ ಹನಿ ರೋಸ್ ವಾಟರ್

ಸಿದ್ಧತೆ ಮತ್ತು ಹಚ್ಚಿಕೊಳ್ಳುವ ವಿಧಾನ

*ಬೌಲ್‎ನಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಳ್ಳಿ ಎಲ್ಲವೂ ಚೆನ್ನಾಗಿ ಮಿಶ್ರವಾಗುವವರೆಗೂ ಇದನ್ನು ಹಿಸುಕಿಕೊಳ್ಳಿ
*ರೋಸ್ ವಾಟರ್ ಸೇರಿಸುವುದನ್ನು ಮರೆಯದಿರಿ, ಈ ಪ್ಯಾಕ್ ಅನ್ನು ಮೃದುವಾಗಿ ಕಲಸಿರಿ
*ಇನ್ನು ಮುಖಕ್ಕೆ ಮೇಕಪ್ ಬ್ರಶ್ ಬಳಸಿ ಈ ಮಾಸ್ಕ್ ಅನ್ನು ಹಚ್ಚಿರಿ
*ಸುಮಾರು 20 ರಿಂದ 30 ನಿಮಿಷ ಹಾಗೆಯೇ ಬಿಡಿ. ನಂತರ ಮುಖವನ್ನು ತಣ್ಣನೆಯ ನೀರಿನಲ್ಲಿ ತೊಳೆದು, ವೃತ್ತಾಕಾರವಾಗಿ ಸ್ಕ್ರಬ್ ಮಾಡಿ
*ಪುನಃ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಹಾಗೆಯೇ ಒಣಗಲು ಬಿಡಿ.
ದಯವಿಟ್ಟು ಗಮನಿಸಿ
ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವ ಮೊದಲಿಗೆ ಕೈಗೆ ಇದನ್ನು ಹಚ್ಚಿಕೊಂಡು ಅಲರ್ಜಿಯಾಗುತ್ತದೆಯೇ ಎಂಬುದನ್ನು ಗಮನಿಸಿಕೊಳ್ಳಿ. ನಿಮ್ಮ ತ್ವಚೆಯನ್ನು ಇದು ಶುಭ್ರಗೊಳಿಸಿ ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.



Wednesday, 10 August 2016

ಬ್ಯೂಟಿ ಟಿಪ್ಸ್: ಮುಖದ ಅಂದಕ್ಕೆ ಸಿಂಪಲ್ ಫೇಸ್ ಪ್ಯಾಕ್...

ಸೌಂದರ್ಯವು ಎದ್ದು ಕಾಣಬೇಕೆಂದಾದರೆ ತ್ವಚೆಯ ಆರೈಕೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಸಂಪೂರ್ಣ ದೇಹದ ಆರೋಗ್ಯವನ್ನು ಚರ್ಮವು ಪ್ರತಿನಿಧಿಸುತ್ತದೆ. ಚರ್ಮವು ಕಾಂತಿಯುತವಾಗಿದ್ದರೆ ದೇಹದ ಆರೋಗ್ಯವು ಸರಿಯಾಗಿದೆ ಎಂದರ್ಥ.
ಕಲುಷಿತ ವಾತಾವರಣದಿಂದ ಧೂಳು ಮತ್ತಿತರ ಕಲ್ಮಶಗಳು ಚರ್ಮದ ರಂಧ್ರವನ್ನು ಸೇರಿಕೊಂಡು ಅದನ್ನು ಮುಚ್ಚುತ್ತದೆ. ಇದರಿಂದ ಮುಖದಲ್ಲಿ ಮೊಡವೆಗಳು, ಗುಳ್ಳೆಗಳು ಮೂಡುತ್ತದೆ. ತ್ವಚೆಯ ಆರೈಕೆಗಾಗಿ ಹಲವಾರು ರೀತಿಯ ಕ್ರೀಮ್‪ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದನ್ನು ಬಳಸಿದರೆ ಅದರಲ್ಲಿರುವ ರಾಸಾಯನಿಕಗಳು ಅಡ್ಡಪರಿಣಾಮ ಬೀರಬಹುದು.  ತ್ವಚೆಯ ನಲ್ಮೆಯ ಆರೈಕೆಗೆ-ನೈಸರ್ಗಿಕ ಫೇಸ್‌ಪ್ಯಾಕ್

ಮನೆಯಲ್ಲಿಯೇ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ತ್ವಚೆಯ ಆರೈಕೆಯನ್ನು ಮಾಡಿದರೆ ಅದರಿಂದ ಯಾವುದೇ ಅಡ್ಡಪರಿಣಾಮವೂ ಆಗಲ್ಲ ಮತ್ತು ತ್ವಚೆಯನ್ನು ಸರಿಯಾಗಿ ಇಟ್ಟುಕೊಳ್ಳಬಹುದಾಗಿದೆ. ಇಂತಹ ಕೆಲವೊಂದು ಫೇಸ್ ಪ್ಯಾಕ್‌ಗಳ ಬಗ್ಗೆ ತಿಳಿಯಿರಿ. ಮುಖದ ಅಂದಕ್ಕೆ ಪ್ರಯತ್ನಿಸಿ-ಹೂವುಗಳ ಫೇಸ್ ಪ್ಯಾಕ್


ಚಳಿ-ಮಳೆ ಕಾಲದಲ್ಲಿ ತುಟಿಗಳ ಅಂದ ಕಾಪಾಡುವುದು ಹೇಗೆ?

ತಾನು ಅಂದ ವಾಗಿ ಕಾಣಿಸ ಬೇಕು ಎಂಬ ಭಾವನೆಯು ಆಬಾಲ ವೃದ್ಧಾದಿ ಎಲ್ಲರಿಗೂ ಇದ್ದೇ ಇರುತ್ತದೆ. ಮುಖದ ಅಂದ ಚೆಂದ , ಒಟ್ಟು ಶರೀರದ ಮೈಮಾಟ, ಉಡುಗೆ ತೊಡುಗೆ, ನಡಿಗೆ, ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ವ್ಯಕ್ತಿತ್ವದ ಸೌಂದರ್ಯ ಇವೆಲ್ಲವೂ ಮೇಳೈಸಿದಾಗ ಮಾತ್ರ ವ್ಯಕ್ತಿಯು ಅಂದವಾಗಿ ಕಾಣಬಹುದು.

ನಾವು ಯಾರನ್ನೇ ಭೇಟಿಯಾದಾಗಲೂ ಮೊದಲು ನೋಡುವುದು ಮುಖವನ್ನು. ಮುಖದಲ್ಲಿ ಪ್ರಧಾನವಾಗಿ ಕಣ್ಣು, ಮೂಗು, ಬಾಯಿಗಳು ನೋಡುಗನ ಗಮನ ಸೆಳೆಯುತ್ತವೆ. ಇವುಗಳಲ್ಲಿ ಯಾವುದೇ ಒಂದು ಸರಿಯಾಗಿ ಇಲ್ಲದಿದ್ದರೂ, ನೋಡುಗನ ಕಣ್ಣು ಥಟ್ಟನೆ ಅಲ್ಲಿಗೇ ಹೊರಳುತ್ತದೆ! ತುಟಿ ಒಡೆಯುವುದು ಒಂದು ಸಾಮಾನ್ಯ ಸಮಸ್ಯೆ.


ಅದರಲ್ಲೂ ಒಣ ತ್ವಚೆ ಉಳ್ಳವರಿಗೆ ಇದು ಹೆಚ್ಚು. ಚಳಿಗಾಲ - ಮಳೆಗಾಲಗಳಲ್ಲಿ ತ್ವಚೆ ಒಡೆಯುವ ಸಮಸ್ಯೆ ಬಹಳವಾಗಿ ಕಾಡುವುದು. ಇದಕ್ಕೆ ಯಾವೆಲ್ಲ ಪರಿಹಾರಗಳಿವೆ ಎಂಬುದನ್ನು ಈಗ ನೋಡೋಣ. ಗುಲಾಬಿ ವರ್ಣದ ತುಟಿಗಳಿಗಾಗಿ ಸಿಂಪಲ್ ಮನೆಮದ್ದು
ಮೊದಲನೆಯದಾಗಿ : ಒಣಗಿದ ತುಟಿಯಲ್ಲಿ ಸಿಪ್ಪೆ ಎದ್ದು ಬಂದಿರುತ್ತದೆ. ಇದು ತರುವ ಮುಜುಗರದಿಂದಾಗಿ, ಒಣಗಿ ಎದ್ದ ತ್ವಚೆಯನ್ನು ಕಚ್ಚಿ ಕೀಳಲು ಹೋಗದಿರಿ. ಇದರಿಂದ ತುಟಿಯ ಅಂದ ಇನ್ನಷ್ಟು ಕೆಡುತ್ತದೆ. ಸಮಸ್ಯೆ ಬಿಗಡಾಯಿಸುತ್ತದೆ. ತುಟಿ ಹರಿದು ರಕ್ತ ಜಿನುಗಿದರೆ, ಗುಣ ಪಡಿಸುವುದು ಮತ್ತೂ ಕಷ್ಟ. ಹಾಗೆಂದು ಒಣಗಿ ಮೇಲೆದ್ದ ತುಟಿಯ ಚರ್ಮವನ್ನು ಇಟ್ಟುಕೊಂಡು ತಿರುಗುವಂತಿಲ್ಲ. ಅದಕ್ಕೆ, ಈ ಸತ್ತ ತ್ವಚೆಯನ್ನು ನಿಧಾನವಾಗಿ ಮಸಾಜ್ ಮಾಡುತ್ತಾ ಕೀಳಬೇಕು.

ಮುಖವನ್ನು ಸ್ಕ್ರಬ್ ಮಾಡುವ ಅವಕಾಡೋ ಸ್ಕ್ರಬ್ ನಿಮ್ಮಲ್ಲಿ ಇದ್ದರೆ, ಕೆಲಸ ಬಹಳ ಸರಳ. ಸ್ಕ್ರಬ್ಬನ್ನು ತೆಳ್ಳಗೆ ತುಟಿಗಳಿಗೆ ಸವರಿ, ಹಳೆಯ ಹಲ್ಲುಜ್ಜುವ ಬ್ರಶ್ ನಿಂದ ಮೆಲ್ಲಗೆ ಮಸಾಜ್ ಮಾಡಿ. 5-10 ಬಾರಿ ವರ್ತುಲಾಕಾರವಾಗಿ ತುಟಿಯ ಮೇಲೆ ತಿರುಗಿಸಿದರೆ ಸಾಕು. ಸ್ಕ್ರಬ್ಬರ್ ಇಲ್ಲವಾದರೆ, ಪೆಟ್ರೋಲಿಯಂ ಜೆಲ್ಲಿಗೆ ಸಕ್ಕರೆ ಬೆರೆಸಿ ಹೀಗೆ ಮಾಡಿ.

ಮನೆಯಲ್ಲಿರುವ ತುಪ್ಪ/ಬೆಣ್ಣೆ/ತೆಂಗಿನ ಎಣ್ಣೆ ಸಹ ಈ ನಿಟ್ಟಿನಲ್ಲಿ ಒಳ್ಳೆಯದೇ. ವಾರಕ್ಕೊಮ್ಮೆ ಬೆಣ್ಣೆ ಹಚ್ಚಿ ಮಸಾಜ್ ಮಾಡುತ್ತಿದ್ದರೆ, ತುಟಿ ಸಹಜವಾದ ಕೆಂಪು ಬಣ್ಣ ಪಡೆದು ಕೊಳ್ಳುತ್ತದೆ. ಮೃದುವಾಗಿ, ಕಾಂತಿಯುತವಾಗಿ ಇರುವುದು. ಒಡೆಯುವ ಮಾತೇ ಹತ್ತಿರ ಸುಳಿಯದು.

ಇವಿಷ್ಟು ಚಿಕಿತ್ಸೆ ಆದರೆ, ಇನ್ನುಳಿದಂತೆ, ನೀವು ನಿತ್ಯವೂ ಸ್ನಾನ ಆದ ಮೇಲೆ, ತುಟಿಗೆ ಮೇಲೆ ತಿಳಿಸಿದ ಯಾವುದೇ ಜಿಡ್ಡನ್ನು ನಿತ್ಯವೂ ಸವರುವ ಅಭ್ಯಾಸ ಮಾಡಿದರೆ, ತೇವಾಂಶದಿಂದ ಕೂಡಿದ ತುಟಿ ಪರಿಪೂರ್ಣ ಸೌಂದರ್ಯದಿಂದ ಕಂಗೊಳಿಸುವುದು. ಕಪ್ಪು ತುಟಿಯ ಬದಲು ಕೆಂಪು ತುಟಿ ನಿಮ್ಮದಾಗಬೇಕೆ?


ಹಸಿಯಾದ ತೆಂಗಿನ ತುರಿಯನ್ನು ಹಿಂಡಿದಾಗ ಸಿಗುವ ತೆಂಗಿನ ಹಾಲು ಒಡೆದ ತುಟಿಯನ್ನು ಒಂದೇ ಏಟಿಗೆ ನವುರಾಗಿಸಬಲ್ಲದು. ನಿತ್ಯವೂ ಇದನ್ನು ತುಟಿಗಳಿಗೆ ಸವರುತ್ತಿದ್ದರಂತೂ (ನಿಮಗೆ ಬೇಕಾಗುವುದು ಕೇವಲ 2 ಬಿಂದು ತೆಂಗಿನ ಹಾಲು) ತುಟಿ ಅತ್ಯಂತ ಸುಂದರವಾಗಿ ಉಳಿಯ ಬಲ್ಲುದು.

ನಿಮ್ಮ ಶರೀರದ ಹೊರಗಿನ ಅಂದವು ನಿಮ್ಮ ಆರೋಗ್ಯವನ್ನು ಅವಲಂಬಿಸಿದೆ. ಹೊರಗಿನಿಂದ ಎಷ್ಟೇ ಲೇಪಿಸಿದರೂ ಸಹಜ ಕಾಂತಿ ಮೂಡುವುದು ಒಳಗಿನಿಂದ. ಆದ್ದರಿಂದ ನೀವು ಸೇವಿಸುವ ಆಹಾರದಲ್ಲಿ ಸಾಕಷ್ಟು ಹಸಿರು ತರಕಾರಿ, ಸೊಪ್ಪು ಇರುವಂತೆ ನೋಡಿಕೊಳ್ಳಿ. ಹೊರಗಿನ ಜಂಕ್ ಫುಡ್ ನಿಂದ ದೂರವಿರಿ. ತುಟಿಯ ಅಂದ ತೊಂಡೆ ಹಣ್ಣಿನಂತಿರಬೇಕು..! ಏನಂತೀರಿ?

ಋತುಮಾನಕ್ಕೆ ಅನುಗುಣವಾಗಿ ಸಿಗುವ ತಾಜಾ ಹಣ್ಣುಗಳನ್ನು ಸೇವಿಸುತ್ತಿರಿ.. ನಿತ್ಯವೂ ಸಾಕಷ್ಟು ನೀರು ಕುಡಿಯುವುದನ್ನು ಮರೆಯದಿರಿ. ಇದರಿಂದ ತ್ವಚೆಗೆ ಬೇಕಾದ ತೇವಾಂಶವನ್ನು ಒದಗಿಸಿದಂತೆ ಆಗುತ್ತದೆ. ಅದು ಕಾಂತಿಯುತವಾಗಿರಲು ನೀರು ಸಹಕಾರಿ. ಹೀಗೆ ಕಾಪಾಡಿದ ತುಟಿಗಳು ಬಿರಿದು ನಕ್ಕಾಗ, ಹೂವಿನ ಪಕಳೆ ಅರಳಿದಂತಹ ಸೌಂದರ್ಯ ನಿಮ್ಮದಾಗುವುದು

ಸುಕ್ಕು ಮರೆಯಾಗಲು-ಅಡುಗೆ ಮನೆಯಲ್ಲಿಯೇ ಇದೆ ಪರಿಹಾರ!

ವಯಸ್ಸು ಯಾರನ್ನೂ ಕಾಯುವುದಿಲ್ಲ ಎಂಬ ಮಾತಿನಂತೆ ಕಾಲಚಕ್ರ ಉರುಳಿದಂತೆ ನಾವು ಹದಿಹರೆಯವನ್ನು ಕಳೆದು ಜವಬ್ದಾರಿಯುತ ವಯಸ್ಸಿಗೆ ಬಂದುಬಿಡುತ್ತೇವೆ. ಮೂವತ್ತರ ಹರೆಯದಲ್ಲಿ ನಮ್ಮ ಬಾಲಿಶ ವರ್ತನೆಗಳು ಮರೆಯಾಗಿ ಸಂಸಾರವನ್ನು ನಿಭಾಯಿಸುವ ಸಾಮರ್ಥ್ಯವನ್ನು ಪಡೆದುಕೊಂಡು ಬಿಡುತ್ತೇವೆ. ನಿಮ್ಮ ದೇಹವು ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಳ್ಳುತ್ತದೆ ಅಂತೆಯೇ ನಿಮ್ಮ ಸೌಂದರ್ಯದಲ್ಲೂ ಸಾಕಷ್ಟು ಮಾರ್ಪಾಡುಗಳನ್ನು ನೀವು ಕಂಡುಕೊಳ್ಳುತ್ತೀರಿ.

ನೀವು ಸೂಕ್ತವಾದ ಆಹಾರ ಮತ್ತು ದೇಹಕ್ಕೆ ಸಾಕಷ್ಟು ದಂಡನೆಯನ್ನು ನೀಡುತ್ತಿಲ್ಲ ಎಂದಾದಲ್ಲಿ ದೇಹವು ನಿಮ್ಮ ಮಾತನ್ನು ಕೇಳುವುದಿಲ್ಲ. ಬೊಜ್ಜು ಉಂಟಾಗಿ ದೇಹದ ಆಕಾರ ವಿಸ್ತಾರಗೊಳ್ಳಬಹುದು ಅಂತೆಯೇ ಇದರಿಂದಾಗಿ ಆರೋಗ್ಯ ಮತ್ತು ಸೌಂದರ್ಯ ಸಮಸ್ಯೆಗಳನ್ನು ನೀವು ಅನುಭವಿಸುವುದು ಖಂಡಿತ. ಆದ್ದರಿಂದ ದೇಹಕ್ಕೆ ಉತ್ತಮ ಪೋಷಕಾಂಶ ಆಹಾರ ಮತ್ತು ವ್ಯಾಯಮವನ್ನು ನೀಡಬೇಕು. ಮುಖದಲ್ಲಿ ಸುಕ್ಕುಗಳು ಆರಂಭವಾಗುವ ಕಾಲ ಇದಾಗಿರುವುದರಿಂದ ಇದಕ್ಕಾಗಿ ನೀವು ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ.

ದೀರ್ಘಕಾಲದವರೆಗೆ ಹದಿಹರೆಯದ ತ್ವಚೆಯನ್ನು ನೀವು ಪಡೆದುಕೊಳ್ಳಬೇಕು ಎಂದಾದಲ್ಲಿ ಕೆಲವೊಂದು ಮನೆಮದ್ದುಗಳನ್ನು ನೀವು ಅನುಸರಿಸಲೇಬೇಕಾಗುತ್ತದೆ. ಬನ್ನಿ ಆ ಉತ್ಪನ್ನಗಳೇನು ಎಂಬುದನ್ನು ಮುಂದೆ ಓದಿ...   ಬರೀ ಹತ್ತೇ ದಿನಗಳಲ್ಲಿ ಮುಖದ ಸುಕ್ಕು ಮಂಗಮಾಯ...

ಟೊಮೆಟೊ
ಮೂವತ್ತರ ಹರೆಯ ಮತ್ತು ಅದರ ನಂತರವೂ ಕೂಡ ನಳನಳಿಸುವ ತ್ವಚೆಯನ್ನು ನೀವು ಪಡೆದುಕೊಳ್ಳಬೇಕು ಎಂದಾದಲ್ಲಿ ತಾಜಾ ಟೊಮೆಟೊವನ್ನು, ದಿನನಿತ್ಯದ ಆಹಾರ ಕ್ರಮದಲ್ಲಿ ಸೇವಿಸುತ್ತಿರಬೇಕು. ಇದರಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದ್ದು, ಕಾಲಜನ್ ಉತ್ಪಾದನೆಯನ್ನು ವರ್ಧಿಸುತ್ತದೆ.  ಟೊಮೆಟೊದಿಂದ ಕಾಂತಿಯುತ ತ್ವಚೆಗಾಗಿ 6 ವಿಧಾನ

ಬೆರ್ರಿ
ಸ್ಟ್ರಾಬೆರ್ರಿ, ರಸಪ್‎ಬೆರ್ರಿ, ಬ್ಲ್ಯೂಬೆರ್ರಿ ಮೊದಲಾದ ಬೆರ್ರಿಗಳನ್ನು ಸೇವಿಸಬೇಕು. ಇವುಗಳು ಹೆಚ್ಚುವರಿ ನ್ಯೂಟ್ರಿನ್‎ಗಳನ್ನು ಪಡೆದುಕೊಂಡಿದ್ದು ಉತ್ಕರ್ಷಣ ನಿರೋಧಿ ಅಂಶಗಳನ್ನು ಪಡೆದುಕೊಂಡಿವೆ. ನಿಮ್ಮ ತ್ವಚೆಯನ್ನು ತಾಜಾಗೊಳಿಸಿ, ಸುಕ್ಕುಗಳಿಂದ ಮುಖವನ್ನು ಕಾಪಾಡುತ್ತದೆ.
ಮೊಸರು

ನಿಮ್ಮ ದೈನಂದಿನ ಆಹಾರದಲ್ಲಿ ಮೊಸರು ಸೇವಿಸಲು ಮರೆಯದಿರಿ, ಮೂವತ್ತರ ನಂತರ ಸುಕ್ಕು ತಪ್ಪಿಸಿಕೊಳ್ಳಬೇಕು ಎಂದಾದಲ್ಲಿ ಮೊಸರು ಸೇವನೆ ಅತ್ಯಗತ್ಯವಾದುದು. ಮೊಸರಿನಲ್ಲಿ ಆರೋಗ್ಯಯುತ ಬ್ಯಾಕ್ಟೀರಿಯಾ ಇದ್ದು ನಿಮ್ಮ ತ್ವಚೆಯ ವಿನ್ಯಾಸ ಮತ್ತು ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ.     ಮೊಟ್ಟೆಯ ಬಿಳಿಭಾಗದ ಚಿಕಿತ್ಸೆ-ಮುಖದ ನೆರಿಗೆ ಮಂಗಮಾಯ!

ಮೀನು

ವಿಟಮಿನ್ ಇ ಅಂಶವನ್ನು ಮೀನು ಪಡೆದುಕೊಂಡಿದೆ. ತ್ವಚೆಗೆ ವಿಟಮಿನ್ ಅತ್ಯಗತ್ಯವಾಗಿದ್ದು, ಇದು ಹೆಚ್ಚಿನ ಪ್ರಯೋಜನಗಳನ್ನು ತ್ವಚೆಯ ಅಭಿವೃದ್ಧಿಯಲ್ಲಿ ಪಡೆದುಕೊಂಡಿದೆ. ವಯಸ್ಸಾಗುವಿಕೆಯ ಪೂರ್ವ ಲಕ್ಷಣಗಳಾದ ಸುಕ್ಕುಗಳು ಮತ್ತು ಕಣ್ಣಿನ ಸುತ್ತಲಿನ ಗೆರೆಗಳನ್ನು ಇದು ನಿವಾರಿಸುತ್ತದೆ

ನಟ್ಸ್
ಒಮೇಗಾ - 3 ಫ್ಯಾಟಿ ಆಸಿಡ್‎ಗಳನ್ನು ನಟ್ಸ್ ಹೊಂದಿದ್ದು ವಿಟಮಿನ್ ಇ, ಇದರಲ್ಲಡಗಿದೆ. ತ್ವಚೆಯ ಕೋಶಗಳಿಗೆ ಇದು ನ್ಯೂಟ್ರಿಶಿಯಸ್ ಎಂದೆನಿಸಿದ್ದು ಸುಕ್ಕುಗಳನ್ನು ಮೂಲದಲ್ಲಿಯೇ ನಿವಾರಿಸುತ್ತದೆ.

ಅವಕಾಡೊ (ಬೆಣ್ಣೆ ಹಣ್ಣು) 
ಗ್ಲುತತಿನ್ ಅಂಶವನ್ನು ಬೆಣ್ಣೆ ಹಣ್ಣು ಒಳಗೊಂಡಿದ್ದು, ವಯಸ್ಸಾಗುವಿಕೆಯ ವಿರುದ್ಧ ಹೋರಾಡುವ ಗುಣಗಳನ್ನು ಪಡೆದುಕೊಂಡಿದೆ. ಅಂತೆಯೇ ಆರೋಗ್ಯಕರ ಹೊಸಕೋಶಗಳನ್ನು ಇದು ರಚಿಸುತ್ತದೆ.    ಬ್ಯೂಟಿ ಟಿಪ್ಸ್: ಬೆಣ್ಣೆ ಹಣ್ಣಿನಲ್ಲಿದೆ-ಬೆಣ್ಣೆಯಂತಹ ಸೌಂದರ್ಯ! 


ಜೇನು
ಸುಕ್ಕುಗಳು ಮತ್ತು ಗೆರೆಗಳನ್ನು ಹೋಗಲಾಡಿಸಲು ಜೇನಿನಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ಕಾರಣವಾಗಿವೆ. ನಿಮ್ಮ ತ್ವಚೆಯನ್ನು ಯುವತ್ವ ಮತ್ತು ಮೃದುವಾಗಿಸುತ್ತದೆ.