Wednesday, 27 July 2016

New Tips

ಕುಂಬಳಕಾಯಿ ಫೇಸ್ ಮಾಸ್ಕ್- ಸೌಂದರ್ಯದ ಕೀಲಿಕೈ

ಮುಖಕ್ಕೆ ಮಾಸ್ಕ್‌ನ ವಿಷಯ ಬಂದಾಗ ಉತ್ತಮವಾದ ಫಲಿತಾಂಶ ಬರಲು ಎಲ್ಲರೂ ಅತ್ಯಂತ ಉತ್ತಮವಾದುದನ್ನು ಬಳಸಲು ಇಚ್ಚಿಸುತ್ತಾರೆ. ಕೆಲವು ಜಾಹೀರಾತುಗಳು ತಮ್ಮ ವಿಧ ವಿಧವಾದ ಹೇಳಿಕೆಗಳಿಂದ ಜನರನ್ನು ಮೂರ್ಖರನ್ನಾಗಿಸುತ್ತವೆ.


ಜಾಹೀರಾತುಗಳಲ್ಲಿ ಬರುವ ಎಲ್ಲಾ ಮಾಸ್ಕ್‌ಗಳನ್ನು ಉಪಯೋಗಿಸಿ ನಿಜವಾದ ಫಲಿತಾಂಶ ಬರದೆ ನಿರಾಶರಾಗುವವರ ಸಂಖ್ಯೆಗೂ ಬರವಿಲ್ಲ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮನೆಯಲ್ಲಿ ನೈಸರ್ಗಿಕವಾಗಿ ಫೇಸ್ ಮಾಸ್ಕ್ ಮಾಡಿದರೆ ಇದರಿಂದ ಉತ್ತಮವಾದ ತ್ವಚೆ ಪಡೆಯುವುದರ ಬಗ್ಗೆ ಸಂಶಯವೇ ಬೇಡ.



ಅರಿಶಿನ, ಜೇನು ಅಥವಾ ಲಿಂಬೆ ಹೀಗೆ ಮಾರುಕಟ್ಟೆಯಲ್ಲಿ ಹೀಗೆ ಹಲವು ವಿಧವಾದ ಫೇಸ್ ಪ್ಯಾಕ್‌ಗಳು ಲಭ್ಯವಿದೆ. ಇಂತಹ ಫೇಸ್ ಪ್ಯಾಕ್‌ಗಳು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಕುಂಬಳಕಾಯಿಯ ಫೇಸ್ ಪ್ಯಾಕ್ ಎನ್ನುವುದರ ಬಗ್ಗೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ತಿಳಿಸುತ್ತಿದೆ. ಇದರ ಬಳಕೆಯಿಂದ ಹೊಳೆ ಹೊಳೆಯುವ ತ್ವಚೆ ಪಡೆಯುವಲ್ಲಿ ಸಂಶಯವೇ ಇಲ್ಲ


ಕುಂಬಳಕಾಯಿ ಫೇಸ್ ಪ್ಯಾಕ್, ತಾರುಣ್ಯಕ್ಕೆ ಹೊಸ ಲುಕ್  


ಈ ವಿಧಾನವನ್ನು ದಿನ ಬಳಕೆಯ ಫೇಸ್ ಪ್ಯಾಕ್ ನಲ್ಲಿ ಬಳಸುವುದು ಉತ್ತಮ. ಉತ್ತಮವಾದ ಕುಂಬಳಕಾಯಿ ಫೇಸ್ ಪ್ಯಾಕ್‌ ನ ಲಾಭಗಳ ಬಗ್ಗೆ ತಿಳಿದುಕೊಂಡು ಇಂದಿನಿಂದಲೇ ಅದನ್ನು ಪ್ರಯತ್ನಿಸಬಹುದು.



ಎಲ್ಲಾ ತರಹದ ತ್ವಚೆಗಾಗಿ ಕುಂಬಳಕಾಯಿಯ ಫೇಸ್ ಪ್ಯಾಕ್ 
ಅರ್ಧ ಲೋಟ ಕುಂಬಳಕಾಯಿಯ ಪೇಸ್ಟ್‌ಗೆ ಅರ್ಧ ಟೀ ಚಮಚ ಜೇನು ಮತ್ತು ಹಾಲನ್ನು ಸೇರಿಸಬೇಕು. ಇದಕ್ಕೆ ಒಂದು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಈ ಮಾಸ್ಕನ್ನು ಮುಖದ ಮೇಲೆ ಹಚ್ಚಿ 15 ನಿಮಿಷಗಳ ಕಾಲ ಹಾಗೇ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಬೇಕು.

ಒಣ ತ್ವಚೆಗಾಗಿ ಕುಂಬಳಕಾಯಿಯ ಮಾಸ್ಕ್ 
ಕುಂಬಳಕಾಯಿಯ ರಸ (ಪ್ಯೂರಿ) ಮತ್ತು ಮಲೈ (ಒಂದು ಬಗೆಯ ದಪ್ಪವಾದ ಹಾಲಿನ ಪದಾರ್ಥ) ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಇದಕ್ಕೆ ಎರಡು ಟೀ ಚಮಚ ಸಕ್ಕರೆಯನ್ನು ಕೂಡ ಸೇರಿಸಿಕೊಳ್ಳಬೇಕು. ಚೆನ್ನಾಗಿ ಮಿಶ್ರಣ ಮಾಡಿದ ನಂತರ ಇದನ್ನು ಮುಖಕ್ಕೆ ಹಚ್ಚಬೇಕು. ಇದರಿಂದ ತ್ವಚೆಗೆ ಒಂದು ತರಹದ ಹಿತವಾದ ಪರಿಣಾಮ ಉಂಟಾಗುತ್ತದೆ ಮಾತ್ರವಲ್ಲದೆ ತ್ವಚೆಯಲ್ಲಿನ ತೇವಾಂಶವನ್ನು ಕಾಪಾಡುತ್ತದೆ.


ಜಿಡ್ಡಿನ ತ್ವಚೆಗಾಗಿ ಕುಂಬಳಕಾಯಿಯ ಫೇಸ್ ಪ್ಯಾಕ್ 

ಕುಂಬಳಕಾಯಿಯ ರಸ (ಪ್ಯುರಿ) ಒಂದು ಟೇಬಲ್ ಚಮಚ ಇದಕ್ಕೆ ಒಂದು ಟೀ ಚಮಚ ಸೇಬಿನ ಹಣ್ಣಿನ ಪರಿಮಳವಿರುವ ವಿನೇಗರ್ ಅಥವಾ ನಿಂಬೆ ಹಣ್ಣಿನ ರಸ. ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ನಂತರ ಇದನ್ನು ಮುಖದ ಮೇಲೆ ಹಚ್ಚಬೇಕು. ನಿಂಬೆ ರಸವು ಟೋನರ್ ನಂತೆ ಕಾರ್ಯ ನಿರ್ವಹಿಸುತ್ತದೆ ಇದು ಚರ್ಮದ ಪರಿಚಲನ ಕ್ರಿಯೆಗಳನ್ನು ಉತ್ತೇಜಿಸುತ್ತದೆ ಮತ್ತು ಚರ್ಮದ ಪಿಎಚ್ ಮಟ್ಟವನ್ನು ಹೆಚ್ಚಿಸುತ್ತದೆ.


ಮೊಡವೆಯ ನಿಯಂತ್ರಣಕ್ಕೆ ಕುಂಬಳಕಾಯಿಯ ಫೇಸ್ ಪ್ಯಾಕ್

ಒಂದು ಟೀ ಚಮಚ ಕುಂಬಳಕಾಯಿಯ ಪ್ಯೂರಿಗೆ ಒಂದು ಟೀ ಚಮಚ ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಇದನ್ನು ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಬೇಕು. ನಂತರ 20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಇದರ ಪ್ರಯೋಗದಿಂದ ಗಣನೀಯ ಬದಲಾವಣೆಯನ್ನು ಗಮನಿಸಬಹುದಾಗಿದೆ.


ಬಾದಾಮಿ ಎಣ್ಣೆ-ಗುಲಾಬಿ ನೀರಿ‌ನ ಜೊತೆ ಸೌಂದರ್ಯ ಲಹರಿ!


ಹಿಂದಿನ ಕಾಲದಲ್ಲಿ ಮಹಿಳೆಯರು ಮೇಕಪ್ ಇಲ್ಲದೆಯೂ ತುಂಬಾ ಸುಂದರವಾಗಿ ಕಾಣಿಸಿಕೊಳ್ಳಲು ಅವರು ನೈಸರ್ಗಿಕವಾಗಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಾ ಇದ್ದದ್ದೇ ಕಾರಣವಾಗಿದೆ. ಇದರಿಂದ ಅವರಿಗೆ ಸೌಂದರ್ಯವನ್ನು ಹೆಚ್ಚಿಸಲು ಯಾವುದೇ ಮೇಕಪ್ ಅಥವಾ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ಬೇಕಾಗಿರಲಿಲ್ಲ. ಅದರಲ್ಲೂ ಅವರು ತಮ್ಮ ತ್ವಚೆ ಮತ್ತು ಕೂದಲನ್ನು ತುಂಬಾ ಆರೈಕೆ ಮಾಡುತ್ತಿದ್ದರು. ಯಾವುದೇ ರಾಸಾಯನಿಕಗಳು ಇಲ್ಲದೆ ಪ್ರಕೃತಿದತ್ತವಾಗಿ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ಅವರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದರು.       ನೈಸರ್ಗಿಕ ಸೌಂದರ್ಯ ಟಿಪ್ಸ್-ಕಡಿಮೆ ವೆಚ್ಚ, ಅಧಿಕ ಲಾಭ


ಇಂದಿನ ಮಹಿಳೆಯರು ಮೇಕಪ್ ತೆಗೆದ ಬಳಿಕ ಅವರನ್ನು ನೋಡಲು ಆಗಲ್ಲ. ಆದರೆ ಹಿಂದಿನ ಕಾಲದಲ್ಲಿ ಮೇಕಪ್ ಇಲ್ಲದೆಯೂ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು. ಕೂದಲು ಮತ್ತು ತ್ವಚೆಯ ಆರೈಕೆಗಾಗಿ ಪ್ರಕೃತ್ತಿದತ್ತವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿಕೊಳ್ಳುತ್ತಿದ್ದರು. ಇಂದಿನ ದಿನಗಳಲ್ಲಿ ರಾಸಾಯನಿಕಯುಕ್ತ ಸೌಂದರ್ಯವರ್ಧಕಗಳನ್ನು ಬಳಸಿಕೊಂಡು ಹಲವಾರು ರೀತಿಯ ಅಡ್ಡಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.   

ಆದರೆ ಹಿಂದಿನವರಿಗೆ ಯಾವುದೇ ಅಡ್ಡಪರಿಣಾಮಗಳ ಭೀತಿ ಇರಲಿಲ್ಲ. ಬಾದಾಮಿ ಎಣ್ಣೆ ಮತ್ತು ರೋಸ್ ವಾಟರ್ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಬಹುದು ಎಂದು ನಿಮಗೆ ತಿಳಿದಿದೆಯಾ? ಇಲ್ಲವೆಂದಾದರೆ ನಾವಿಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಬಳಸಿ ನಿಮ್ಮ ಸೌಂದರ್ಯವನ್ನು ವೃದ್ಧಿಸಿ. 


       

ತುಟಿಯ ಸೌಂದರ್ಯಕ್ಕೆ, ಸಿಹಿ-ಸಿಹಿ ಲಿಪ್ ಬಾಮ್!

ತುಟಿಗಳಿಗೆ ಬಣ್ಣ ಹಚ್ಚಿ ಗಮನ ಸೆಳೆಯುವ ಪರಿ ಈಗ ಹಳೆಯದಾಯಿತು. ಈಗ ಏನಿದ್ದರೂ ರುಚಿಯೂ ಇರುವ ಆರೈಕೆಯನ್ನೂ ನೀಡುವ ತುಟಿಗಳ ಬಾಮ್‌ಗಳಿಗೇ ಹೆಚ್ಚಿನ ಬೇಡಿಕೆ. ವಿವಿಧ ಬಣ್ಣದೊಡನೆ ಹೊಳಪು, ಮಿನುಗು, ಒನಪುಗಳನ್ನು ಹೊಂದಿರುವ ಈ ಬಾಮ್‌ಗಳು ಅತಿ ಅಗ್ಗವೂ ಅಲ್ಲ, ಅತಿ ದುಬಾರಿಯೂ ಅಲ್ಲದ ಕಾರಣ ಎಲ್ಲರ ಮೆಚ್ಚಿನ ಪ್ರಸಾಧನವಾಗಿದೆ.


ಹಿಂದೆ ದಪ್ಪದ ಲಿಪ್ ಸ್ಟಿಕ್ ರೂಪದಲ್ಲಿ ಮಾತ್ರ ದೊರಕುತ್ತಿದ ಈ ಪ್ರಸಾಧನ ಈಗ ಕಡ್ಡಿಯಲ್ಲಿ ಅಥವಾ ಚಿಕ್ಕ ಡಬ್ಬಿಯಲ್ಲಿಯೇ ಸಿಗುತ್ತಿವೆ. ಅಷ್ಟೇ ಅಲ್ಲ, ಹಿಂದೆ ರುಚಿಯಲ್ಲಿ ಮೀನಿನ ಹುರುಪೆಯನ್ನು ತಿಂದ ಹಾಗಾಗುತ್ತಿದ್ದ (ವಾಸ್ತವವಾಗಿ ಲಿಪ್ ಸ್ಟಿಕ್‌ನ ಪ್ರಮುಖ ಸಾಮಾಗ್ರಿಯೇ ಮೀನಿನ ಹುರುಪೆಯ ಪುಡಿ) ಬದಲಿಗೆ ಈಗ ಸ್ವಾದಿಷ್ಟವಾದ ಸ್ಟ್ರಾಬೆರಿ, ಕಿತ್ತಳೆ ಮೊದಲಾದ ಸ್ವಾದಗಳಲ್ಲಿ ದೊರಕುತ್ತಿದೆ. ಪಟ್ಟಿ ಮಾಡಲು ಹೊರಟರೆ ಇಡಿಯ ದಿನವೂ ಸಾಲದು ಅಷ್ಟು ತರಹದ ಪ್ರಸಾಧನಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ.







ಆದರೆ ಮಾರುಕಟ್ಟೆಯಲ್ಲಿ ಸಿಗುವ ಕೃತಕ ಬಾಮ್‌ಗಿಂತಲೂ ನಾವೇ ನಮ್ಮ ಕೈಯಾರೆ, ನಮ್ಮ ಇಷ್ಟದ ಸ್ವಾದದಲ್ಲಿ ತಯಾರಿಸಿ ಬಳಸಿದರೆ ಎಷ್ಟು ಚೆನ್ನ. ಅದರಲ್ಲೂ ಹದಿಹರೆಯದವರಿಗೆ ಇದೊಂದು ಮುದನೀಡುವ ಚಟುವಟಿಕೆಯೇ ಆಗುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ಕೆಲವು ಸುಲಭ ವಿಧಾನಗಳನ್ನು ವಿವರಿಸಲಾಗಿದ್ದು ಇವು ಮಾರುಕಟ್ಟೆಯಲ್ಲಿ ಸಿಗುವ ಪ್ರಸಾಧನದ ಬೆಲೆಯಷ್ಟೇ ಖರ್ಚಾದರೂ ಇದನ್ನು ಸ್ವತಃ ತಯಾರಿಸಿದ ಸಂತೋಷಕ್ಕೆ ಬೆಲೆಕಟ್ಟಲಾಗದು. 


ಅಗತ್ಯವಿರುವ ಸಾಮಾಗ್ರಿಗಳು:


*ಜೇನುಮೇಣ: ಅಗತ್ಯಕ್ಕೆ ತಕ್ಕಂತೆ
*ಕೆಲವು ಹನಿ ಬಾದಾಮಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ
*ಪುದೀನಾ ಎಣ್ಣೆ (ಐಚ್ಛಿಕ)
*ಹಳೆಯ ಲಿಪ್ ಸ್ಟಿಕ್ ನಿಂದ ಚಿಕ್ಕದಾಗಿ ಕೆರೆದು ತೆಗೆದ ಪುಡಿ.
*ಒಂದು ಚಿಕ್ಕ ಬೋಗುಣಿ



ವಿಧಾನ: 
* ಮೊದಲು ಜೇನುಮೇಣ ಮತ್ತು ಬಾದಾಮಿ ಅಥವಾ ಕೊಬ್ಬರಿ ಎಣ್ಣೆಯನ್ನು ಚಿಕ್ಕ ಬೋಗುಣಿಯಲ್ಲಿ ಹಾಕಿ ಮೈಕ್ರೋವೇವ್‌ನೊಳಗೆ ಕೆಲವು ಸೆಕೆಂಡುಗಳ ಕಾಲ ಇಡಿ. ಎಷ್ಟು ಎಂದರೆ ಇವೆರಡೂ ಈಗತಾನೇ ಕರಗಿದಂತಿರಬೇಕು. ಹೆಚ್ಚು ಬಿಸಿಯಾಗಲು ಬಿಡಬಾರದು. ಬಳಿಕ ಹೊರತೆಗೆದು ಚೆನ್ನಾಗಿ ಮಿಶ್ರಣ ಮಾಡಿ. ಬಾದಾಮಿ ಎಣ್ಣೆ ತುಟಿಗಳಿಗೆ ಆದ್ರತೆ ನೀಡುವ ಜೊತೆಗೇ ಜೇನುಮೇಣದ ಪಸೆ ಹೆಚ್ಚು ನಿಲ್ಲದಂತೆ ನೋಡಿಕೊಳ್ಳುತ್ತದೆ. * ಬಳಿಕ ಇದಕ್ಕೆ ಎರಡು ಹನಿ ಪುದೀನಾ ಎಣ್ಣೆ ಸೇರಿಸಿ. ಹೆಚ್ಚು ಸೇರಿಸಬಾರದು, ಏಕೆಂದರೆ ಹೆಚ್ಚು ಪ್ರಮಾಣ ತುಟಿಗಳಲ್ಲಿ ಉರಿ ತರಿಸಬಹುದು. ಇದು ಅವಶ್ಯವಲ್ಲ, ಆದರೆ ಇದು ತುಸುವೇ ಕಚಗುಳಿ ಇಡುವಂತೆ ತುಟಿಗಳ ಚರ್ಮಕ್ಕೆ ಸಂವೇದನೆ ನೀಡುವ ಮೂಲಕ ರಕ್ತಸಂಚಾರವನ್ನು ಹೆಚ್ಚಿಸುತ್ತದೆ.    



* ಬಳಿಕ ಹಳೆಯ ಲಿಪ್‌ಸ್ಟಿಕ್‌ನಿಂದ ಚಿಕ್ಕದಾಗಿ ಕೆರೆದು ತೆಗೆದ ಪುಡಿಯನ್ನು ಸೇರಿಸಿ. ಇದರ ಪ್ರಮಾಣ ನಿಮಗೆ ಬಿಟ್ಟ ಆಯ್ಕೆ. ತಿಳಿಯಾಗಿರಬೇಕೆಂದರೆ ಕಡಿಮೆ ಗಾಢವಾಗಿರಬೇಕೆಂದರೆ ಹೆಚ್ಚು ಸೇರಿಸಿ ಚೆನ್ನಾಗಿ ಬೆರೆಸಿ.

* ಎಲ್ಲವೂ ಚೆನ್ನಾಗಿ ಮಿಶ್ರಣಗೊಂಡ ಬಳಿಕ ಒಂದು ಚಿಕ್ಕ ಡಬ್ಬಿಯಲ್ಲಿ ಹಾಕಿ ಮುಚ್ಚಿಟ್ಟು ತಣಿಯಲು ಬಿಡಿ. ಕನಿಷ್ಠ ಎರಡು ಗಂಟೆಯಾದರೂ ತಣಿಯಬೇಕು. ಬಳಿಕ ನಿಮ್ಮ ತುಟಿಗಳ ಅಂದವನ್ನು ನೋಡಿ ಮನೆಯವರು ಮತ್ತು ನಿಮ್ಮ ಸ್ನೇಹಿತರು ಸಂತೋಷಪಡುವುದನ್ನು ಕಂಡು ಸಂಭ್ರಮಿಸಿ.



ವಯಸ್ಸಿನ ಮೇಲೆ ನಿರ್ಬಂಧ ಹೇರುವ ಅದ್ಭುತ ಹಣ್ಣು ದಾಳಿಂಬೆ
ಹಣ್ಣುಗಳು ನಮ್ಮ ದೈನಂದಿನ ಜೀವನದಲ್ಲಿ ಶಕ್ತಿಯನ್ನು ಪೂರೈಕೆ ಮಾಡುವ ಮೂಲವಾಗಿದೆ ಎಂಬುದಾಗಿ ನಮಗೆಲ್ಲಾ ತಿಳಿದಿರುವ ವಿಚಾರವಾಗಿದೆ. ದೈನಂದಿನ ಉಪಹಾರ, ಮಧ್ಯಾಹ್ನದೂಟ ಮತ್ತು ರಾತ್ರಿಯೂಟದ ನಡುವೆ ಕೂಡ ಹಣ್ಣುಗಳನ್ನು ಸೇವಿಸಿ ಎಂಬುದಾಗಿಯೇ ವೈದ್ಯರು ಸಲಹೆ ನೀಡುತ್ತಾರೆ. ಹೆಚ್ಚುವರಿ ಪ್ರೊಟೀನ್ ಮತ್ತು ವಿಟಮಿನ್‎ಗಳನ್ನು ಪ್ರತಿಯೊಂದು ಹಣ್ಣೂ ಹೊಂದಿದ್ದು ನಮಗೆ ಹೆಚ್ಚುವರಿ ಶಕ್ತಿಯನ್ನು ರೋಗನಿರೋಧಕ ಸಾಮರ್ಥ್ಯವನ್ನು ಒದಗಿಸುತ್ತದೆ.

ಇಂದಿನ ಲೇಖನದಲ್ಲಿ ಸ್ನಾಯು ಸಾಮರ್ಥ್ಯ ಮತ್ತು ವಯಸ್ಸಾಗುವಿಕೆಯನ್ನು ತಡೆಗಟ್ಟಲು ನೆರವಾಗಿರುವ ದಾಳಿಂಬೆಯ ವಿಶೇಷತೆಯನ್ನು ತಿಳಿದುಕೊಳ್ಳೋಣ. ದಾಳಿಂಬೆ ಜ್ಯೂಸ್ ಸೇವನೆಯು ಯುರೋಲಿತಿನ್ ಎ ಯನ್ನು ಉತ್ಪಾದಿಸಲು ನೆರವಾಗಲಿದೆ, ಇದು ಒಂದು ಅಣುವಾಗಿ ಕಾರ್ಯನಿರ್ವಹಿಸಲಿದೆ.



ಇದು ಸ್ನಾಯು ಕೋಶಕ್ಕೆ ಶಕ್ತಿಯನ್ನು ನೀಡಿ ವಯಸ್ಸಾಗುವಿಕೆಯಿಂದ ತಡೆಗಟ್ಟುತ್ತದೆ. ನಮಗೆ ವಯಸ್ಸಾದಂತೆ ನಮ್ಮ ಕೋಶಗಳು ಮೈಟೊಕಾಂಡಿಯವನ್ನು ಮರುಬಳಕೆ ಮಾಡಲು ಹೋರಾಡುತ್ತದೆ, ಅಂತೆಯೇ ಅವುಗಳಿಗೆ ಪ್ರಮುಖ ಕಾರ್ಯನಿರ್ವಹಣೆಯನ್ನು ಸಾಧಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಕೋಶದಲ್ಲಿ ಒಟ್ಟುಗೂಡುತ್ತದೆ.



ಈ ವಿಘಟನೆಯು ಹಲವಾರು ಕೋಶಗಳ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ, ಸ್ನಾಯುಗಳು ಇದರಲ್ಲಿ ಸೇರಿಕೊಂಡಿವೆ, ವರ್ಷಗಳಾಗುತ್ತಿದಂತೆ ಇದು ದುರ್ಬಲಗೊಂಡು ಹಲವಾರು ವಯಸ್ಸು ಸಂಬಂಧಿ ರೋಗಗಳನ್ನು ದಯಪಾಲಿಸುತ್ತದೆ. ಯುರೋಲಿತಿನ್ ಎ ಕೋಶಗಳ ಸಾಮರ್ಥ್ಯವನ್ನು ಮರುಸ್ಥಾಪಿಸುತ್ತದೆ ಇದನ್ನು ಮೈಟೊಕಾಂಡ್ರಿಯಲ್ ಕ್ಲೀನ್ ಅಪ್ ಪ್ರೊಸೆಸ್ ಎಂಬುದಾಗಿ ಕೂಡ ಕರೆಯಲಾಗುತ್ತದೆ ಇಲ್ಲದಿದ್ದರೆ ಇದನ್ನು ಮೈತಿಪಜಿ ಎಂಬುದಾಗಿ ಕರೆಯಲಾಗುತ್ತದೆ, ಎಂಬುದಾಗಿ ಸ್ವಿಡ್ಜರ್‎ಲ್ಯಾಂಡ್‎ನ ಪೇಟ್ರಿಕ್ ಅಬಿಸಿಚರ್ ತಿಳಿಸುತ್ತಾರೆ.

ಸಂಪೂರ್ಣ ಸ್ವಾಭಾವಿಕ ದ್ರವ್ಯವಾಗಿರುವ ಇದು, ಪ್ರಬಲವಾಗಿದೆ ಮತ್ತು ಸಾಮರ್ಥ್ಯವನ್ನು ಅಳೆಯಬಹುದಾಗಿದೆ ಎಂಬುದಾಗಿ ಪೇಟ್ರಿಕ್ ತಿಳಿಸುತ್ತಾರೆ. ಅಧ್ಯಯನಕ್ಕಾಗಿ, ತಂಡವು ತಮ್ಮ ಕಲ್ಪನೆಯನ್ನು ನೆಮಾಟೋಡ್, ಸಿ ಅಲೆಗನ್ಸ್ ಆಧಾರದ ಮೇಲೆ ಮೇಲೆ ಅಳೆದಿದ್ದು, 8-10 ದಿನಗಳ ನಂತರ ಇದನ್ನು ಹಿರಿಯ ಎಂಬುದಾಗಿ ಪರಿಗಣಿಸಲಾಗಿದೆ.



ಯುರೋಲಿತಿನ್ ಎ ಗೆ ಹುಳುಗಳನ್ನು ಒಡ್ಡಿದಾಗ ನಿಯಂತ್ರಿತ ಗುಂಪಿಗಿಂತ ಇದು 45% ದಷ್ಟು ಏರಿಕೆಯಾಗಿದೆ. ದಂಶಕಗಳ ಅಧ್ಯಯನದಲ್ಲಿ, ಹಿರಿಯ ಇಲಿಗಳೆಂದರೆ 2 ವರ್ಷಗಳದ್ದನ್ನು, ಯುರೋಲಿತಿನ್ ಎ ಗೆ ಒಡ್ಡಿದಾಗ ನಿಯಂತ್ರಿತ ಹಿರಿ ಇಲಿಗಳಿಗಿಂತ 42% ಉತ್ತಮ ಸಹಿಷ್ಣುತೆಯು ಕಂಡುಬಂದಿದೆ.





ಅದಾಗ್ಯೂ, ದಾಳಿಂಬೆಯು ಅದ್ಭುತ ಅಣುವನ್ನು ಮಾತ್ರ ಒಳಗೊಂಡಿರದೇ ಪೂರ್ವಗಾಮಿಯಾಗಿದೆ ಎಂಬುದಾಗಿ ಕೂಡ ಸಂಶೋಧಕರು ತಿಳಿಸಿದ್ದಾರೆ. ಪ್ರಾಣಿಗಳ ತಳಿ ಮತ್ತು ಗಟ್ ಮೈಕ್ರೊಬಯಾ‎ಮ್‎ನಲ್ಲಿರುವ ಫ್ಲೋರಾವನ್ನು ಆಧರಿಸಿ ಯುರೋಲಿತಿನ್ ಎ ಉತ್ಪನ್ನ ಬೇರೆ ಬೇರಯದಾಗಿರುತ್ತದೆ. ಸರಿಯಾದ ಸೂಕ್ಷ್ಮಜೀವಿಗಳು ಇಲ್ಲದೇ ಇದ್ದಾಗ ಯುರೋಲಿತಿನ್ ಎ ಉತ್ಪತ್ತಿಯಾಗುವುದಿಲ್ಲ ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ. ಯುರೋಲಿತಿನ್ ಎ ಯು ನಮ್ಮ ಕರುಳಗಳಲ್ಲಿ ಉತ್ಪತ್ತಿಯಾಗುತ್ತದೆ, ನಾವು ಏನು ತಿನ್ನುತ್ತೇವೆಯೋ ಅದನ್ನು ಮುರಿಯಲು ಬ್ಯಾಕ್ಟೀರಿಯಾಗೆ ಸಾಧ್ಯವಾಗುತ್ತದೆ.

ಜೀರ್ಣಕ್ರಿಯೆಯಾಗುವಾಗ, ಉತ್ಪಾದನೆಯಾಗುವ ವಸ್ತುವುದು ನಮಗೆ ಪ್ರಯೋಜನಕಾರಿಯಾಗಿರುತ್ತದೆ, ನೈಸರ್ಗಿಕ ಆಯ್ಕೆಯಲ್ಲಿ ಬ್ಯಾಕ್ಟೀರಿಯಾ ಮತ್ತು ಅವುಗಳ ಪರಪೋಷಿಯನ್ನು ಒಳಗೊಂಡಿರುತ್ತದೆ. ಎಂಬುದಾಗಿ ಸ್ವಿಜರ್ಲ್ಯಾಂಡ್‎ನ ಒಂದು ಜೀವ ವಿಜ್ಞಾನ ಕಂಪೆನಿಯ ಸಿಇಒ ರಿಂಚ್ ಅಮೆಜಿಂಟೀಸ್ ತಿಳಿಸುತ್ತಾರೆ.  








ಇವರು ಹೇಳುವಂತೆ ಯುರೋಲಿತಿನ್ ಬರಿಯ ದಾಳಿಂಬೆಯಲ್ಲಿ ಮಾತ್ರವಲ್ಲದೆ ಸಣ್ಣ ಸಣ್ಣ ನಟ್ಸ್ ಮತ್ತು ಬೆರ್ರಿಗಳಲ್ಲೂ ಇರುತ್ತದೆ. ಈ ಅಧ್ಯಯನವು ನೇಚರ್ ಮೆಡಿಸಿನ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದು ಮಾನವರ ಮೇಲೆ ಶೋಧನೆಯನ್ನು ನಡೆಸಲಾಗುತ್ತಿದೆ.





ವರ್ಕ್‎ಔಟ್ ಮಾಡುವ ಮಹಿಳೆಯರಿಗಾಗಿ ವಿಶೇಷ ಬ್ಯೂಟಿ ಟಿಪ್ಸ್

ವರ್ಕ್‎ಔಟ್ ಮಾಡುವ ಮಹಿಳೆಯರಿಗಾಗಿ ವಿಶೇಷ ಬ್ಯೂಟಿ ಟಿಪ್ಸ್

ನಿಮ್ಮನ್ನು ನೀವು ಆಕರ್ಷಕವಾಗಿ ಮತ್ತು ಫಿಟ್‌ ಆಗಿ ಇರಿಸಿಕೊಳ್ಳಬೇಕೆಂಬ ಬಯಕೆಯನ್ನು ಹೊಂದಿದವರಾಗಿದ್ದೀರಾ? ಅಂತೆಯೇ ನಿಯಮಿತ ಫಿಟ್‎ನೆಸ್ ಕೇಂದ್ರಗಳಿಗೆ ಭೇಡಿ ನೀಡಿ ವರ್ಕ್ ಔಟ್ ಮಾಡುವ ಖಯಾಲಿ ಹೊಂದಿದವರಾಗಿದ್ದೀರಾ? ಹಾಗಿದ್ದರೆ ನಿಮ್ಮನ್ನು ಈ ಸಮಯಗಳಲ್ಲಿ ಹೇಗೆ ತಾಜಾ ಆಗಿ ಇರಿಸಿಕೊಳ್ಳಬೇಕೆಂಬ ಸಲಹೆಗಳನ್ನು ಇಂದಿನ ಲೇಖನದಲ್ಲಿ ನಾವು ನೀಡಲಿರುವೆವು.

ವರ್ಕ್ ಔಟ್ ಮಾಡುವುದರಲ್ಲಿ ಹಲವಾರು ವಿಧಗಳಿದ್ದು ಇದರಲ್ಲಿ ಜಿಮ್‎ಗೆ ಹೋಗುವುದು, ಯೋಗ ಮಾಡುವುದು, ಜಾಗಿಂಗ್, ವಾಕಿಂಗ್ ಮೊದಲಾದ ವಿಧಗಳಿವೆ. ಈ ಸಮಯದಲ್ಲಿ ಹೆಚ್ಚುವರಿ ಬೆವರು ದೇಹದಿಂದ ಹರಿದು ಹೋಗುತ್ತದೆ. ಬೆವರುವುದು ತ್ವಚೆಗೆ ಅತ್ಯುತ್ತಮವಾಗಿದೆ.

ಅದಾಗ್ಯೂ ಸೂಕ್ತ ತ್ವಚೆಯ ಕಾಳಜಿ ಸಲಹೆಗಳನ್ನು ನೀವು ಪಾಲಿಸಿಲ್ಲ ಎಂದಾದಲ್ಲಿ ಬೆವರನಿಂದ ಮೊಡವೆ, ದೇಹದ ದುರ್ಗಂಧ ಮತ್ತು ಡ್ಯಾಂಡ್ರಫ್ ಉಂಟಾಗುತ್ತದೆ. ನೀವು ವರ್ಕ್ ಔಟ್ ಮಾಡುವ ಮನಸ್ಸುಳ್ಳವರಾಗಿದ್ದು, ಆರೋಗ್ಯಯುತ ತ್ವಚೆ ಮತ್ತು ಕೂದಲನ್ನು ನಿರ್ವಹಿಸಬೇಕೆನ್ನುವ ಬಯಕೆಯುಳ್ಳವರಾಗಿದ್ದಲ್ಲಿ ಈ ಕೆಳಗೆ ನಾವು ನೀಡುತ್ತಿರುವ ಸೌಂದರ್ಯ ಸಲಹೆಗಳನ್ನು ಪಾಲಿಸಿ.




ಸೌಂದರ್ಯ ಕೇವಲ ಮುಖಕ್ಕೆ ಮಾತ್ರವಲ್ಲ, ಕುತ್ತಿಗೆಗೂ ಬೇಕು!

ನಮ್ಮ ದೇಹದ ಚರ್ಮದಲ್ಲಿ ಅತಿ ಹೆಚ್ಚು ಮಡಿಕೆಗಳು ಬೀಳುವ ಭಾಗಗಳಲ್ಲಿ ಕುತ್ತಿಗೆಯ ಚರ್ಮ ಪ್ರಮುಖವಾದುದು. ಪ್ರತಿಬಾರಿ ಬಗ್ಗುವಾಗ ಚರ್ಮ ಮಡಚಿಕೊಳ್ಳಲೇಬೇಕು. ಪರಿಣಾಮವಾಗಿ ಕುತ್ತಿಗೆಯ ಚರ್ಮದಲ್ಲಿ ಹಲವು ಅಡ್ಡಗೆರೆಗಳಿರುತ್ತವೆ. ಮುಖದ ಚರ್ಮದಷ್ಟೇ ಕುತ್ತಿಗೆಯ ಚರ್ಮವೂ ವ್ಯಕ್ತಿಯ ಸೌಂದರ್ಯವನ್ನು ವ್ಯಕ್ತಪಡುಸುವುದರಿಂದ ಕುತ್ತಿಗೆಯ ಚರ್ಮದ ಯಾವುದೇ ತೊಂದರೆ ಮುಜುಗರಕ್ಕೀಡು ಮಾಡಬಹುದು.


ನಿಮ್ಮ ಹೊಸ ನೆಕ್ಲೇಸ್ ಅನ್ನು ನಿಮ್ಮ ಗೆಳತಿಯರಿಗೆ ತೋರಿಸಲು ಉತ್ಸುಕರಾಗಿರುವಾಗ ಕುತ್ತಿಗೆಯ ಚರ್ಮದ ಬಣ್ಣ ಗಾಢವಾಗಿರುವುದು ಕಂಡು ಬಂದರೆ ಹೇಗಾಗಬೇಡ! ಅಲ್ಲದೇ ಕುತ್ತಿಗೆಯ ಚರ್ಮವನ್ನು ಮರೆಮಾಚುವಂತೆಯೂ ಇಲ್ಲದಿರುವಾಗ ಕಟುಮಾತುಗಳನ್ನು ಎದುರಿಸಬೇಕಾದ ಸಂಭವವೂ ಇಲ್ಲದಿಲ್ಲ.

ಮೇಕಪ್ ಮೂಲಕ ಮರೆಮಾಚಬಹುದಾದರೂ ನೆನಪಿಲ್ಲದೇ ಕೆಳಕ್ಕೆ ಬಗ್ಗಿ ಬಳಿಕ ಮೇಲೆ ನೋಡಿದಾಗ ನೆರಿಗೆಗಳ ನಡುವೆ ಮೇಕಪ್ ಸಹಾ ಗೆರೆಗಳ ರೂಪ ಪಡೆಯುವುದು ಮುಜುಗರವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದ್ದರಿಂದ ಈ ಮುಜುಗರಕ್ಕೆ ಒಳಗಾಗುವ ಬದಲು ಚರ್ಮದ ಬಣ್ಣವನ್ನೇ ಸಹಜವರ್ಣಕ್ಕೆ ಬರುವಂತೆ ಮಾಡುವುದು ಜಾಣತನ. ಅದರಲ್ಲೂ ಈ ಕೆಲಸಕ್ಕಾಗಿ ನೈಸರ್ಗಿಕ ವಿಧಾನವನ್ನು ಅನುಸರಿಸುವುದು ಇನ್ನಷ್ಟು ಜಾಣತನದ ಕ್ರಮವಾಗಿದೆ. ಕಪ್ಪು ಬಣ್ಣಕ್ಕೆ ತಿರುಗಿದ ಕುತ್ತಿಗೆಯ ಸಮಸ್ಯೆಗೆ-ಲಿಂಬೆಯ ಚಿಕಿತ್ಸೆ!



ಕುತ್ತಿಗೆ ಬಣ್ಣ ಗಾಢಗೊಳ್ಳಲು ಕೆಲವಾರು ಕಾರಣಗಳಿವೆ. ಇದರಲ್ಲಿ ಪ್ರಮುಖವಾದುದು ಮುಖದ ಚರ್ಮಗೆ ನೀಡುವ ಸ್ವಚ್ಛತೆ ಮತ್ತು ಆರೈಕೆಯನ್ನು ಕುತ್ತಿಗೆಯ ಚರ್ಮಕ್ಕೆ ನೀಡದೇ ಇರುವುದು. ಕುತ್ತಿಗೆಯ ಮೇಲೆ ಒತ್ತಡ ಹಾಕಲು ಸಾಧ್ಯವಿಲ್ಲದ ಕಾರಣ ಉಜ್ಜದೇ ಆ ಭಾಗದಲ್ಲಿ ಸತ್ತ ಜೀವಕೋಶಗಳು ದಪ್ಪನಾಗಿ ಅಂಟಿಕೊಂಡಿರುವುದು, ಆದ್ರತೆಯ ಪ್ರಸಾಧನಗಳನ್ನು ಕುತ್ತಿಗೆಗೂ ಸವರುವುದನ್ನು ಮರೆಯುವುದು ಇತ್ಯಾದಿ ಕಾರಣಗಳಿವೆ.

ಆದರೆ ಈಗ ಈ ತೊಂದರೆಯನ್ನು ನಿವಾರಿಸಲು ಸಮರ್ಥವಾದ ಮನೆಮದ್ದು ಲಭ್ಯವಿದ್ದು ಒಂದೇ ವಾರದಲ್ಲಿ ಕುತ್ತಿಗೆಯ ಚರ್ಮದ ಬಣ್ಣವನ್ನು ಸಹಜವರ್ಣಕ್ಕೆ ತರಲು ಸಾಧ್ಯವಿದೆ. ಬನ್ನಿ, ಈ ವಿಧಾನವನ್ನು ಹೇಗೆ ಅನುಸರಿಸುವುದು ಎಂಬುದನ್ನು ನೋಡೋಣ:



ಅಗತ್ಯವಿರುವ ಸಾಮಾಗ್ರಿಗಳು


*ಆಲಿವ್ ಎಣ್ಣೆ - 1 ದೊಡ್ಡಚಮಚ
*ಉಪ್ಪು - 2 ಚಿಕ್ಕ ಚಮಚ
*ಅಡುಗೆ ಸೋಡಾ - 1 ದೊಡ್ಡಚಮಚ


ಕುತ್ತಿಗೆಯ ಚರ್ಮದಲ್ಲಿ ಸಂಗ್ರಹವಾಗಿರುವ ಸತ್ತ ಜೀವಕೋಶಗಳ ಪದರವನ್ನು ನಿವಾರಿವುದು ಈ ಆರೈಕೆಯ ಕ್ರಮದ ಪ್ರಮುಖ ಭಾಗ. ಆಲಿವ್ ಎಣ್ಣೆ, ಉಪ್ಪು ಮತ್ತು ಅಡುಗೆ ಸೋಡಾದ ಮಿಶ್ರಣ ಈ ನಿಟ್ಟಿನಲ್ಲಿ ಸಮರ್ಥವಾದ ಆರೈಕೆ ನೀಡುತ್ತದೆ.


ಆಲಿವ್ ಎಣ್ಣೆಯಲ್ಲಿರುವ ವಿಟಮಿನ್ ಇ ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಒಳಗೆ ಇಳಿದು ಅಡಿಯಿಂದ ಪೋಷಣೆ ನೀಡುತ್ತದೆ. ಉಪ್ಪು ಸತ್ತ ಜೀವಕೋಶಗಳನ್ನು ಸಡಿಲಿಸಿದರೆ ಅಡುಗೆ ಸೋಡಾ ಉತ್ತಮ ಬಿಳಿಚುಕಾರಕವಾಗಿದ್ದು ಗಾಢವಾಗಿದ್ದ ಚರ್ಮದ ವರ್ಣದ್ರವ್ಯಗಳನ್ನು ತಿಳಿಗೊಳಿಸಿ ಸಹಜವರ್ಣ ಪಡೆಯಲು ನೆರವಾಗುತ್ತದೆ. ನಿತ್ಯವೂ ಸರಿಯಾದ ಕ್ರಮದಲ್ಲಿ ಅನುಸರಿಸಿದರೆ ಒಂದೇ ವಾರದಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣಬಹುದು. ಕಪ್ಪಗಿನ ಕುತ್ತಿಗೆಯ ಸಮಸ್ಯೆಗೆ ಇಲ್ಲಿದೆ ಪವರ್‌ಫುಲ್ ಮನೆಮದ್ದು



ಈ ಮುಖಲೇಪವನ್ನು ತಯಾರಿಸುವ ವಿಧಾನ



*ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಯವಾದ ಲೇಪನ ತಯಾರಿಸಿ. 

*ಈ ಲೇಪನವನ್ನು ಕುತ್ತಿಗೆಯ ಮೇಲೆ ತೆಳುವಾಗಿ ಹಚ್ಚಿ ಕುತ್ತಿಗೆಯ ಕೆಳಗಿನಿಂದ ಮೇಲೆ ಬರುವಂತೆ ಹೆಚ್ಚಿನ ಒತ್ತಡವಿಲ್ಲದೇ ಮಸಾಜ್ ಮಾಡಿ. ಬಳಿಕ ಈ ಲೇಪನವನ್ನು ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ. 
*ನಂತರ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಬಳಿಕ ದಪ್ಪ ಟವೆಲ್‌ನಿಂದ ಒತ್ತಿಕೊಂಡು ಒರೆಸಿಕೊಳ್ಳಿ. 
*ಪ್ರತಿದಿನ ಒಂದೇ ಅವಧಿಯಲ್ಲಿ ಕನಿಷ್ಠ ಒಂದು ವಾರ ಈ ಕ್ರಮವನ್ನು ಅನುಸರಿಸಿ.







ಸೌಂದರ್ಯ ಕೇವಲ ಮುಖಕ್ಕೆ ಮಾತ್ರವಲ್ಲ, ಕುತ್ತಿಗೆಗೂ ಬೇಕು!


ನಮ್ಮ ದೇಹದ ಚರ್ಮದಲ್ಲಿ ಅತಿ ಹೆಚ್ಚು ಮಡಿಕೆಗಳು ಬೀಳುವ ಭಾಗಗಳಲ್ಲಿ ಕುತ್ತಿಗೆಯ ಚರ್ಮ ಪ್ರಮುಖವಾದುದು. ಪ್ರತಿಬಾರಿ ಬಗ್ಗುವಾಗ ಚರ್ಮ ಮಡಚಿಕೊಳ್ಳಲೇಬೇಕು. ಪರಿಣಾಮವಾಗಿ ಕುತ್ತಿಗೆಯ ಚರ್ಮದಲ್ಲಿ ಹಲವು ಅಡ್ಡಗೆರೆಗಳಿರುತ್ತವೆ. ಮುಖದ ಚರ್ಮದಷ್ಟೇ ಕುತ್ತಿಗೆಯ ಚರ್ಮವೂ ವ್ಯಕ್ತಿಯ ಸೌಂದರ್ಯವನ್ನು ವ್ಯಕ್ತಪಡುಸುವುದರಿಂದ ಕುತ್ತಿಗೆಯ ಚರ್ಮದ ಯಾವುದೇ ತೊಂದರೆ ಮುಜುಗರಕ್ಕೀಡು ಮಾಡಬಹುದು.


ನಿಮ್ಮ ಹೊಸ ನೆಕ್ಲೇಸ್ ಅನ್ನು ನಿಮ್ಮ ಗೆಳತಿಯರಿಗೆ ತೋರಿಸಲು ಉತ್ಸುಕರಾಗಿರುವಾಗ ಕುತ್ತಿಗೆಯ ಚರ್ಮದ ಬಣ್ಣ ಗಾಢವಾಗಿರುವುದು ಕಂಡು ಬಂದರೆ ಹೇಗಾಗಬೇಡ! ಅಲ್ಲದೇ ಕುತ್ತಿಗೆಯ ಚರ್ಮವನ್ನು ಮರೆಮಾಚುವಂತೆಯೂ ಇಲ್ಲದಿರುವಾಗ ಕಟುಮಾತುಗಳನ್ನು ಎದುರಿಸಬೇಕಾದ ಸಂಭವವೂ ಇಲ್ಲದಿಲ್ಲ.

ಮೇಕಪ್ ಮೂಲಕ ಮರೆಮಾಚಬಹುದಾದರೂ ನೆನಪಿಲ್ಲದೇ ಕೆಳಕ್ಕೆ ಬಗ್ಗಿ ಬಳಿಕ ಮೇಲೆ ನೋಡಿದಾಗ ನೆರಿಗೆಗಳ ನಡುವೆ ಮೇಕಪ್ ಸಹಾ ಗೆರೆಗಳ ರೂಪ ಪಡೆಯುವುದು ಮುಜುಗರವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದ್ದರಿಂದ ಈ ಮುಜುಗರಕ್ಕೆ ಒಳಗಾಗುವ ಬದಲು ಚರ್ಮದ ಬಣ್ಣವನ್ನೇ ಸಹಜವರ್ಣಕ್ಕೆ ಬರುವಂತೆ ಮಾಡುವುದು ಜಾಣತನ. ಅದರಲ್ಲೂ ಈ ಕೆಲಸಕ್ಕಾಗಿ ನೈಸರ್ಗಿಕ ವಿಧಾನವನ್ನು ಅನುಸರಿಸುವುದು ಇನ್ನಷ್ಟು ಜಾಣತನದ ಕ್ರಮವಾಗಿದೆ. ಕಪ್ಪು ಬಣ್ಣಕ್ಕೆ ತಿರುಗಿದ ಕುತ್ತಿಗೆಯ ಸಮಸ್ಯೆಗೆ-ಲಿಂಬೆಯ ಚಿಕಿತ್ಸೆ!


ಕುತ್ತಿಗೆ ಬಣ್ಣ ಗಾಢಗೊಳ್ಳಲು ಕೆಲವಾರು ಕಾರಣಗಳಿವೆ. ಇದರಲ್ಲಿ ಪ್ರಮುಖವಾದುದು ಮುಖದ ಚರ್ಮಗೆ ನೀಡುವ ಸ್ವಚ್ಛತೆ ಮತ್ತು ಆರೈಕೆಯನ್ನು ಕುತ್ತಿಗೆಯ ಚರ್ಮಕ್ಕೆ ನೀಡದೇ ಇರುವುದು. ಕುತ್ತಿಗೆಯ ಮೇಲೆ ಒತ್ತಡ ಹಾಕಲು ಸಾಧ್ಯವಿಲ್ಲದ ಕಾರಣ ಉಜ್ಜದೇ ಆ ಭಾಗದಲ್ಲಿ ಸತ್ತ ಜೀವಕೋಶಗಳು ದಪ್ಪನಾಗಿ ಅಂಟಿಕೊಂಡಿರುವುದು, ಆದ್ರತೆಯ ಪ್ರಸಾಧನಗಳನ್ನು ಕುತ್ತಿಗೆಗೂ ಸವರುವುದನ್ನು ಮರೆಯುವುದು ಇತ್ಯಾದಿ ಕಾರಣಗಳಿವೆ.
ಆದರೆ ಈಗ ಈ ತೊಂದರೆಯನ್ನು ನಿವಾರಿಸಲು ಸಮರ್ಥವಾದ ಮನೆಮದ್ದು ಲಭ್ಯವಿದ್ದು ಒಂದೇ ವಾರದಲ್ಲಿ ಕುತ್ತಿಗೆಯ ಚರ್ಮದ ಬಣ್ಣವನ್ನು ಸಹಜವರ್ಣಕ್ಕೆ ತರಲು ಸಾಧ್ಯವಿದೆ. ಬನ್ನಿ, ಈ ವಿಧಾನವನ್ನು ಹೇಗೆ ಅನುಸರಿಸುವುದು ಎಂಬುದನ್ನು ನೋಡೋಣ:



ಅಗತ್ಯವಿರುವ ಸಾಮಾಗ್ರಿಗಳು
*ಆಲಿವ್ ಎಣ್ಣೆ - 1 ದೊಡ್ಡಚಮಚ
*ಉಪ್ಪು - 2 ಚಿಕ್ಕ ಚಮಚ
*ಅಡುಗೆ ಸೋಡಾ - 1 ದೊಡ್ಡಚಮಚ

ಕುತ್ತಿಗೆಯ ಚರ್ಮದಲ್ಲಿ ಸಂಗ್ರಹವಾಗಿರುವ ಸತ್ತ ಜೀವಕೋಶಗಳ ಪದರವನ್ನು ನಿವಾರಿವುದು ಈ ಆರೈಕೆಯ ಕ್ರಮದ ಪ್ರಮುಖ ಭಾಗ. ಆಲಿವ್ ಎಣ್ಣೆ, ಉಪ್ಪು ಮತ್ತು ಅಡುಗೆ ಸೋಡಾದ ಮಿಶ್ರಣ ಈ ನಿಟ್ಟಿನಲ್ಲಿ ಸಮರ್ಥವಾದ ಆರೈಕೆ ನೀಡುತ್ತದೆ.

ಆಲಿವ್ ಎಣ್ಣೆಯಲ್ಲಿರುವ ವಿಟಮಿನ್ ಇ ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಒಳಗೆ ಇಳಿದು ಅಡಿಯಿಂದ ಪೋಷಣೆ ನೀಡುತ್ತದೆ. ಉಪ್ಪು ಸತ್ತ ಜೀವಕೋಶಗಳನ್ನು ಸಡಿಲಿಸಿದರೆ ಅಡುಗೆ ಸೋಡಾ ಉತ್ತಮ ಬಿಳಿಚುಕಾರಕವಾಗಿದ್ದು ಗಾಢವಾಗಿದ್ದ ಚರ್ಮದ ವರ್ಣದ್ರವ್ಯಗಳನ್ನು ತಿಳಿಗೊಳಿಸಿ ಸಹಜವರ್ಣ ಪಡೆಯಲು ನೆರವಾಗುತ್ತದೆ. ನಿತ್ಯವೂ ಸರಿಯಾದ ಕ್ರಮದಲ್ಲಿ ಅನುಸರಿಸಿದರೆ ಒಂದೇ ವಾರದಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣಬಹುದು. ಕಪ್ಪಗಿನ ಕುತ್ತಿಗೆಯ ಸಮಸ್ಯೆಗೆ ಇಲ್ಲಿದೆ ಪವರ್‌ಫುಲ್ ಮನೆಮದ್ದು

ಈ ಮುಖಲೇಪವನ್ನು ತಯಾರಿಸುವ ವಿಧಾನ


*ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಯವಾದ ಲೇಪನ ತಯಾರಿಸಿ. 
*ಈ ಲೇಪನವನ್ನು ಕುತ್ತಿಗೆಯ ಮೇಲೆ ತೆಳುವಾಗಿ ಹಚ್ಚಿ ಕುತ್ತಿಗೆಯ ಕೆಳಗಿನಿಂದ ಮೇಲೆ ಬರುವಂತೆ ಹೆಚ್ಚಿನ ಒತ್ತಡವಿಲ್ಲದೇ ಮಸಾಜ್ ಮಾಡಿ.
ಬಳಿಕ ಈ ಲೇಪನವನ್ನು ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ.
*ನಂತರ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಬಳಿಕ ದಪ್ಪ ಟವೆಲ್‌ನಿಂದ ಒತ್ತಿಕೊಂಡು ಒರೆಸಿಕೊಳ್ಳಿ. 
*ಪ್ರತಿದಿನ ಒಂದೇ ಅವಧಿಯಲ್ಲಿ ಕನಿಷ್ಠ ಒಂದು ವಾರ ಈ ಕ್ರಮವನ್ನು ಅನುಸರಿಸಿ.




ಮುಖದ ಅಂದಕ್ಕೆ, ಟೊಮೆಟೊ-ಶ್ರೀಗಂಧದ ಫೇಸ್ ಪ್ಯಾಕ್

ಹಿಂದಿನ ದಿನಗಳಲ್ಲಿ ಈಗ ಲಭ್ಯವಿರುವ ನೂರಾರು ಪ್ರಸಾಧನಗಳೆಲ್ಲಾ ಇರಲೇ ಇಲ್ಲ. ಆದಾಗ್ಯೂ ಅಂದು ಮಹಿಳೆಯರು ತಮ್ಮ ಸೌಂದರ್ಯವನ್ನು ಹೇಗೆ ರಕ್ಷಿಸಿಕೊಳ್ಳುತ್ತಿದ್ದರು? ಆಗ ನೈಸರ್ಗಿಕ ವಿಧಾನಗಳನ್ನೇ ಅತಿ ಹೆಚ್ಚಾಗಿ ನೆಚ್ಚಿಕೊಳ್ಳಬೇಕಾಗಿತ್ತು. ಚರ್ಮ, ಕೂದಲಿನ ಪೋಷಣೆ ಮತ್ತು ಆರೈಕೆಗೆ ನಿಸರ್ಗ ನೀಡಿದ ಪರಿಕಗಳನ್ನೇ ಬಳಸಿಕೊಳ್ಳುತ್ತಿದ್ದರು. ಆದರೆ ಇಂದಿನ ಪ್ರಸಾಧನಗಳು ಥಟ್ಟನೇ ಸೊಬಗು ನೀಡುವ ಭರದಲ್ಲಿ ಹಲವು ಹಾನಿಯನ್ನೂ ನೀಡುತ್ತಿವೆ.   ಮೊಡವೆ ಕಾಟಕ್ಕೆ, ಟೊಮೆಟೊ ಹಣ್ಣಿನ ಫೇಸ್ ಪ್ಯಾಕ್


ಒಂದು ಸಂಶೋಧನೆಯಲ್ಲಿ ಹಿಂದಿನ ದಿನಗಳಲ್ಲಿ ನೈಸರ್ಗಿಕ ವಿಧಾನಗಳಿಂದ ಅಂದಿನ ಮಹಿಳೆಯರು ಇಂದಿನ ದುಬಾರಿ ಪ್ರಸಾಧನ ಬಳಸುತ್ತಿರುವ ಮಹಿಳೆಯರಿಗಿಂತಲೂ ಹೆಚ್ಚು ಅರೋಗ್ಯಕಾರಿ ಚರ್ಮ ಮತ್ತು ಕೂದಲನ್ನು ಪಡೆದಿದ್ದರು ಎಂದು ಕಂಡುಕೊಳ್ಳಲಾಗಿದೆ.  ಟೊಮೆಟೊದಿಂದ ಕಾಂತಿಯುತ ತ್ವಚೆಗಾಗಿ 6 ವಿಧಾನ



ಹಿಂದಿನ ದಿನಗಳಿಗೆ ಹೋಲಿಸಿದರೆ ಬದಲಾದ ಜೀವನಶೈಲಿ, ಅನಾರೋಗ್ಯಕರ ಸಿದ್ಧ ಆಹಾರಗಳು, ಮಾನಸಿಕ ಮತ್ತು ಕೆಲಸದ ಒತ್ತಡ, ಗಾಳಿಯಲ್ಲಿನ ಪ್ರದೂಷಣೆ ಮೊದಲಾದ ಹತ್ತು ಹಲವು ಕಾರಣಗಳು ಇಂದಿನ ಜನಾಂಗದ ಯುವಜನತೆಯ ಚರ್ಮ ಮತ್ತು ಕೂದಲನ್ನು ಅನಾರೋಗ್ಯಕರವಾಗಿಸಿದೆ.    ಅಪ್ಸರೆಯಂತಹ ತ್ವಚೆಗಾಗಿ ಶ್ರೀಗಂಧದ ಫೇಸ್ ಪ್ಯಾಕ್!



ಹಿಂದಿನ ದಿನಗಳ ನೈಸರ್ಗಿಕ ಸೌಂದರ್ಯವನ್ನು ಪಡೆಯಲು ಈಗಲೂ ತಡವಾಗಿಲ್ಲ, ಅವರು ಬಳಸುತ್ತಿದ್ದ ನೈಸರ್ಗಿಕ ಪ್ರಸಾಧನಗಳನ್ನು ಬಳಸಿ ಈ ಹಾನಿಯನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೂ ಈಗಿರುವುದಕ್ಕಿಂತಲೂ ಉತ್ತಮ ಸೌಂದರ್ಯವನ್ನು ಪಡೆಯಬಹುದು. ಇದರಲ್ಲೊಂದು ಸುಲಭ ವಿಧಾನವೆಂದರೆ ಟೊಮೆಟೊ ಮತ್ತು ಗಂಧದ ಪುಡಿಯ ಬಳಕೆ. ಬನ್ನಿ, ಇದರ ಮಹತ್ವವನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ....  ನಿಮ್ಮ ಅಂದದ ತ್ವಚೆಗೆ ಚಂದನದ ಆರೈಕೆ


ಮಳೆಗಾಲದಲ್ಲಿ ಮುಖದ ಸೌಂದರ್ಯಕ್ಕೆ ಒಂದಿಷ್ಟು ಟಿಪ್ಸ್

ನಮ್ಮ ಚರ್ಮದ ಆರೈಕೆಗೆ ಆರ್ದ್ರತೆ ಅತ್ಯಂತ ಅವಶ್ಯಕ. ಆರ್ದ್ರತೆ ಇಲ್ಲದಿದ್ದರೆ ಚರ್ಮ ತೀರಾ ಒಣಗಿ ಸೀಳತೊಡಗುತ್ತದೆ. ಮಳೆಗಾಲದಲ್ಲಿಯೂ ಇಷ್ಟೊಂದು ಮಳೆಯಾಗುತ್ತಿದ್ದರೂ ಚರ್ಮ ಸೀಳುವುದು ಅಥವಾ ಪರೆ ಏಳುವುದು ಮೊದಲಾದ ತೊಂದರೆಗೆ ಒಳಗಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಮಳೆಗಾಲದಲ್ಲಿ ಮಳೆ ಇದ್ದರೂ ಗಾಳಿಯಲ್ಲಿ ಆರ್ದ್ರತೆ ಇಲ್ಲದಿರುವುದು. ಅಂದರೆ ನೀರಹನಿ ಆವಿಯಾಗದೇ ಗಾಳಿಗೆ ಬರುವುದೇ ಇಲ್ಲ. ಹಾಗಾಗಿ ಗಾಳಿ ಒಣಗಿರುತ್ತದೆ. ಬಟ್ಟೆಗಳು ಒಣಗದಿರಲೂ ಇದೇ ಕಾರಣ.




ಆದರೆ ಈ ಕೊರತೆಯಿಂದ ಚರ್ಮ ಕಳೆಗುಂದುವುದು ಮಾತ್ರವಲ್ಲ, ಚಿಕ್ಕ ಗುಳ್ಳೆಗಳು ಏಳುವುದು, ಮೊಡವೆಗಳು ಮತ್ತು ಚರ್ಮ ಕೆಂಪಗಾಗುವ ತೊಂದರೆಯನ್ನೂ ಎದುರಿಸಬೇಕಾಗುತ್ತದೆ. ಇದಕ್ಕೆ ತಕ್ಕ ಮದ್ದು ಎಂದರೆ ದಿನಕ್ಕೆ ಕನಿಷ್ಠ ಎಂಟು ಲೋಟಗಳಾದರೂ ನೀರು ಕುಡಿಯುವುದು.


ಆದರೆ ಮಳೆಗಾಲದಲ್ಲಿ ಬಾಯಾರಿಕೆಯಾಗದ ಕಾರಣ ನಾವೆಲ್ಲಾ ಸೋಮಾರಿಗಳಾಗಿ ನೀರು ಕುಡಿಯದೇ ಚರ್ಮ ಒಣಗಲು ಪ್ರತ್ಯಕ್ಷರಾಗಿ ಕಾರಣರಾಗುತ್ತೇವೆ. ಆಯ್ತು, ಸೋಮಾರಿಗಳಾದ ಪರಿಣಾಮವಾಗಿ ಚರ್ಮ ಒಣಗಿದೆ, ಇದಕ್ಕೇನು ಪರಿಹಾರ ಎಂದು ಕೇಳಿದವರಿಗೆ ಇಲ್ಲಿ ಉತ್ತರ ನೀಡಲಾಗಿದೆ, ಮುಂದೆ ಓದಿ...




ಹುಣಸೆಹುಳಿಯ ನೀರು 


ಕೊಂಚ ಹುಣಸೆಹುಳಿಯನ್ನು ನೀರಿನಲ್ಲಿ ಕಿವುಚಿ (ಕದಡುವುದಲ್ಲ, ಕೊಂಚ ನೀರು ಬೆರೆಸಿ ಮಡ್ಡಿಯಾಗಿಸಿದರೆ ಸಾಕು) ಇದನ್ನು ಮುಖ, ಕೈ, ಪಾದ, ಕುತ್ತಿಗೆಯ ಚರ್ಮದ ಮೇಲೆ ಸವರಿ ಒಣಗಲು ಬಿಡಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ನುಗಳು ಮುಂದಿನ ಕೆಲಸ ನೋಡಿಕೊಳ್ಳುತ್ತವೆ. ಇದರಿಂದ ಆರ್ದ್ರತೆಯ ಕೊರತೆಯಿಂದಾಗಿ ಬಾಡಿದ್ದ ಚರ್ಮ ಶೀಘ್ರವೇ ಮೊದಲಿನ ಕಾಂತಿ ಪಡೆಯುತ್ತದೆ. ತ್ವಚೆಯ ಸರ್ವ ರೋಗಕ್ಕೂ- ಹುಣಸೆ ಹಣ್ಣಿನ ಫೇಸ್ ಪ್ಯಾಕ್



ಜೇನು ಮತ್ತು ಸಕ್ಕರೆಯಿಂದ ಉಜ್ಜಿ 


ಸಮಪ್ರಮಾಣದಲ್ಲಿ ಕೊಂಚ ಸಕ್ಕರೆ ಮತ್ತು ಜೇನನ್ನು ಬೆರೆಸಿ ನಯವಾಗಿ ಮುಖದ ಚರ್ಮದ ಮೇಲೆ ಉಜ್ಜುತ್ತಾ ಬನ್ನಿ. ಇದರಿಂದ ಮುಖದ ಮೇಲಿನ ಸತ್ತ ಜೀವಕೋಶಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.  ತ್ವಚೆಯ ಅಂದವನ್ನು ಹೆಚ್ಚಿಸುವ ಜೇನು ಮತ್ತು ಹಾಲಿನ ಪ್ಯಾಕ್



ಪೀಚ್ ಮತ್ತು ಟೊಮೆಟೊ ಹಣ್ಣುಗಳ ಲೇಪನ 


ಒಂದು ಟೊಮೆಟೊವಿನ ಸಿಪ್ಪೆ ಮತ್ತು ಬೀಜ ನಿವಾರಿಸಿ ಕೇವಲ ತಿರುಳನ್ನು ಸಮಪ್ರಮಾಣದಲ್ಲಿ ಪೀಚ್ ಹಣ್ಣಿನ ತಿರುಳಿನೊಂದಿಗೆ ಬೆರೆಸಿ ದಪ್ಪನೆಯ ಲೇಪ ತಯಾರಿಸಿ. ಈ ಲೇಪವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.




ಲಿಂಬೆ 


ರಸ ಒಂದು ಲಿಂಬೆಹಣ್ಣಿನ ರಸವನ್ನು ನೇರವಾಗಿ ಮುಖದ ಮೇಲೆ ಹಚ್ಚಿಕೊಳ್ಳಿ. ಕಣ್ಣುಗಳಿಗೆ ತಾಕಿದರೆ ಭಾರೀ ಉರಿಯಾಗುವ ಕಾರಣ ಕಣ್ಣುಗಳ ಕೆಳಗೆ ಅತಿ ಹೆಚ್ಚಿನ ಎಚ್ಚರಿಕೆ ವಹಿಸಿ. ಲಿಂಬೆರಸದ ಬಿಳಿಚಿಸುವ ಗುಣ ಚರ್ಮ ಕಳೆದುಕೊಂಡಿದ್ದ ಕಾಂತಿಯನ್ನು ಮತ್ತೆ ತರಲು ನೆರವಾಗುತ್ತದೆ. ಸುಮಾರು ಐದು ನಿಮಿಷದ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.   ಕೂದಲಿನ ಆರೈಕೆಯ ರಹಸ್ಯ ಲಿಂಬೆ ಜ್ಯೂಸ್‌ನಲ್ಲಿದೆ!


ಹಾಲಿನ ಕೆನೆ 


ಸಮಪ್ರಮಾಣದಲ್ಲಿ ಹಾಲಿನ ಕೆನೆ, ಕಡ್ಲೆಹಿಟ್ಟು ಮತ್ತು ಚಿಟಿಕೆಯಷ್ಟು ಅರಿಶಿನ ಸೇರಿಸಿ ದಪ್ಪನೆಯ ಲೇಪನ ತಯಾರಿಸಿ. ಈ ಲೇಪನವನ್ನು ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.   ಚರ್ಮದ ತಾಜಾತನಕ್ಕೆ ಇರಲಿ ತೆಂಗಿನ ಹಾಲು





ಉತ್ತಮ ಗುಣಮಟ್ಟದ ಕ್ರೀಮ್ ಬಳಸಿ 


ಈ ನೈಸರ್ಗಿಕ ವಿಧಾನಗಳ ಜೊತೆಗೇ ಉತ್ತಮ ಗುಣಮಟ್ಟದ ಚರ್ಮದ ಪ್ರಸಾದನಗಳನ್ನೂ ಬಳಸಬಹುದು. ವಿಶೇಷವಾಗಿ ಆದ್ರತೆ ನೀಡುವ ಓಲೇ ಕ್ರೀಂ, ಟೋಟಲ್ ಎಫೆಕ್ಟ್ಸ್ ಡೇ ಕ್ರೀಮ್ ಮೊದಲಾದವುಗಳನ್ನು ಬಳಸಿ ಚರ್ಮದ ಆರೈಕೆ ಮಾಡಿ. ಇದರಿಂದ ಚರ್ಮ ಮೊದಲಿಗಿಂತಲೂ ಹೆಚ್ಚು ಪ್ರಖರವಾಗುತ್ತದೆ.


hair tips

ತಲೆಹೊಟ್ಟಿನ ಸಮಸ್ಯೆ ಹೆಚ್ಚಾಗಿ ಎಲ್ಲಾ ಸ್ತ್ರೀ ಪುರುಷರನ್ನು ಕಾಡುವ ಸಮಸ್ಯೆಯಾಗಿದೆ. ತಲೆ ತುರಿಕೆ, ಗಾಯ, ದಿರಿಸುಗಳಲ್ಲಿ ಬಿಳಿ ಬಣ್ಣದ ಹೊಟ್ಟು ಉದುರುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಇದರಿಂದ ಮುಜುಗರವನ್ನು ಅನುಭವಿಸಬೇಕಾಗುತ್ತದೆ. ತಲೆಬುರುಡೆಯಿಂದ ಮೃತ ಚರ್ಮವು ಉದುರುವುದೇ ತಲೆಹೊಟ್ಟಾಗಿದೆ. ಮೇದೋಗ್ರಂಥಿಗಳ ಸ್ರಾವ ಮತ್ತು ಕಲ್ಮಶಗಳ ಕ್ರೋಢೀಕರಣದಿಂದ ತಲೆಹೊಟ್ಟು ಕಾಣಿಸಿಕೊಳ್ಳುತ್ತದೆ. ತಲೆ ತುರಿಕೆಗೆ ಕಾರಣವಾಗುವ ತಲೆಹೊಟ್ಟಿಗೆ ಫಲಪ್ರದ ಮನೆಮದ್ದು




ತಲೆಹೊಟ್ಟು ಉಂಟಾಗಲು ಇನ್ನಿತರ ಕಾರಣಗಳೆಂದರೆ ಹಾರ್ಮೊನುಗಳ ಅಸಮತೋಲನ, ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳದೇ ಇರುವುದು, ವಂಶಪಾರಂಪರ್ಯತೆ, ಜಿಡ್ಡಿನ ತಲೆಬುರುಡೆ, ಉತ್ತಮ ಗುಣಮಟ್ಟದ ಕೂದಲಿನ ಉತ್ಪನ್ನಗಳನ್ನು ಬಳಸದೇ ಇರುವುದು ತಲೆಹೊಟ್ಟನ್ನು ಉಂಟುಮಾಡುತ್ತದೆ.


ತಲೆಹೊಟ್ಟಿನ ಸಮಸ್ಯೆಗೆ ಪರಿಹಾರವನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ರಾಸಾಯನಿಕಗಳ ಅತಿಯಾದ ಬಳಕೆಯನ್ನು ಮಾಡದೆಯೇ ಈ ವಿಧಾನವನ್ನು ಅನುಸರಿಸಿ ತಲೆಹೊಟ್ಟಿನಿಂದ ಮುಕ್ತಿಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಮನೆಯಲ್ಲೇ ತಯಾರಿಸಬಹುದಾದ ಆ ವಿಧಾನವನ್ನು ಅನುಸರಿಸಿ. ತಲೆ ಹೊಟ್ಟಿನ ನಿವಾರಣೆಗೆ ಇಲ್ಲಿದೆ 7 ವಿಧಾನ


ಬೇಕಾಗುವ ಸಾಮಾಗ್ರಿಗಳು
- ಗ್ರಿಗಳು *ಆಸ್ಪಿರಿನ್ ಮಾತ್ರೆಗಳು - 3-4 (ಬ್ಲೆಂಡರ್‎ನಲ್ಲಿ ಮಾತ್ರೆಯನ್ನು ಹುಡಿಮಾಡಿಟ್ಟುಕೊಳ್ಳಿ)

*ಮೃದುವಾದ ಶಾಂಪೂ (ದೈನಂದಿನ ಶಾಂಪೂವನ್ನು ನೀವು ಬಳಸಬಹುದು)




ಜ್ವರದ ಸಮಯದಲ್ಲಿ ತೆಗೆದುಕೊಳ್ಳುವ ಸಾಮಾನ್ಯ ಮಾತ್ರೆಯಾಗಿರುವ ಆಸ್ಪಿರಿನ್ ತಲೆಹೊಟ್ಟಿನ ಸಮಸ್ಯೆಯನ್ನು ಚಿಟಿಕೆಯಲ್ಲಿ ನಿವಾರಿಸುತ್ತದೆ. ಈ ಮಾತ್ರೆಯು ಆಂಟಿಸೆಪ್ಟಿಕ್ ಅಂಶಗಳನ್ನು ಒಳಗೊಂಡಿದ್ದು ತಲೆಹೊಟ್ಟು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಾಶ ಮಾಡುತ್ತದೆ ಹಾಗೂ ತಲೆಹೊಟ್ಟು ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ತಲೆಬುರುಡೆಯಲ್ಲಿ ಮೇದೋಜೀರಕ ಗ್ರಂಥಿಗಳ ಸ್ರವಿಕೆಯನ್ನು ಇದು ಕಡಿಮೆ ಮಾಡುತ್ತದೆ ಹಾಗೂ ಕೂದಲಿನ ಸೌಂದರ್ಯವನ್ನು ಕಾಪಾಡುತ್ತದೆ. ಅಪ್ಪಿತಪ್ಪಿಯೂ ತಲೆ ಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ 

ಇದನ್ನು ತಯಾರಿಸುವುದು ಹೇಗೆ:

*ಪಾತ್ರೆಯಲ್ಲಿ ಹುಡಿ ಮಾಡಿದ ಆಸ್ಪಿರಿನ್ ಮಾತ್ರೆ ಮತ್ತು ಶಾಂಪೂವನ್ನು ತೆಗೆದುಕೊಳ್ಳಿ ಮಿಶ್ರಣವನ್ನು ಚೆನ್ನಾಗಿ ಕಲಸಿಕೊಳ್ಳಿ


*ನಿಮ್ಮ ತಲೆಬುರುಡೆಯನ್ನು ಕೆಲವು ನಿಮಿಷಗಳವರೆಗೆ ಮಸಾಜ್ ಮಾಡಿಕೊಳ್ಳಿ




*ತಲೆಬುರುಡೆಯಿಂದ ಹಿಡಿದು ಕೂದಲಿನ ತುದಿಯವರೆಗೆ ಸ್ವಚ್ಛಮಾಡಿ
*ನಂತರ ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಿ
ಪರಿಣಾಮಕಾರಿ ಫಲಿತಾಂಶವನ್ನು ಪಡೆದುಕೊಳ್ಳಲು ವಾರಕ್ಕೆ ಎರಡು ಬಾರಿ ಈ ವಿಧಾವನ್ನು ಅನುಸರಿಸಿ. ತಲೆಹೊಟ್ಟು ಸಮಸ್ಯೆಗೆ ಪ್ರಮುಖ 5 ಲಕ್ಷಣಗಳು ಯಾವುದು?


ಮಳೆಗಾಲದಲ್ಲಿ ಪಾದಗಳ ಸಂರಕ್ಷಣೆಯಲ್ಲಿ ತೋರದಿರಿ ಅನಾಸಕ್ತಿ

ಬಿರುಬೇಸಿಗೆಯಿಂದ ಬಳಲಿ ಬೆಂಡಾಗಿದ್ದ ಜನತೆಗೆ ಮತ್ತು ಇಳೆಗೆ ತಂಪನ್ನು ನೀಡಲು ಮಳೆರಾಯನ ಆಗಮನವಾಗಿದೆ. ಮಳೆ ಎಂದರೆ ಅದೊಂದು ಸಂತಸ, ನಿರೀಕ್ಷೆ, ದುಃಖ, ಸುಖ ಹೀಗೆ ಭಾವನೆಗಳ ಮಿಶ್ರಣ ಮಳೆಯಲ್ಲಡಗಿದೆ. ಕಲ್ಪನೆಯ ಕಣ್ಣುಗಳಿಂದ ಮಳೆಯನ್ನು ನೋಡಿ ಅದನ್ನು ಆಸ್ವಾದಿಸುವವರಿದ್ದರೆ ಇನ್ನು ಕೆಲವರಿಗೆ ಮಳೆ ಎಂದರೆ ಏನೋ ಅಲರ್ಜಿ ಅಂತೂ ಇಂತೂ ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ಮಳೆ ಮಾತ್ರ ತನ್ನಷ್ಟಕ್ಕೆ ತಾನು ಸುರಿಯುತ್ತಲೇ ಇರುತ್ತದೆ.   ಪಾದ ದುರ್ವಾಸನೆ ಬೀರುವುದನ್ನು ತಡೆಯಲು ಟಿಪ್ಸ್



ಮಳೆಗಾಲದಲ್ಲಿ ಉಂಟಾಗುವ ಹಲವಾರು ಸಮಸ್ಯೆಗಳಿಗೆ ಹೆದರಿಯೇ ಹೆಚ್ಚಿನವರು ಮೂಗು ಮುರಿಯುವುದೇ ಜಾಸ್ತಿ. ಶೀತ, ಕೆಮ್ಮು, ಜ್ವರ ಹೀಗೆ ರೋಗಗಳ ಸಾಲು ಪಟ್ಟಿಯನ್ನೇ ಮಳೆಗಾಲ ತರುತ್ತದೆ. ರಸ್ತೆಯಲ್ಲೆಲ್ಲಾ ಕೆಸರು ನಿಂತು ವಾಹನಗಳ ಓಡಾಟದಿಂದಾಗಿ ಈ ಕೆಸರಿನ ಮಳೆ ನಮ್ಮ ಮೇಲೆ ಪ್ರೋಕ್ಷಣೆಯಾಗಿ ಒಂದು ರೀತಿಯ ದೇಹ ತುರಿಕೆ ನಮ್ಮನ್ನು ಕಾಡುತ್ತದೆ.

ಈ ಕಾಲದಲ್ಲಿ ಹೆಚ್ಚು ಬಲಿಯಾಗುವುದು ನಮ್ಮ ಕಾಲುಗಳಾಗಿದೆ. ನೀರಿನಲ್ಲಿ ಹೆಚ್ಚು ಓಡಾಡಬೇಕಾದ ಪರಿಸ್ಥಿತಿಯಿಂದಾಗಿ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳು ರಾಜಾರೋಷವಾಗಿ ನಮ್ಮ ಕಾಲುಗಳ ಮೇಲೆ ಪಾದಗಳು ಮತ್ತು ಬೆರಳುಗಳ ಮೇಲೆ ದಾಳಿಯನ್ನು ಮಾಡುತ್ತವೆ. ಹೀಗೆಂದು ಅದನ್ನು ಹಾಗೆಯೇ ಬಿಟ್ಟರೆ ಪರಿಸ್ಥಿತಿ ಬಿಗಡಾಯಿಸುವುದು ಖಂಡಿತ. ಅದಕ್ಕೆಂದೇ ಕೆಲವು ಸಲಹೆಗಳನ್ನು ನೀವು ಅನುಸರಿಸಬೇಕಾಗಿದ್ದು ಪಾದಗಳ ಬೆರಳುಗಳ ಶುಶ್ರೂಷೆಯನ್ನು ಇದು ಮಾಡುತ್ತದೆ.   ಪಾದಗಳಲ್ಲಿ ಬಿರುಕು ಹೋಗಲಾಡಿಸಲು 5 ವಿಧಾನ



ಯಾವಾಗಲೂ ಪಾದಗಳನ್ನು ಸ್ವಚ್ಛವಾಗಿರಿಸಿ

ಯಾವುದೇ ರೀತಿಯ ಸೋಂಕನ್ನು ಬುಡದಿಂದ ನಿವಾರಣೆ ಮಾಡಲು ಪಾದಗಳನ್ನು ದಿನಕ್ಕೆರಡು ಬಾರಿ ಸ್ವಚ್ಛವಾಗಿರಿಸಿ. ಸೂಕ್ತವಾಗಿ ಸ್ವಚ್ಛಗೊಳಿಸುವುದು ಕೂಡ ನಿಮ್ಮ ಪಾದಗಳನ್ನು ಮೃದುವಾಗಿಸುತ್ತದೆ.


ತೆರೆದ ಪಾದರಕ್ಷೆಯ ಆಯ್ಕೆ

ಮಳೆಗಾಲದಲ್ಲಿ, ಯಾವಾಗಲೂ ಮುಚ್ಚಿರುವ ಪಾದರಕ್ಷೆಗಳಿಗಿಂತ ಗಾಳಿಯಾಡುವ ಪಾದರಕ್ಷೆಗೆ ಆದ್ಯತೆ ನೀಡಿ. ಮುಚ್ಚಿದ ಪಾದರಕ್ಷೆಯು ನಿಮ್ಮ ತ್ವಚೆಗೆ ಹಾನಿಯನ್ನುಂಟು ಮಾಡಬಹುದು ಮತ್ತು ಸಹ್ಯವಲ್ಲದ ವಾಸನೆಯನ್ನು ಉಂಟುಮಾಡಬಲ್ಲುದು.




ಪಾದಗಳ ಎಕ್ಸ್‪‎ಫೋಲಿಯೇಟ್

ನಿತ್ಯವೂ ಈ ಕ್ರಿಯೆಯನ್ನು ನೀವು ನಡೆಸಬೇಕಾಗುತ್ತದೆ. ಸ್ಕ್ರಬ್ಬಿಂಗ್ ಪ್ಯಾಡ್ ಅಥವಾ ಪ್ಯುಮೈಸ್ ಸ್ಟೋನ್ ಅನ್ನು ಇದಕ್ಕಾಗಿ ನೀವು ಬಳಸಬೇಕಾಗುತ್ತದೆ. ಆದರೆ ಎಕ್ಸ್‪‎ಫೋಲಿಯೇಟ್ ಮಾಡುವುದು ಕಡ್ಡಾಯವಾಗಿದೆ. ಇದು ಮೃತ ಕೋಶಗಳನ್ನು ನಿವಾರಿಸಿ ನಿಮ್ಮ ಪಾದಗಳನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿ ಇರಿಸುತ್ತದೆ.    ಅಂದದ ಪಾದ ಪಡೆಯಲು ಆರೇ ಸ್ಟೆಪ್




ಮಾಯಿಶ್ಚರೈಸ‎ರ್‎ಗಳ ಬಳಕೆ

ಪಾದಗಳು ಒಡೆಯದೇ ಇರಲು ಮಾಯಿಶ್ಚರೈಸ‎ರ್‎ಗಳನ್ನು ಕಡ್ಡಾಯವಾಗಿ ಬಳಸಿ. ಸ್ನಾನದ ನಂತರ ಮತ್ತು ಮಲಗುವ ವೇಳೆಯಲ್ಲಿ, ಈ ಎರಡೂ ಸಮಯಗಳಲ್ಲಿ ಮಾಯಿಶ್ಚರೈಸ‎ರ್ ಅನ್ನು ನಿಮ್ಮ ಪಾದಗಳಿಗೆ ಹಚ್ಚಿಕೊಳ್ಳಿ.

ಪೆಡಿಕ್ಯೂರ್

ಸಮೀಪದ ಪಾರ್ಲರ್‎ಗೆ ಭೇಟಿ ನೀಡಿ, ಅಥವಾ ಮನೆಯಲ್ಲೇ ತಯಾರು ಮಾಡಿದ ಪಾದಗಳ ನೆನೆಯಿಸುವಿಕೆ ಕ್ರಿಯೆಯನ್ನು ಅನುಸರಿಸಿ. ಪಾದಗಳ ಬೇರೆ ಬೇರೆ ಭಾಗಗಳಲ್ಲಿ ಸಂಗ್ರಹವಾಗಿರುವ ಕೊಳೆಯನ್ನು ತೊಡೆದು ಹಾಕಲು ಪೆಡಿಕ್ಯೂರ್ ಮಾಡಲೇಬೇಕಾಗುತ್ತದೆ.





ಮುಖದ ಸೌಂದರ್ಯಕ್ಕೆ ಚಿಟಿಕೆಯಷ್ಟು ಅಡುಗೆ ಸೋಡಾ!

ಸೌಂದರ್ಯ ದೋಷಗಳ ನಿವಾರಣೆಗಾಗಿ ನಾವು ದುಬಾರಿ ಪ್ರಸಾಧನಗಳನ್ನು ಬಳಸುತ್ತೇವೆ, ಸೌಂದರಯ ತಜ್ಞರನ್ನು ಭೇಟಿಯಾಗುತ್ತೇವೆ ಅಂತೆಯೇ ವೃಥಾ ದುಬಾರಿ ಹಣವನ್ನು ವ್ಯಯಿಸುತ್ತೇವೆ. ಅದಾಗ್ಯೂ ನಾವು ಪ್ರಯೋಜನವನ್ನು ಪಡೆದುಕೊಂಡಿಲ್ಲ ಎಂದಾಗ ಉಂಟಾಗುವ ವ್ಯಥೆಯನ್ನು ವಿವರಿಸಲಾಗುವುದಿಲ್ಲ. ಈ ಉತ್ಪನ್ನಗಳು ನಿಮಗೆ ಲಾಭವನ್ನು ನೀಡದೇ ಇದ್ದರೂ ನಿಮ್ಮ ತ್ವಚೆಗೆ ಹಾನಿಯನ್ನುಂಟು ಮಾಡುವುದು ಖಂಡಿತ    ಅಡುಗೆ ಸೋಡಾ ನೀಡುತ್ತೆ ಅಂದದ ತ್ವಚೆ

ನೈರ್ಗಿಕ ಉತ್ಪನ್ನಗಳು ನೀಡುವ ಪ್ರಯೋಜವನ್ನು ರಾಸಾಯನಿಕ ಉತ್ಪನ್ನಗಳು ಎಂದಿಗೂ ನೀಡಲು ಸಾಧ್ಯವಿಲ್ಲ. ನಿಮ್ಮ ಸಮಯ ಮತ್ತು ದುಡ್ಡು ಮಾತ್ರ ಇಲ್ಲಿ ವೆಚ್ಚವಾಗುತ್ತದೆ. ಇಂದಿನ ಲೇಖನದಲ್ಲಿ ಕೂಡ ನೈಸರ್ಗಿಕ ಉತ್ಪನ್ನದಂತೆ ಕಾರ್ಯನಿರ್ವಹಿಸುವ ಮತ್ತು ಸುಲಭವಾಗಿ ಕೈಗೆಟಕುವ ಒಂದು ಉತ್ಪನ್ನದ ಕುರಿತು ನಾವು ಮಾಹಿತಿ ತಿಳಿಸುತ್ತಿದ್ದು ಇದರ ಅಸಾಧಾರಣ ಪ್ರಯೋಜನಗಳಿಂದ ನೀವು ಸ್ತಂಭೀಭೂತರಾಗುವುದು ನಿಜ. ನಿಮಗೆ ನೈಸರ್ಗಿಕ ಹೊಳಪನ್ನು ನೀಡುವುದರ ಜೊತೆಗೆ ನಿಮ್ಮ ಸಾಕಷ್ಟು ತ್ವಚೆಯ ಸಮಸ್ಯೆಗಳನ್ನು ಇದು ನಿವಾರಣೆ ಮಾಡುವುದು ಖಂಡಿತ.

ಮುಖದ ಸೌಂದರ್ಯದಲ್ಲಿ ಬೇಕಿಂಗ್ ಸೋಡಾ ಅಸಾಧಾರಣವಾಗಿ ಕಾರ್ಯನಿರ್ವಹಿಸುತ್ತಿದ್ದು ನಿಮ್ಮ ಕೂದಲು ಮತ್ತು ತಲೆಬುರುಡೆಯ ಸ್ವಾಸ್ಥ್ಯಕ್ಕೂ ಇದು ಹೇಳಿಮಾಡಿಸಿರುವಂಥದ್ದಾಗಿದೆ. ಇನ್ನು ಸಂಪೂರ್ಣ ದೇಹ ಚಿಕಿತ್ಸೆಯನ್ನು ಇದನ್ನು ಬಳಸಿ ಮಾಡಬಹುದಾಗಿದ್ದು, ಅದಕ್ಕೂ ಮುನ್ನ ಪ್ಯಾಚ್ ಟೆಸ್ಟ್ ಅನ್ನು ನೀವು ಮಾಡಿಸಿಕೊಳ್ಳಬೇಕಾಗುತ್ತದೆ.  ಅಡುಗೆ ಸೋಡಾದಲ್ಲಿದೆ ಮೊಡವೆ ಸಮಸ್ಯೆಗೆ ಪರಿಹಾರ

ನಿಮ್ಮ ಕೂದಲು ಮತ್ತು ತ್ವಚೆಗೆ ಇದು ಯಾವುದೇ ರೀತಿಯ ಸಮಸ್ಯೆಯನ್ನುಂಟು ಮಾಡುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ನಂತರವೇ ಮುಂದುವರಿಯಿರಿ. ಅದರಲ್ಲೂ ನಿಮ್ಮದು ಸೂಕ್ಷ್ಮ ತ್ವಚೆಯಾಗಿದ್ದರೆ ಕಾಳಜಿ ಬೇಕೇ ಬೇಕು. ಇಂದಿನ ಲೇಖನದಲ್ಲಿ ಬೇಕಿಂಗ್ ಸೋಡಾದ ಇನ್ನಷ್ಟು ಮಹತ್ವ ಅಂಶಗಳನ್ನು ತಿಳಿದುಕೊಳ್ಳೋಣ...





ಬ್ಯೂಟಿ ಟಿಪ್ಸ್: ಮುಖದ ಸೌಂದರ್ಯಕ್ಕಾಗಿ 'ರೋಸ್ ವಾಟರ್'!


ಮುಖ ಸೌಂದರ್ಯ ವರ್ಧಿಸಲು ಹಾಗೂ ತ್ವಚೆಯ ಆರೈಕೆಯ ಹಲವಾರು ಬಗೆಯ ಸೌಂದರ್ಯ ವರ್ಧಕಗಳಲ್ಲಿ ರೋಸ್ ವಾಟರ್ ಯಾನೆ ಗುಲಾಬಿ ನೀರನ್ನು ಬಳಸುತ್ತಾರೆ. ಕೆಲವೊಂದು ಥೆರಪಿ ಹಾಗೂ ಸ್ಪಾಗಳಲ್ಲಿ ಇದನ್ನು ಬಳಸುತ್ತಾರೆ. ಇದು ತುಂಬಾ ಅಗ್ಗದ ದರ ಹಾಗೂ ಸುಲಭವಾಗಿ ಸಿಕ್ಕಿದರೂ ಇದರ ಗುಣಗಳನ್ನು ಕಡೆಗಣಿಸಲಾಗಿದೆ. ಇದನ್ನು ಕೇವಲ ಸೌಂದರ್ಯ ವರ್ಧಕಗಳಲ್ಲಿ ಮಾತ್ರವಲ್ಲದೆ, ಇಂದು ಅಡುಗೆ ಮನೆಯಲ್ಲೂ ಇದನ್ನು ಬಳಸಲಾಗುತ್ತಿದೆ. ರೋಸ್ ವಾಟರ್ ನ ಸುವಾಸನೆ ನಮ್ಮ ಮನಸ್ಸನ್ನು ಖುಷಿಪಡಿಸುತ್ತದೆ.






ಭಾರತದಲ್ಲಿ ಹಿಂದಿನ ಕಾಲದಿಂದಲೂ ರೋಸ್ ವಾಟರ್ ಬಳಕೆಯಲ್ಲಿದೆ. ಮದುವೆಯಂತಹ ಕಾರ್ಯಕ್ರಮಗಳು ಬಂದಾಗ ಮುಖವನ್ನು ಸ್ವಚ್ಛಗೊಳಿಸಲು ಮತ್ತು ಸುವಾಸನೆಗಾಗಿ ಸಿಂಪಡನೆ ಮಾಡಲಾಗುತ್ತದೆ. ಶುಭಸಂದರ್ಭಗಳಲ್ಲಿ ವೀಲ್ಯದೆಲೆ ಹಾಗೂ ಇತರ ಕೆಲವೊಂದು ಪಾನ್ ಗಳಲ್ಲಿ ಇದನ್ನು ಬಳಕೆ ಮಾಡುವ ಕಾರಣದಿಂದ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುವುದು. ಜೀರ್ಣಶಕ್ತಿ ಹೆಚ್ಚಿಸುವ ಗುಣವನ್ನು ಹೊಂದಿರುವ ರೋಸ್ ವಾಟರ್ ನ್ನು ಲೆಮನೋಡ್ ಜತೆ ಸೇರಿಸಿದಾಗ ಅದು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಓಡಿಸುತ್ತದೆ.     ಮನೆಯಲ್ಲಿಯೆ ತಯಾರಿಸಬಹುದು ರೋಸ್ ವಾಟರ್

ಉರಿಯೂತ ಶಮನಕಾರಿ ಹಾಗೂ ವರ್ಧಕ ಗುಣವನ್ನು ಹೊಂದಿರುವಂತಹ ರೋಸ್ ವಾಟರ್ ನ್ನು ಸುಟ್ಟಗಾಯ ಮತ್ತು ಅಲರ್ಜಿಯಾಗಿರುವ ಚರ್ಮದ ಚಿಕಿತ್ಸೆಗೆ ಬಳಸಲಾಗುತ್ತದೆ. ಸ್ನಾನ ಮಾಡುವಾಗ ರೋಸ್ ವಾಟರ್ ನ ಕೆಲವು ಹನಿಯನ್ನು ಹಾಕಿಕೊಂಡು ಸ್ನಾನ ಮಾಡಿದರೆ ಆಗ ಒಳ್ಳೆಯ ಸುವಾಸನೆಯೊಂದಿಗೆ ನಿಮ್ಮ ಮನಸ್ಸು ಉಲ್ಲಾಸಿತಗೊಳ್ಳುತ್ತದೆ.


ಮುಖದ ಮೇಲಿನ ಕಲೆಗಳನ್ನು ನಿವಾರಿಸಲು ಹಾಗೂ ಮೊಡವೆಗಳನ್ನು ದೂರ ಓಡಿಸಲು ಫೇಸ್ ಪ್ಯಾಕ್‌ನ ಪೌಡರ್ ಜತೆಗೆ ರೋಸ್ ವಾಟರ್ ನ್ನು ಸೇರಿಸಿ ಹಚ್ಚಬೇಕು. ಅದರಲ್ಲೂ ಮಳೆಗಾಲದಲ್ಲಿ ಫೇಸ್ ಪ್ಯಾಕ್ ನೊಂದಿಗೆ ಇದನ್ನು ಬಳಕೆ ಮಾಡಿದಾಗ ಇದು ತುಂಬಾ ನೆರವಾಗುತ್ತದೆ.  ಜಿಡ್ಡಿನಾಂಶವುಳ್ಳ ಚರ್ಮ ಮತ್ತು ಒಣ ಚರ್ಮಕ್ಕಾಗಿ ಇಲ್ಲಿ ಎರಡು ರೀತಿಯ ಫೇಸ್ ಪ್ಯಾಕ್ ಗಳನ್ನು ಮಾಡಲಾಗಿದೆ. ಅದು ಯಾವ ರೀತಿ ಕೆಲಸ ಮಾಡಲಿದೆ ಎಂದು ತಿಳಿದುಕೊಳ್ಳಿ.     ಗುಲಾಬಿಯಂತಹ ಮೃದು ತ್ವಚೆಗೆ ರೋಸ್ ವಾಟರ್


ಜಿಡ್ಡಿನಾಂಶ ಮತ್ತು ಮೊಡವೆಗಳಿರುವ ಚರ್ಮಕ್ಕಾಗಿ ರೋಸ್ ವಾಟರ್ ಅನ್ನು ಫುಲ್ಲರ್ ಅರ್ಥ್ ಮತ್ತು ಕೆಲವು ಹನಿ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿಕೊಂಡು ಮೊಡವೆಗಳಿರುವ ಚರ್ಮಕ್ಕೆ ಹಚ್ಚಿಕೊಳ್ಳಿ. ಇದು ಒಣಗುವ ತನಕ ಹಾಗೆ ಬಿಡಿ ಮತ್ತು ಬಳಿಕ ಅದನ್ನು ತೊಳೆಯಿರಿ.




ಒಣಚರ್ಮಕ್ಕಾ

ಗಿ ಓಟ್ ಮೀಲ್, ಜೇನುತುಪ್ಪ, ಹಾಲಿನೊಂದಿಗೆ ರೋಸ್ ವಾಟರ್ ನ್ನು ಬೆರೆಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಒಣಗಿದ ಬಳಿಕ ತೆಗೆಯಿರಿ. ಇದು ನಿಮ್ಮ ಚರ್ಮಕ್ಕೆ ತೇವಾಂಶವನ್ನು ನೀಡುವುದು ಮಾತ್ರವಲ್ಲದೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.