Wednesday, 27 July 2016

ಮುಖದ ಸೌಂದರ್ಯಕ್ಕೆ ಚಿಟಿಕೆಯಷ್ಟು ಅಡುಗೆ ಸೋಡಾ!

ಸೌಂದರ್ಯ ದೋಷಗಳ ನಿವಾರಣೆಗಾಗಿ ನಾವು ದುಬಾರಿ ಪ್ರಸಾಧನಗಳನ್ನು ಬಳಸುತ್ತೇವೆ, ಸೌಂದರಯ ತಜ್ಞರನ್ನು ಭೇಟಿಯಾಗುತ್ತೇವೆ ಅಂತೆಯೇ ವೃಥಾ ದುಬಾರಿ ಹಣವನ್ನು ವ್ಯಯಿಸುತ್ತೇವೆ. ಅದಾಗ್ಯೂ ನಾವು ಪ್ರಯೋಜನವನ್ನು ಪಡೆದುಕೊಂಡಿಲ್ಲ ಎಂದಾಗ ಉಂಟಾಗುವ ವ್ಯಥೆಯನ್ನು ವಿವರಿಸಲಾಗುವುದಿಲ್ಲ. ಈ ಉತ್ಪನ್ನಗಳು ನಿಮಗೆ ಲಾಭವನ್ನು ನೀಡದೇ ಇದ್ದರೂ ನಿಮ್ಮ ತ್ವಚೆಗೆ ಹಾನಿಯನ್ನುಂಟು ಮಾಡುವುದು ಖಂಡಿತ    ಅಡುಗೆ ಸೋಡಾ ನೀಡುತ್ತೆ ಅಂದದ ತ್ವಚೆ

ನೈರ್ಗಿಕ ಉತ್ಪನ್ನಗಳು ನೀಡುವ ಪ್ರಯೋಜವನ್ನು ರಾಸಾಯನಿಕ ಉತ್ಪನ್ನಗಳು ಎಂದಿಗೂ ನೀಡಲು ಸಾಧ್ಯವಿಲ್ಲ. ನಿಮ್ಮ ಸಮಯ ಮತ್ತು ದುಡ್ಡು ಮಾತ್ರ ಇಲ್ಲಿ ವೆಚ್ಚವಾಗುತ್ತದೆ. ಇಂದಿನ ಲೇಖನದಲ್ಲಿ ಕೂಡ ನೈಸರ್ಗಿಕ ಉತ್ಪನ್ನದಂತೆ ಕಾರ್ಯನಿರ್ವಹಿಸುವ ಮತ್ತು ಸುಲಭವಾಗಿ ಕೈಗೆಟಕುವ ಒಂದು ಉತ್ಪನ್ನದ ಕುರಿತು ನಾವು ಮಾಹಿತಿ ತಿಳಿಸುತ್ತಿದ್ದು ಇದರ ಅಸಾಧಾರಣ ಪ್ರಯೋಜನಗಳಿಂದ ನೀವು ಸ್ತಂಭೀಭೂತರಾಗುವುದು ನಿಜ. ನಿಮಗೆ ನೈಸರ್ಗಿಕ ಹೊಳಪನ್ನು ನೀಡುವುದರ ಜೊತೆಗೆ ನಿಮ್ಮ ಸಾಕಷ್ಟು ತ್ವಚೆಯ ಸಮಸ್ಯೆಗಳನ್ನು ಇದು ನಿವಾರಣೆ ಮಾಡುವುದು ಖಂಡಿತ.

ಮುಖದ ಸೌಂದರ್ಯದಲ್ಲಿ ಬೇಕಿಂಗ್ ಸೋಡಾ ಅಸಾಧಾರಣವಾಗಿ ಕಾರ್ಯನಿರ್ವಹಿಸುತ್ತಿದ್ದು ನಿಮ್ಮ ಕೂದಲು ಮತ್ತು ತಲೆಬುರುಡೆಯ ಸ್ವಾಸ್ಥ್ಯಕ್ಕೂ ಇದು ಹೇಳಿಮಾಡಿಸಿರುವಂಥದ್ದಾಗಿದೆ. ಇನ್ನು ಸಂಪೂರ್ಣ ದೇಹ ಚಿಕಿತ್ಸೆಯನ್ನು ಇದನ್ನು ಬಳಸಿ ಮಾಡಬಹುದಾಗಿದ್ದು, ಅದಕ್ಕೂ ಮುನ್ನ ಪ್ಯಾಚ್ ಟೆಸ್ಟ್ ಅನ್ನು ನೀವು ಮಾಡಿಸಿಕೊಳ್ಳಬೇಕಾಗುತ್ತದೆ.  ಅಡುಗೆ ಸೋಡಾದಲ್ಲಿದೆ ಮೊಡವೆ ಸಮಸ್ಯೆಗೆ ಪರಿಹಾರ

ನಿಮ್ಮ ಕೂದಲು ಮತ್ತು ತ್ವಚೆಗೆ ಇದು ಯಾವುದೇ ರೀತಿಯ ಸಮಸ್ಯೆಯನ್ನುಂಟು ಮಾಡುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ನಂತರವೇ ಮುಂದುವರಿಯಿರಿ. ಅದರಲ್ಲೂ ನಿಮ್ಮದು ಸೂಕ್ಷ್ಮ ತ್ವಚೆಯಾಗಿದ್ದರೆ ಕಾಳಜಿ ಬೇಕೇ ಬೇಕು. ಇಂದಿನ ಲೇಖನದಲ್ಲಿ ಬೇಕಿಂಗ್ ಸೋಡಾದ ಇನ್ನಷ್ಟು ಮಹತ್ವ ಅಂಶಗಳನ್ನು ತಿಳಿದುಕೊಳ್ಳೋಣ...





ಬ್ಯೂಟಿ ಟಿಪ್ಸ್: ಮುಖದ ಸೌಂದರ್ಯಕ್ಕಾಗಿ 'ರೋಸ್ ವಾಟರ್'!


ಮುಖ ಸೌಂದರ್ಯ ವರ್ಧಿಸಲು ಹಾಗೂ ತ್ವಚೆಯ ಆರೈಕೆಯ ಹಲವಾರು ಬಗೆಯ ಸೌಂದರ್ಯ ವರ್ಧಕಗಳಲ್ಲಿ ರೋಸ್ ವಾಟರ್ ಯಾನೆ ಗುಲಾಬಿ ನೀರನ್ನು ಬಳಸುತ್ತಾರೆ. ಕೆಲವೊಂದು ಥೆರಪಿ ಹಾಗೂ ಸ್ಪಾಗಳಲ್ಲಿ ಇದನ್ನು ಬಳಸುತ್ತಾರೆ. ಇದು ತುಂಬಾ ಅಗ್ಗದ ದರ ಹಾಗೂ ಸುಲಭವಾಗಿ ಸಿಕ್ಕಿದರೂ ಇದರ ಗುಣಗಳನ್ನು ಕಡೆಗಣಿಸಲಾಗಿದೆ. ಇದನ್ನು ಕೇವಲ ಸೌಂದರ್ಯ ವರ್ಧಕಗಳಲ್ಲಿ ಮಾತ್ರವಲ್ಲದೆ, ಇಂದು ಅಡುಗೆ ಮನೆಯಲ್ಲೂ ಇದನ್ನು ಬಳಸಲಾಗುತ್ತಿದೆ. ರೋಸ್ ವಾಟರ್ ನ ಸುವಾಸನೆ ನಮ್ಮ ಮನಸ್ಸನ್ನು ಖುಷಿಪಡಿಸುತ್ತದೆ.






ಭಾರತದಲ್ಲಿ ಹಿಂದಿನ ಕಾಲದಿಂದಲೂ ರೋಸ್ ವಾಟರ್ ಬಳಕೆಯಲ್ಲಿದೆ. ಮದುವೆಯಂತಹ ಕಾರ್ಯಕ್ರಮಗಳು ಬಂದಾಗ ಮುಖವನ್ನು ಸ್ವಚ್ಛಗೊಳಿಸಲು ಮತ್ತು ಸುವಾಸನೆಗಾಗಿ ಸಿಂಪಡನೆ ಮಾಡಲಾಗುತ್ತದೆ. ಶುಭಸಂದರ್ಭಗಳಲ್ಲಿ ವೀಲ್ಯದೆಲೆ ಹಾಗೂ ಇತರ ಕೆಲವೊಂದು ಪಾನ್ ಗಳಲ್ಲಿ ಇದನ್ನು ಬಳಕೆ ಮಾಡುವ ಕಾರಣದಿಂದ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುವುದು. ಜೀರ್ಣಶಕ್ತಿ ಹೆಚ್ಚಿಸುವ ಗುಣವನ್ನು ಹೊಂದಿರುವ ರೋಸ್ ವಾಟರ್ ನ್ನು ಲೆಮನೋಡ್ ಜತೆ ಸೇರಿಸಿದಾಗ ಅದು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಓಡಿಸುತ್ತದೆ.     ಮನೆಯಲ್ಲಿಯೆ ತಯಾರಿಸಬಹುದು ರೋಸ್ ವಾಟರ್

ಉರಿಯೂತ ಶಮನಕಾರಿ ಹಾಗೂ ವರ್ಧಕ ಗುಣವನ್ನು ಹೊಂದಿರುವಂತಹ ರೋಸ್ ವಾಟರ್ ನ್ನು ಸುಟ್ಟಗಾಯ ಮತ್ತು ಅಲರ್ಜಿಯಾಗಿರುವ ಚರ್ಮದ ಚಿಕಿತ್ಸೆಗೆ ಬಳಸಲಾಗುತ್ತದೆ. ಸ್ನಾನ ಮಾಡುವಾಗ ರೋಸ್ ವಾಟರ್ ನ ಕೆಲವು ಹನಿಯನ್ನು ಹಾಕಿಕೊಂಡು ಸ್ನಾನ ಮಾಡಿದರೆ ಆಗ ಒಳ್ಳೆಯ ಸುವಾಸನೆಯೊಂದಿಗೆ ನಿಮ್ಮ ಮನಸ್ಸು ಉಲ್ಲಾಸಿತಗೊಳ್ಳುತ್ತದೆ.


ಮುಖದ ಮೇಲಿನ ಕಲೆಗಳನ್ನು ನಿವಾರಿಸಲು ಹಾಗೂ ಮೊಡವೆಗಳನ್ನು ದೂರ ಓಡಿಸಲು ಫೇಸ್ ಪ್ಯಾಕ್‌ನ ಪೌಡರ್ ಜತೆಗೆ ರೋಸ್ ವಾಟರ್ ನ್ನು ಸೇರಿಸಿ ಹಚ್ಚಬೇಕು. ಅದರಲ್ಲೂ ಮಳೆಗಾಲದಲ್ಲಿ ಫೇಸ್ ಪ್ಯಾಕ್ ನೊಂದಿಗೆ ಇದನ್ನು ಬಳಕೆ ಮಾಡಿದಾಗ ಇದು ತುಂಬಾ ನೆರವಾಗುತ್ತದೆ.  ಜಿಡ್ಡಿನಾಂಶವುಳ್ಳ ಚರ್ಮ ಮತ್ತು ಒಣ ಚರ್ಮಕ್ಕಾಗಿ ಇಲ್ಲಿ ಎರಡು ರೀತಿಯ ಫೇಸ್ ಪ್ಯಾಕ್ ಗಳನ್ನು ಮಾಡಲಾಗಿದೆ. ಅದು ಯಾವ ರೀತಿ ಕೆಲಸ ಮಾಡಲಿದೆ ಎಂದು ತಿಳಿದುಕೊಳ್ಳಿ.     ಗುಲಾಬಿಯಂತಹ ಮೃದು ತ್ವಚೆಗೆ ರೋಸ್ ವಾಟರ್


ಜಿಡ್ಡಿನಾಂಶ ಮತ್ತು ಮೊಡವೆಗಳಿರುವ ಚರ್ಮಕ್ಕಾಗಿ ರೋಸ್ ವಾಟರ್ ಅನ್ನು ಫುಲ್ಲರ್ ಅರ್ಥ್ ಮತ್ತು ಕೆಲವು ಹನಿ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿಕೊಂಡು ಮೊಡವೆಗಳಿರುವ ಚರ್ಮಕ್ಕೆ ಹಚ್ಚಿಕೊಳ್ಳಿ. ಇದು ಒಣಗುವ ತನಕ ಹಾಗೆ ಬಿಡಿ ಮತ್ತು ಬಳಿಕ ಅದನ್ನು ತೊಳೆಯಿರಿ.




ಒಣಚರ್ಮಕ್ಕಾ

ಗಿ ಓಟ್ ಮೀಲ್, ಜೇನುತುಪ್ಪ, ಹಾಲಿನೊಂದಿಗೆ ರೋಸ್ ವಾಟರ್ ನ್ನು ಬೆರೆಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಒಣಗಿದ ಬಳಿಕ ತೆಗೆಯಿರಿ. ಇದು ನಿಮ್ಮ ಚರ್ಮಕ್ಕೆ ತೇವಾಂಶವನ್ನು ನೀಡುವುದು ಮಾತ್ರವಲ್ಲದೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.


No comments:

Post a Comment