Wednesday, 10 August 2016

ಸುಕ್ಕು ಮರೆಯಾಗಲು-ಅಡುಗೆ ಮನೆಯಲ್ಲಿಯೇ ಇದೆ ಪರಿಹಾರ!

ವಯಸ್ಸು ಯಾರನ್ನೂ ಕಾಯುವುದಿಲ್ಲ ಎಂಬ ಮಾತಿನಂತೆ ಕಾಲಚಕ್ರ ಉರುಳಿದಂತೆ ನಾವು ಹದಿಹರೆಯವನ್ನು ಕಳೆದು ಜವಬ್ದಾರಿಯುತ ವಯಸ್ಸಿಗೆ ಬಂದುಬಿಡುತ್ತೇವೆ. ಮೂವತ್ತರ ಹರೆಯದಲ್ಲಿ ನಮ್ಮ ಬಾಲಿಶ ವರ್ತನೆಗಳು ಮರೆಯಾಗಿ ಸಂಸಾರವನ್ನು ನಿಭಾಯಿಸುವ ಸಾಮರ್ಥ್ಯವನ್ನು ಪಡೆದುಕೊಂಡು ಬಿಡುತ್ತೇವೆ. ನಿಮ್ಮ ದೇಹವು ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಳ್ಳುತ್ತದೆ ಅಂತೆಯೇ ನಿಮ್ಮ ಸೌಂದರ್ಯದಲ್ಲೂ ಸಾಕಷ್ಟು ಮಾರ್ಪಾಡುಗಳನ್ನು ನೀವು ಕಂಡುಕೊಳ್ಳುತ್ತೀರಿ.

ನೀವು ಸೂಕ್ತವಾದ ಆಹಾರ ಮತ್ತು ದೇಹಕ್ಕೆ ಸಾಕಷ್ಟು ದಂಡನೆಯನ್ನು ನೀಡುತ್ತಿಲ್ಲ ಎಂದಾದಲ್ಲಿ ದೇಹವು ನಿಮ್ಮ ಮಾತನ್ನು ಕೇಳುವುದಿಲ್ಲ. ಬೊಜ್ಜು ಉಂಟಾಗಿ ದೇಹದ ಆಕಾರ ವಿಸ್ತಾರಗೊಳ್ಳಬಹುದು ಅಂತೆಯೇ ಇದರಿಂದಾಗಿ ಆರೋಗ್ಯ ಮತ್ತು ಸೌಂದರ್ಯ ಸಮಸ್ಯೆಗಳನ್ನು ನೀವು ಅನುಭವಿಸುವುದು ಖಂಡಿತ. ಆದ್ದರಿಂದ ದೇಹಕ್ಕೆ ಉತ್ತಮ ಪೋಷಕಾಂಶ ಆಹಾರ ಮತ್ತು ವ್ಯಾಯಮವನ್ನು ನೀಡಬೇಕು. ಮುಖದಲ್ಲಿ ಸುಕ್ಕುಗಳು ಆರಂಭವಾಗುವ ಕಾಲ ಇದಾಗಿರುವುದರಿಂದ ಇದಕ್ಕಾಗಿ ನೀವು ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ.

ದೀರ್ಘಕಾಲದವರೆಗೆ ಹದಿಹರೆಯದ ತ್ವಚೆಯನ್ನು ನೀವು ಪಡೆದುಕೊಳ್ಳಬೇಕು ಎಂದಾದಲ್ಲಿ ಕೆಲವೊಂದು ಮನೆಮದ್ದುಗಳನ್ನು ನೀವು ಅನುಸರಿಸಲೇಬೇಕಾಗುತ್ತದೆ. ಬನ್ನಿ ಆ ಉತ್ಪನ್ನಗಳೇನು ಎಂಬುದನ್ನು ಮುಂದೆ ಓದಿ...   ಬರೀ ಹತ್ತೇ ದಿನಗಳಲ್ಲಿ ಮುಖದ ಸುಕ್ಕು ಮಂಗಮಾಯ...

ಟೊಮೆಟೊ
ಮೂವತ್ತರ ಹರೆಯ ಮತ್ತು ಅದರ ನಂತರವೂ ಕೂಡ ನಳನಳಿಸುವ ತ್ವಚೆಯನ್ನು ನೀವು ಪಡೆದುಕೊಳ್ಳಬೇಕು ಎಂದಾದಲ್ಲಿ ತಾಜಾ ಟೊಮೆಟೊವನ್ನು, ದಿನನಿತ್ಯದ ಆಹಾರ ಕ್ರಮದಲ್ಲಿ ಸೇವಿಸುತ್ತಿರಬೇಕು. ಇದರಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದ್ದು, ಕಾಲಜನ್ ಉತ್ಪಾದನೆಯನ್ನು ವರ್ಧಿಸುತ್ತದೆ.  ಟೊಮೆಟೊದಿಂದ ಕಾಂತಿಯುತ ತ್ವಚೆಗಾಗಿ 6 ವಿಧಾನ

ಬೆರ್ರಿ
ಸ್ಟ್ರಾಬೆರ್ರಿ, ರಸಪ್‎ಬೆರ್ರಿ, ಬ್ಲ್ಯೂಬೆರ್ರಿ ಮೊದಲಾದ ಬೆರ್ರಿಗಳನ್ನು ಸೇವಿಸಬೇಕು. ಇವುಗಳು ಹೆಚ್ಚುವರಿ ನ್ಯೂಟ್ರಿನ್‎ಗಳನ್ನು ಪಡೆದುಕೊಂಡಿದ್ದು ಉತ್ಕರ್ಷಣ ನಿರೋಧಿ ಅಂಶಗಳನ್ನು ಪಡೆದುಕೊಂಡಿವೆ. ನಿಮ್ಮ ತ್ವಚೆಯನ್ನು ತಾಜಾಗೊಳಿಸಿ, ಸುಕ್ಕುಗಳಿಂದ ಮುಖವನ್ನು ಕಾಪಾಡುತ್ತದೆ.
ಮೊಸರು

ನಿಮ್ಮ ದೈನಂದಿನ ಆಹಾರದಲ್ಲಿ ಮೊಸರು ಸೇವಿಸಲು ಮರೆಯದಿರಿ, ಮೂವತ್ತರ ನಂತರ ಸುಕ್ಕು ತಪ್ಪಿಸಿಕೊಳ್ಳಬೇಕು ಎಂದಾದಲ್ಲಿ ಮೊಸರು ಸೇವನೆ ಅತ್ಯಗತ್ಯವಾದುದು. ಮೊಸರಿನಲ್ಲಿ ಆರೋಗ್ಯಯುತ ಬ್ಯಾಕ್ಟೀರಿಯಾ ಇದ್ದು ನಿಮ್ಮ ತ್ವಚೆಯ ವಿನ್ಯಾಸ ಮತ್ತು ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ.     ಮೊಟ್ಟೆಯ ಬಿಳಿಭಾಗದ ಚಿಕಿತ್ಸೆ-ಮುಖದ ನೆರಿಗೆ ಮಂಗಮಾಯ!

ಮೀನು

ವಿಟಮಿನ್ ಇ ಅಂಶವನ್ನು ಮೀನು ಪಡೆದುಕೊಂಡಿದೆ. ತ್ವಚೆಗೆ ವಿಟಮಿನ್ ಅತ್ಯಗತ್ಯವಾಗಿದ್ದು, ಇದು ಹೆಚ್ಚಿನ ಪ್ರಯೋಜನಗಳನ್ನು ತ್ವಚೆಯ ಅಭಿವೃದ್ಧಿಯಲ್ಲಿ ಪಡೆದುಕೊಂಡಿದೆ. ವಯಸ್ಸಾಗುವಿಕೆಯ ಪೂರ್ವ ಲಕ್ಷಣಗಳಾದ ಸುಕ್ಕುಗಳು ಮತ್ತು ಕಣ್ಣಿನ ಸುತ್ತಲಿನ ಗೆರೆಗಳನ್ನು ಇದು ನಿವಾರಿಸುತ್ತದೆ

ನಟ್ಸ್
ಒಮೇಗಾ - 3 ಫ್ಯಾಟಿ ಆಸಿಡ್‎ಗಳನ್ನು ನಟ್ಸ್ ಹೊಂದಿದ್ದು ವಿಟಮಿನ್ ಇ, ಇದರಲ್ಲಡಗಿದೆ. ತ್ವಚೆಯ ಕೋಶಗಳಿಗೆ ಇದು ನ್ಯೂಟ್ರಿಶಿಯಸ್ ಎಂದೆನಿಸಿದ್ದು ಸುಕ್ಕುಗಳನ್ನು ಮೂಲದಲ್ಲಿಯೇ ನಿವಾರಿಸುತ್ತದೆ.

ಅವಕಾಡೊ (ಬೆಣ್ಣೆ ಹಣ್ಣು) 
ಗ್ಲುತತಿನ್ ಅಂಶವನ್ನು ಬೆಣ್ಣೆ ಹಣ್ಣು ಒಳಗೊಂಡಿದ್ದು, ವಯಸ್ಸಾಗುವಿಕೆಯ ವಿರುದ್ಧ ಹೋರಾಡುವ ಗುಣಗಳನ್ನು ಪಡೆದುಕೊಂಡಿದೆ. ಅಂತೆಯೇ ಆರೋಗ್ಯಕರ ಹೊಸಕೋಶಗಳನ್ನು ಇದು ರಚಿಸುತ್ತದೆ.    ಬ್ಯೂಟಿ ಟಿಪ್ಸ್: ಬೆಣ್ಣೆ ಹಣ್ಣಿನಲ್ಲಿದೆ-ಬೆಣ್ಣೆಯಂತಹ ಸೌಂದರ್ಯ! 


ಜೇನು
ಸುಕ್ಕುಗಳು ಮತ್ತು ಗೆರೆಗಳನ್ನು ಹೋಗಲಾಡಿಸಲು ಜೇನಿನಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ಕಾರಣವಾಗಿವೆ. ನಿಮ್ಮ ತ್ವಚೆಯನ್ನು ಯುವತ್ವ ಮತ್ತು ಮೃದುವಾಗಿಸುತ್ತದೆ.

No comments:

Post a Comment